ಜಗತ್ತಿನ ಮೊದಲ 5ಜಿ ಮೊಬೈಲ್​ ಯಾವುದು?


Updated:August 1, 2018, 4:52 PM IST
ಜಗತ್ತಿನ ಮೊದಲ 5ಜಿ ಮೊಬೈಲ್​ ಯಾವುದು?

Updated: August 1, 2018, 4:52 PM IST
ನಾವು ಅಸಮರ್ಪಕ 3ಜಿ ಮತ್ತು 4ಜಿ ನೆಟ್ವರ್ಕ್​ಗಳ ನಡುವೆ ಹೋರಾಟ ನಡೆಸುತ್ತಿದ್ದರೆ, ಜಗತ್ತಿನ ಫೇಮಸ್​ ಟೆಕ್​ ಸಂಸ್ಥೆ ಮುಂದಿನ ವರ್ಷದಲ್ಲಿ 5ಜಿ ನೆಟ್​ವರ್ಕ್​ ಇರುವ ಮೊಬೈಲ್​ ಬಿಡುಗಡೆ ಮಾಡಲು ತೀರ್ಮಾನಿಸಿದೆ.

ಅಮೆರಿಕಾದಲ್ಲಿ 5ಜಿ ನೆಟ್ವರ್ಕ್​ ಮೊಬೈಲ್​ಗಳನ್ನು ಬಿಡುಗಡೆ ಮಾಡಲು ಸಾಕಷ್ಟು ಮೊಬೈಲ್​ ಸಂಸ್ಥೆಗಳು ನಡುವೆ ಪೈಪೋಟಿ ಏರ್ಪಟ್ಟಿತ್ತು, ಆದರೆ ಇದೀಗ ಅಧಿಕೃತವಾಗಿ ಲೆನೊವೊ ಮೊಬೈಲ್​ ಬಿಡುಗಡೆ ಮಾಡಲು ತೀರ್ಮಾನಿಸಿದೆ. ಈ ಮೊಬೈಲ್​ಗೆ ಸ್ನಾಪ್​ಡ್ರಾಗನ್​ ಸಂಸ್ಥೆಯ 855 ಎಸ್​ಒಸಿ ಪ್ರೊಸರ್​ ನೆರವು ಕೂಡಾ ನೀಡಲಿದೆ.

ಲೆನೊವೊ 5ಜಿ ನೆಟ್ವರ್ಕ್ ಮೊಬೈಲ್​ನ್ನು ಬಿಡುಗಡೆ ಮಾಡುತ್ತಿರುವುದನ್ನು ಬಹಿರಂಗ ಪಡಿಸಿದ ಸಂಸ್ಥೆಯ ಉಪಾಧ್ಯಕ್ಷ ಚಾಂಗ್​ ಚೆಂಗ್​ ,855 ಸ್ನಾಪ್​ಡ್ರಾಗನ್​ ಪ್ರೊಸೆಸರ್​ ಕೂಡಾ ಈ ಮೊಬೈಲ್​ನಲ್ಲಿ ಬಳಕೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಮೊಬೈಲ್​ ಬಿಡುಗಡೆ ಮಾಡುವ ದಿನಾಂಕವನ್ನು ಇನ್ನೂ ಬಹಿರಂಗ ಪಡಿಸಿಲ್ಲ. ತಜ್ಞರ ಪ್ರಕಾರ 2018ರ ಅಂತ್ಯ ಅಥವಾ 2019 ಮೊದಲಾರ್ಧದಲ್ಲೇ ಬಿಡುಗಡೆಯಾಗಬಹುದು ಎನ್ನಲಾಗಿದೆ.

ಇನ್ನು ಲೆನೊವೊದೊಂದಿಗೆ ಒಪ್ಪೊ, ಹುವಾವೇ ಹಾಗು ಒನ್​ಪ್ಲಸ್​ ಸಂಸ್ಥೆ ಕೂಡಾ 5ಜಿ ನೆಟ್ವರ್ಕ್​ಗಾಗಿ ತರಾತುರಿ ನಡೆಸುತ್ತಿದೆ. ಈ ಹಿಂದೆ ಹುವಾವೆ 5ಜಿ ಮೊಬೈಲ್​ನ್ನು 2019ರ ಅಂತ್ಯದೊಳಗೆ ಬಿಡುಗಡೆ ಮಾಡುವುದಾಗು ಹೇಳಿತ್ತು. ಕ್ವಾಲ್ಕಮ್​ನೊಂದಿ ಸಹಿಭಾಗಿತ್ವದಲ್ಲಿ ಒಪ್ಪೊ 5ಜಿ ಮೊಬೈಲ್​ ಬಿಡುಗಡೆ ಮಾಡುವುದಾಗಿ ಹೇಳಿತ್ತು.

ಉಳಿದಂತೆ 5ಜಿ ತರಂಗಾಂತರ ಪಡೆಯಲು ಶಿಯೋಮಿ, ನೋಕಿಯಾ, ಸೋನಿ, ಎಲ್​ಜಿ ಮೊಬೈಲ್​ ಸಂಸ್ಥೆಗಳು ಸ್ನಾಪ್​ಡ್ರಾಗನ್​ನೊಂದಿಗೆ ಕೈಜೋಡಿಸಿದೆ. ಇವೆಲ್ಲವೂ ಕ್ವಾಲ್ಕಂ 5ಜಿ ಮಾಡೆಮ್​ ಹೊಂದಿರುತ್ತದೆ.
First published:August 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ