• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Fire Boltt Smartwatches: ಫೈರ್ ​​ಬೋಲ್ಟ್​​​ ಕಂಪನಿಯಿಂದ ಮೂರು ಸ್ಮಾರ್ಟ್​​​ವಾಚ್​​ಗಳ ಬಿಡುಗಡೆ; ಫೀಚರ್ಸ್​, ಬೆಲೆ ಮಾಹಿತಿ ಇಲ್ಲಿದೆ

Fire Boltt Smartwatches: ಫೈರ್ ​​ಬೋಲ್ಟ್​​​ ಕಂಪನಿಯಿಂದ ಮೂರು ಸ್ಮಾರ್ಟ್​​​ವಾಚ್​​ಗಳ ಬಿಡುಗಡೆ; ಫೀಚರ್ಸ್​, ಬೆಲೆ ಮಾಹಿತಿ ಇಲ್ಲಿದೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವರ್ಷಾಂತ್ಯದಲ್ಲಿ ಮಾರುಕಟ್ಟೆಗಳಲ್ಲಿ ಆಫರ್​ಗಳನ್ನು ನೀಡುವುದು ಸಹಜ ಆದರೆ ಇಲ್ಲಿ ಫೈರ್​ ಬೋಲ್ಟ್​ ಕಂಪನಿ ಏಕಕಾಲದಲ್ಲಿ ಮೂರು ಸ್ಮಾರ್ಟ್​​ವಾಚ್​ಗಳನ್ನು ಬಿಡುಗಡೆ ಮಾಡಿದೆ. ಇದೀಗ ಇಕಾಮರ್ಸ್​ ವೆಬ್​ಸೈಟ್​ಗಳಾದ ಫ್ಲಿಪ್​ಕಾರ್ಟ್​​, ಅಮೆಜಾನ್​ನಲ್ಲಿ ಇದನ್ನು ಖರೀದಿಸಬಹುದಾಗಿದೆ. ಇದರ ಬೆಲೆ, ಫೀಚರ್ಸ್ ಬಗ್ಗೆ ಕಂಪ್ಲೀಟ್​ ಡಿಟೇಲ್ಸ್​ ಇಲ್ಲಿದೆ.

ಮುಂದೆ ಓದಿ ...
  • Share this:

    2022 ಮುಗೀತಾ ಬಂತು ಇನ್ನೇನು  ಕೆಲವೇ ದಿನಗಳಲ್ಲಿ ಹೊಸವರ್ಷ ಬಂದಾಗುತ್ತೆ. ಇದೀಗ ಸ್ಮಾರ್ಟ್​​ವಾಚ್ (Smartwatch)​ ಪ್ರಿಯರಿಗೆ ಫೈರ್ ​ಬೋಲ್ಟ್​ ಕಂಪನಿ (Fire-Boltt Company) ಗುಡ್​ನ್ಯೂಸ್​ ಅನ್ನು ನೀಡುತ್ತಿದೆ. ಏಕಕಾಲದಲ್ಲಿ ಮೂರು ಸ್ಮಾರ್ಟ್​​ವಾಚ್​ಗಳನ್ನು ಅನಾವರಣಗೊಳಿಸುವುದಾಗಿ ಕಂಪನಿ ತಿಳಿಸಿದೆ. ಇಂದಿನ ದಿನಗಳಲ್ಲಿ ಸಾಮಾನ್ಯ ವಾಚ್​ ಬಳಸುವವರಿಗಿಂತ ಈ ಸ್ಮಾರ್ಟ್​ವಾಚ್​ಗಳನ್ನೇ ಬಳಸುವವರು ಹೆಚ್ಚಾಗಿದ್ದಾರೆ. ಅದೇ ರೀತಿ ಈ ವರ್ಷ ಬೇರೆ ಬೇರೆ ಫೀಚರ್ಸ್​ಅನ್ನು ಒಳಗೊಂಡಂತಹ ಸ್ಮಾರ್ಟ್​ವಾಚ್​ಗಳು ಬಿಡುಗಡೆಯಾಗಿವೆ. ಇವೆಲ್ಲವೂ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿವೆ. ಫೈರ್ ​ಬೋಲ್ಟ್​ ಕಂಪನಿಯ ಸ್ಮಾರ್ಟ್​​ವಾಚ್​ಗಳಿಗೆ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಯಿತ್ತು. ಆದರೆ ಈ ಕಂಪನಿ ಕೆಲತಿಂಗಳ ಹಿಂದೆ ತನ್ನ ಕಂಪನಿಯ ಉತ್ಪನ್ನಗಳನ್ನು ಬಿಡುಗಡೆಮಾಡುವುದನ್ನು ನಿಲ್ಲಿಸಿತ್ತು. ಆದರೆ ಇದೀಗ ಒಮ್ಮೆಲೆ 3 ಸ್ಮಾರ್ಟ್​​ವಾಚ್​ಗಳನ್ನು ಬಿಡುಗಡೆ ಮಾಡುತ್ತಿದೆ.


    ಸ್ಮಾರ್ಟ್​​ವಾಚ್ ​ಕಂಪನಿಗಳಲ್ಲಿ ಜನಪ್ರಿಯತೆ ಪಡೆದ ಕಂಪನಿಗಳಲ್ಲಿ ಫೈರ್ ​ಬೋಲ್ಟ್​ ಕೂಡ ಒಂದು. ಇದು ತನ್ನದೇ ಆದಂತಹ  ವಿನ್ಯಾಸದಲ್ಲಿ ಸ್ಮಾರ್ಟ್​​ವಾಚ್​ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಮೂಲಕ ಉತ್ತಮ ಗ್ರಾಹಕರನ್ನು ಹೊಂದಿದೆ. ಇದೀಗ ಮತ್ತೆ ಫೈರ್​ ಬೋಲ್ಟ್​​ ಕಂಪನಿ ಸ್ಮಾರ್ಟ್​ವಾಚ್​ ಮಾರುಕಟ್ಟೆಗೆ ಮೂರು ಸ್ಮಾರ್ಟ್​​ವಾಚ್​ಗಳು ಬಿಡುಗಡೆಯಾಗುತ್ತಿದೆ ಎಂದು ಶುಭಸುದ್ದಿಯನ್ನು  ನೀಡಿದೆ.


    ಫೈರ್ ​​ಬೋಲ್ಟ್​ ಕಂಪನಿಯಿಂದ 3 ಸ್ಮಾರ್ಟ್​​ವಾಚ್​ಗಳು


    ಹೌದು, ಫೈರ್​ ಬೋಲ್ಟ್​ ಕಂಪನಿ ಮೂರು ಸ್ಮಾರ್ಟ್​​ವಾಚ್​ಗಳನ್ನು ಬಿಡುಗಡೆ ಮಾಡುತ್ತಾ ಮಾರುಕಟ್ಟೆಯಲ್ಲಿ ದೊಡ್ಡದಾಗಿ ಸದ್ದು ಮಾಡುತ್ತಿದೆ. ಫೈರ್​​ ಬೋಲ್ಟ್​ ಬಿಡುಗಡೆ ಮಾಡುತ್ತಿರುವಂತಹ ಸ್ಮಾರ್ಟ್​​ವಾಚ್​ಗಳನ್ನು ಫೈರ್ ಬೋಲ್ಟ್ ಟ್ಯಾಂಕ್, ಎಪಿಕ್ ಪ್ಲಸ್ ಮತ್ತು ಫೈರ್ ​ಬೋಲ್ಟ್​ ರೈಸ್ ಎಂದು ಹೆಸರಿಸಲಾಗಿದೆ. ಇವು ಮೂರು ಸ್ಮಾರ್ಟ್​​ವಾಚ್​ಗಳು ಬೇರೆ ಬೇರೆ ಫೀಚರ್ಸ್​ ಅನ್ನು ಹೊಂದಿದೆ. ಜೊತೆಗೆ ಇದರ ಬೆಲೆ ಕೂಡ ಬೇರೆ ಬೇರೆಯಾಗಿದೆ.


    ಇದನ್ನೂ ಓದಿ: ಇನ್​​​ಸ್ಟಾಗ್ರಾಂ ಅಕೌಂಟ್​ ಹ್ಯಾಕ್​ ಆಗಿದ್ಯಾ? ಸರಿಮಾಡೋಕೆ ತಕ್ಷಣ ಈ ಟ್ರಿಕ್ಸ್ ಬಳಸಿ


    ಫೈರ್​​ ಬೋಲ್ಟ್​​ ಟ್ಯಾಂಕ್​ ಸ್ಮಾರ್ಟ್​​ವಾಚ್​:


    ಫೈರ್ ಬೋಲ್ಟ್ ಟ್ಯಾಂಕ್ ಸ್ಮಾರ್ಟ್‌ವಾಚ್‌ 1.85 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್​​ಪ್ಲೇಯು 240 x 280 ಪಿಕ್ಸೆಲ್‌ಗಳ ರೆಸಲ್ಯೂಶನ್‌ ನೀಡಲಿದೆ. ಜೊತೆಗೆ IP68 ರೇಟಿಂಗ್‌ನೊಂದಿಗೆ ವಾಟರ್‌ ರೆಸಿಸ್ಟೆಂಟ್‌ ಆಯ್ಕೆ ಇದರಲ್ಲಿದೆ. 100+ ವಾಚ್ ಫೇಸ್‌ಗಳ ಫೀಚರ್ಸ್‌ ಕೂಡ ಇದರಲ್ಲಿ ಅಳವಡಿಸಲಾಗಿದೆ.


    ಸಾಂಕೇತಿಕ ಚಿತ್ರ


    ಈ ಸ್ಮಾರ್ಟ್​​​ವಾಚ್‌ ಧೂಳು ಮತ್ತು ಸ್ಪ್ಲಾಶ್ ನಿರೋಧಕವಾಗಿದ್ದು, ಇದರೊಂದಿಗೆ ಹೃದಯ ಬಡಿತ, ನಿದ್ರೆಯ ಮಾನಿಟರಿಂಗ್, SpO2 ಮಾನಿಟರಿಂಗ್ ಸೇರಿದಂತೆ ಇನ್ನೂ ಫೀಚರ್ಸ್​ ಅನ್ನು ಇದು ಹೊಂದಿದೆ. ಜೊತೆಗೆ ಆರೋಗ್ಯ ಸಂಬಂಧಿತ ಫೀಚರ್ಸ್‌ಗಳನ್ನು ಈ ಸಾಧನ ಹೊಂದಿದೆ. ಇದಿಷ್ಟೇ ಅಲ್ಲದೆ ಈ ಸ್ಮಾರ್ಟ್‌ವಾಚ್‌ 123 ಸ್ಪೋರ್ಟ್ಸ್‌ ಮೋಡ್‌ಗಳು, ಸ್ಮಾರ್ಟ್ ನೋಟಿಫಿಕೇಶನ್‌ಗಳು ಹಾಗೂ ವಾಯ್ಸ್‌ ಅಸಿಸ್ಟೆಂಟ್‌ ಫೀಚರ್ಸ್​ ಅನ್ನು ಒಳಗೊಂಡಿದೆ.


    ಬ್ಯಾಟರಿ ಫೀಚರ್ಸ್​


    ಇನ್ನು ಇದರ ಬ್ಯಾಟರಿ ಫೀಚರ್ಸ್​ ಬಗ್ಗೆ ಹೇಳುವುದಾದರೆ ಇದು ಗುಣಮಟ್ಟದ ಬ್ಯಾಟರಿಯನ್ನು ಒಳಗೊಂಡಿದ್ದು, ಒಮ್ಮೆ ಫುಲ್​ ಚಾರ್ಜ್​ ಮಾಡಿದ್ರೆ ನಿರಂತರವಾಗಿ 7 ದಿನಗಳವರೆಗೆ ಬಳಕೆ ಮಾಡಬಹುದು. ಇನ್ನು ಸ್ಟ್ಯಾಂಡ್​ ಬೈ ಮೋಡ್​ನಲ್ಲಿ 30 ದಿನಗಳವರೆಗೆ ಬಳಸಬಹುದಾಗಿದೆ.


    ಫೈರ್​ ಬೋಲ್ಟ್​ ಎಪಿಕ್​ ಪ್ಲಸ್​ ಸ್ಮಾರ್ಟ್​​ವಾಚ್:


    ಫೈರ್ ಬೋಲ್ಟ್ ಎಪಿಕ್ ಪ್ಲಸ್ ಸ್ಮಾರ್ಟ್‌ವಾಚ್‌ 1.83 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಯನ್ನು ಹೊಂದಿದೆ. ಇದರಲ್ಲಿ 120 ಸ್ಪೋರ್ಟ್ಸ್‌ ಮೋಡ್‌ಗಳ ಫೀಚರ್ಸ್​ ಅನ್ನು ನೀಡಿದ್ದಾರೆ. ಹಾಗೆಯೇ IP68 ರೇಟಿಂಗ್‌ ಇದ್ದು, SpO2 ಮಾನಿಟರಿಂಗ್, ಮಹಿಳೆಯರ ಆರೋಗ್ಯ ಟ್ರ್ಯಾಕಿಂಗ್ ಮತ್ತು ಹೃದಯ ಬಡಿತ ಟ್ರ್ಯಾಕಿಂಗ್ ಹೀಗೆ ಆರೋಗ್ಯ ಸಂಬಂಧದ ಫೀಚರ್ಸ್ ಅನ್ನು ಅಳವಡಿಸಿದ್ದಾರೆ.


    ಸಾಂಕೇತಿಕ ಚಿತ್ರ


    ಇನ್ನು ಈ ಸ್ಮಾರ್ಟ್​​ವಾಚ್ ಅನ್ನು ನಿಮ್ಮ ಸ್ಮಾರ್ಟ್​ಫೋನ್​ಗೆ ಕನೆಕ್ಟ್​ ಮಾಡಿದ್ರೆ ಮೊಬೈಲ್​ನ ಕ್ಯಾಮೆರಾ, ಮ್ಯೂಸಿಕ್​ ಇವೆಲ್ಲವನ್ನೂ ಕಂಟ್ರೋಲ್​ ಮಾಡಬಹುದಾಗಿದೆ.


    ಫೈರ್​​ ಬೋಲ್ಟ್​ ರೈಸ್​ ಸ್ಮಾರ್ಟ್​​ವಾಚ್


    ಫೈರ್ ಬೋಲ್ಟ್ ರೈಸ್ ಸ್ಮಾರ್ಟ್‌ವಾಚ್‌ನಲ್ಲಿ ಕಂಪನಿ 1.85 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ನೀಡಿದೆ. ಜೊತೆಗೆ ಇದು 240 x 280 ಪಿಕ್ಸೆಲ್‌ಗಳ ರೆಸಲ್ಯೂಶನ್‌ ನೀಡಲಿದೆ. ಹಾಗೆಯೇ ಈ ವಾಚ್‌ 123 ಸ್ಪೋರ್ಟ್ಸ್‌ ಮೋಡ್‌ ಹೊಂದಿದ್ದು, ಇನ್‌ಬಿಲ್ಟ್‌ ಸ್ಪೀಕರ್‌ ಹಾಗೂ ಮೈಕ್ರೊಫೋನ್​ಗಳನ್ನು ಇದರಲ್ಲಿ ನೀಡಿದ್ದಾರೆ.


    ಇದು ಹೃದಯದ ಬಡಿತ, ಸ್ಲೀಪಿಂಗ್​ ಮೋಡ್​ ಈ ರೀತಿಯ ಹಲವಾರು ಆರೋಗ್ಯಕ್ಕೆ ಸಂಬಂಧಪಟ್ಟ ಫೀಚರ್ಸ್​​ಗಳನ್ನು ಅಳವಡಿಸಿದ್ದಾರೆ. ಇನ್ನು ಈ ಸ್ಮಾರ್ಟ್​ವಾಚ್​ ವಾಟರ್​ಪ್ರೂಫ್​ ಆಗಿದ್ದು ನೀರು ಬಿದ್ದರೂ ಏನಾಗುವುದಿಲ್ಲ.


    ಫೈರ್​ ಬೋಲ್ಟ್​ 3 ಸ್ಮಾರ್ಟ್​​ವಾಚ್​ಗಳ ಬೆಲೆ


    ಫೈರ್ ಬೋಲ್ಟ್ ಟ್ಯಾಂಕ್ ಸ್ಮಾರ್ಟ್‌ವಾಚ್‌ಗೆ 1,999ರೂ. ಗಳ ಬೆಲೆ ನಿಗದಿ ಮಾಡಲಾಗಿದ್ದು, ಕಪ್ಪು, ಬೂದು ಮತ್ತು ಹಸಿರು ಬಣ್ಣದಲ್ಲಿ ಲಭ್ಯ ಇದೆ.


    ಸಾಂಕೇತಿಕ ಚಿತ್ರ


    ಜೊತೆಗೆ ಫೈರ್-ಬೋಲ್ಟ್ ಎಪಿಕ್ ಪ್ಲಸ್ ಸ್ಮಾರ್ಟ್‌ವಾಚ್ 1,199 ರೂ. ಗಳ ಸಾಮಾನ್ಯ ದರ ಹೊಂದಿದ್ದು, ಕಪ್ಪು, ಬೂದು, ಗುಲಾಬಿ, ಹಸಿರು, ನೀಲಿ, ಕಿತ್ತಳೆ, ಕೆಂಪು ಮತ್ತು ಗೋಲ್ಡ್ ಕಪ್ಪು ಸೇರಿದಂತೆ ಹಲವಾರು ಬಣ್ಣಗಳಲ್ಲಿ ಲಭ್ಯ ಇದೆ.


    ಹಾಗೆಯೇ ಫೈರ್ ಬೋಲ್ಟ್ ರೈಸ್‌ ಸ್ಮಾರ್ಟ್‌ವಾಚ್‌ಗೆ 1,999 ರೂ. ಗಳ ಆರಂಭಿಕ ಬೆಲೆ ಇದ್ದು, ಈ ವಾಚ್‌ ಗ್ರೇ, ಕಪ್ಪು, ಬೂದು ಮತ್ತು ಗುಲಾಬಿ ಬಣ್ಣ ಸೇರಿದಂತೆ ನಾಲ್ಕು ಬಣ್ಣಗಳನ್ನು ಹೊಂದಿದೆ.


    ಇನ್ನು ಈ ಸ್ಮಾರ್ಟ್​​ವಾಚ್​ಗಳನ್ನು ಅಮೆಜಾನ್, ಫ್ಲಿಪ್​ಕಾರ್ಟ್​ನಲ್ಲಿ ಖರೀದಿಸಬಹುದಾಗಿದೆ.

    Published by:Prajwal B
    First published: