HOME » NEWS » Tech » KTM 125 DUKE 2021 LAUNCHED IN INDIA CHECK PRICE SPECIFICATION AND FEATURES HG

KTM 125 Duke: ದೇಶೀಯ ಮಾರುಕಟ್ಟೆಗೆ 125cc ಸಾಮರ್ಥ್ಯದ ಡ್ಯೂಕ್​ ಬೈಕ್​ ಪರಿಚಯಿಸಿದ ಕೆಟಿಎಂ; ಬೆಲೆ?

ನೂತನ 125 ಡ್ಯೂಕ್​ ಬೈಕ್​ 124.7 ಸಿಸಿ ಲಿಕ್ವಿಡ್​ ಕೂಲ್ಡ್​ ಎಂಜಿನ್ ಹೊಂದಿದ್ದು, ಸಿಂಗಲ್​ ಸಿಲಿಂಡರ್​ನಲ್ಲಿ ಪರಿಚಯಿಸಿದೆ. 6 ಸ್ಪೀಡ್​ ಗೇರ್​​ ಬಾಕ್ಸ್​ನೊಂದಿಗೆ  14.3 ಬಿಎಚ್​ಪಿ ಮತ್ತು 12 ಎನ್​ಎಂ ಟಾರ್ಕ್​ ಉತ್ಪಾದಿಸಲಿದೆ

news18-kannada
Updated:December 8, 2020, 7:27 AM IST
KTM 125 Duke: ದೇಶೀಯ ಮಾರುಕಟ್ಟೆಗೆ 125cc ಸಾಮರ್ಥ್ಯದ ಡ್ಯೂಕ್​ ಬೈಕ್​ ಪರಿಚಯಿಸಿದ ಕೆಟಿಎಂ; ಬೆಲೆ?
KTM 125 Duke
  • Share this:
ಆಸ್ಟ್ರೀಯಾ ಮೂಲದ ಕೆಟಿಎಂ ಕಂಪನಿ ಇದೀಗ ಕಡಿಮೆ ಸಿಸಿ ಡ್ಯೂಕ್​ ಬೈಕನ್ನು ಉತ್ಪಾದಿಸಿ ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ಬೈಕ್​ 125 ಸಿಸಿಯನ್ನು ಹೊಂದಿದ್ದು, ಹಳೆಯ ವಿನ್ಯಾಸದಲ್ಲಿ ಮರುಕಳಿಸಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ಬೈಕ್​ಗಳ ಬೆಲೆ ಹೆಚ್ಚಳವಾಗಿದೆ. ಸಿಸಿ ಹೆಚ್ಚಾದಂತೆ ಬೈಕ್​ ಫೀಚರ್​ ಕೂಡ ಬದಲಾಗುತ್ತದೆ. ಇದರ ಜೊತೆಗೆ ಬೆಲೆ ಕೂಡ ಹೆಚ್ಚಳವಾಗುತ್ತದೆ. ಅದರಂತೆ ಕೆಟಿಎಂ ಜನರಿಗೆ ಕೈಟಕುವಂತೆ 125ಸಿಸಿಯ ಡ್ಯೂಕ್​ ಬೈಕನ್ನು ಉತ್ಪಾದಿಸಿ ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ಬೈಕ್​ ಭಾರತದಲ್ಲಿ ಬೇಡಿಕೆ ಪಡೆಯುವ ನಿರೀಕ್ಷೆಯಿದೆ.

ಈಗಾಗಲೇ ಕೆಟಿಎಂ ಸಂಸ್ಥೆ ಮಾರುಕಟ್ಟೆಗೆ ಡ್ಯೂಕ್​ ಮತ್ತು ಆರ್​ಸಿ ಬೈಕ್​ಗಳನ್ನು ಪರಿಚಯಿಸಿದೆ. 200 ಸಿಸಿ, 390 ಸಿಸಿ ಎಂಜಿನ್​ ಅಳವಡಿಸಿಕೊಂಡಿರುವ ಬೈಕ್​ಗಳನ್ನು ಉತ್ಪಾದಿಸಿ ಬಿಡುಗಡೆಗೊಳಿಸಿದೆ. ಇದೀಗ 125 ಸಿಸಿಯಲ್ಲಿ ಪರಿಚಯಿಸಲು ಮುಂದಾಗಿದೆ

ನೂತನ 125 ಡ್ಯೂಕ್​ ಬೈಕ್​ 124.7 ಸಿಸಿ ಲಿಕ್ವಿಡ್​ ಕೂಲ್ಡ್​ ಎಂಜಿನ್ ಹೊಂದಿದ್ದು, ಸಿಂಗಲ್​ ಸಿಲಿಂಡರ್​ನಲ್ಲಿ ಪರಿಚಯಿಸಿದೆ. 6 ಸ್ಪೀಡ್​ ಗೇರ್​​ ಬಾಕ್ಸ್​ನೊಂದಿಗೆ  14.3 ಬಿಎಚ್​ಪಿ ಮತ್ತು 12 ಎನ್​ಎಂ ಟಾರ್ಕ್​ ಉತ್ಪಾದಿಸಲಿದೆ

ಇನ್ನು ಬೈಕಿನಲ್ಲಿ 43ಎಂಎಂ ಅಪ್​ ಸೈಡ್​​ ಡೌನ್​ ಪೋರ್ಕ್​ ಮತ್ತು ಹೊಂದಾಣಿಕೆ ಮಾಡಬಹುದಾದ ಮೊನೊಶಾರ್ಕ್​ ಸಿಂಗಲ್​ ಚಾನೆಲ್​ ಎಬಿಎಸ್​ ಜೋಡಿಸಲಾಗಿದೆ. 13.5 ಲೀಟರ್​ ಸಾಮರ್ಥ್ಯದ ಪೆಟ್ರೋಲ್​ ಟ್ಯಾಂಕ್​ ಹೊಂದಿದೆ.

ದೆಹಲಿ ಎಕ್ಸ್​ಶೋ ರೂಂ ಪ್ರಕಾರ ನೂತನ ಡ್ಯೂಕ್​​ 125 ಮಾದರಿ ಬೆಲೆ 1.5 ಲಕ್ಷ ರೂ ಇರಲಿದೆ. ಆರೆಂಜ್​ ಮತ್ತು ಸೆರಾಮಿಕ್​ ಬಿಳಿ ಬಣ್ಣದಲ್ಲಿ ಖರೀದಿಗೆ ಸಿಗಲಿದೆ.
Published by: Harshith AS
First published: December 8, 2020, 7:26 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories