Lava Smartphones: ಲಾವಾ ಕಂಪೆನಿಯ ಹೊಸ ಸ್ಮಾರ್ಟ್​​ಫೋನ್​ ಲಾಂಚ್​! ಹೇಗಿದೆ ಫೀಚರ್ಸ್​?

ಲಾವಾ ಬ್ಲೇಜ್​ 5ಜಿ

ಲಾವಾ ಬ್ಲೇಜ್​ 5ಜಿ

ಲಾವಾ ಬ್ರಾಂಡ್​ನ ಅಡಿಯಲ್ಲಿ ಬಿಡುಗಡೆಯಾಗಿರುವ ಲಾವಾ ಬ್ಲೇಜ್​​ 5ಜಿ ಸ್ಮಾರ್ಟ್​​ಫೋನ್​ ವೇಗದ ಇಂಟರ್ನೆಟ್​ ಅನ್ನು ಬಳಸಲು ಸಹಾಯಕವಾಗಿದೆ. ಹಾಗೆಯೇ ಇದು ಟ್ರಿಪಲ್​ ರಿಯರ್​​ ಕ್ಯಾಮೆರಾ ಸೆಟಪ್​ ಅನ್ನು ಹೊಂದಿದೆ.

 • Share this:

  ಸ್ಮಾರ್ಟ್​​​ಫೋನ್​ ಕಂಪೆನಿಗಳು (Smartphone Company) ತನ್ನ ಗ್ರಾಹಕರಿಗಾಗಿ ಹೊಸ ಹೊಸ ಸ್ಮಾರ್ಟ್​​ಫೋನ್​​ಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಇತ್ತೀಚೆಗೆ ದೇಶದಲ್ಲಿ 5ಜಿ ನೆಟ್​ವರ್ಕ್​ ಭಾರೀ ಸದ್ದು ಮಾಡುತ್ತಿದೆ. ಇದಕ್ಕಾಗಿಯೇ ಕೆಲವೊಂದು ಕಂಪೆನಿಗಳು 5ಜಿ ಸ್ಮಾರ್ಟ್​​ಫೋನ್​ಗಳನ್ನೇ ಪರಿಚಯಿಸುತ್ತಿದೆ. ಇದೀಗ ದೇಶಿಯ ಬ್ರಾಂಡ್​​ ಆಗಿರುವ ಲಾವಾ ಕಂಪೆನಿ (Lava Company) ಕಳೆದ ವರ್ಷ ತನ್ನ ಮೊದಲ 5ಜಿ ಸ್ಮಾರ್ಟ್​​ಫೋನ್​ ಲಾವಾ  ಬ್ಲೇಜ್​​ 5ಜಿಯನ್ನು (Lava Blaze 5G) ಬಿಡುಗಡೆ ಮಾಡಿತ್ತು. ಸದ್ಯ ಇದೇ ಬ್ರಾಂಡ್​ನಲ್ಲಿ 6ಜಿಬಿ ರ್‍ಯಾಮ್ ಮತ್ತು 128 ಜಿಬಿ ಸ್ಟೋರೇಜ್​ ಮಾದರಿಯನ್ನು ಬಿಡುಗಡೆ ಮಾಡಿದೆ. ಬಜೆಟ್​ ಬೆಲೆಯಲ್ಲಿ ಸ್ಮಾರ್ಟ್​​ಫೋನ್​ಗಳನ್ನು ಪರಿಚಯಿಸುವಲ್ಲಿ ಲಾವಾ ಕಂಪೆನಿ ಭಾರೀ ಮುಂಚೂಣಿಯಲ್ಲಿದೆ. 


  ಲಾವಾ ಬ್ರಾಂಡ್​ನ ಅಡಿಯಲ್ಲಿ ಬಿಡುಗಡೆಯಾಗಿರುವ ಲಾವಾ ಬ್ಲೇಜ್​​ 5ಜಿ ಸ್ಮಾರ್ಟ್​​ಫೋನ್​ ವೇಗದ ಇಂಟರ್ನೆಟ್​ ಅನ್ನು ಬಳಸಲು ಸಹಾಯಕವಾಗಿದೆ. ಹಾಗೆಯೇ ಇದು ಟ್ರಿಪಲ್​ ರಿಯರ್​​ ಕ್ಯಾಮೆರಾ ಸೆಟಪ್​ ಅನ್ನು ಹೊಂದಿದೆ.


  ಲಾವಾ ಬ್ಲೇಜ್​ 5ಜಿ ಸ್ಮಾರ್ಟ್​​ಫೋನ್​ ಫೀಚರ್ಸ್​


  ಲಾವಾ ಬ್ಲೇಜ್ 5ಜಿ ಸ್ಮಾರ್ಟ್‌ಫೋನ್‌ 6.5-ಇಂಚಿನ ಹೆಚ್​​ಡಿ ಪ್ಲಸ್​ IPS ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಈ ಡಿಸ್‌ಪ್ಲೇ 81.3% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದ್ದು, 20:9 ರಚನೆಯ ಅನುಪಾತವನ್ನು ಪಡೆದಿದೆ. ಇದು ಫ್ಲಾಟ್ ಎಡ್ಜ್ ವಿನ್ಯಾಸ ಮತ್ತು ವಾಟರ್ ಡ್ರಾಪ್-ನಾಚ್ ಡಿಸ್‌ಪ್ಲೇಯನ್ನು ಒಳಗೊಂಡಿದೆ.


  ಇದನ್ನೂ ಓದಿ: ಐಫೋನ್​ಗಳ ಮೇಲೆ ಈ ವೆಬ್​ಸೈಟ್​ನಲ್ಲಿ ಭರ್ಜರಿ ಡಿಸ್ಕೌಂಟ್​! ಏನೆಲ್ಲಾ ರಿಯಾಯಿತಿಗಳು ಲಭ್ಯ?


  ಕ್ಯಾಮೆರಾ ಸೆಟಪ್​ ಹೇಗಿದೆ?


  ಲಾವಾ ಬ್ಲೇಜ್‌ 5ಜಿ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಹಿಂಭಾಗದ ಕ್ಯಾಮೆರಾ ಮೂಲಕ 2K ವಿಡಿಯೋ ರೆಕಾರ್ಡಿಂಗ್ ಅನ್ನು ಮಾಡಬಹುದಾಗಿದೆ. ಇನ್ನು ಸೆಲ್ಫಿಗಾಗಿ ಮತ್ತು ವಿಡಿಯೋ ಕಾಲ್​ಗಾಗಿ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ.


  ಪ್ರೊಸೆಸರ್​ ಸಾಮರ್ಥ್ಯ


  ಲಾವಾ ಬ್ಲೇಜ್ 5ಜಿ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 ಎಸ್​ಓಸಿ ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 12 ಆಪರೇಟಿಂಗ್​ ಸಿಸ್ಟಮ್​ನ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ 6ಜಿಬಿ ರ್‍ಯಾಮ್ ಮತ್ತು 128ಜಿಬಿ ಇಂಟರ್ನಲ್​​ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಸ್ಲಾಟ್​​ನೊಂದಿಗೆ 1TB ವರೆಗೆ ಸ್ಟೋರೇಜ್​ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.


  ಬ್ಯಾಟರಿ ಸಾಮರ್ಥ್ಯ


  ಲಾವಾ ಬ್ಲೇಜ್‌ 5ಜಿ ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್​ ಅನ್ನು ಹೊಂದಿದೆ. ಇದು ಸಿಂಗಲ್‌ ಚಾರ್ಜ್‌ನಲ್ಲಿ 50 ಗಂಟೆಗಳ ಟಾಕ್‌ಟೈಮ್ ಮತ್ತು 25 ದಿನಗಳ ಸ್ಟ್ಯಾಂಡ್‌ಬೈ ಟೈಂ ಆಯ್ಕೆಯನ್ನು ನೀಡಲಿದೆ.


  ಇತರೆ ಫೀಚರ್ಸ್​


  ಇನ್ನು ಈ ಸ್ಮಾರ್ಟ್​​ಫೋನ್​ನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ, ಬ್ಲೂಟೂತ್ V5.1,  3.5mm ಆಡಿಯೋ ಜ್ಯಾಕ್, ವೈಫೈ, ಜಿಪಿಎಸ್​ ಮತ್ತು ಯುಎಸ್​​ಬಿ ಟೈಪ್-ಸಿ ಪೋರ್ಟ್ ಸೇರಿವೆ.
  ಲಾವಾ ಬ್ಲೇಜ್​ 5ಜಿ ಬೆಲೆ ಮತ್ತು ಲಭ್ಯತೆ


  ಲಾವಾ ಬ್ಲೇಜ್‌ 5ಜಿ ಸ್ಮಾರ್ಟ್‌ಫೋನ್‌ 6ಜಿಬಿ ರ್‍ಯಾಮ್ ಆಯ್ಕೆಯು 11,999 ರೂಪಾಯಿ ಬೆಲೆಯನ್ನು ಹೊಂದಿದೆ. ಆದರೆ ಲಾಂಚ್‌ ಆಫರ್‌ನಲ್ಲಿ 6ಜಿಬಿ ರ್‍ಯಾಮ್ ಆಯ್ಕೆಯನ್ನು 11,499 ರೂಪಾಯಿಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಗ್ಲಾಸ್ ಗ್ರೀನ್ ಮತ್ತು ಗ್ಲಾಸ್ ಬ್ಲೂ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇದನ್ನು ನೀವು ಲಾವಾ ಇ-ಸ್ಟೋರ್‌ ಹಾಗೂ ಅಮೆಜಾನ್‌.ಇನ್‌ ಮೂಲಕ ಖರೀದಿಸಬಹುದಾಗಿದೆ.

  Published by:Prajwal B
  First published: