ಲೆನೋವೋ (Lenovo) ಒಂಭತ್ತು ವರ್ಷಗಳ ಹಿಂದೆ ಮೊಟೊರೊಲಾವನ್ನು (Motorola) ಖರೀದಿಸಿದೆ ಎಂಬುದು ಗೊತ್ತೇ ಇದೆ. ಇದೀಗ ಲೆನೋವೋ ಮೊಟೊರೊಲಾ ಥಿಂಕ್ಫೋನ್ ಬಿಡುಗಡೆಗೆ ಸಜ್ಜಾಗಿದ್ದು ಅದಕ್ಕಿಂತ ಮುಂಚೆಯೇ ವಿನ್ಯಾಸ ಹಾಗೂ ವಿಶೇಷತೆಗಳ ವರದಿ ಬಹಿರಂಗಗೊಂಡಿದೆ. ಸೋರಿಕೆಯಾಗಿರುವ ಇಮೇಜ್ಗಳು ಫೋನ್ಪ್ರಿಯರನ್ನು ಸೆಳೆಯುವಂತಿದ್ದು ಲೆನೊವೊ ಥಿಂಕ್ಪ್ಯಾಡ್ ಲ್ಯಾಪ್ಟಾಪ್ ಮಾದರಿಯ ಅದೇ ವಿನ್ಯಾಸದಲ್ಲಿರುವಂತೆ ಕಾಣಿಸುತ್ತಿದೆ. ಥಿಂಕ್ಪ್ಯಾಡ್ 6.6 ಇಂಚಿನ ಒಎಲ್ಇಡಿ ಡಿಸ್ಪ್ಲೇಯನ್ನು ಹೊಂದಿದ್ದು ರೆಸಲ್ಯೂಶನ್ 2400x1080px ಆಗಿದೆ. ಸ್ಕ್ರೀನ್ HDR10+ ಬೆಂಬಲವನ್ನು ಒದಗಿಸುತ್ತಿದೆ.
ಲೆನೋವೋ ಕಂಪನಿಯ ಮೊದಲ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿದೆ. ಈ ಸ್ಮಾರ್ಟ್ಫೋನ್ ಹಲವಾರು ವಿಶೇಷ ಫೀಚರ್ಸ್ ಅನ್ನು ಹೊಂದಿದ್ದು ಮಾರುಕಟ್ಟೆಯಲ್ಲಿ ಕೆಲವೇ ದಿನಗಳಲ್ಲಿ ಲಗ್ಗೆಯಿಡುತ್ತದೆ.
ಮೊಟೊರೊಲಾ ಥಿಂಕ್ಪ್ಯಾಡ್ ರಚನೆ
ಮೊಟೊರೊಲಾದ ಥಿಂಕ್ಪ್ಯಾಡ್ ಗಡುಸಾದ ವಿನ್ಯಾಸವನ್ನು ಹೊಂದಿದ್ದು ಹಿಂಭಾಗವನ್ನು ಹಗುರವಾದ ಅರಾಮಿಡ್ ಫೈಬರ್ನಿಂದ ವಿನ್ಯಾಸಗೊಳಿಸಲಾಗಿದೆ. ಡಿವೈಸ್ನ ಚೌಕಟ್ಟಿನಲ್ಲಿ ಅಲ್ಯೂಮಿನಿಯಂ ಅಳವಡಿಸಲಾಗಿದೆ ಹಾಗೂ ಮುಂಭಾಗದಲ್ಲಿ ಗೊರಿಲ್ಲಾ ಗ್ಲಾಸ್ ರಕ್ಷಣೆ ಇದೆ.
ಇದನ್ನೂ ಓದಿ: ವಿಶ್ವದ ಮೊದಲ ಸ್ಮಾರ್ಟ್ ಪೋರ್ಟಬಲ್ ಉಪಕರಣ; ಇಲ್ಲಿದೆ ಕಂಪ್ಲೀಟ್ ಮಾಹಿತಿ
ಸ್ನ್ಯಾಪ್ಡ್ರ್ಯಾಗನ್ 8+ Gen1 ಚಿಪ್ಸೆಟ್ನೊಂದಿಗೆ 8 ಜಿಬಿ ಅಥವಾ 128 ಜಿಬಿ ರ್ಯಾಮ್ ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಸ್ಟೋರೇಜ್ ಆಯ್ಕೆಯಲ್ಲಿ 128 ಜಿಬಿ, 256 ಜಿಬಿ, 512 ಜಿಬಿ ಡಿವೈಸ್ ಲಭ್ಯವಿದೆ. ಡಿವೈಸ್ ಕಾರ್ಬನ್ ಬ್ಲ್ಯಾಕ್ ಬಣ್ಣದಲ್ಲಿ ಬಿಡುಗಡೆಯಾಗಲಿದೆ ಎಂದು ಸುದ್ದಿಮೂಲಗಳು ತಿಳಿಸಿವೆ.
ಡಿವೈಸ್ ವೈಶಿಷ್ಠ್ಯ
ಡಿವೈಸ್ ತೂಕ 188.5 ಗ್ರಾಂ ಆಗಿದ್ದು 158.76 × 74.38 × 8.26mm ಅಳತೆಗಳನ್ನು ಹೊಂದಿದೆ. ಸಾಧನದ ಸಂಪರ್ಕ ವೈಶಿಷ್ಠ್ಯಗಳು ಡ್ಯುಯಲ್-ಸಿಮ್, 5ಜಿ, ವೈಫೈ 6E 802.11 a/b/g/n/ac/ax, ಬ್ಲ್ಯೂಟೂತ್ 5.3, NFC, GPS, ಗ್ಲೊನಾಸ್, ಮತ್ತು ಗೆಲಿಲಿಯೊ ಇತ್ಯಾದಿ ಫೀಚರ್ ಗಳನ್ನು ಹೊಂದಿದೆ.
ಹೊಸ ಡಿವೈಸ್, ಮೊಟೊ ಸೆಕ್ಯೂರ್ನೊಂದಿಗೆ ಬಂದಿದ್ದು ಭದ್ರತೆ ಹಾಗೂ ಗೌಪ್ಯತೆಗೆ ಮುಖ್ಯಕೇಂದ್ರವಾಗಿ ಕಾರ್ಯನಿರ್ವಹಿಸುವ ಆ್ಯಪ್ ಇದಾಗಿದೆ.
Moto OEMConfig ಅಥವಾ Moto ಡಿವೈಸ್ ಮ್ಯಾನೇಜರ್ ಬಳಸಿಕೊಂಡು ಐಟಿ ನಿರ್ವಾಹಕರು ಥಿಂಕ್ಪೋನ್ಗಳಲ್ಲಿ ಮೋಟೋ ಸುರಕ್ಷಿತ ವೈಶಿಷ್ಠ್ಯಗಳನ್ನು ರಿಮೋಟ್ ಆಗಿ ಕಾನ್ಫಿಗರ್ ಮಾಡಬಹುದು ಎಂದು ಸಂಸ್ಥೆಯ ಮೂಲಗಳು ಮಾಹಿತಿ ನೀಡಿವೆ.
ಧೂಳು, ನೀರು ನಿರೋಧಕ
ಮೊಟೊರೊಲಾದ ಥಿಂಕ್ಪೋನ್ IP68 ರೇಟಿಂಗ್ ಅನ್ನು ಪಡೆದುಕೊಂಡಿದ್ದು ಧೂಳು ಹಾಗೂ ನೀರಿನಿಂದ ಫೋನ್ಗೆ ರಕ್ಷಣೆಯನ್ನು ಒದಗಿಸುತ್ತದೆ. MIL-STD 810H ರೇಟಿಂಗ್ ಅನ್ನು ಡಿವೈಸ್ ಪಡೆದುಕೊಂಡಿದ್ದು 1.25 ಮೀಟರ್ಗಳ ಅಂತರದಿಂದ ಫೋನ್ ಬಿದ್ದರೂ ಹಾನಿಗೊಳಗಾಗುವುದಿಲ್ಲ ಎಂಬುದು ಪರಿಣಿತರ ಹೇಳಿಕೆಯಾಗಿದೆ.
ಸ್ಮಾರ್ಟ್ಫೋನ್ ಎಡ ಅಂಚಿನಲ್ಲಿ ಕೆಂಪು ಅಕ್ಷರವಿರುವ ಕಸ್ಟಮೈಸ್ ಮಾಡಬಹುದಾದ ಕೀಯೊಂದಿಗೆ ಬಂದಿದ್ದು ಬಳಕೆದಾರರಿಗೆ ವ್ಯಾಪಾರ ಕ್ಷೇತ್ರಕ್ಕೆ ಸಂಬಂಧಿತ ಸುದ್ದಿಗಳನ್ನು ತಿಳಿದುಕೊಳ್ಳಲು ಒಂದೇ ಕ್ಲಿಕ್ನಲ್ಲಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.
ಕ್ಯಾಮೆರಾ, ಬ್ಯಾಟರಿ ವಿಶೇಷತೆ ಹೇಗಿದೆ?
ಲೆನೋವೋ ಥಿಂಕ್ಫೋನ್ PDAF ಮತ್ತು OIS ಎರಡನ್ನೂ ಹೊಂದಿರುವ 50MP f/1.8 ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಮುಂಭಾಗದಲ್ಲಿ, ಆಟೋಫೋಕಸ್ನೊಂದಿಗೆ 32MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಡಿವೈಸ್ MIL-STD 810H ಮತ್ತು IP68 ಪ್ರಮಾಣೀಕರಣವನ್ನು ಹೊಂದಿದ್ದು, ನೀರು, ಘನೀಕರಿಸುವ ತಾಪಮಾನ ಹಾಗೂ ಕಂಪನದ ವಿರುದ್ಧ ಬಲವಾಗಿ ನಿಲ್ಲುತ್ತದೆ. ಸ್ಮಾರ್ಟ್ಫೋನ್ 5,000mAh ಬ್ಯಾಟರಿಯನ್ನು ಹೊಂದಿದ್ದು ಅದು 68W ವೈರ್ಡ್ ಚಾರ್ಜಿಂಗ್ ಮತ್ತು 15W ವೈರ್ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಥಿಂಕ್ಪ್ಯಾಡ್ಗೆ ಡಿವೈಸ್ ಅನ್ನು ಸಂಪರ್ಕಿಸಬಹುದು
ಥಿಂಕ್ಪ್ಯಾಡ್ ಲ್ಯಾಪ್ಟಾಪ್ ಹೊಂದಿರುವ ಕೆಲವೊಂದು ವೈಶಿಷ್ಟ್ಯಗಳನ್ನು ಡಿವೈಸ್ ಹೊಂದಿದೆ. ಇದನ್ನು ಥಿಂಕ್ಪ್ಯಾಡ್ಗೆ ಸಂಪರ್ಕಿಸಬಹುದು. ಹಾಗೂ ಡ್ರ್ಯಾಗ್ ಮತ್ತು ಡ್ರಾಪ್ ಮಾಡುವ ಮೂಲಕ ಪಠ್ಯ, ಫೋಟೋ ಮತ್ತು ಡಾಕ್ಯುಮೆಂಟ್ಗಳು ಸೇರಿದಂತೆ ವಿವಿಧ ರೀತಿಯ ಫೈಲ್ಗಳನ್ನು ವರ್ಗಾಯಿಸಲು ಬಳಸಬಹುದು.
ಡಿವೈಸ್ನಲ್ಲಿರುವ ಆ್ಯಪ್ಗಳು
ಬಳಕೆದಾರರು ನೋಟಿಫಿಕೇಶನ್ಗಳನ್ನು ಹಂಚಿಕೊಳ್ಳಬಹುದಾಗಿದ್ದು ಫೋನ್ ಅನ್ನು ಥಿಂಕ್ಪ್ಯಾಡ್ನಲ್ಲಿ ವೆಬ್ಕ್ಯಾಮ್ ರೀತಿಯಲ್ಲಿ ಬಳಸಬಹುದಾಗಿದೆ. ಲ್ಯಾಪ್ಟಾಪ್ ಸ್ಕ್ರೀನ್ನಲ್ಲಿ ಯಾವುದೇ ಆ್ಯಂಡ್ರಾಯ್ಡ್ ಆ್ಯಪ್ಗಳನ್ನು ಬಳಸಬಹುದು ಜೊತೆಗೆ ಚಾಲನೆ ಮಾಡಬಹುದು. ಸ್ಮಾರ್ಟ್ಫೋನ್ನಲ್ಲಿ ಮೈಕ್ರೋಸಾಫ್ಟ್ 365, ಔಟ್ಲುಕ್ ಹಾಗೂ ಟೀಮ್ಸ್ ಆ್ಯಪ್ಗಳಿದ್ದು ಫೋನ್ ಶೀಘ್ರದಲ್ಲಿಯೇ ಯುಎಸ್, ಯುರೋಪ್, ಲ್ಯಾಟಿನ್ ಅಮೇರಿಕಾ, ಮಧ್ಯಪ್ರಾಚ್ಯ, ಆಸ್ಟ್ರೇಲಿಯಾ ಮತ್ತು ಏಷ್ಯಾದ ಆಯ್ದ ದೇಶಗಳಲ್ಲಿ ಲಾಂಚ್ ಆಗಲಿದೆ. ಡಿವೈಸ್ ಬೆಲೆ ಇನ್ನೂ ಘೋಷಣೆಯಾಗಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ