HOME » NEWS » Tech » KOO LAUNCHES A NEW LOGO HG

ಹೊಸ ಲೊಗೊ ಪರಿಚಯಿಸಿದ ದೇಸೀ ಕೂ ಆ್ಯಪ್​!

Koo App: ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ  ಕೂ ಆ್ಯಪ್ ಆರಂಭವಾಯಿತು. ಹನ್ನೊಂದೇ ತಿಂಗಳಲ್ಲಿ ಬಹುಭಾಷಾ ವೇದಿಕೆಗಳ ಮೂಲಕ 30 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಪಡೆಯುವ ಮೂಲಕ ಎಲ್ಲರ ಗಮನಸೆಳೆದಿತ್ತು.

news18-kannada
Updated:May 14, 2021, 12:37 PM IST
ಹೊಸ ಲೊಗೊ ಪರಿಚಯಿಸಿದ ದೇಸೀ ಕೂ ಆ್ಯಪ್​!
Koo App
  • Share this:
ಜನಪ್ರಿಯ ಸಾಮಾಜಿಕ ಜಾಲತಾಣವಾದ ಕೂ ಆ್ಯಪ್​ ತನ್ನ ಲೊಗೊವನ್ನು ಬದಲಾಯಿಸಿದೆ.  ಗುರುವಾರದಂದು ಬೆಂಗಳೂರು ಮೂಲದ ಕೂ ಆ್ಯಪ್​ ಈ ಬದಲಾವಣೆಯನ್ನು ಮಾಡಿಕೊಂಡಿರುವುದಾಗಿ ತಿಳಿಸಿದೆ.

ಆರ್ಟ್​​ ಆಫ್​ ಲಿವಿಂಗ್​​ ಸಂಸ್ಥಾಪಕರಾದ ಶ್ರೀ ಶ್ರೀ ರವಿಶಂಕರ್​ ಅವರು ನೂತನ ಲೊಗೊವನ್ನು ಬಿಡುಗಡೆಗೊಳಿಸಿದರು. ಲೊಗೊ ಉದ್ಘಾಟಿಸಿ ಮಾತನಾಡಿದ​ ಅವರು ಸಾಮಾಜಿಕ ಸಂಪರ್ಕ ಮತ್ತು ಮಾಹಿತಿ ಹರಿವು ಸುಸಂಸ್ಕೃತ ಸಮಾಜದ ಚಿಹ್ನೆಗಳಲ್ಲಿ ಒಂದಾಗಿದೆ. ಕೂ ಆ್ಯಪ್​ ದೇಶ ಮತ್ತು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಸಂಪರ್ಕಿಸುತ್ತದೆ. ಇಂದು ನನಗೆ ಕೂ ಅಪ್ಲಿಕೇಶನ್​ ಹೊಸ ಲೊಗೊವನ್ನು ಪರಿಚಯಿಸಲು ನನಗೆ ಸಂತೋಷವಾಗಿದೆ ಎಂದು ಹೇಳಿದರು.

ನಂತರ ಮಾತನಾಡಿದ ಅವರು ಇಷ್ಟು ಕಡಿಮೆವ ಅವಧಿಯಲ್ಲಿ ಇಂತಹ ಅದ್ಭುತ ಅಪ್ಲಿಕೇಶನ್​ ಬಂದಿದ್ದಕ್ಕಾಗಿ ಅಪ್ರಮೇಯ ಮತ್ತು ಅವರ ತಂಡಕ್ಕೆ ನನ್ನ ಅಭಿನಂದನೆ ಎಂದು ಹೇಳಿದರು.

ಆತ್ಮ ನಿರ್ಭರ ಭಾರತದ ಕನಸಿಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಮತ್ತು ಟ್ವಿಟರ್‌ಗೆ ಪರ್ಯಾಯವಾಗಿ ಈ ದೇಸೀ ಆ್ಯಪ್ ಕೂ ಅನ್ನು ಪರಿಚಯಿಸಲಾಯಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ತಮ್ಮ ಮಾಸಿಕ 'ಮನದ ಮಾತು' ಕಾರ್ಯಕ್ರಮದಲ್ಲಿ ಕನ್ನಡಿಗರೇ ರೂಪಿಸಿದ ಸಾಮಾಜಿಕ ಮಾಧ್ಯಮ 'ಕೂ' ಬಗ್ಗೆ ಉಲ್ಲೇಖಿಸಿದ್ದರು. ಸಾಕಷ್ಟು ಭಾರತೀಯರು ಈ ಆ್ಯಪ್​ ಅನ್ನು ಬಳಸುತ್ತಿದ್ದಾರೆ.


ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ  ಕೂ ಆ್ಯಪ್ ಆರಂಭವಾಯಿತು. ಹನ್ನೊಂದೇ ತಿಂಗಳಲ್ಲಿ ಬಹುಭಾಷಾ ವೇದಿಕೆಗಳ ಮೂಲಕ 30 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಪಡೆಯುವ ಮೂಲಕ ಎಲ್ಲರ ಗಮನಸೆಳೆದಿತ್ತು. ಇದೀಗ ದೇಸೀ ಆ್ಯಪ್​ ಕೂ ತನ್ನ ಲೊಗೊವನ್ನು ಬದಲಾಯಿಸುವ ಮೂಲಕ ಇನ್ನಷ್ಟು ಆಕರ್ಷಕವಾಗಿ ಕಾಣಲು ಮುಂದಾಗಿದೆ.
Published by: Harshith AS
First published: May 14, 2021, 12:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories