ಬೋಟ್ ಕಂಪನಿ (Boat Company) ತನ್ನ ಕಂಪನಿಯಿಂದ ವಿಭಿನ್ನ ರೀತಿಯಲ್ಲಿ ಇಯರ್ಬಡ್ಸ್ (Earbuds) ಅನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಆದರೆ ಈ ಬೋಟ್ ಕಂಪನಿಯ ಅಡಿಯಲ್ಲಿ ಬಿಡುಗಡೆಯಾಗುವಂತಹ ಪ್ರೊಡಕ್ಟ್ಗಳು ಏನಾದರೊಂದು ವಿಶೇಷತೆಯನ್ನು ಹೊಂದಿರುತ್ತದೆ. ಇತ್ತೀಚೆಗೆ ಇಯರ್ಬಡ್ಸ್ಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಇದಕ್ಕೆ ಕಾರಣ ಈ ಗ್ಯಾಜೆಟ್ಗಳಲ್ಲಿ ಇರುವಂತಹ ಫೀಚರ್ಸ್ ಅಂತ ಹೇಳಬಹುದು. ಇದೀಗ ಬೋಟ್ ಈ ಬಾರಿ ಬೋಟ್ ಇಮ್ಮೋರ್ಟಲ್ 121 (Boat Immortal 121 TWS) ಎಂಬ ಇಯರ್ಬಡ್ಸ್ ಅನ್ನು ಬಿಡುಗಡೆ ಮಾಡುತ್ತಿದ್ದು ಈ ಸಾಧನವನ್ನು ಒಮ್ಮೆ ಚಾರ್ಜ್ ಮಾಡಿದರೆ 40 ಗಂಟೆಗಳ ಕಾಲ ನಿರಂತರವಾಗಿ ಬಳಸಬಹುದಾಗಿದೆ.
ಬೋಟ್ ಬಿಡುಗಡೆ ಮಾಡುತ್ತಿರುವ ಇಯರ್ ಬಡ್ಸ್ ಬೋಟ್ ಇಮ್ಮೋರ್ಟಲ್ 121 ಎಂಬುದಾಗಿದೆ. ಇದು ಒಮ್ಮೆ ಚಾರ್ಜ್ ಮಾಡಿದರೆ 40 ಗಂಟೆಗಳ ಕಾಲ ಆನಂದಿಸಬಹುದು. ಇಂತಹ ಇನ್ನೂ ಹಲವು ಫೀಚರ್ಸ್ ಅನ್ನು ಇದು ಹೊಂದಿರಲಿದ್ದು ಇದರ ಮಾಹಿತಿ ಇಲ್ಲಿದೆ.
ಇದರ ಫೀಚರ್ಸ್:
ಹೊಸ ಬೋಟ್ ಇಮ್ಮೊರ್ಟಲ್ 121 ಇಯರ್ಬಡ್ಸ್ ಮೊದಲ ಗೇಮಿಂಗ್ ಆಧಾರಿತ ಶ್ರೇಣಿಯ ಉತ್ಪನ್ನಗಳ ಪಟ್ಟಿಗೆ ಸೇರುತ್ತವೆ. ಹಾಗೆಯೇ ಇದು ಇತ್ತೀಚಿನ ಬ್ಲೂಟೂತ್ ಆವೃತ್ತಿ 5.3 ಕನೆಕ್ಟಿವಿಟಿ ಬೆಂಬಲದ ಜೊತೆಗೆ 'ಬೀಸ್ಟ್ ಮೋಡ್' ಎಂದು ಕರೆಯಲಾಗುವ 40ms ಕಡಿಮೆ ಲೇಟೆನ್ಸಿಯನ್ನು ಹೊಂದಿರಲಿದೆ ಎಮದು ಕಂಪನಿ ಹೇಳಿದೆ.
ಇದನ್ನೂ ಓದಿ: ಬಿಎಸ್ಎನ್ಎಲ್ ಗ್ರಾಹಕರಿಗೆ ಬಿಗ್ಶಾಕ್! ಇನ್ಮುಂದೆ ಈ ರೀಚಾರ್ಜ್ ಪ್ಲಾನ್ ಇರಲ್ಲ
ಬಹಳ ವೇಗದಲ್ಲಿ ಕನೆಕ್ಟ್ ಆಗುತ್ತದೆ
ಬೋಟ್ ಬಿಡುಗಡೆ ಮಾಡಿದಂತಹ ಬೋಟ್ ಇಮ್ಮೋರ್ಟಲ್ 121 ಟಿಡಬ್ಲ್ಯೂಎಸ್ ಇಯರ್ಬಡ್ಸ್ ಕೇಸ್ ಇನ್ಸ್ಟಾ ವೇಕ್ ಎನ್ ಪೇರ್ ಟೆಕ್ನಾಲಜಿಯನ್ನು ಒಳಗೊಂಡಿದೆ. ಅಂದರೆ ಈ ಇಯರ್ಬಡ್ಸ್ ಅನ್ನು ಅದರ ಕೇಸ್ನಿಂದ ಹೊರತೆಗೆದ ತಕ್ಷಣವೇ ಈ ಮೊದಲೇ ಕನೆಕ್ಟ್ ಆಗಿದ್ದ ಡಿವೈಸ್ಗೆ ಕನೆಕ್ಟ್ ಆಗಿಬಿಡುತ್ತದೆ. ಈ ಇಯರ್ಬಡ್ಸ್ ಕಾಲ್ನಲ್ಲಿ ಮಾತನಾಡುವಾಗ ಹಾಗೂ ಇನ್ನಿತರೆ ವಿಡಿಯೋ ಅಥವಾ ಸಾಂಗ್ಗಳನ್ನು ಕೇಳುವ ವೇಳೆಯಲ್ಲಿ ಉತ್ತಮ ಅನುಭವವನ್ನು ನೀಡುತ್ತದೆ.
ಈ ಇಯರ್ಬಡ್ಸ್ 10mm ಡ್ರೈವರ್ ಹೊಂದಿದ್ದು, ಇದರೊಂದಿಗೆ ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಶನ್ ಟೆಕ್ನಾಲಜಿಯುನ್ನು ಕೂಡ ಹೊಂದಿದೆ. ಜೊತೆಗೆ ಇದರಲ್ಲಿ ನಾಲ್ಕು ಮೈಕ್ಗಳನ್ನು ಆ್ಯಡ್ ಮಾಡಲಾಗಿದೆ. ಈ ಮೂಲಕ ಇದನ್ನು ಕನೆಕ್ಟ್ ಮಾಡಿ ಕಿವಿಯಲ್ಲಿ ಇಟ್ಟುಕೊಂಡಾಗ ಹೊರಗಡೆ ಯಾವುದೇ ಶಬ್ಧಗಳು ಆಗುತ್ತಿದ್ದರೂ ಕಾಲ್ನಲ್ಲಿ, ಮೀಟಿಂಗ್ಗಳನ್ನು ಕೇಳಿಸಬಹುದು ಮತ್ತು ಆಕಡೆ ಕಾಲ್, ಮೀಟಿಂಗ್ನಲ್ಲಿರುವವರ ಜೊತೆಯೂ ಮಾತನಾಡಬಹುದಾಗಿದೆ.
ಬ್ಯಾಟರಿ ಸಾಮರ್ಥ್ಯ:
ಇನ್ನು ಈ ಹೊಸ ಇಯರ್ಬಡ್ಸ್ 400mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಇದನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದರೆ 40 ಗಂಟೆಗಳ ಕಾಲ ಪ್ಲೇಬ್ಯಾಕ್ ಟೈಮ್ ಅನ್ನು ನೀಡಲಿದೆ. ಚಾರ್ಜಿಂಗ್ಗಾಗಿ ಈ ಇಯರ್ಬಡ್ಸ್ ಟೈಪ್ ಸಿ ಕನೆಕ್ಟಿವಿಟಿ ಆಯ್ಕೆಯನ್ನು ನೀಡಿದೆ. ಹಾಗೆಯೇ 10 ನಿಮಿಷದಲ್ಲಿ ಈ ಬೋಟ್ನ ಇಯರ್ಬಡ್ಸ್ ಅನ್ನು ಚಾರ್ಜ್ ಮಾಡಿದರೆ 180 ನಿಮಿಷಗಳ ಕಾಲ ನಿರಂತರವಾಗಿ ಬಳಸಬಹುದು ಎಮದು ಬೋಟ್ ಕಂಪನಿ ಹೇಳಿಕೊಂಡಿದೆ.
ಚಾರ್ಜಿಂಗ್ ಕೇಸ್ನಲ್ಲಿ ಲೈಟಿಂಗ್ಸ್ ವ್ಯವಸ್ಥೆ
ಈ ಇಯರ್ಬಡ್ಸ್ ವಿಶೇಷ ವಿನ್ಯಾಸವನ್ನು ಹೊಂದಿದ್ದು ನೋಡುಗರನ್ನು ಇದರ ವಿನ್ಯಾಸದಲ್ಲೆ ಆಕರ್ಷಿಸುತ್ತದೆ. ಇನ್ನು ಇದನ್ನು ಗೇಮಿಂಗ್ ಉದ್ದೇಶದಿಂದ ತಯಾರಿಸಲಾಗಿದ್ದು ಇದರಲ್ಲಿ ಆರ್ಜಿಬಿಯಂತಹ ಲೈಟಿಂಗ್ ಫೀಚರ್ಸ್ ಅನ್ನು ನೀಡಿದ್ದಾರೆ.
ಬೆಲೆ ಮತ್ತು ಲಭ್ಯತೆ
ಇನ್ನು ಬೋಟ್ ಇಮ್ಮೋರ್ಟಲ್ 121 ಹೊಸ ಇಯರ್ಬಡ್ಸ್ ಅನ್ನು 1,499 ರೂಪಾಯಿಗಳ ರಿಯಾಯಿತಿ ಬೆಲೆಯೊಂದಿಗೆ ಖರೀದಿ ಮಾಡಬಹುದಾಗಿದೆ. ಹಾಗೆಯೇ ಇದು ಅಮೆಜಾನ್, ಫ್ಲಿಪ್ಕಾರ್ಟ್ ಹಾಗೂ ಬೋಟ್ ವೆಬ್ಸೈಟ್ನಲ್ಲಿ ಡಿಸೆಂಬರ್ 13 ರಿಂದ ಖರೀದಿಗೆ ಲಭ್ಯವಿರುತ್ತದೆ. ಅಂತೆಯೇ ಇದು ಬ್ಲ್ಯಾಕ್ ಮತ್ತು ವೈಟ್ ಎರಡು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ