• Home
  • »
  • News
  • »
  • tech
  • »
  • Boult Earbuds: ಬೌಲ್ಟ್‌ ನಿಂದ X30 ಮತ್ತು X50 ಇಯರ್‌ಬಡ್ಸ್‌ ಮಾರುಕಟ್ಟೆಗೆ ಬಿಡುಗಡೆ! ಇದರ ಬೆಲೆಯೇ ವಿಶೇಷ

Boult Earbuds: ಬೌಲ್ಟ್‌ ನಿಂದ X30 ಮತ್ತು X50 ಇಯರ್‌ಬಡ್ಸ್‌ ಮಾರುಕಟ್ಟೆಗೆ ಬಿಡುಗಡೆ! ಇದರ ಬೆಲೆಯೇ ವಿಶೇಷ

ಬೌಲ್ಟ್‌ ಇಯರ್‌ಬಡ್ಸ್

ಬೌಲ್ಟ್‌ ಇಯರ್‌ಬಡ್ಸ್

Boult Earbuds: ಇದೀಗ ಬಿಡುಗಡೆಯಾದ ಬೌಲ್ಟ್‌ X30 ಮತ್ತು X50 ಬಹಳ ವಿಶೇಷವಾಗಿದೆ. ಇದು ಈಗಾಗಲೆ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಬಹಳಷ್ಟು ಸಂಚಲನ ಮೂಡಿಸಿದೆ. ಇದು ಬ್ಯಾಟರಿ ಬ್ಯಾಕಪ್, ವಿನ್ಯಾಸ ಮತ್ತು ಪ್ರಮುಖ ವೈಶಿಷ್ಟ್ಯಗಳನ್ನು ವಿಶೇಷ ರೀತಿಯಲ್ಲಿ ಹೊಂದಿದೆ.  

  • Share this:

    ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ಇಯರ್‌ಫೋನ್‌ಗಳನ್ನು (Earphone) ನೀಡುವ ಆಡಿಯೋ ಬ್ರಾಂಡ್ ಬೌಲ್ಟ್ (Boult Brand) . ಗ್ರಾಹಕರನ್ನು ಆಕರ್ಷಿಸುವಂತೆ ಈಗಾಗಲೇ ಹಲವು ಮಾದರಿಗಳನ್ನು ತಂದಿದೆ. ಇತ್ತೀಚೆಗೆ, ಈ ಕಂಪನಿಯು X30 ಮತ್ತು X50 ಹೆಸರಿನ ಎರಡು  ವೈರ್‌ಲೆಸ್ ಸ್ಟೀರಿಯೋಗಳನ್ನು (TWS) ಬಿಡುಗಡೆ ಮಾಡಿದೆ. ಕಂಪನಿಯು ಈ ಎರಡು ಇಯರ್‌ಬಡ್ಸ್‌ (Earbuds) ಬೆಲೆಯನ್ನು ಕೇವಲ 999 ರೂಪಾಯಿಗೆ ನಿಗದಿಪಡಿಸಿದೆ. ‌ ಇದು ಬಹಳ ವಿಶೇಷತೆಗಳನ್ನು (Features) ಹೊಂದಿದ್ದು ಇದರ ಬೆಲೆಯೇ ಒಂದು ರೀತಿಯಲ್ಲಿ ಜನರಿಗೆ ವಿಭಿನ್ನ ಎಂದೆನಿಸಿದೆ. ಇದೀಗ ಈ ಬೌಲ್ಟ್‌ ಇಯರ್‌ಬಡ್ಸ್‌ಗಳು ಜನಪ್ರಿಯ ಇಕಾಮರ್ಸ್‌ (Ecommerce) ವೆಬ್‌ಸೈಟ್‌ಗಳಾಗಿರುವ ಫ್ಲಿಪ್‌ಕಾರ್ಟ್‌ (Flipkart) ಮತ್ತು ಅಮೆಜಾನ್‌ನಲ್ಲಿ (Amazon) ಲಭ್ಯವಿದೆ.


    ಇದೀಗ ಬಿಡುಗಡೆಯಾದ ಬೌಲ್ಟ್‌ X30 ಮತ್ತು X50 ಬಹಳ ವಿಶೇಷವಾಗಿದೆ. ಇದು ಈಗಾಗಲೆ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಬಹಳಷ್ಟು ಸಂಚಲನ ಮೂಡಿಸಿದೆ.


    X30 ಬೌಲ್ಟ್ ಇಯರ್‌ಬಡ್ಸ್‌ನ ಫೀಚರ್ಸ್:‌


    launch-of-x30-and-x50-earbuds-from-bolt-its-price-is-special
    ಬೌಲ್ಟ್‌ ಇಯರ್‌ಬಡ್ಸ್


    • ಮೂರು ಈಕ್ವಲೈಜರ್ ಮೋಡ್‌ಗಳು ಹೈಫೈ, ರಾಕ್, ಬಾಸ್ ಬೂಸ್ಟ್ ಮತ್ತು 40-ಗಂಟೆಗಳ ಬ್ಯಾಟರಿ ಅವಧಿಯೊಂದಿಗೆ ಬರುತ್ತವೆ. 

    •  ಇದು IPX5 ನೀರಿನ ರಕ್ಷಣೆಯೊಂದಿಗೆ ಬರುತ್ತದೆ.


    ಇದನ್ನೂ ಓದಿ: ಇನ್ಮುಂದೆ ಬಾಡಿಗೆಗೆ ಸಿಗುತ್ತೆ ನೋಕಿಯಾ X30 5G ಸ್ಮಾರ್ಟ್‌ಫೋನ್, ಆದ್ರೆ ಕಂಡೀಷನ್ಸ್​ ಅಪ್ಲೈ!

    • ಇದು 10 ನಿಮಿಷಗಳ ಚಾರ್ಜ್‌ನಲ್ಲಿ 100 ನಿಮಿಷಗಳ ಪ್ಲೇಬ್ಯಾಕ್ ಅನ್ನು ನೀಡುತ್ತದೆ.

    •  ಝೆನ್ ಟೆಕ್ ಕ್ವಾಡ್ ಮೈಕ್ ಎಂಬ ತಂತ್ರಜ್ಞಾನ ಇದ್ದು ಇದು ಹೊರಗಿನ ಸೌಂಡ್‌ ಅನ್ನು ನಿಯಂತ್ರಿಸುತ್ತದೆ. 

    • X30 ಇಯರ್‌ಬಡ್‌ಗಳನ್ನು ಬ್ಲೂ ಮತ್ತು ವಾರ್ಮ್ ಗ್ರೇ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ.


    X50 ಇಯರ್‌ಬಡ್‌ಗಳು

    • X50 ಇಯರ್‌ಬಡ್‌ಗಳು X30 ಇಯರ್‌ಬಡ್‌ಗಳು ನೀಡುವ ಬಹುತೇಕ ವೈಶಿಷ್ಟ್ಯಗಳನ್ನೇ ಹೋಲುತ್ತದೆ.

    • ಇದು 40 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ.

    • ಗೇಮಿಂಗ್‌ಗಾಗಿ 45ms ಅಲ್ಟ್ರಾ ಲೊ-ಲೇಟೆನ್ಸಿ. ಕಾಂಬ್ಯಾಟ್ ಮೋಡ್, ಝೆನ್ ಟೆಕ್ ಕ್ವಾಡ್ ಮೈಕ್ ಸುತ್ತಲಿನ ಶಬ್ದ ರದ್ದತಿ, IPX5 ನೀರಿನ ಪ್ರತಿರೋಧ, 10 ನಿಮಿಷಗಳ ಚಾರ್ಜಿಂಗ್‌ಗಾಗಿ 100 ನಿಮಿಷಗಳ ಪ್ಲೇಟೈಮ್ ಮತ್ತು BoomX ಟೆಕ್ ರಿಚ್ ಬೇಸ್ ಅನ್ನು ನೀಡುತ್ತದೆ.


    launch-of-x30-and-x50-earbuds-from-bolt-its-price-is-special
    ಬೌಲ್ಟ್‌ ಇಯರ್‌ಬಡ್ಸ್


    •  X50 ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಈ ಇಯರ್‌ಬಡ್‌ಗಳ ಈಕ್ವಲೈಜರ್ ಮೋಡ್‌ಗಳ ವೈಶಿಷ್ಟ್ಯವು ಹೈಫೈ, ರಾಕ್, ಬಾಸ್ ಬೂಸ್ಟ್ ಮೋಡ್‌ಗಳನ್ನು ನೀಡುತ್ತದೆ.


    ವಿನ್ಯಾಸ:


    ಬೌಲ್ಟ್ ಆಡಿಯೋ X30 ಮತ್ತು X50 ಇಯರ್‌ಬಡ್ಸ್ ಬ್ಲಿಂಕ್ ಮತ್ತು ಪೇರ್ ಬ್ಲೂಟೂತ್ 5.1 ನೊಂದಿಗೆ ಬರುತ್ತವೆ. ಬೋಲ್ಟ್ X30, X50 ಇಯರ್‌ಬಡ್ಸ್ SBC, AAC ಕೊಡೆಕ್‌ಗಳನ್ನು ಬೆಂಬಲಿಸುತ್ತವೆ. ಈ ಉತ್ಪನ್ನಗಳು ಎಲ್ಲಾ ಬೌಲ್ಟ್‌ ಇದುವರೆಗೆ ಬಿಡುಗಡೆ ಮಾಡಿದ ಬ್ರಾಂಡ್‌ಗಳನ್ನು ಬೆಂಬಲಿಸುತ್ತದೆ. ಆಫರ್‌ನಲ್ಲಿ ಅಪ್‌ಗ್ರೇಡ್ ಮಾಡಿದ ಟೆಕ್ನಿಕ್‌ಗಳೊಂದಿಗೆ, ನೀವು ಕೇವಲ ಒಂದು ಟ್ಯಾಪ್‌ನಲ್ಲಿ ಸಂಗೀತ ಮತ್ತು ಕರೆಗಳನ್ನು ನಿಮಗೆ ಬೇಕಾದ ಹಾಗೆ ಬದಲಾಯಿಸಬಹುದು. ಈ ಎರಡೂ ಇಯರ್‌ಬಡ್ಸ್ 400mAh ಬ್ಯಾಟರಿಯನ್ನು ಹೊಂದಿದೆ.


    ಈ ಬೌಲ್ಟ್‌ ಇಯರ್‌ಬಡ್ಸ್‌ನ ಲಭ್ಯತೆ


    ಬೌಲ್ಟ್ ಆಡಿಯೊ ವೆಬ್‌ಸೈಟ್‌ನಲ್ಲಿ ಬೌಲ್ಟ್ X30, X50 ಖರೀದಿಸಬಹುದು.  ಅಮೆಜಾನ್‌ನಲ್ಲಿ X30 ಮತ್ತು Flipkart ನಲ್ಲಿ X50 ಇಯರ್‌ಬಡ್ಸ್‌ಗಳನ್ನು ಖರೀದಿಸಿ. ಈ ಇಯರ್ ಬಡ್ಸ್ ವಿಶೇಷವಾಗಿ ಆಟದ ಪ್ರಿಯರಿಗೆ ಸೂಕ್ತವಾಗಿದೆ, ಅವುಗಳ ವೈಶಿಷ್ಟ್ಯಗಳ ಮೂಲಕ‌ ಖರೀದಿಯನ್ನು ನಿರ್ಣಯಿಸಬಹುದಾಗಿದೆ. ಇದು ಬ್ಯಾಟರಿ ಬ್ಯಾಕಪ್, ವಿನ್ಯಾಸ ಮತ್ತು ಪ್ರಮುಖ ವೈಶಿಷ್ಟ್ಯಗಳನ್ನು ವಿಶೇಷ ರೀತಿಯಲ್ಲಿ ಹೊಂದಿದೆ.

    Published by:Harshith AS
    First published: