ದೇಶದಾದ್ಯಂತ ಗ್ಯಾಜೆಟ್ಸ್ಗಳನ್ನು (Gadgets) ತಯಾರಿಸುವ ಕಂಪನಿಗಳಲ್ಲಿ ಲೆನೋವೋ ಕಂಪನಿ (Lenovo Company) ಕೂಡ ಒಂದು. ಇದು ಸ್ಮಾರ್ಟ್ ಕ್ಲಾಕ್ (Smart Clock), ಸ್ಮಾರ್ಟ್ ಸ್ಪೀಕರ್ (Smart Speaker), ಲ್ಯಾಪ್ಟಾಪ್, ಪಿಸಿ ಸೇರಿದಂತೆ ಹಲವಾರು ಉತ್ಪನ್ನಗಳನ್ನು ಉತ್ಪಾದಿಸುವ ಮೂಲಕ ಟೆಕ್ನಾಲಜಿ ಮಾರುಕಟ್ಟೆಯಲ್ಲಿ ತನ್ನದೇ ಆದಂತಹ ಸ್ಥಾನವನ್ನು ಗಳಿಸಿದೆ. ಇತ್ತೀಚೆಗೆ ಕೆಲವರು ಸ್ಮಾರ್ಟ್ಫೋನ್ಗಳ ಜೊತೆ ಟ್ಯಾಬ್ಗಳ (Tablet) ಬಳಕೆಯನ್ನು ಕೂಡ ಮಾಡುತ್ತಿದ್ದಾರೆ. ಏಕೆಂದರೆ ಈ ಟ್ಯಾಬ್ಗಳು ಏನಾದರು ಕಾರ್ಯನಿರ್ವಹಿಸಲು, ಪೋಸ್ಟರ್ಗಳನ್ನು (Posters) ಮಾಡಲು ಬಹಳಷ್ಟು ಫೀಚರ್ಸ್ಗಳನ್ನು ಒದಗಿಸುತ್ತದೆ. ಈ ಮೂಲಕ ಬಳಕೆದಾರರಿಗೆ ವೇಗವಾಗಿ ಕಾರ್ಯನಿರ್ವಹಿಸಬಹುದಾಗಿದೆ. ಕೆಲವು ವಾರಗಳ ಹಿಂದೆ ಲೆನೋವೋ ಕಂಪನಿಯಿಂದ ಲೆನೋವೋ ಟ್ಯಾಬ್ ಎಮ್8 (Lenovo Tab M8) ಎಂಬ ಟ್ಯಾಬ್ಲೆಟ್ ಬಿಡುಗಡೆಯಾಗಿತ್ತು. ಇದೀಗ ಈ ಸಾಲಿಗೆ ಕಂಪನಿ ಮತ್ತೊಂದು ಸ್ಪೆಷಲ್ ಟ್ಯಾಬ್ ಅನ್ನು ಬಿಡುಗಡೆ ಮಾಡುತ್ತಿದೆ.
ಭಾರತದಲ್ಲಿ ಲೆನೋವೋ ಎಮ್9 ಟ್ಯಾಬ್ ಅನ್ನು ಕಂಪನಿ ಇತ್ತೀಚೆಗೆ ಲಾಂಚ್ ಮಾಡಿ ಎಲ್ಲರ ಗಮನ ಸೆಳೆದಿದೆ. ಈ ಗ್ಯಾಜೆಟ್ ಇದರ ಸ್ಪೆಷಲ್ ಫೀಚರ್ಸ್ ಮೂಲಕವೇ ಗ್ರಾಹಕರನ್ನು ಆಕರ್ಷಿಸಲಿದ್ದು, ಕೆಲವೇ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಖರೀದಿ ಮಾಡುವಂತಹ ಅವಕಾಶವೂ ಬರಲಿದೆ ಎಂದು ಕಂಪನಿ ಹೇಳಿದೆ.
ಲೆನೋವೋ ಎಮ್9 ಟ್ಯಾಬ್ ಫೀಚರ್ಸ್
ಈ ಹೊಸ ಲೆನೋವೋ ಟ್ಯಾಬ್ ಎಮ್9, 9 ಇಂಚಿನ ಎಲ್ಸಿಡಿ ಡಿಸ್ಪ್ಲೇ ಹೊಂದಿದ್ದು, 1340 × 800 ಪಿಕ್ಸೆಲ್ ರೆಸಲ್ಯೂಶನ್ ಡಿಸ್ಪ್ಲೇ ಫೀಚರ್ಸ್ ಅನ್ನು ಒಳಗೊಂಡಿದೆ. ಹಾಗೆಯೇ 400 ನಿಟ್ಸ್ ಬ್ರೈಟ್ನೆಸ್ ಮತ್ತು 176ppi ಪಿಕ್ಸೆಲ್ ರೇಟ್ ಅನ್ನು ಈ ಡಿಸ್ಪ್ಲೇ ಒಳಗೊಂಡಿದೆ. ಅದರಲ್ಲೂ ಈ ಡಿವೈಸ್ ಅನ್ನು ಓದುವುದಕ್ಕೆ ಹೆಚ್ಚು ಬಳಕೆ ಮಾಡುವುದರಿಂದ ವೈಡೆವಿನ್ ಎಲ್1 ಮತ್ತು ಟಿಯುವಿ ರೈನ್ಲ್ಯಾಂಡ್ ಫೀಚರ್ಸ್ನಿಂದ ಕಣ್ಣಿಗೆ ರಕ್ಷಣೆ ನೀಡಲಿದೆ.
ಇದನ್ನೂ ಓದಿ: ಇಲ್ಲಿಯವರೆಗೂ ಕೇಳಿರದ ಬಂಪರ್ ಅವಕಾಶ, 1 ಕಮೆಂಟ್ ಮಾಡಿ ಫ್ರೀಯಾಗಿ ನಥಿಂಗ್ ಪೋನ್ ನಿಮ್ಮದಾಗಿಸಿಕೊಳ್ಳಿ!
ಕ್ಯಾಮೆರಾ ವಿನ್ಯಾಸ
ಈ ಟ್ಯಾಬ್ಲೆಟ್ 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ ಹಾಗೂ 2 ಮೆಗಾಪಿಕ್ಸೆಲ್ ಮುಂಬಾಗದ ಕ್ಯಾಮೆರಾವನ್ನುಅಳವಡಿಸಲಾಗಿದೆ, ವಿಡಿಯೋ ಕರೆಗಳಿಗೆ ಹಾಗೂ ಮೀಟಿಂಗ್ಗಳಿಗೆ ಈ ಕ್ಯಾಮೆರಾ ಉತ್ತಮ ಗುಣಮಟ್ಟದಲ್ಲಿ ಕಾರ್ಯನಿರ್ವಹಿಸುತ್ತದೆ.
ಬ್ಯಾಟರಿ ಫೀಚರ್ಸ್
ಲೆನೋವೋ ಟ್ಯಾಬ್ ಎಮ್9 ಟ್ಯಾಬ್ಲೆಟ್ 5100mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಇನ್ನು ಈ ಬ್ಯಾಟರಿ 15W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಬ್ಯಾಟರಿ ಸಾಮರ್ಥ್ಯದಿಂದ 13 ಗಂಟೆಗಳ ವಿಡಿಯೋ ಪ್ಲೇಬ್ಯಾಕ್ ಮಾಡುವಂತಹ ಅವಕಾಶ ಸಿಗಲಿದೆ. ಹಾಗೆಯೇ ಚಾರ್ಜಿಂಗ್ ಹಾಗೂ ಡೇಟಾ ವರ್ಗಾವಣೆಗಾಗಿ ಯುಎಸ್ಬಿ 2.0 ಟೈಪ್ ಸಿ ಪೋರ್ಟ್ ಅನ್ನು ಹೊಂದಿದೆ.
ಪ್ರೊಸೆಸರ್ನ ಕಾರ್ಯವೈಖರಿ
ಲೆನೋವೋದ ಈ ಹೊಸ ಟ್ಯಾಬ್ಲೆಟ್ ಆಕ್ಟಾಕೋರ್ ಮೀಡಿಯಾ ಟೆಕ್ ಹಿಲಿಯೊ ಜಿ80 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಹೇಳಿದೆ. ಹಿಲಿಯೋ ಜಿ80 ಪ್ರೊಸೆಸರ್ 2 × ಕಾರ್ಟೆಕ್ಸ್ A75 ಕೋರ್ಗಳನ್ನು ಹಾಗೂ 6 × ಕಾರ್ಟೆಕ್ಸ್ A55 ಕೋರ್ಗಳನ್ನು ಬಳಕೆ ಮಾಡಿಕೊಂಡು ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡುತ್ತದೆ.
ಇದರೊಂದಿಗೆ ಆಂಡ್ರಾಯ್ಡ್ 12 ಸಿಸ್ಟಮ್ನಲ್ಲಿ ಈ ಟ್ಯಾಬ್ ರನ್ ಆಗುತ್ತದೆ. ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್ 13 ಅಪ್ಗ್ರೇಡ್ಗೂ ಅವಕಾಶ ಕಲ್ಪಿಸಲಾಗಿದೆ. ಇನ್ನು ಈ ಟ್ಯಾಬ್ ಮಾರುಕಟ್ಟೆಯಲ್ಲಿ ಮೂರು ವೇರಿಯಂಟ್ನಲ್ಲಿ ಲಭ್ಯವಿದ್ದು, 3ಜಿಬಿ ರ್ಯಾಮ್ ಮತ್ತು 32ಜಿಬಿ, 4ಜಿಬಿ ರ್ಯಾಮ್ ಮತ್ತು 64ಜಿಬಿ, ಹಾಗೂ 4ಜಿಬಿ ರ್ಯಾಮ್ ಮತ್ತು 128ಜಿಬಿ ಈ ರೀತಿ ಸ್ಟೋರೇಜ್ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.
ಬೆಲೆ ಮತ್ತು ಲಭ್ಯತೆ
ಲೆನೋವೋ ಟ್ಯಾಬ್ ಎಮ್9 ಟ್ಯಾಬ್ಲೆಟ್ ಭಾರತದ ಮಾರುಕಟ್ಟೆಯಲ್ಲಿ 11,600 ರೂಪಾಯಿಯ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಈ ಟ್ಯಾಬ್ ಮೂರು ಸ್ಟೋರೇಜ್ ವೇರಿಯಂಟ್ ಜೊತೆಗೆ ಆರ್ಕ್ಟಿಕ್ ಗ್ರೇ ಮತ್ತು ಫ್ರಾಸ್ಟ್ ಬ್ಲೂ ಎಂಬ ಎರಡು ಬಣ್ಣದಲ್ಲಿ ಆಯ್ಕೆಗಳನ್ನು ಹೊಂದಿದೆ. ಇನ್ನು 2023ರಿಂದ ಮಾರುಕಟ್ಟೆಗಳಲ್ಲಿ ಖರೀದಿ ಮಾಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ