ಟ್ವಿಟರ್ (Twitter) ಅನ್ನು ಸ್ವಾಧೀನ ಪಡಿಸಿಕೊಂಡ ಬಳಿಕ ಹೊಸ ಮುಖ್ಯಸ್ಥ ಎಲಾನ್ ಮಸ್ಕ್ ( Elon Musk) ಒಂದಲ್ಲ ಒಂದು ವಿಷಯದಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಟ್ವಿಟರ್ ಸಂಸ್ಥೆಯಲ್ಲಿ ಸುಮಾರು 4 ಸಾವಿರ ಉದ್ಯೋಗಿಗಳ್ನು (Workers) ವಜಾಗೊಳಿಸಿದ ಬಳಿಕ ಅವರು ಬಹುಶಃ ಹೊಸ ನೇಮಕಾತಿಯ (recruitment) ಬಗ್ಗೆ ಯೋಚಿಸುತ್ತಿದ್ದಾರೆ. ಅಲ್ಲದೇ ಇದೀಗ ಟ್ವಿಟರ್ನಲ್ಲಿ ಸರ್ಚ್ ಆಪ್ಶನ್ ( Search Option) ಸರಿಪಡಿಸಲು ಜಾರ್ಜ್ ಹಾಟ್ಜ್ (George Hotz) ಅವರನ್ನು ನೇಮಕ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಜಾರ್ಜ್ ಹಾಟ್ಜ್ ಯಾರು, ಆತ ಈ ಹಿಂದೆ ಎಲ್ಲೆಲ್ಲಾ ಕೆಲಸ (Job) ಮಾಡಿದ್ದಾನೆ, ಆತನ ವಿಷಯ ಏನು ಅನ್ನೋದನ್ನು ತಿಳಿಯೋಣ.
ಯಾರು ಈ ಜಾರ್ಜ್ ಹಾಟ್ಜ್?
ಈ ಹಿಂದೆ ಒಮ್ಮೆ ಎಲೋನ್ ಮಸ್ಕ್ ಜೊತೆ ಕೆಲಸ ಮಾಡಿದ್ದ ಜಾರ್ಜ್ ಹಾಟ್ಜ್ 2007 ರಲ್ಲಿ ಐಫೋನ್ ಅನ್ನು ಹ್ಯಾಕ್ ಮಾಡುವ ಮೂಲಕ ಪ್ರಪಂಚದಾದ್ಯಂತ ಖ್ಯಾತಿ ಪಡೆದಿದ್ದ ವ್ಯಕ್ತಿ. ಹಾಟ್ಜ್, ಐಫೋನ್ ಅನ್ನು ಅನ್ ಲಾಕ್ ಮಾಡಿದ ಮೊದಲ ವ್ಯಕ್ತಿಯಾಗಿದ್ದಾರೆ. ಇದೀಗ ಅವರು ಟ್ವಿಟರ್ನಲ್ಲಿನ ಸರ್ಜ್ ಆಪ್ಶನ್ ಗಳನ್ನು ಸರಿಗೊಳಿಸುವಲ್ಲಿ ನಿರತರಾಗಿದ್ದಾರೆ.
ಹಲವಾರು ಎಂಜಿನಿಯರ್ಗಳು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಆಗದ ಕೆಲಸವನ್ನು ಇದೀಗ ಜಾರ್ಜ್ ಹಾಟ್ಜ್ ಮಾಡುತ್ತಿದ್ದಾರೆ. ಅದಕ್ಕಾಗಿ ಹಾಟ್ಜ್ 12 ವಾರಗಳ ಕಾಲ ಸಮಯ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಟ್ವಿಟರ್ನಲ್ಲಿ ಹೇಳಿಕೊಂಡಿರುವ ಹಾಟ್ಜ್, ಸ್ಯಾನ್ ಫ್ರಾನ್ಸಿಕ್ಸೋದಲ್ಲಿ ಜೀವನ ವೆಚ್ಚ ನಿಭಾಯಿಸುವುದಕ್ಕಾಗಿ ನಾನು 12 ವಾರಗಳ ಕಾಲ ಟ್ವಿಟರ್ನಲ್ಲಿ ಇಂಟರ್ನ್ಶಿಪ್ ಮಾಡುತ್ತಿದ್ದೇನೆ.
ಜಾರ್ಜ್ ಹಾಟ್ಜ್ನ ಟ್ವಿಟ್ ಹೇಗಿತ್ತು ಗೊತ್ತಾ?
ಈ ಕಾರ್ಯ ನಿಸ್ತೇಜಗೊಂಡ ಜಗತ್ತಿನಲ್ಲಿ ಬಂಡವಾಳವನ್ನು ಸಂಗ್ರಹಿಸುವುದರ ಬಗ್ಗೆ ಅಲ್ಲ, ಬದಲಾಗಿ ಈ ಜಗತ್ತನ್ನು ಮತ್ತೆ ಕ್ರಿಯಾಶೀಲವನ್ನಾಗಿ ಮಾಡುವುದಕ್ಕಾಗಿ" ಎಂದು ಹಾಟ್ಜ್ ಟ್ವೀಟ್ ಮಾಡಿದ್ದಾರೆ. ಹಾಟ್ಜ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಎಲೋನ್ ಮಸ್ಕ್ ತಾವು ಈ ಬಗ್ಗೆ ಮಾತನಾಡಲು ಬಯಸುವುದಾಗಿ ಪ್ರತಿಕ್ರಿಯಿಸಿದ್ದಾರೆ.
ಸದ್ಯ 12 ವಾರಗಳ ಮಟ್ಟಿಗೆ ಟ್ವಿಟರ್ನಲ್ಲಿ ಸರ್ಚ್ ಆಪ್ಶನ್ ಬಗ್ಗೆ ಕೆಲಸ ಮಾಡಲು ನೇಮಕವಾಗಿರುವ ಜಾರ್ಜ್ ಹಟ್ಜ್ , ತಾವು ದೀರ್ಘಕಾಲ ಟ್ವಿಟರ್ ಕಂಪನಿಗೆ ಸೇರಲು ಬಯಸುವುದಿಲ್ಲ ಎಂದಿದ್ದಾರೆ. ಅಲ್ಲದೇ, ತಾವು ಕಾಂಫ್ಲೆಕ್ಸ್ ಕೋಡ್ಬೇಸ್ ಗಳಿಗೆ ಕೆಲಸ ಮಾಡುವುದಾಗಿ ಹೇಳಿದ್ದಾರೆ. ತಾವು ಕೆಲಸ ಮಾಡುವ 12 ವಾರಗಳಲ್ಲಿ ಆ 1000 ಮೈಕ್ರೋ ಸರ್ವೀಸ್ಗಳಲ್ಲಿ ಕೆಲವನ್ನು ಡಾಕ್ಯುಮೆಂಟ್ ಮಾಡಲು ಮತ್ತು ಸ್ವಚ್ಛಗೊಳಿಸಲು ರಿವರ್ಸ್ ಎಂಜಿನಿಯರಿಂಗ್ ನಿಂದ ಸಹಾಯ ಮಾಡಬಲ್ಲೆ ಎಂದು ತಿಳಿಸಿದ್ದಾರೆ.
ಜಾರ್ಜ್ ಹಾಟ್ಜ್ನ ಪ್ರಶ್ನೆಗೆ ಬಳಕೆದಾರನ ಉತ್ತರ ಏನು ಗೊತ್ತಾ?
ಇನ್ನು ಟ್ವಿಟರ್ ಹುಡುಕಾಟ ಆಯ್ಕೆಗಳ ಬಗ್ಗೆ ಕೆಲಸ ಮಾಡುತ್ತಿರುವ ಹಾಟ್ಜ್ ಈ ಬಗ್ಗೆ ತಮ್ಮ ಫಾಲೋವರ್ಸ್ ಅನ್ನು ವಿಚಾರಿಸಿದರು. ಗೂಗಲ್ ಬದಲಿಗೆ ಟ್ವಿಟರ್ ಸರ್ಚ್ ಆಯ್ಕೆಗಳನ್ನು ಬಳಸಿದರೆ ನಿಮಗೆ ಹೇಗನ್ನಿಸುತ್ತದೆ? ಗೂಗಲ್ ಬದಲಿಗೆ ಟ್ವಿಟರ್ ಹುಡುಕಾಟವನ್ನು ಬಳಸಲು ನೀವು ಏನು ಪಡೆಯುತ್ತೀರಿ? ಎಂಬುದಾಗಿ ಕೇಳಿದರು.
ಇದಕ್ಕೆ ಒಬ್ಬ ಟ್ವಿಟರ್ ಬಳಕೆದಾರ, ಅದು ಕೆಟ್ಟದಾಗಿರುತ್ತದೆ. ಇದರಲ್ಲಿ ನಾನು ಏನನ್ನಾದರೂ ಹುಡುಕಲು ಬಯಸಿದರೆ ಅದಲ್ಲಿ ಒಂದೇ ಒಂದು ಅಕ್ಷರ ತಪ್ಪಾದರೂ ನಾನು ಏನನ್ನು ಹುಡುಕುತ್ತಿದ್ದೆನೋ ಅದು ನನಗೆ ಸಿಗೋದಿಲ್ಲ ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ. ನಂತರ ಹಾಟ್ಜ್ ಆ ಬಳಕೆದಾರರ ವಾದವನ್ನು ಒಪ್ಪಿದ್ದು ಅದರ ನ್ಯೂನ್ಯತೆಗಳನ್ನು ಸುಧಾರಿಸಲು ಸುಲಭವಾದ ಮಾರ್ಗವನ್ನು ಹುಡುಕುವುದಾಗಿ ಹೇಳಿದರು.
ಜಾರ್ಜ್ ಹಾಟ್ಜ್ ಅವರ ಹಿನ್ನೆಲೆ ಹೀಗಿದೆ
ಅಂದಹಾಗೆ ಜಾರ್ಜ್ ಹಾಟ್ಜ್ ಅವರ ಹಿನ್ನೆಲೆಯನ್ನು ನೋಡೋದಾದ್ರೆ, ಅವರು ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ಪದವೀಧರರಾಗಿದ್ದಾರೆ. ಅಲ್ಲದೇ ಅವರು ಗೂಗಲ್, ಫೇಸ್ ಬುಕ್, ಸ್ಪೇಸ್ ಎಕ್ಸ್ ಕಂಪನಿಗಳಲ್ಲಿ ಇಂಟರ್ನ್ಶಿಪ್ ಮಾಡಿದ್ದಾರೆ. ಅಲ್ಲದೇ ಅವರು 2015 ರಿಂದ 2018 ರವರೆಗೆ comma.ai ನ CEO ಆಗಿದ್ದರು.
ಇನ್ನು, ಕಳೆದ ಒಂದು ತಿಂಗಳಲ್ಲಿ ಟ್ವಿಟರ್ ಸುಮಾರು 4000 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ. ಇನ್ನೂ ಹಲವಾರು ಜನ ಉದ್ಯೋಗಿಗಳು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ