ಮೊಬೈಲ್ ಮಾರುಕಟ್ಟೆ ಇತ್ತೀಚೆಗೆ ಬಹಳಷ್ಟು ಅಭಿವೃದ್ಧಿಯಾಗುತ್ತಿದೆ. ಸ್ಮಾರ್ಟ್ಫೋನ್ಗಳು (Smartphones) ಇತ್ತೀಚಿನ ಕಾಲಮಾನದಲ್ಲಿ ಜನರ ಅಗತ್ಯ ಸಾಧನವಾಗಿಬಿಟ್ಟಿದೆ. ಕೊರೊನಾ ಎಂಬ ಸಾಂಕ್ರಾಮಿಕ ರೋಗ ಬಂದ ನಂತರವಂತೂ ಸ್ಮಾರ್ಟ್ಫೋನ್ನಲ್ಲೇ ಎಲ್ಲಾ ಕೆಲಸವನ್ನೂ ಮಾಡಲಾರಂಭಿಸಿದ್ದಾರೆ. ಆದ್ದರಿಂದ ಕೆಲವೊಂದು ಸ್ಮಾರ್ಟ್ಫೋನ್ ಕಂಪೆನಿಗಳು (Smartphone Companies) ಮಾರುಕಟ್ಟೆಗೆ ಗುಣಮಟ್ಟದ ಫೀಚರ್ಗಳುಲ್ಲ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಜನಪ್ರಿಯ ಮೊಬೈಲ್ ತಯಾರಿಕ ಕಂಪೆನಿಗಳಲ್ಲಿ ಒಂದಾದ ಮೊಟೊರೊಲಾ (Motorola) ಇದೀಗ ಮಾರುಕಟ್ಟೆಗೆ ಒಂದೇ ಸರಣಿಯ ಎರಡು ಸ್ಮಾರ್ಟ್ಫೋನ್ಗಳನ್ನು ಅನಾವರಣ ಮಾಡಿದೆ. ಈ ಮೊಬೈಲ್ಗಳು ಬಜೆಟ್ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗಯಿಡಲಿದ್ದು, ಗ್ರಾಹಕರನ್ನು ಬೇಗನೆ ಆಕರ್ಷಿಸುತ್ತದೆ ಎಂದು ಕಂಪೆನಿ ಹೇಳಿದೆ.
ಮೊಟೊರೊಲಾ ಕಂಪೆನಿಯಿಂದ ಸದ್ಯ ಮಾರುಕಟ್ಟೆಗೆ ಬರುತ್ತಿರುವ ಸ್ಮಾರ್ಟ್ಫೋನ್ ಮೋಟೋ ಜಿ23 ಮತ್ತು ಮೋಟೋ ಜಿ13 ಎಂಬುದಾಗಿದೆ. ಈ ಸ್ಮಾರ್ಟ್ಫೋನ್ಗಳು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಕಾಲಿಡಲಿದ್ದು, ಇದರ ಫೀಚರ್ಸ್ ಮತ್ತು ಬೆಲೆಯ ಬಗ್ಗೆ ಮಾಹಿತಿಗಳು ಸೋರಿಕೆಯಾಗಿದೆ.
ಸ್ಮಾರ್ಟ್ಫೋನ್ಗಳ ಫೀಚರ್ಸ್ ಹೇಗಿದೆ?
ಮೊಟೊರೊಲಾ ಕಂಪೆನಿ ಪರಿಚಯಿಸಿರುವ ಈ ಎರಡು ಸ್ಮಾರ್ಟ್ಫೋನ್ಗಳು 6.5 ಇಂಚಿನ ಐಪಿಎಸ್ ಎಲ್ಸಿಡಿ ಡಿಸ್ಪ್ಲೇಯನ್ನು ಹೊಂದಿವೆ. ಈ ಡಿಸ್ಪ್ಲೇ 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿವೆ. ಇದು 90Hz ರಿಫ್ರೆಶ್ ರೇಟ್, 400 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಹೊಂದಿದ್ದು, 83.9% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ.
ಕ್ಯಾಮೆರಾ ಫೀಚರ್ಸ್
ವಿಶೇಷವಾಗಿ ಮೊಟೊರೊಲಾ ಕಂಪೆನಿಯಿಂದ ಬಿಡುಗಡೆಯಾದಂತಹ ಎರಡು ಸ್ಮಾರ್ಟ್ಫೋನ್ಗಳು ಕೂಡ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಪಡೆದಿವೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಆದರೆ ಮೋಟೋ ಜಿ23 ಸ್ಮಾರ್ಟ್ಫೋನ್ 16 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಹಾಗೆಯೇ ಮೋಟೋ ಜಿ13 ಸ್ಮಾರ್ಟ್ಫೋನ್ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.
ಪ್ರೊಸೆಸರ್ ಸಾಮರ್ಥ್ಯ ಹೇಗಿದೆ?
ಮೋಟೋ ಜಿ23 ಮತ್ತು ಮೋಟೋ ಜಿ13 ಸ್ಮಾರ್ಟ್ಫೋನ್ಗಳು ಮೀಡಿಯಾಟೆಕ್ ಹಿಲಿಯೋ ಜಿ85 ಎಸ್ಓಸಿ ಪ್ರೊಸೆಸರ್ ವೇಗವನ್ನು ಒಳಗೊಂಡಿದೆ. ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿವೆ. ಹಾಗೆಯೇ 4ಜಿಬಿ ರ್ಯಾಮ್ ಮತ್ತು 128ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯದ ಆಯ್ಕೆಯನ್ನು ಹೊಂದಿವೆ, ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ ಇದರ ಇಂಟರ್ನಲ್ ಸ್ಟೋರೇಜ್ ಅನ್ನು ಇನ್ನಷ್ಟು ವಿಸ್ತರಿಸಬಹುದಾಗಿದೆ.
ಬ್ಯಾಟರಿ ಫೀಚರ್ಸ್
ಈ ಎರಡೂ ಸ್ಮಾರ್ಟ್ಫೋನ್ಗಳು ಸರಿಯಾಗಿ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಒಳಗೊಂಡಿವೆ. ಆದರೆ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ವಿಭಿನ್ನ ರೀತಿಯಲ್ಲಿ ಒಳಗೊಂಡಿದೆ. ಇದರಲ್ಲಿ ಮೋಟೋ ಜಿ13 ಸ್ಮಾರ್ಟ್ಫೋನ್ 20W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಹಾಗೆಯೇ ಮೋಟೋ ಜಿ23 ಸ್ಮಾರ್ಟ್ಫೋನ್ 30W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.
ಇತರೆ ಫೀಚರ್ಸ್
ಇನ್ನು ಮೋಟೋ ಜಿ13 ಮತ್ತು ಮೋಟೋ ಜಿ23 ಸ್ಮಾರ್ಟ್ಫೋನ್ನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್ಬಿ ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ.
ಬೆಲೆ ಮತ್ತು ಲಭ್ಯತೆ
ಸದ್ಯ ಮೊಟೊರೊಲಾ ಕಂಪೆನಿಯ ಎರಡೂ ಸ್ಮಾರ್ಟ್ಫೋನ್ಗಳು ಜಾಗತಿಕ ಮಾರುಕಟ್ಟೆಯಲ್ಲಿ ಅನಾವರಣವಾಗಿದೆ. ಇನ್ನು ಮೋಟೋ ಜಿ13 ಸ್ಮಾರ್ಟ್ಫೋನ್ನ 4ಜಿಬಿ ರ್ಯಾಮ್ ಮತ್ತು 128ಜಿಬಿ ಸ್ಟೋರೇಜ್ ಆಯ್ಕೆಗೆ EUR 179 ಭಾರತದಲ್ಲಿ ಅಂದಾಜು 15,900 ರೂಪಾಯಿ ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಮ್ಯಾಟ್ ಚಾರ್ಕೋಲ್, ಬ್ಲೂ ಲ್ಯಾವೆಂಡರ್ ಮತ್ತು ರೋಸ್ ಗೋಲ್ಡ್ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಗುತ್ತದೆ.
ಇದನ್ನೂ ಓದಿ: ಸ್ಮಾರ್ಟ್ಫೋನ್ ಖರೀದಿಸುವ ಪ್ಲ್ಯಾನ್ನಲ್ಲಿದ್ದೀರಾ? ಇಲ್ಲಿದೆ ನೋಡಿ ಒಂದೇ ಕಂಪೆನಿಯ ಟಾಪ್ 4 ಮೊಬೈಲ್ಗಳು
ಮೋಟೋ ಜಿ23 ಸ್ಮಾರ್ಟ್ಫೋನ್ ಬೆಲೆ
ಇನ್ನು ಮೋಟೋ ಜಿ23 ಸ್ಮಾರ್ಟ್ಫೋನ್ 4ಜಿಬಿ ರ್ಯಾಮ್ ಮತ್ತು 128ಜಿಬಿ ಸ್ಟೋರೇಜ್ ಹೊಂದಿದ ಸ್ಮಾರ್ಟ್ಫೋನ್ EUR 199 ಅಂದರೆ ಭಾರತದಲ್ಲಿ ಸುಮಾರು 17,600 ರೂಪಾಯಿ ಬೆಲೆಯಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್ಫೋನ್ ಸಹ ಮ್ಯಾಟ್ ಚಾರ್ಕೋಲ್, ಪರ್ಲ್ ವೈಟ್ ಮತ್ತು ಸ್ಟೀಲ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್ಫೋನ್ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗುವುದರ ಬಗ್ಗೆ ಇನ್ನು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ