Moto E40: 48MP ಕ್ಯಾಮೆರಾ, 5 ಸಾವಿರ mAh ಬ್ಯಾಟರಿ... ಕೇವಲ 10 ಸಾವಿರಕ್ಕೆ ಸಿಗುತ್ತಿದೆ ಈ ಸ್ಮಾರ್ಟ್​ಫೋನ್!​

Motorola E40 Smartphone: Moto E40 ತ್ರಿವಳಿ ಕ್ಯಾಮೆರಾ ಸೆಟಪ್ ಹೊಂದಿದ್ದು, 48MP ಪ್ರಾಥಮಿಕ ಕ್ಯಾಮೆರಾ, 2MP ಮ್ಯಾಕ್ರೋ ಲೆನ್ಸ್ ಮತ್ತು 2MP ಡೆಪ್ತ್ ಕ್ಯಾಮೆರಾ ಇದರಲ್ಲಿ ನೀಡಲಾಗಿದೆ.

Moto E40

Moto E40

  • Share this:
    Motorola E40:  ಲೆನೊವೊ ಒಡೆತನದ ಬ್ರಾಂಡ್ ಮೊಟೊರೊಲಾ ಮಂಗಳವಾರ ಮೋಟೋ ಇ 40 ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ನೂತನ ಸ್ಮಾರ್ಟ್​​ಫೋನ್​ ಪಂಚ್ ಹೋಲ್ HD+ ಡಿಸ್​ಪ್ಲೇಯೊಂದಿಗೆ 90 Hz ನ ಸ್ಕ್ರೀನ್ ರಿಫ್ರೆಶ್ ದರವನ್ನು ಹೊಂದಿದೆ, ತ್ರಿವಳಿ ಕ್ಯಾಮೆರಾ ಸೆಟಪ್ ಇದರಲ್ಲಿದ್ದು, 48MP ಪ್ರಾಥಮಿಕ ಕ್ಯಾಮೆರಾ ಸೆನ್ಸಾರ್  ನೀಡಲಾಗಿದೆ. ಬಜೆಟ್​ ಬೆಲೆಗೆ ಸಿಗುವ ಈ ಸ್ಮಾರ್ಟ್​ಫೋನ್​ ಗ್ರಾಹಕರನ್ನು ಮೋಡಿ ಮಾಡಿದೆ.

    Moto E40 ಸ್ಮಾರ್ಟ್​ಫೋನ್​ ಕಾರ್ಬನ್ ಗ್ರೇ ಮತ್ತು ಪಿಂಕ್ ಮಣ್ಣಿನ ಬಣ್ಣಗಳ ಆಯ್ಕೆ ಸಿಗುತ್ತಿದೆ. ನೂತನ ಫೋನ್ 6.5 ಇಂಚಿನ ಮ್ಯಾಕ್ಸ್ ವಿಷನ್ ಎಚ್‌ಡಿ+ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದ್ದು, 90Hz ರಿಫ್ರೆಶ್ ದರ ಮತ್ತು 400 ನಿಟ್‌ಗಳಷ್ಟು ಹೊಳಪನ್ನು ಹೊಂದಿದೆ. ಗ್ರಾಹಕರಿಗಾಗಿ 4GB + 64GB ಸ್ಟೊರೇಜ್​ ಆವೃತ್ತಿಯೊಂದಿಗೆ ಸಿಗಲಿದೆ. ಈ ಫೋನ್ ಫ್ಲಿಪ್‌ಕಾರ್ಟ್ ಮೂಲಕ ಅಕ್ಟೋಬರ್ 17 ರಿಂದ ಲಭ್ಯವಿರುತ್ತದೆ.

    Moto E40 ಯುನಿಸೊಕ್ ಟಿ 700 ಆಕ್ಟಾ-ಕೋರ್ ಚಿಪ್ಸೆಟ್ ಅನ್ನು 1.8GHz ವರೆಗೂ ಮತ್ತು 4GB LPDDR4x RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ಆಯ್ಕೆಯಲ್ಲಿದೆ. ಮೈಕ್ರೊ ಎಸ್​ಡಿ ಕಾರ್ಡ್ ಸಹಾಯದಿಂದ 1TB ವರೆಗೆ ವಿಸ್ತರಿಸಬಹುದಾಗಿದೆ.

    Moto E40 ತ್ರಿವಳಿ ಕ್ಯಾಮೆರಾ ಸೆಟಪ್ ಹೊಂದಿದ್ದು, 48MP ಪ್ರಾಥಮಿಕ ಕ್ಯಾಮೆರಾ, 2MP ಮ್ಯಾಕ್ರೋ ಲೆನ್ಸ್ ಮತ್ತು 2MP ಡೆಪ್ತ್ ಕ್ಯಾಮೆರಾ ಇದರಲ್ಲಿ ನೀಡಲಾಗಿದೆ.

    ಫೋನಿನ ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಒಳಗೊಂಡಿದೆ. ಸಾಫ್ಟ್‌ವೇರ್‌ಗೆ ಸಂಬಂಧಿಸಿದಂತೆ, ಸಾಧನವು ಆಂಡ್ರಾಯ್ಡ್ 11 ಅನ್ನು ಬಾಕ್ಸ್‌ನಿಂದ ಯಾವುದೇ ಜಾಹಿರಾತುಗಳು ಮತ್ತು ಬ್ಲೋಟ್‌ವೇರ್‌ಗಳಿಲ್ಲದೆ ರನ್ ಮಾಡುತ್ತದೆ.

    ಸ್ಮಾರ್ಟ್​ಫೋನಿನ ಬಲಭಾಗದಲ್ಲಿ ಮೀಸಲಾದ ಗೂಗಲ್ ಅಸಿಸ್ಟೆಂಟ್ ಬಟನ್​ ಆಯ್ಕೆಯನ್ನು ಸಹ ಹೊಂದಿದೆ. ಸಂಪರ್ಕ ವೈಶಿಷ್ಟ್ಯಗಳಲ್ಲಿ ಡ್ಯುಯಲ್ ಸಿಮ್ ಬೆಂಬಲ, ವೈ-ಫೈ 802.11 ಬಿ/ಜಿ/ಎನ್, ಬ್ಲೂಟೂತ್ 5.0, ಜಿಪಿಎಸ್, ಯುಎಸ್‌ಬಿ-ಸಿ ಪೋರ್ಟ್, 3.5 ಎಂಎಂ ಆಡಿಯೋ ಜ್ಯಾಕ್ ಹೊಂದಿದೆ.

    ದೀರ್ಘ ಕಾಲದ ಬಾಳಿಕೆಗಾಗಿ ಈ ಸಾಧನವು 5000 mah ಬ್ಯಾಟರಿಯನ್ನು ಪ್ಯಾಕ್  ಹೊಂದಿದ್ದು, 40 ಗಂಟೆಗಳ ಬ್ಯಾಕಪ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

    ಇದನ್ನು ಓದಿ: Smartphone Saves Life: ಪ್ರಾಣ ಉಳಿಸಿದ ಸ್ಮಾರ್ಟ್​​​ಫೋನ್​​ & ಮೊಬೈಲ್ ಕವರ್; ರೋಚಕ ಕಥೆ ಇಲ್ಲಿದೆ ನೋಡಿ



    Vivo Y20T: 20 ಗಂಟೆ ಸಿನಿಮಾ, 8 ಗಂಟೆ ಗೇಮಿಂಗ್​ಗಾಗಿ ಬಳಸಬಹುದು! ಸಖತ್ತಾಗಿದೆ ಬಜೆಟ್​ ಬೆಲೆಯ ವಿವೋ Y20T ಫೋನ್

    ಜನಪ್ರಿಯ ವಿವೋ Y20T ಭಾರತದಲ್ಲಿ ಬಿಡುಗಡೆಯಾಗಿದ್ದು, ಕಂಪನಿಯ ವೈ ಸರಣಿಯ ಸ್ಮಾರ್ಟ್ ಫೋನ್ ಬಳಗಕ್ಕೆ ಹೊಸ ಫೋನ್​ ಸೇರ್ಪಡೆಗೊಂಡಿದೆ. ನೂತನ ವಿವೋ Y20T ಸ್ನಾಪ್‌ಡ್ರಾಗನ್ 662 ಚಿಪ್‌ಸೆಟ್ ಮತ್ತು 64 ಜಿಬಿ ಸಂಗ್ರಹ ಮತ್ತು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ವಿವೋ Y20T ಬೆಲೆಯನ್ನು  15,490 ರೂ.ಗೆ ನಿಗದಿಪಡಿಸಲಾಗಿದೆ. ಸಾಧನವು ಕಂಪನಿಯ ವಿಸ್ತೃತ RAM 2.0 ವೈಶಿಷ್ಟ್ಯವನ್ನು ಹೊಂದಿದೆ. ಇದು ಬಳಕೆದಾರರಿಗೆ ತೀವ್ರವಾದ ಕಾರ್ಯಗಳಿಗಾಗಿ ಹೆಚ್ಚುವರಿ ವರ್ಚುವಲ್ ಮೆಮೊರಿಯನ್ನು ಪಡೆಯಲು ಅನುಮತಿಸುತ್ತದೆ.

    ವಿವೋ Y20T ಬೆಲೆ  15,490 ರೂ ಆಗಿದ್ದು, 6GB/128GB RAM ಮತ್ತು ಶೇಖರಣಾ ರೂಪಾಂತರದಲ್ಲಿ ಮಾರಾಟ ಮಾಡಲಾಗುತ್ತದೆ. ಸಾಧನವು ಎರಡು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ - ಪ್ಯೂರಿಸ್ಟ್ ಬ್ಲೂ ಮತ್ತು ಅಬ್ಸಿಡಿಯನ್ ಬ್ಲಾಕ್.  ಅಕ್ಟೋಬರ್ 11 ರಿಂದ ರಿಟೇಲ್ ಸ್ಟೋರ್‌ಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿದೆ.

    ವಿವೋ ಪ್ರಕಾರ, ಬಜಾಜ್ ಫಿನ್‌ಸರ್ವ್‌ನೊಂದಿಗೆ 12 ತಿಂಗಳ ವರೆಗಿನ ನೋ-ಕಾಸ್ಟ್ ಇಎಂಐ ಸೇರಿದಂತೆ ಆನ್‌ಲೈನ್ ಆಫರ್‌ಗಳನ್ನು ಗ್ರಾಹಕರು ಬಳಸಬಹುದಾದ ಆಯ್ಕೆ ನೀಡಿದೆ.  ಗ್ರಾಹಕರು ವಿವೋ ಇ-ಸ್ಟೋರ್‌ನಲ್ಲಿ ಹೆಚ್ಚುವರಿ  500 ರೂ ಕ್ಯಾಶ್‌ಬ್ಯಾಕ್ ಅನ್ನು ಸಹ ಪಡೆಯಬಹುದು.  ವಿವೋ ಪ್ರಕಾರ ಫ್ಲಿಪ್‌ಕಾರ್ಟ್, ಅಮೆಜಾನ್, ಪೇಟಿಎಂ ಮತ್ತು ಟಾಟಾ ಕ್ಲಿಕ್‌ನಂತಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಗ್ರಾಹಕರು ಆರು ತಿಂಗಳ ನೋ ಕಾಸ್ಟ್ ಎಕ್ಸ್‌ಚೇಂಜ್ ಅನ್ನು ಪಡೆಯಬಹುದು.

    ಹೊಸದಾಗಿ ಬಿಡುಗಡೆಗೊಂಡ ವಿವೋ Y20T ಸ್ಮಾರ್ಟ್ ಫೋನ್ 6.51 ಇಂಚಿನ 720 ಪಿ ಎಚ್ ಡಿ+ ಡಿಸ್ ಪ್ಲೇಯನ್ನು ಹೊಂದಿದೆ.  ಭದ್ರತೆಗಾಗಿ ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅಳವಡಿಸಿಕೊಂಡಿದೆ. ಸಾಧನವು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 662 ಚಿಪ್‌ಸೆಟ್ ಅನ್ನು ಹೊಂದಿದೆ ಮತ್ತು 6GB RAM +128GB ಸಂಗ್ರಹದೊಂದಿಗೆ ಬರುತ್ತದೆ. ವಿವೋ ತನ್ನ ವಿಸ್ತೃತ RAM 2.0 ವೈಶಿಷ್ಟ್ಯವನ್ನು ಹೊಸ Y20T ಸ್ಮಾರ್ಟ್‌ಫೋನ್‌ನಲ್ಲಿ ನೀಡಿದೆ. ಇದು ಬಳಕೆದಾರರಿಗೆ ಸಾಧನದಲ್ಲಿ 1GB ಸಂಗ್ರಹಣೆಯನ್ನು ವರ್ಚುವಲ್ ಮೆಮೊರಿಯಂತೆ ಬಳಸಲು ಅನುಮತಿಸುತ್ತದೆ.

    ಕ್ಯಾಮೆರಾ ವಿಶೇಷತೆಯನ್ನು ಗಮನಿಸಿದಾಗ, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ, ಇದರಲ್ಲಿ 13 ಮೆಗಾಫಿಕ್ಸೆಲ್ ಪ್ರಾಥಮಿಕ ಸೆನ್ಸರ್, 2 ಮೆಗಾಫಿಕ್ಸೆಲ್​ ಕ್ಯಾಮರಾ ಮತ್ತು ಸೂಪರ್ ಮ್ಯಾಕ್ರೋ ಕ್ಯಾಮೆರಾ ನೀಡಲಾಗಿದೆ. ಸಾಧನದ ಮುಂಭಾಗದಲ್ಲಿ ಡ್ಯೂಡ್ರಾಪ್ ನೋಚ್ ಇದ್ದು 8 ಮೆಗಾಫಿಕ್ಸೆಲ್​ ಸೆಲ್ಫಿ ಶೂಟರ್ ಅನ್ನು ಹೊಂದಿದೆ.  ಇದು ಔರಾ ಸ್ಕ್ರೀನ್ ಲೈಟ್ ಮತ್ತು ಪೋರ್ಟ್ರೇಟ್ ಮೋಡ್ ಸಾಫ್ಟ್‌ವೇರ್ ವೈಶಿಷ್ಟ್ಯಗಳನ್ನು ಹೊಂದಿದೆ.

    ವಿವೋ Y20T 5000mAh ಬ್ಯಾಟರಿ ಅಳವಡಿಸಕೊಂಡಿದ್ದು, 18W ನಲ್ಲಿ ಫಾಸ್ಟ್ ಚಾರ್ಜ್ ಬೆಂಬಲದ ಮೂಲಕ ಚಾರ್ಜ್ ಮಾಡಬಹುದು. Y20T ಸ್ಮಾರ್ಟ್​ಫೋನ್ ಸಹ AI ಪವರ್ ಸೇವಿಂಗ್ ತಂತ್ರಜ್ಞಾನವನ್ನು ಹೊಂದಿದೆ ಎಂದು ವಿವೋ ಹೇಳುತ್ತದೆ. ಇದು 20 ಗಂಟೆಗಳ HD ಚಲನಚಿತ್ರ ಸ್ಟ್ರೀಮಿಂಗ್ ಮತ್ತು 8 ಗಂಟೆ  ಗೇಮಿಂಗ್​ಗಾಗಿ ಬಳಸಬಹುದಾಗಿದೆ. ಮಾತ್ರವಲ್ಲದೆ ಬಳಕೆದಾರರಿಗೆ ತಮ್ಮ ಇತರ ಸಾಧನಗಳನ್ನು ರಿವರ್ಸ್ ಚಾರ್ಜ್ ಮಾಡುವ ಸಾಮರ್ಥ್ಯವನ್ನು ನೀಡುತ್ತದೆ. ಸಾಧನವು ಆಂಡ್ರಾಯ್ಡ್ 11 ರ ಮೇಲೆ ಕಾರ್ಯನಿರ್ವಹಿಸುತ್ತಿದೆ ಮತ್ತು ಅಲ್ಟ್ರಾ ಗೇಮ್ ಮೋಡ್, ಎಸ್‌ಪೋರ್ಟ್ಸ್ ಮೋಡ್, 4ಡಿ ಗೇಮ್ ವೈಬ್ರೇಶನ್, ಗೇಮ್ ಪಿಕ್ಚರ್-ಇನ್-ಪಿಕ್ಚರ್ ವೈಶಿಷ್ಟ್ಯಗಳೊಂದಿಗೆ ಸುಧಾರಿತ ಅನುಭವಕ್ಕಾಗಿ ಕಂಪನಿಯ ಮಲ್ಟಿ ಟರ್ಬೊ 5.0 ಅನ್ನು ಅಳವಡಿಸಿಕೊಂಡಿದೆ.

    ಒಟ್ಟಿನಲ್ಲಿ ವಿವೋ ಗ್ರಾಹಕರ ಗಮನ ಸೆಳೆಯುವಂತೆಹ ಆಕರ್ಷಕ ಫೀಚರ್ಸ್​ ಅಳವಡಿಸಿಕೊಂಡಿದೆ. ಸದ್ಯ 15, 490 ರೂ.ಗೆ ಖರೀದಿಗೆ ಸಿಗುತ್ತಿದೆ. ವಿವೋ ರಿಟೇಲ್​ ಸ್ಟೋರ್​ಗಳಲ್ಲೂ ಖರೀದಿಸುವ ಅವಕಾಶವನ್ನು ಗ್ರಾಹಕರಿಗೆ ನೀಡಿದೆ.

    Published by:Harshith AS
    First published: