ಶಿಯೋಮಿಗೆ ಸೆಡ್ಡು ಹೊಡೆಯುತ್ತಾ ಲೆನೊವೊ Z5 ?


Updated:June 5, 2018, 11:30 PM IST
ಶಿಯೋಮಿಗೆ ಸೆಡ್ಡು ಹೊಡೆಯುತ್ತಾ ಲೆನೊವೊ Z5 ?

Updated: June 5, 2018, 11:30 PM IST
ಬೀಜಿಂಗ್​: ಚೀನಾದ ಮೊಬೈಲ್​ ದೈತ್ಯ ಲೆನೊವೊ ಈ ಬಾರಿ ಆ್ಯಪಲ್​ ಸೇರಿದಂತೆ ಇತರೇ ಕಂಪನಿಗಳಿಗೆ ಸೆಡ್ಡು ಹೊಡೆದಿದ್ದು ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ ಅತ್ಯಂತ ಕಡಿಮೆ ಬಜೆಟ್​ನ ನಾಟ್ಚ್​ ಡಿಸ್​ಪ್ಲೇ ಹೊಂದಿರುವ ಮೊಬೈಲ್​ನ್ನು ಪರಿಚಯ ಮಾಡಿದೆ.

ಆಪಲ್ ಐಫೋನ್ ಎಕ್ಸ್ ನಾಟ್ಚ್​ ಮಾದರಿ ಡಿಸ್‌ಪ್ಲೇ, ಸ್ನ್ಯಾಪ್‌ಡ್ರಾಗಲ್ 636 ಪ್ರೊಸೆಸರ್ ಹಾಗೂ ಆಂಡ್ರಾಯ್ಡ್ ಓರಿಯೊನಂತಹ ಫೀಚರ್ಸ್‌ಗಳನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್ ಲೆನೊವೊ ಝೆಡ್​ 5 ಮೊಬೈಲ್​ ಮಾರುಕಟ್ಟೆಗೆ ಪರಿಚಯಿಸಿದ್ದು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೂ ಪರಿಚಯಿಸುವುದಾಗಿ ಹೇಳಿಕೊಂಡಿದೆ.

ಶೇ.90 ರಷ್ಟು ಸ್ಕ್ರೀನ್ ರೇಶಿಯೋ ಹೊಂದಿರುವ Z5, 6.2 ಇಂಚ್ (1080x2246 ಪಿಕ್ಸೆಲ್‌ಗಳು) ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಸ್ಮಾರ್ಟ್‌ಪೋನ್ ಹೊಂದಿದೆ. ಸ್ನ್ಯಾಪ್‌ಡ್ರಾಗಲ್ 636 ಪ್ರೊಸೆಸರ್ ಅನ್ನು ಹೊಂದಿರುವ 'Z5' 6GB RAM- 64GB/128GB ಆಂತರಿಕ ಮೆಮೊರಿ ಎರಡು ವೇರಿಯಂಟ್‌ಗಳಲ್ಲಿ ಲಭ್ಯವಿರಲಿದೆ. ಇದರೊಂದಿಗೆ ಆಂತರಿಕ ಮೆಮೊರಿಯನ್ನು 256GBವರೆಗೆ ವಿಸ್ತಿರಿಸಬಹುದು.

ಈ ಮೊಬೈಲ್​ ಮತ್ತೊಂದು ವೈಶಿಷ್ಟ್ಯವೆಂದರೆ ಡ್ಯುಯಲ್​ ರಿಯರ್​ ಕ್ಯಾಮೆರಾ,16MP+8MP ಆಟೊ ಇಂಟೆಲಿಜೆಂಟ್ಸ್​ ಕ್ಯಾಮೆರಾಗಳು ಈ ಮೊಬೈಲ್​ನಲ್ಲಿ ಲಭ್ಯವಿದ್ದು, 4K ವಿಡಿಯೋ ರೆಕಾರ್ಡಿಂಗ್​ ಫೀಚರ್​ ಹೊಂದಿದೆ. ಸೆಲ್ಫಿಗಾಗಿ 8MP ಕ್ಯಾಮೆರಾ ಅಳವಡಿಸಲಾಗಿದೆ. ಇನ್ನು ಉಳಿದಂತೆ 3300 ಮೆಗಾವ್ಯಾಟ್​ ಬ್ಯಾಟರಿ, Bluetooth v5.0, ಜಿಪಿಎಸ್​, 4G ಎಲ್​ಟಿಇ, 3.5mm ಹೆಡ್​ಫೋನ್​, Type-C ಯುಎಸ್​ಬಿ ವ್ಯವಸ್ಥೆಯಿದೆ.

ಬೆಲೆಯ ವಿಚಾರಕ್ಕೆ ಬಂದರೆ ಲೆನೊವೊ Z5, ಚೀನಾದಲ್ಲಿ CNY 1,399 ಹಾಗೂ CNY 1,799 ಗೆ ಬಿಡುಗಡೆಯಾಗಿದೆ. ಇದನ್ನು ಭಾರತೀಯ ರೂಪಾಯಿಗೆ ಹೋಲಿಸಿದರೆ 6GB RAM/64GB ಮೆಮೊರಿಯ ಮೊಬೈಲ್​ ಸರಿಸೂಮಾರು ರೂ.13,000 ರಿಂದ ರೂ. 14,700 ಮತ್ತು 6GB/128GB ಮೊಬೈಲ್​ ರೂ. 18,900ರೊಳಗೆ ದೊರಕಬಹುದು ಎನ್ನಲಾಗಿದೆ.
First published:June 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...