HOME » NEWS » Tech » KTM 890 ADVENTURE TO MAKE GLOBAL DEBUT TODAY INDIA LAUNCH UNCERTAIN HG

KTM: ಕೆಟಿಯಂ ಪರಿಚಯಿಸಿದೆ 890 ಅಡ್ವೆಂಚರ್ ಬೈಕ್; ಹೇಗಿದೆ ಗೊತ್ತಾ?

KTM 890 Adventure: ಕೆಟಿಯಂ ಪರಿಚಯಿಸಿರುವ ನೂತನ ಬೈಕ್​ನಲ್ಲಿ ಪವರ್​ಟೈನ್​ ಆಯ್ಕೆಯನ್ನು ನೀಡಲಾಗಿದೆ. 100ಎನ್​ಎಮ್​ನಿಂದ 6,500 ಆರ್​ಪಿಎಂ ಟ್ರಾರ್ಕ್​ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

news18-kannada
Updated:October 19, 2020, 5:13 PM IST
KTM: ಕೆಟಿಯಂ ಪರಿಚಯಿಸಿದೆ 890 ಅಡ್ವೆಂಚರ್ ಬೈಕ್; ಹೇಗಿದೆ ಗೊತ್ತಾ?
890 ಅಡ್ವೆಂಚರ್​ ಬೈಕ್
  • Share this:
ಜನಪ್ರಿಯ ಕೆಟಿಯಂ ಸಂಸ್ಥೆ ಭಾರತದಲ್ಲಿ 890 ಅಡ್ವೆಂಚರ್​ ಬೈಕ್​ ಅನ್ನು ಪರಿಚಯಿಸಿದೆ. ಎರಡು ಮಾದರಿಯಲ್ಲಿ ನೂತನ ಬೈಕ್​ ಅನ್ನು ಪರಿಚಯಿಸಿದ್ದು , 890 ಅಡ್ವೆಂಚರ್​ ಆರ್​ ಮತ್ತು 890 ಅಡ್ವೆಂವರ್​​ ಆರ್​ ರ‍್ಯಾಲಿ ಎಂಬ ಹೆಸರನ್ನು ಹೊಂದಿದೆ.

ನೂತನ ಬೈಕ್​ಗಳೆರಡು 790 ಅಡ್ವೆಂಚರ್ ಮತ್ತು 790 ಅಡ್ವೆಂಚರ್ ಆರ್​ ವಿನ್ಯಾಸವನ್ನು ಹೊಂದಿದೆ. ಹೆಡ್​ಲ್ಯಾಂಪ್​, ಬಾಡಿ, ಪೆಟ್ರೋಲ್​ ಟ್ಯಾಂಕ್​ ಎಲ್ಲವೂ ಒಂದೇತೆರನಾಗಿ ಕಾಣಿಸುತ್ತಿದ್ದು, ಆದರೆ ಬೈಕ್​ ಸಿಸಿಯಲ್ಲಿ ಮತ್ತು ಕೆಲವು ಫೀಚರ್​ನಲ್ಲಿ ಬದಲಾವಣೆ ಮಾಡಲಾಗಿದೆ.

ಕೆಟಿಯಂ ಪರಿಚಯಿಸಿರುವ ನೂತನ ಬೈಕ್​ನಲ್ಲಿ ಪವರ್​ಟೈನ್​ ಆಯ್ಕೆಯನ್ನು ನೀಡಲಾಗಿದೆ. 100ಎನ್​ಎಮ್​ನಿಂದ 6,500 ಆರ್​ಪಿಎಂ ಟ್ರಾರ್ಕ್​ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಇನ್ನು ಕೆಟಿಯಂ ಇದೇ ವರ್ಷ 250 ಅಡ್ವೆಂಚರ್​ ಅನ್ನು ಭಾರತದಲ್ಲಿ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿತ್ತು. ಆದರೀಗ ಅದಕ್ಕೂ ಮುನ್ನ 890 ಅಡ್ವೆಂಚರ್​ ಬೈಕ್​ ಬಿಡುಗಡೆಗೊಂಡಿದೆ.
Youtube Video

ರಾಬರ್ಟ್ ಸಿನಿಮಾ ಬಿಡುಗಡೆ ದಿನಾಂಕ ನಿಗದಿ: ನಿರ್ದೇಶಕರು ಅದೇ ತಿಂಗಳು ರಿಲೀಸ್ ಮಾಡುತ್ತಿರೋದು ಯಾಕೆ?
Published by: Harshith AS
First published: October 19, 2020, 5:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories