Larry Tesler Passes Away: ಕಾಪಿ-ಕಟ್-ಪೇಸ್ಟ್ ಅನ್ವೇಷಕ ಲ್ಯಾರಿ ಟೆಸ್ಲರ್ ನಿಧನ!

ಆ್ಯಪಲ್​ ಕಂಪ್ಯೂಟರ್​ ಅಭಿವೃದ್ಧಿ ಮಾಡಲು ಟೆಸ್ಲರ್​ ಸಾಕಷ್ಟು ಕೊಡುಗೆ ನೀಡಿದ್ದರು. 1970ರ ವೇಳೆ ಕ್ಸೆರಾಕ್ಸ್​ ಪಾಲೋ ಆಲ್ಟೋ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುವಾಗ ಕಾಪಿ-ಕಟ್-ಪೇಸ್ಟ್​ ಫಂಕ್ಷನ್​​ಅನ್ನು ಅವರು ಅನ್ವೇಷಣೆ ಮಾಡಿದರು.  

Rajesh Duggumane | news18-kannada
Updated:February 20, 2020, 9:43 AM IST
Larry Tesler Passes Away: ಕಾಪಿ-ಕಟ್-ಪೇಸ್ಟ್ ಅನ್ವೇಷಕ ಲ್ಯಾರಿ ಟೆಸ್ಲರ್ ನಿಧನ!
ಲ್ಯಾರಿ ಟೆಸ್ಲರ್​
  • Share this:
ವಾಷಿಂಗ್ಟನ್​ (ಫೆ.20): ಕಾಪಿ-ಕಟ್-ಪೇಸ್ಟ್​ ಇದು ಕಂಪ್ಯೂಟರ್​ನಲ್ಲಿ ಅತಿ ಹೆಚ್ಚು ಬಳಕೆಯಾಗುವ ಫಂಕ್ಷನ್​. ಇದನ್ನು ಅನ್ವೇಷಣೆ ಮಾಡಿದ ಲ್ಯಾರಿ ಟೆಸ್ಲರ್​ (74) ಇಂದು ಕೊನೆಯುಸಿರೆಳೆದಿದ್ದಾರೆ. ಅವರ ಅಗಲಿಕೆಗೆ ತಂತ್ರಜ್ಞಾನ ಲೋಕ ಶೋಕ ವ್ಯಕ್ತಪಡಿಸಿದೆ.

70ರ ದಶಕದಲ್ಲಿ  ಆ್ಯಪಲ್​ ಕಂಪ್ಯೂಟರ್​ ಅಭಿವೃದ್ಧಿ ಮಾಡಲು ಟೆಸ್ಲರ್​ ಸಾಕಷ್ಟು ಕೊಡುಗೆ ನೀಡಿದ್ದರು. 1970ರ ವೇಳೆ ಕ್ಸೆರಾಕ್ಸ್​ ಪಾಲೋ ಆಲ್ಟೋ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುವಾಗ ಕಾಪಿ-ಕಟ್-ಪೇಸ್ಟ್​ ಫಂಕ್ಷನ್​​ಅನ್ನು ಅವರು ಅನ್ವೇಷಣೆ ಮಾಡಿದ್ದರು.

ಟೆಸ್ಲರ್​ 20 ವರ್ಷಗಳ ಕಾಲ ಆ್ಯಪಲ್​ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಲಿಸಾ, ಮ್ಯಾಸಿಂತೋಷ್​ ಮತ್ತು ನ್ಯೂಟನ್​ ಕಂಪ್ಯೂಟರ್​ನ ಇಂಟರ್​ಫೇಸ್​ ಡಿಸೈನ್​ ಮಾಡುವಲ್ಲಿ ಇವರ ಕೊಡುಗೆ ದೊಡ್ಡದಿದೆ. 1976ರಲ್ಲಿ ಬ್ರೌಸರ್ ಶಬ್ದವನ್ನು ಹುಟ್ಟು ಹಾಕಿದ್ದು ಇವರೇ.

ಇದನ್ನೂ ಓದಿ: ಸ್ಮಾರ್ಟ್​ಫೋನ್​ ಪ್ರಿಯರೇ, ದೇಶದ ಮೊಟ್ಟಮೊದಲ 5G ಸ್ಮಾರ್ಟ್​ಫೋನ್​ ಫೆ. 25ಕ್ಕೆ ಮಾರುಕಟ್ಟೆಗೆ

1997ರಲ್ಲಿ ಟೆಸ್ಲರ್​ ಆ್ಯಪಲ್​ ಸಂಸ್ಥೆಯನ್ನು ತೊರೆದರು. 2011ರಲ್ಲಿ ಅಮೆಜಾನ್​ ಜೊತೆ ಕೈ ಜೋಡಿಸಿದ್ದರು. ಇದಕ್ಕೂ ಮೊದಲು ಅವರು ಯಾಹೂ ಸಂಸ್ಥೆಯಲ್ಲೂ ಕಾರ್ಯ ನಿರ್ವಹಿಸಿದ್ದರು.

ಟೆಸ್ಲರ್​ ಸಾವಿಗೆ ಕ್ಸೆರಾಕ್ಸ್​, ಆ್ಯಪಲ್​ ಸೇರಿ ಸಾಕಷ್ಟು ದೊಡ್ಡ ದೊಡ್ಡ ಸಂಸ್ಥೆಗಳು ಸಂತಾಪ ಸೂಚಿಸಿವೆ. ತಾಂತ್ರಿಕ ಲೋಕಕ್ಕೆ ಅವರು ನೀಡಿದ ಕೊಡುಗೆಯನ್ನು ಎಲ್ಲರೂ ಇಂದಿಗೂ ಸ್ಮರಿಸುತ್ತಿದ್ದಾರೆ.
First published: February 20, 2020, 9:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading