HOME » NEWS » Tech » KOO RAISES USD 30 MILLION IN SERIES B FUNDING LED BY TIGER GLOBAL HG

Koo App: ದೇಶಿಯ ಕೂ ಆ್ಯಪ್​ ಟೈಗರ್ ಗ್ಲೋಬಲ್ ನೇತೃತ್ವದ $30 ಮಿಲಿಯನ್ ಸರಣಿ ಬಿ ಹೂಡಿಕೆಯನ್ನು ಸಂಗ್ರಹಿಸಿದೆ

ಕೂ ಎಂಬುದು ಭಾರತೀಯ ಭಾಷೆಗಳಲ್ಲಿ ಧ್ವನಿ ನೀಡುವ ಅಭಿಪ್ರಾಯಗಳಿಗಾಗಿ ರಚಿಸಿದ ಮೈಕ್ರೋಬ್ಲಾಗಿಂಗ್ ತಾಣವಾಗಿದೆ. ಇದು ಕೇವಲ ಒಂದು ವರ್ಷದ ಕಾರ್ಯಕ್ಷಮತೆಯಲ್ಲಿ ಸುಮಾರು 6 ಮಿಲಿಯನ್ ಡೌನ್‌ಲೋಡ್‌ಗಳನ್ನು ಗಳಿಸಿದೆ.

news18-kannada
Updated:May 26, 2021, 2:29 PM IST
Koo App: ದೇಶಿಯ ಕೂ ಆ್ಯಪ್​ ಟೈಗರ್ ಗ್ಲೋಬಲ್ ನೇತೃತ್ವದ $30 ಮಿಲಿಯನ್ ಸರಣಿ ಬಿ ಹೂಡಿಕೆಯನ್ನು ಸಂಗ್ರಹಿಸಿದೆ
ಕೂ/Koo
  • Share this:
ಅಪ್ಪಟ ಭಾರತೀಯ ಮೈಕ್ರೋಬ್ಲಾಗಿಂಗ್ ಅಪ್ಲಿಕೇಶನ್ ಕೂ, ಸರಣಿ ಬಿ ನಿಧಿಯಲ್ಲಿ $30 ಮಿಲಿಯನ್ ಸಂಗ್ರಹಿಸಿದೆ. ಟೈಗರ್ ಗ್ಲೋಬಲ್ ಹೂಡಿಕೆ ಸುತ್ತಿನಲ್ಲಿ ಅಸ್ತಿತ್ವದಲ್ಲಿರುವ ಹೂಡಿಕೆದಾರರಾದ ಅಕ್ಸೆಲ್ ಪಾಟ್ನರ್ಸ್, ಕಲಾರಿ ಕ್ಯಾಪಿಟಲ್, ಬ್ಲೂಮ್ ವೆಂಚರ್ಸ್ ಮತ್ತು ಡ್ರೀಮ್ ಇನ್ಕ್ಯುಬೇಟರ್ ಸಹ ಈ ಸುತ್ತಿನಲ್ಲಿ ಭಾಗವಹಿಸುತ್ತಿದೆ. ಐಐಎಫ್‌ಎಲ್ ಮತ್ತು ಮಿರೇ ಅಸೆಟ್ಸ್ ಇತರ ಹೊಸ ಹೂಡಿಕೆದಾರರು, ಈ ಸುತ್ತಿನೊಂದಿಗೆ ಕ್ಯಾಪ್ ಟೇಬಲ್‌ನಲ್ಲಿ ಬಂದಿದ್ದಾರೆ.

ಕೂ ಎಂಬುದು ಭಾರತೀಯ ಭಾಷೆಗಳಲ್ಲಿ ಧ್ವನಿ ನೀಡುವ ಅಭಿಪ್ರಾಯಗಳಿಗಾಗಿ ರಚಿಸಿದ ಮೈಕ್ರೋಬ್ಲಾಗಿಂಗ್ ತಾಣವಾಗಿದೆ. ಇದು ಕೇವಲ ಒಂದು ವರ್ಷದ ಕಾರ್ಯಕ್ಷಮತೆಯಲ್ಲಿ ಸುಮಾರು 6 ಮಿಲಿಯನ್ ಡೌನ್‌ಲೋಡ್‌ಗಳನ್ನು ಗಳಿಸಿದೆ. ದೇಶದ ಕೆಲವು ಖ್ಯಾತ ನಾಮರುಗಳಲ್ಲಿ ಬಾಲಿವುಡ್ ಗಣ್ಯರಾದ ಅನುಪಮ್ ಖೇರ್, ಕಂಗನಾ ರಣಾವತ್, ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್, ಪಿಯೂಷ್ ಗೋಯಲ್ ಮತ್ತು ಸ್ಮೃತಿ ಇರಾನಿ, ಕಾಂಗ್ರೆಸ್ ಹಿರಿಯ ಮುಖಂಡರಾದ ಕಮಲ್ ನಾಥ್, ಜೆಡಿಎಸ್ ಮುಖ್ಯಸ್ಥ ಮತ್ತು ಮಾಜಿ ಪ್ರಧಾನಿ ದೇವೇಗೌಡ, ಎನ್‌ಸಿಪಿಯ ಸುಪ್ರಿಯಾ ಸುಲೇ, ಭೀಮ್ ಆರ್ಮಿಯ ಚಂದ್ರಶೇಖರ್ ಆಜಾದ್ , ಜೆಡಿಯುನಿಂದ ಉಪೇಂದ್ರ ಖುಷ್ವಾಹ, ಎಎಪಿಯಿಂದ ರಾಜೇಂದ್ರ ಪಾಲ್ ಗೌತಮ್, ಸೈನಾ ನೆಹ್ವಾಲ್, ಭೈಚುಂಗ್ ಭೂಟಿಯಾ, ಜಾವಗಲ್ ಶ್ರೀನಾಥ್, ಮೇರಿ ಕೋಮ್, ದೀಪಕ್ ಹೂಡಾ ಸೇರಿದಂತೆ ಅನೇಕ ಕ್ರೀಡಾ ಗಣ್ಯರೂ ಸಹ ಕೂನಲ್ಲಿದ್ದರೆ

ಕೂ ಆ್ಯಪನ್ನು ಟ್ಯಾಕ್ಸಿಫಾರ್ಸುರ್ ಸ್ಥಾಪಕರು, ಸರಣಿ ಉದ್ಯಮಿಗಳೂ ಆದ ಅಪ್ರಮೇಯ ರಾಧಾಕೃಷ್ಣ ಅವರು ಸ್ಥಾಪಿಸಿದರು ಮತ್ತು ಮಯಾಂಕ್ ಬಿಡಾವತ್ಕಾ ಇದರ ಸಂಸ್ಥಾಪಕರು ಈ ಹಿಂದೆ ಮೀಡಿಯಾ ಆಂಟ್ ಮತ್ತು ಗುಡ್‌ಬಾಕ್ಸ್‌ನಂತಹ ಕಂಪನಿಗಳನ್ನು ಇವರು ಸ್ಥಾಪಿಸಿದ್ದಾರೆ.

ಕೂ ಸಹ-ಸಂಸ್ಥಾಪಕ ಮತ್ತು ಸಿಇಒ ಅಪ್ರಮೇಯ ರಾಧಾಕೃಷ್ಣ ಅವರು ಮಾತನಾಡಿ , “ಮುಂದಿನ ಕೆಲವು ವರ್ಷಗಳಲ್ಲಿ ವಿಶ್ವದ ಅತಿದೊಡ್ಡ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಒಂದಾಗಿ ಬೆಳೆಯುವ ಅತ್ಯುತ್ಸಾಹಭರಿತ ಯೋಜನೆಗಳನ್ನು ನಾವು ಹೊಂದಿದ್ದೇವೆ. ಪ್ರತಿಯೊಬ್ಬ ಭಾರತೀಯರೂ ಆ ಹಂತವನ್ನು ತಲುಪಲು ನಮ್ಮನ್ನು ಪ್ರೋತ್ಸಾಹಿಸುತ್ತಿದ್ದಾರೆ, ಈ ಕನಸನ್ನು ನನಸಾಗಿಸುವ ಹಾದಿಯಲ್ಲಿ ಟೈಗರ್ ಗ್ಲೋಬಲ್ ನಮಗೆ ಸಮರ್ಪಕ ಪಾಲುದಾರರಾಗಿದ್ದಾರೆ.

ಕೂನಲ್ಲಿ ಈ ಹೊಸ ಸುತ್ತಿನ ನಿಧಿಯನ್ನು ಪ್ರಮುಖವಾಗಿ ಎಲ್ಲಾ ಭಾರತೀಯ ಭಾಷೆಗಳಲ್ಲಿನ ಎಂಜಿನಿಯರಿಂಗ್, ಪ್ರಾಡಕ್ಟ್ ಮತ್ತು ಕಮ್ಯೂನಿಟಿಯ ಪ್ರಯತ್ನಗಳನ್ನು ಬಲಪಡಿಸಲು ಬಳಸಿಕೊಳ್ಳಲಾಗುವುದು.

ಕೂ ಬಗ್ಗೆ:

ಕೂ ಮಾರ್ಚ್ 2020 ರಲ್ಲಿ ಭಾರತೀಯ ಭಾಷೆಗಳನ್ನೊಳಗೊಂಡ ಮೈಕ್ರೋ-ಬ್ಲಾಗಿಂಗ್ ವೇದಿಕೆಯಾಗಿ ಸ್ಥಾಪಿತವಾಯಿತು, ಇದು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ, ಇಲ್ಲಿ ಭಾರತದ ವಿವಿಧ ಪ್ರದೇಶಗಳ ಜನರು ತಮ್ಮ ಮಾತೃಭಾಷೆಯಲ್ಲಿಯೇ ತಮ್ಮ ಮನದಾಳವನ್ನು ವ್ಯಕ್ತಪಡಿಸಿಕೊಳ್ಳಬಹುದು. ಕೇವಲ 10% ಜನರು ಇಂಗ್ಲಿಷ್ ಮಾತನಾಡುವ ಭಾರತ ದೇಶದಲ್ಲಿ, ಭಾರತೀಯ ಬಳಕೆದಾರರಿಗೆ ಮನಮುಟ್ಟುವಂತೆ ಭಾಷಾ ಅನುಭವಗಳನ್ನು ತಲುಪಿಸಬಲ್ಲ ಮತ್ತು ಪರಸ್ಪರ ಸಂಪರ್ಕ ಸಾಧಿಸಲು ಸಹಾಯ ಮಾಡುವ ಸಾಮಾಜಿಕ ಜಾಲತಾಣ ವೇದಿಕೆ ಅತ್ಯವಶ್ಯವಾಗಿದೆ. ಭಾರತೀಯ ಭಾಷೆಗಳಿಗೆ ಆದ್ಯತೆ ನೀಡುವ ಭಾರತೀಯರ ಧ್ವನಿಗಳಿಗೆ ಕೂ ಒಂದು ವೇದಿಕೆಯನ್ನು ಒದಗಿಸುತ್ತದೆ.
Published by: Harshith AS
First published: May 26, 2021, 2:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories