• Home
 • »
 • News
 • »
 • tech
 • »
 • ಕೆಟಿಎಂ ಸೈಕಲ್​​ ಭಾರತದಲ್ಲಿ ಬಿಡುಗಡೆ; ಬೈಕ್​​ಗಿಂತಲೂ ದುಬಾರಿ ಬೆಲೆಯಲ್ಲಿ ಬೈಸಿಕಲ್​

ಕೆಟಿಎಂ ಸೈಕಲ್​​ ಭಾರತದಲ್ಲಿ ಬಿಡುಗಡೆ; ಬೈಕ್​​ಗಿಂತಲೂ ದುಬಾರಿ ಬೆಲೆಯಲ್ಲಿ ಬೈಸಿಕಲ್​

ಕೆಟಿಎಂ ಸೈಕಲ್​​

ಕೆಟಿಎಂ ಸೈಕಲ್​​

ಕೆಟಿಎಂ ಕಂಪನಿ ಮೌಂಟೇನ್ ಬೈಕ್, ಟೆರ್ರೈನ್ ಬೈಕ್, ಫ್ಯಾಟ್ ಟೈರ್ ಬೈಕ್, ಹೈಬ್ರಿಡ್ ಬೈಕ್​ಗಳನ್ನು ಉತ್ಪಾದಿಸುತ್ತದೆ.

 • Share this:

  ಆಧುನಿಕ ಯುಗದಲ್ಲಿ ಹೆಚ್ಚಿನವರು ಫಿಟ್ ಆಗಿ ಇರಲು ಬಯಸುತ್ತಾರೆ. ಸರಿಯಾದ ಆಹಾರ ಕ್ರಮದ ಜೊತೆಗೆ ಫಿಟ್ನೆಸ್ ಮಾಡಲು ದೇಹವನ್ನು ಸರಿಯಾದ ಕ್ರಮದಲ್ಲಿರಿಸಿಕೊಳ್ಳುತ್ತಾರೆ. ಇನ್ನು ಕೆಲವರು ಫಿಟ್ನೆಸ್​​ಗಾಗಿ ಸೈಕ್ಲಿಂಗ್ ಮೊರೆ ಹೋಗುತ್ತಾರೆ. ಅದರೆ ಸೈಕಲ್ ತುಳಿಯುವುದರಿಂದ ಹೆಚ್ಚಿನ ವ್ಯಾಯಾಮ ಸಿಗುತ್ತದೆ. ಕಾಲುಗಳು ಬಲ ಗೊಳ್ಳುತ್ತದೆ. ಅದರಂತೆ ಇದೀಗ ಜನಪ್ರಿಯ ಕೆಟಿಎಂ ಕಂಪನಿ ಭಾರತದಲ್ಲಿ ಸೈಕಲ್ ಬಿಡುಗಡೆ ಮಾಡಿದೆ. ಈ ಸೈಕಲ್​ಗಳ ಬೆಲೆ 30 ಸಾವಿರದಿಂದ ಪ್ರಾರಂಭವಾಗಿ 10 ಲಕ್ಷದವರೆಗೆ ಇರಲಿದೆ.


  ಸದ್ಯ ಮೆಟ್ರೊ ಸಿಟಿಗಳಾದ ಬೆಂಗಳೂರು, ಚೆನ್ನೈ, ಡೆಲ್ಲಿ ಮತ್ತು ಮುಂಬೈ ನಗರಗಳನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡಲು ಮುಂದಾಗಿದೆ. ನಗರ ಪ್ರದೇಶದಲ್ಲಿ ಹೆಚ್ಚಿನವರು ಫಿಟ್ನೆಸ್​ಗಾಗಿ ಸೈಕ್ಲಿಂಗ್ ಮಾಡುತ್ತಾರೆ.
  ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಚೋಪ್ರಾ ಈ ಬಗ್ಗೆ ಮಾತನಾಡ, ‘ಬೆಳೆಯುತ್ತಿರುವ ನಗರದಲ್ಲಿ ಜೀವನಶೈಲಿ ಕೂಡ ಬದಲಾಗಿದೆ ಫಿಟ್ನೆಸ್​ಗಾಗಿ ಹೆಚ್ಚಿನವರು ಸೈಕ್ಲಿಂಗ್ ಮಾಡುತ್ತಾರೆ ಎಂದರು


  ಕೆಟಿಎಂ ಕಂಪನಿ ಮೌಂಟೇನ್ ಬೈಕ್, ಟೆರ್ರೈನ್ ಬೈಕ್, ಫ್ಯಾಟ್ ಟೈರ್ ಬೈಕ್, ಹೈಬ್ರಿಡ್ ಬೈಕ್​ಗಳನ್ನು ಉತ್ಪಾದಿಸುತ್ತದೆ.

  Published by:Harshith AS
  First published: