E-Scooters: ಈ ಬಾರಿಯ ದೀಪಾವಳಿ ಹಬ್ಬಕ್ಕಾಗಿ ಖರೀದಿಸಬಹುದಾದ ಅತ್ಯುತ್ತಮ ಇ-ಸ್ಕೂಟರ್‌ಗಳು: ಸಂಪೂರ್ಣ ವಿವರ ಇಲ್ಲಿದೆ

Electric Scooters: ಈ ಬಾರಿಯ ದೀಪಾವಳಿಗಾಗಿ ನೀವು ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಖರೀದಿ ಮಾಡಬೇಕು ಎಂದಾದಲ್ಲಿ ಉತ್ತಮ ಆಯ್ಕೆಗಳನ್ನು ನಾವು ನೀಡುತ್ತಿದ್ದೇವೆ.

ಎಲೆಕ್ಟ್ರಿಕ್ ಸ್ಕೂಟರ್

ಎಲೆಕ್ಟ್ರಿಕ್ ಸ್ಕೂಟರ್

  • Share this:
    Diwali 2021: ಹೊಸತನ್ನೇನಾದರೂ ಖರೀದಿಸಲು ಪ್ರತಿಯೊಬ್ಬರೂ ಹಬ್ಬಗಳ ಸೀಸನ್ ಅನ್ನೇ ಎದುರು ನೋಡುತ್ತಿರುತ್ತಾರೆ. ಬಟ್ಟೆಯಿಂದ ಹಿಡಿದು ಎಲೆಕ್ಟ್ರಾನಿಕ್ ಉಪಕರಣಗಳಾಗಿರಬಹುದು (Electronics Items), ಇಲ್ಲವೇ ಮೋಟಾರ್ ವಾಹನಗಳಾಗಿರಬಹುದು. ಹಬ್ಬದ ಸಮಯದಲ್ಲಿ ಯಾವುದೇ ವಸ್ತುವಿನ ಖರೀದಿ ಮಾಡುವುದು ಶುಭವೆಂಬ ನಂಬಿಕೆ ಇದೆ. ಇದರೊಂದಿಗೆ ಏರುತ್ತಿರುವ ಇಂಧನ ಬೆಲೆಗಳು (Fuel Price) ಹಾಗೂ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಮಾರುಕಟ್ಟೆ ಹಾಗೂ ಗ್ರಾಹಕರು ಪರ್ಯಾಯ ವಾಹನಗಳನ್ನು ಅನ್ವೇಷಿಸುತ್ತಿರುವ ಅಂಶವನ್ನು ಇಲ್ಲಿ ಪ್ರಸ್ತಾವಿಸಲೇಬೇಕು. ಈ ಸಮಸ್ಯೆಗಳಿಂದಾಗಿ ಜನರು ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳ (Electric Vehivle) ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ. ದ್ವಿಚಕ್ರ (Two Wheeler) ಇಲ್ಲವೇ ನಾಲ್ಕುಚಕ್ರಗಳ (Four Wheeler) ವಾಹನಗಳೇ ಆಗಿರಲಿ ಎಲೆಕ್ಟ್ರಿಕ್ ವಾಹನಗಳಿಗೆ ಜನರು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂಬುದಾಗಿ ಸರಕಾರದ ಅಂಕಿಅಂಶಗಳು ತೋರಿಸುತ್ತಿವೆ.

    ಈ ಬಾರಿಯ ದೀಪಾವಳಿಗಾಗಿ ನೀವು ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಖರೀದಿ ಮಾಡಬೇಕು ಎಂದಾದಲ್ಲಿ ಉತ್ತಮ ಆಯ್ಕೆಗಳನ್ನು ನಾವು ನೀಡುತ್ತಿದ್ದೇವೆ.

    ಓಲಾ S1 (Ola S1):

    ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಓಲಾ ತನ್ನ ಪ್ರವೇಶ ಘೋಷಿಸಿದ ನಂತರ ಎಲೆಕ್ಟ್ರಿಕ್ ಸ್ಕೂಟರ್‌ಗೆ ಅಪಾರ ಬೇಡಿಕೆ ಆರಂಭವಾಗಿದೆ. ಹೆಚ್ಚಿನ ಸಂಖ್ಯೆಯ ಜನರು ಈ ಮಾದರಿಯ ಸ್ಕೂಟರ್ ಬುಕ್ ಮಾಡುತ್ತಿದ್ದಾರೆ. ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಬೇಕು ಎಂದು ನೀವು ಎದುರು ನೋಡುತ್ತಿದ್ದರೆ ಓಲಾ S1 ಖರೀದಿಯನ್ನು ನೀವು ಮಾಡಬಹುದು. ಪ್ರಸ್ತುತ ಬುಕಿಂಗ್ ಕ್ಲೋಸ್ ಆಗಿರುವುದರಿಂದ ನೀವು ಡೆಲಿವರಿಗಾಗಿ ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಕಂಪನಿಯು ಡಿಸೆಂಬರ್‌ನಲ್ಲಿ ಎರಡನೇ ಹಂತದ ಬುಕಿಂಗ್ ಆರಂಭಿಸಲಿದೆ. ಇನ್ನು ಸ್ಕೂಟರ್ ವಿಶೇಷತೆಗಳ ಕುರಿತು ಹೇಳುವುದಾದರೆ 3.9 ಕಿಲೋ ವ್ಯಾಟ್ ಗಂಟೆಗಳ ಲಿಥಿಯಮ್-ಐಯಾನ್ (lithium-ion) ಬ್ಯಾಟರಿ ಪ್ಯಾಕ್‌ನೊಂದಿಗೆ ಬಂದಿದ್ದು 11 ಬ್ರೇಕ್ ಹಾರ್ಸ್‌ಪವರ್ (bhp) ಎಲೆಕ್ಟ್ರಿಕ್ ಮೋಟರ್ ಪವರ್ ಒದಗಿಸುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ ಸಾಕು ನೀವು 121 ಕಿಲೋಮೀಟರ್‌ವರೆಗೆ ಪ್ರಯಾಣಿಸಬಹುದಾಗಿದೆ .ಇನ್ನು ಈ Ola S1 ಬೆಲೆ ಸುಮಾರು 1 ಲಕ್ಷ ರೂ ಆಗಿದೆ.

    Read Also: Pee Power: ನಿಮ್ಮ ಮೂತ್ರದಿಂದ ಮೊಬೈಲ್ ಚಾರ್ಜ್ ಮಾಡಬಹುದಂತೆ! ವಿಜ್ಞಾನಿಗಳ ಸಂಶೋಧನೆ ಯಶಸ್ವಿ..

    ಸಿಂಪಲ್ ಒನ್ (Simple One):

    ಈ ಎಲೆಕ್ಟ್ರಿಕ್ ಸ್ಕೂಟರ್ ಭಾರತದ ಮಾರುಕಟ್ಟೆಗೆ ಸ್ವಲ್ಪ ಸಮಯಗಳ ಹಿಂದೆ ಬಂದಿತು. 4.8 kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಸ್ಕೂಟರ್ ಹೊಂದಿದೆ. ಓಲಾದ ಎಲೆಕ್ಟ್ರಿಕ್ ಸ್ಕೂಟರ್‌ಗಿಂತ ಹೆಚ್ಚು ಶಕ್ತಿಶಾಲಿಯಾಗಿದ್ದು ಇದನ್ನು ನೀವು ಇಕೋ ಮೋಡ್‌ನಲ್ಲಿ ಚಲಾಯಿಸಿದರೆ ಒಂದೇ ಚಾರ್ಜ್‌ನಲ್ಲಿ 236 ಕಿಲೋಮೀಟರ್‌ಗಳವರೆಗೆ ಚಲಿಸಬಹುದಾಗಿದೆ. ಈ ಸ್ಕೂಟರ್ ಬೆಲೆ 1.9 ಲಕ್ಷ ರೂಪಾಯಿ ಆಗಿದೆ.

    ಟಿವಿಎಸ್ ಐಕ್ಯೂಬ್ (TVS iQube):

    TVS ಈ ವರ್ಷ ಈ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಇದು 4.4kw ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗಿದೆ. ಇದು 2.25 kWh ಲಿಥಿಯಂ-ಐಯಾನ್ ಬ್ಯಾಟರಿ ಹೊಂದಿದೆ, ಇದು ಒಂದೇ ಚಾರ್ಜ್‌ನಲ್ಲಿ 75 ಕಿಲೋಮೀಟರ್‌ಗಳ ವ್ಯಾಪ್ತಿ ನೀಡುತ್ತದೆ. ಸ್ಕೂಟರ್ ಗರಿಷ್ಠ ವೇಗವು 78 ಕಿ.ಮೀ ಆಗಿದೆ. 4.2 ಸೆಕೆಂಡ್‌ಗಳಲ್ಲಿ ಸ್ಕೂಟರ್ 40 ಕಿ.ಮೀ ವೇಗವನ್ನು ಹೆಚ್ಚಿಸಿಕೊಳ್ಳುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಸ್ಕೂಟರ್ ಬೆಲೆ 1 ಲಕ್ಷ ರೂ. ಆಗಿದೆ.

    Read Also: Maruti Suzuki Alto: ಜನಮೆಚ್ಚಿದ ಕಾರು ಇದು! ಮಾರುತಿ ಕಂಪನಿಯ ಈ ಅಗ್ಗದ ಕಾರಿಗೆ ಭಾರೀ ಡಿಮ್ಯಾಂಡ್​

    ಅಥರ್ 450X (Ather 450X):

    ಕಳೆದ ವರ್ಷ ಭಾರತದಲ್ಲಿ Ather 450X ಅನ್ನು ಬಿಡುಗಡೆ ಮಾಡಲಾಯಿತು. 2.61 kWh ಬ್ಯಾಟರಿಯೊಂದಿಗೆ ಈ ಸ್ಕೂಟರ್ 3 ಗಂಟೆ ಹಾಗೂ 35 ನಿಮಿಷಗಳಲ್ಲಿ 80% ಚಾರ್ಜ್‌ ಆಗುತ್ತದೆ. ಒಂದೇ ಚಾರ್ಜ್‌ನಲ್ಲಿ ಸ್ಕೂಟರ್ 116 ಕಿಲೋಮೀಟರ್‌ಗಳ ರೇಂಜ್ ಅನ್ನು ಒದಗಿಸುತ್ತದೆ. ಸ್ಕೂಟರ್ ಬೆಲೆ (ಎಕ್ಸ್ ಶೋರೂಮ್ ಬೆಲೆ) 1.32 ಲಕ್ಷ ರೂಪಾಯಿಗಳಾಗಿದೆ.
    First published: