ದುಬಾರಿ ಕಾರಿನ ಮೇಲೆ ಸರ್ಕಸ್​ ಮಾಡಲು ಹೋಗಿ ಗಾಜು ಒಡೆದ ಮಾಲೀಕ!


Updated:July 26, 2018, 10:56 AM IST
ದುಬಾರಿ ಕಾರಿನ ಮೇಲೆ ಸರ್ಕಸ್​ ಮಾಡಲು ಹೋಗಿ ಗಾಜು ಒಡೆದ ಮಾಲೀಕ!

Updated: July 26, 2018, 10:56 AM IST
ವಿಶ್ವದ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿರುವ ಲಂಬೋರ್ಗಿನಿಯ ಮಾಲೀಕನೊಬ್ಬ ತನ್ನ ಕಾರು ಪ್ರದರ್ಶಿಸುವ ಭರದಲ್ಲಿ ಕಾರಿನ ಮುಂಭಾಗದ ಗಾಜಿನ ಫಲಕವನ್ನು ಒಡೆದು ಹಾಕಿದ ಘಟನೆ ನಡೆದಿದೆ.

ಟಾಪ್​ ಸ್ಪೀಡ್​ ಕಾರುಗಳಲ್ಲಿ ಒಂದಾಗಿರುವ ಲಂಬೋರ್ಗಿನಿ ಕಾರು ಅತ್ಯಂತ ಕಡಿಮೆ ತೂಕದ ಬಾಡಿಯನ್ನು ಹೊಂದಿದೆ, ಇದು ವೇಗವಾಗಿ ಕ್ರಮಿಸಲು ಸಹಾಯ ಮಾಡುತ್ತದೆ. ಅದರಲ್ಲೂ ಪ್ರಮುಖವಾಗಿ ಲಾಂಬೋ ಅವೆಂಟಡಾರ್​ ಲಂಬೋರ್ಗಿನಿ ಸಂಸ್ಥೆಯಲ್ಲೇ ಅತ್ಯಂತ ಹೆಚ್ಚು ಮಾರಾಟವಾದ ಮತ್ತು ದುಬಾರಿ ಕಾರುಗಳಲ್ಲಿ ಒಂದು. ಸುಮಾರು ಐದು ಕೋಟಿಯ ಕಾರನ್ನು ಖರೀದಿಸಿದ್ದ ಫ್ಲೋರಿಡಾದ ಈ ಮಾಲೀಕ ಎಲ್ಲರಿಗೂ ತನ್ನ ಕಾರನ್ನು ತೋರಿಸುವ ಉದ್ವೇಗದಲ್ಲಿ ಮುಂದಿನ ಬ್ಯಾನೆಟ್​ ಮೇಲೆ ಹತ್ತಿದ್ದಾನೆ.ಇಷ್ಟಕ್ಕೇ ಸುಮ್ಮನಾಗದ ಆತ ಮುಂಭಾಗದ ಗ್ಲಾಸಿನ ಮೇಲೆ ನಿಲ್ಲಲು ಯತ್ನಿಸಿದ್ದಾನೆ, ಈ ವೇಳೆ ಕಾರಿನ ಗಾಜು ಒಡೆದು ಹೋಗಿದೆ, ಇದನ್ನು ಗಮನಿಸಿದ ಸಹ ಪ್ರಯಾಣಿಕ ಗಾಜು ಒಡೆದಿರುವುದನ್ನು ಆತನೆಗೆ ಹೇಳುವ ಪ್ರಯತ್ನ ಮಾಡಿದ್ದರೂ ಮಾಲೀಕನ ಆಟವನ್ನು ತಡೆಯಲು ಅಸಾಧ್ಯವಾಗಿತ್ತು.

ಅದೇನೆ ಇರಲಿ ಈ ಕಾರುಗಳ ಒಂದೊಂದು ಭಾಗಗಳೂ ಉಳಿದ ಕಾರುಗಳಿಗಿಂತ ಹೆಚ್ಚು ಬೆಲೆ ಹೊಂದಿದೆ, ಅದರಲ್ಲೂ ಪ್ರಮುಖವಾಗಿ ಅವೆಂಟಡಾರ್​ನ ಮುಂಭಾಗ ಸ್ಪೋರ್ಟ್ಸ್​ ಲುಕ್​ ಹೊಂದಲು ಅದರ ಗಾಜಿನ ಡಿಸೈನ್​ ಕೂಡಾ ಪ್ರಮುಖ ಪಾತ್ರವಹಿಸುತ್ತದೆ.
First published:July 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...