ಲ್ಯಾಪ್ಟಾಪ್ (Laptop) ವಲಯದಲ್ಲಿ ಇತ್ತೀಚೆಗೆ ಫೋಲ್ಡಬಲ್ (Foldable) ಮತ್ತು ಇನ್ನಿತರ ಸ್ಪೆಷಲ್ ಫೀಚರ್ಸ್ ಹೊಂದಿದ ಸಾಧನಗಳು ಭಾರೀ ಬೇಡಿಕೆಯಲ್ಲಿದೆ. ಅದರಲ್ಲೂ ಕೆಲವೊಂದು ಜನಪ್ರಿಯ ಕಂಪೆನಿಗಳು ಕಳೆದ ವರ್ಷದಲ್ಲಿ ಗುಣಮಟ್ಟದ ಫೀಚರ್ಸ್ ಅನ್ನು ಹೊಂದಿದ ಲ್ಯಾಪ್ಟಾಪ್ಗಳನ್ನು ಮಾರುಕಟ್ಟೆಗೆ ನಿರಂತರವಾಗಿ ಪರಿಚಯಿಸುತ್ತಲೇ ಇದೆ. ಇದೀಗ ಜನಪ್ರಿಯ ಲ್ಯಾಪ್ಟಾಪ್ ಕಂಪನಿಯಾಗಿರುವ ಲೆನೋವೋ (Lenovo) ಹೊಸ ಲ್ಯಾಪ್ಟಾಪ್ ಒಂದನ್ನು ಅನಾವರಣ ಮಾಡಲು ಸಜ್ಜಾಗಿದೆ. ಈ ಲ್ಯಾಪ್ಟಾಪ್ ವಿಶೇಷ ವಿನ್ಯಾಸದೊಂದಿಗೆ ಹೊಸ ಫೀಚರ್ಸ್ಗಳನ್ನು ಹೊಂದಿರುವ ಹೊಸ ಮಾದರಿಯ ಲ್ಯಾಪ್ಟಾಪ್ ಆಗಿದೆ. ಲೆನೋವೋ ಕಂಪೆನಿ (Lenovo Company) ಈ ಹಿಂದೆಯೂ ವಿಭಿನ್ನ ರೀತಿಯ ಸ್ಮಾರ್ಟ್ ಡಿವೈಸ್ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಎಲ್ಲರ ಗಮನಸೆಳೆದಿತ್ತು.
ಇದೀಗ ಲೆನೋವೋ ಥಿಂಕ್ಬುಕ್ ಪ್ಲಸ್ ಎಂಬ ಲ್ಯಾಪ್ಟಾಪ್ ಅನ್ನು ಅನಾವರಣ ಮಾಡಿದೆ. ಈ ಲ್ಯಾಪ್ಟಾಪ್ ಇ-ಇಂಕ್ ಡಿಸ್ಪ್ಲೇ ಫೀಚರ್ಸ್ನೊಂದಿಗೆ ಅನಾವರಣಗೊಳಿಸಲಾಗಿದೆ. ಇನ್ನೂ ಹಲವಾರು ಫೀಚರ್ಸ್ಗಳನ್ನು ಇದು ಹೊಂದಿದ್ದು, ಇದರ ಕಂಪ್ಲೀಟ್ ಡೀಟೇಲ್ಸ್ ಈ ಲೇಖನದ ಮೂಲಕ ತಿಳಿಯಿರಿ.
ಡಿಸ್ಪ್ಲೇ ಫೀಚರ್ಸ್ ಹೇಗಿದೆ?
ಲೆನೋವೋ ಥಿಂಕ್ಬುಕ್ ಪ್ಲಸ್ ಲ್ಯಾಪ್ಟಾಪ್ ಕನ್ವರ್ಟಿಬಲ್ ಲ್ಯಾಪ್ಟಾಪ್ ಆಗಿದ್ದು, 13.3 ಇಂಚಿನ ಓಎಲ್ಇಡಿ ಡಿಸ್ಪ್ಲೇ ಹಾಗೂ 12 ಇಂಚಿನ ಇ ಇಂಕ್ ಡಿಸ್ಪ್ಲೇಯನ್ನು ಸಹ ಇದು ಹೊಂದಿದೆ. ಈ ಲ್ಯಾಪ್ಟಾಪ್ ಆಫೀಸ್ ಕೆಲಸ ಮಾಡುವವರಿಗೆ ಬಹಳಷ್ಟು ಉತ್ತಮವಾಗಿದೆ. ಇನ್ನು ಈ ಲ್ಯಾಪ್ಟಾಪ್ನ ಡಿಸ್ಪ್ಲೇ 60Hz ರಿಫ್ರೆಶ್ ರೇಟ್ನೊಂದಿಗೆ 13.3 ಇಂಚಿನ 2.8ಕೆ OLED ರೆಸಲ್ಯೂಶನ್ನೊಂದಿಗೆ ಬರುತ್ತದೆ. ಹಾಗೆಯೇ ಇ-ಪುಸ್ತಕಗಳನ್ನು ಓದಲು ಅಥವಾ ಬರೆಯಲು ಸಹ ಬಯಸಿದರೆ, ಡಿಸ್ಪ್ಲೇಯನ್ನು ತಿರುಗಿಸಿ 12Hz ರಿಫ್ರೆಶ್ ರೇಟ್ನೊಂದಿಗೆ 12 ಇಂಚಿನ ಇ ಇಂಕ್ ಡಿಸ್ಪ್ಲೇ ಲಭ್ಯವಾಗಲಿದೆ.
ಇದನ್ನೂ ಓದಿ: ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಕಾಲಿಡಲಿದೆ ಒಪ್ಪೋ ಎ78 5ಜಿ ಮೊಬೈಲ್!
ಇ ಇಂಕ್ ಡಿಸ್ಪ್ಲೇ ಸೌಲಭ್ಯ
ಈ ಮೂಲಕ ಇ ಇಂಕ್ ಡಿಸ್ಪ್ಲೇ ಬಳಕೆದಾರರಿಗೆ ಎರಡು ವಿಧಾನಗಳಲ್ಲಿ ಡಿಸ್ಪ್ಲೇಯನ್ನು ಬಳಸಬಹುದಾಗಿದೆ. ಇದು ಟೈಪ್ ರೈಟರ್ ಲ್ಯಾಪ್ಟಾಪ್ ಮೋಡ್ ಮತ್ತು ಇ ಪೇಪರ್ ಮೋಡ್ ಎಂಬ ಎರಡು ಡಿಸ್ಪ್ಲೇ ವಿಧಾನಗಳನ್ನು ಹೊಂದಿದೆ. ಜೊತೆಗೆ ಇದು ಸ್ಟೈಲಸ್ ಪೆನ್ಗೆ ಬೆಂಬಲ ನೀಡಲಿದೆ. ನೀವು ಎರಡೂ ಬದಿಗಳಲ್ಲಿ ವಿಂಡೋಸ್ 11 ಅನ್ನು ಬಳಸಬಹುದಾಗಿದ್ದು, ಜೊತೆಗೆ ವೆಬ್ಕ್ಯಾಮ್ಗಳ ಆಯ್ಕೆ ಸಹ ನೀಡಲಾಗಿದೆ. ಈ ಮೂಲಕ ಸುಲಭವಾಗಿ ಮೀಟಿಂಗ್ಗಳಲ್ಲಿ ಹಾಗೂ ಇತರೆ ವಿಡಿಯೋ ಕಾಲ್ಗಳಲ್ಲಿ ಮಾತನಾಡಬಹುದಾಗಿದೆ.
ಹಿಂಜ್ ಆಯ್ಕೆ
ಈ ಲ್ಯಾಪ್ಟಾಪ್ನ ವಿಶೇಷ ಫೀಚರ್ ಎಂದರೆ ಅದು ತಿರುಗುವ ಹಿಂಜ್ ಫೀಚರ್. ಆದರೆ, ಇದು ಸಾಮಾನ್ಯ ಹಿಂಜ್ಗಿಂತ ಭಿನ್ನವಾಗಿ ಥಿಂಕ್ಬುಕ್ ಪ್ಲಸ್ ಟ್ವಿಸ್ಟ್ ಹಿಂಜ್ ಅನ್ನು ಹೊಂದಿದೆ. ಈ ಹಿಂಜ್ ಮೂಲಕ ಎರಡು ರೀತಿಯ ಡಿಸ್ಪ್ಲೇ ಬಳಕೆ ಮಾಡಲು ಇನ್ನಷ್ಟು ಸುಲಭವಾಗುತ್ತದೆ. ಡಿಸ್ಪ್ಲೇಯನ್ನು ಸರಳವಾಗಿ ತಿರುಗಿಸುವ ಮೂಲಕ ಮತ್ತು ಲಿಟ್ ಅನ್ನು ಮುಚ್ಚುವ ಮೂಲಕ ನೀವು ಟ್ಯಾಬ್ಲೆಟ್ ರೂಪದಲ್ಲಿ ಇದನ್ನು ಬಳಕೆ ಮಾಡಬಹುದು.
ಪ್ರೊಸೆಸರ್ ಸಾಮರ್ಥ್ಯ
ಲೆನೋವೋ ಥಿಂಕ್ಬುಕ್ ಪ್ಲಸ್ ಟ್ವಿಸ್ಟ್ ಇಂಟೆಲ್ 13 ಜನ್ ಕೋರ್ ಐ7 ರಾಪ್ಟರ್ ಲೇಕ್-ಯು ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 16ಜಿಬಿ ರ್ಯಾಮ್ ಹಾಗೂ 1ಟಿಬಿ ವರೆಗೆ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ ಕನೆಕ್ಟಿವಿಟಿ ಆಯ್ಕೆಯಲ್ಲಿ ಪೋರ್ಟ್ಗಳ ಆಯ್ಕೆ ತುಂಬಾ ಕಡಿಮೆ ಇದೆ. ಇದರಲ್ಲಿ ಕೇವಲ ಎರಡು ಥಂಡರ್ಬೋಲ್ಟ್ 4 ಯುಎಸ್ಬಿ ಟೈಪ್ ಸಿ ಪೋರ್ಟ್ ಹಾಗೂ 3.5mm ಆಡಿಯೋ ಜ್ಯಾಕ್ ಆಯ್ಕೆ ಹೊಂದಿದೆ. ಇದಲ್ಲದೆ, ಲ್ಯಾಪ್ಟಾಪ್ ವೈ-ಫೈ 6ಇ ನೊಂದಿಗೆ ಕನೆಕ್ಟ್ ಆಗುತ್ತದೆ.
ಬೆಲೆ ಮತ್ತು ಲಭ್ಯತೆ
ಲೆನೋವೋ ಥಿಂಕ್ಬುಕ್ ಪ್ಲಸ್ ಟ್ವಿಸ್ಟ್ ಲ್ಯಾಪ್ಟಾಪ್ ಯುಎಸ್ ಮತ್ತು ಯುರೋಪ್ನಲ್ಲಿ ಆರಂಭಿಕವಾಗಿದ್ದು, ಅಲ್ಲಿ $1,649 ಅಂದರೆ ಭಾರತದಲ್ಲಿ 1,35,669 ರೂಪಾಯಿಗಳ ಬೆಲೆಯನ್ನು ಹೊಂದಿದೆ. ಇನ್ನುಳಿದಂತೆ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಕಂಪೆನಿ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ