ಕಪ್ಪು ವರ್ಣದಲ್ಲೂ ಬಿಡುಗಡೆಗೊಂಡ ​ಕೆಟಿಎಂ RC 200


Updated:June 21, 2018, 4:45 PM IST
ಕಪ್ಪು ವರ್ಣದಲ್ಲೂ ಬಿಡುಗಡೆಗೊಂಡ ​ಕೆಟಿಎಂ RC 200

Updated: June 21, 2018, 4:45 PM IST
ಹೊಸದಿಲ್ಲಿ: ಯುವ ಜನಾಂಗವನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಕೆಟಿಎಂ ಇದೀಗ ತನ್ನ ಫೇಮಸ್​ RC 200 ಬೈಕ್​ನ್ನು ಹೊಸ ವರ್ಣದಲ್ಲಿ ಪರಿಚಯಿಸಲು ತೀರ್ಮಾನಿಸಿದ್ದು, ಕಪ್ಪು ವರ್ಣದಲ್ಲೂ ಈ ಬೈಕ್​ನ್ನು ಬಿಡುಗಡೆ ಮಾಡಿದೆ.

ಈಗಾಗಲೇ ಕೇಸರಿ ಬಳಿ ಬಣ್ಣದಲ್ಲಿ RC 200 ಬೈಕ್​ನ್ನು ಬಿಡುಗಡೆಗೊಳಿಸಲಾಗಿತ್ತು,  ರೇಸಿಂಗ್​ ಪ್ರಿಯರಿಗೆಂದೇ ಡಿಸೈನ್​ ಮಾಡಿರುವ ಈ ಬೈಕ್​ ಕಳೆದ ವರ್ಷ ಹೆಚ್ಚು ಮಾರಾಟಗೊಂಡ ಬೈಕ್​ಗಳಲ್ಲಿ ಒಂದಾಗಿತ್ತು. ಇದೀಗ ಕಪ್ಪು ವರ್ಣದಲ್ಲಿ ಈ ಬೈಕ್​ನ್ನು ಬಿಡುಗಡೆ ಮಾಡಿರುವ ಸಂಸ್ಥೆ ಬೇರೆ ಯಾವುದೇ ಬದಲಾವಣೆಯನ್ನು ತರದೆ ಮಾರುಕಟ್ಟೆಗೆ ಪರಿಚಯಿಸಿದೆ.

ಲಿಕ್ವಿಡ್ ಕೂಲ್ಡ್ ಡಿಒಎಚ್‌ಸಿ ಎಂಜಿನ್, ಜತೆ 25PS, 19.2Nm ತಿರುಗುಬಲ ದೊಂದಿಗೆ ಬಿಡುಗಡೆಯಾಗಿರುವ RC 200 ಎಕ್ಸ್ ಶೋ ರೂಂ ದಿಲ್ಲಿಯಲ್ಲಿ  ರೂ.1.77 ಲಕ್ಷದಲ್ಲಿ ಗ್ರಾಹಕರಿಗೆ ಲಭ್ಯವಿರಲಿದೆ. ಸ್ಪೋರ್ಟೀ ಬಾಡವರ್ಕ್​ನಿಂದಲೇ ಹೆಚ್ಚು ಯುವ ಮನಸ್ಸನ್ನು ಸೆಳೆಯುವ RC 200, ಎಂಟ್ರಿ ಲೆವೆಲ್ ಸೂಪರ್ ಸ್ಪೋರ್ಟ್ ಶೈಲಿಯೊಂದಿಗೆ ಟ್ರೆಲ್ಲಿಸ್ ಫ್ರೇಮ್, ಅಲ್ಯೂಮಿನಿಯಂ ಸ್ವಿಂಗ್ ಆರ್ಮ್ ವ್ಯವಸ್ಥೆಯನ್ನು ಪಡೆದಿದೆ.

ರೇಸಿಂಗ್​ ಪ್ರಿಯರಿಗೆಂದೇ ವಿನ್ಯಾಸಗೊಂಡಿರುವ RC 200 ಟ್ರ್ಯಾಂಕ್ ರೇಸಿಂಗ್ ಹಾಗೂ ಏರೋಡೈನಾಮಿಕ್ ವಿನ್ಯಾಸದಿಂದ ಕಂಗೊಳಿಸಿದೆ. ಮುಂದಿನ ಎರಡು ಫೋರ್ಕ್​ಗಳು ಅಪ್ ಸೈಡ್ ಡೌನ್ ವ್ಯವಸ್ಥೆಯಿದ್ದು, ಡಿಜಿಟಲ್ ಕನ್ಸಾಲ್​ನೊಂದಿಗೆ ಉತ್ತಮ ಹ್ಯಾಂಡ್ಲಿಂಗ್‌ ಇತ್ಯಾದಿ ವಿಶಿಷ್ಟತೆಯನ್ನು ಪಡೆದುಕೊಂಡಿದೆ.

ಕೆಟಿಎಂ RC 200 ಬ್ಲ್ಯಾಕ್ ವೆರಿಯಂಟ್
ಎಂಜಿನ್:
199.5 ಸಿಸಿ,
Loading...

ಲಿಕ್ವಿಡ್ ಕೂಲ್ಡ್ ಡಿಒಎಚ್‌ಸಿ ಎಂಜಿನ್,
First published:June 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ