ಜಾವಾ (Java) ಮತ್ತು ಯೆಜ್ಡಿ (Yezidi) ಬ್ರ್ಯಾಂಡ್ (Brand) ಬೈಕ್ಗಳು ಯಾರಿಗೆ ಗೊತ್ತಿಲ್ಲ ಹೇಳಿ. ಈ ಬೈಕ್ಗಳನ್ನು ಓಡಿಸೋದು ಬೈಕ್ ಪ್ರಿಯರ (Bike Lovers) ಅಂತಿಮ ಗುರಿ ಎನ್ನಬಹುದು. ಮಿಂಚಿ ಮರೆಯಾಗಿದ್ದ ಜಾವಾ ಬೈಕ್ ಈಗ ಮತ್ತೊಮ್ಮೆ ಮಾರುಕಟ್ಟೆಗೆ (Market) ಗ್ರ್ಯಾಂಡ್ ಎಂಟ್ರಿ (Grand Entry) ನೀಡಿದೆ. ಈಗ ಇವುಗಳನ್ನು ಪುನರುಜ್ಜೀವನಗೊಳಿಸುವ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಮತ್ತೊಂದು ಬೈಕ್ ರೆಡಿಯಾಗಿದೆ. BSA ಸ್ಕ್ರ್ಯಾಂಬ್ಲರ್ 650 (BSA Scrambler 650 Bike) ಭಾರತದಲ್ಲಿ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ.
BSA ಬ್ರ್ಯಾಂಡ್ ಮೂಲಭೂತವಾಗಿ ಯುರೋಪ್ ಮಾರುಕಟ್ಟೆಗಳಿಗೆ ಸೀಮಿತವಾದರೂ ಈ ಬೈಕ್ಗಳನ್ನು ಇನ್ನೇನು ಕೇಲವೇ ವರ್ಷಗಳಲ್ಲಿ ಭಾರತದಲ್ಲೂ ನೋಡಬಹುದಾಗಿದೆ.
ಬ್ರಿಟನ್ನ ಹಳೆಯ ಮೋಟಾರ್ಸೈಕಲ್ ತಯಾರಕರಲ್ಲಿ ಒಬ್ಬರು ಬರ್ಮಿಂಗ್ಹ್ಯಾಮ್ ಸ್ಮಾಲ್ ಆರ್ಮ್ಸ್ ಕಂಪನಿ, ಈ ಕ್ಲಾಸಿಕ್ ಲೆಜೆಂಡ್ ಅನ್ನು ತಯಾರಿಸಿದೆ.
ಹಾಗಾದರೆ ನಾವಿಲ್ಲಿ ಭಾರತದಲ್ಲಿ BSA ಸ್ಕ್ರ್ಯಾಂಬ್ಲರ್ 650 ಯಾವಾಗ ಬಿಡುಗಡೆ ಆಗುತ್ತದೆ? ಬೆಲೆ, ವೈಶಿಷ್ಠ್ಯಗಳು, ವಿಶೇಷಣಗಳು, ಬುಕಿಂಗ್ ಪ್ರಕ್ರಿಯೆ ಬಗ್ಗೆ ಪೂರ್ತಿಯಾಗಿ ತಿಳಿಯೋಣ.
BSA ಸ್ಕ್ರ್ಯಾಂಬ್ಲರ್ 650 ವೈಶಿಷ್ಠ್ಯಗಳು
ಸ್ಕ್ರ್ಯಾಂಬ್ಲರ್ ಬೈಕ್ನಲ್ಲಿ ಅರೆ-ಡಿಜಿಟಲ್ ಟ್ವಿನ್-ಪಾಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ನಿರೀಕ್ಷಿಸಲಾಗಿದೆ. ಹಾಗೆಯೇ ಬೈಕ್ನಲ್ಲಿ LCD ಮತ್ತು ಅನಲಾಗ್ ಸ್ಪೀಡೋಮೀಟರ್ ಎಡಭಾಗದಲ್ಲಿರುತ್ತದೆ. ಮತ್ತೊಂದೆಡೆ, ಕನ್ಸೋಲ್ನ ಬಲಭಾಗದಲ್ಲಿ ಟ್ಯಾಕೋಮೀಟರ್ ಮತ್ತು ಡಿಜಿಟಲ್ ಇಂಧನ ಗೇಜ್ ಇರುತ್ತದೆ.
ಸ್ಕ್ರ್ಯಾಂಬ್ಲರ್ನಲ್ಲಿ ವೈರ್-ಸ್ಪೋಕ್ ರಿಮ್ಗಳಲ್ಲಿ ಬ್ಲಾಕ್-ಪ್ಯಾಟರ್ನ್ ಟೈರ್ಗಳಿವೆ. BSA ಸ್ಕ್ರ್ಯಾಂಬ್ಲರ್ 650 ರೌಂಡ್ ಇನ್ಸ್ಟ್ರುಮೆಂಟ್ ಬಂಚ್ ಮತ್ತು ಸ್ಕ್ರಾಂಬ್ಲರ್ ಶೈಲಿಯ ಹ್ಯಾಂಡಲ್ಬಾರ್ ಅನ್ನು ಪಡೆದುಕೊಂಡಿದೆ ಎನ್ನಲಾಗಿದೆ.
ವಿನ್ಯಾಸ
ಒಂದೇ ಸೀಟ್ ಹೊಂದಿರುವ ಈ ಬೈಕ್ ನೋಡಲು ಕ್ಲಾಸ್ ಆಗಿದೆ. ಎತ್ತರದ ಮುಂಭಾಗದ ಫೆಂಡರ್, ಹೆಡ್ಲೈಟ್ಗಳಿಗೆ ಗ್ರಿಲ್ಗಳು ಮತ್ತು ವೈರ್-ಸ್ಪೋಕ್ ಚಕ್ರಗಳನ್ನು ಹೊಂದಿದೆ.
ಹೆಡ್ಲೈಟ್ಗಳು ಮತ್ತು ಸಾಂಪ್ರದಾಯಿಕವಾದ ದೊಡ್ಡ ಇಂಧನ ಟ್ಯಾಂಕ್ ಅನ್ನು ಇದು ಹೊಂದಿದೆ. ವಿನ್ಯಾಸವು ಈ ಹಿಂದಿನ BSA ಬೈಕ್ಗಳಂತೆ ಸೈಡ್ ಪ್ಯಾನೆಲ್ಗಳು ಮತ್ತು ಎಂಜಿನ್ ಮೇಲೆ ಕಪ್ಪು ಫಿನಿಶ್ನೊಂದಿಗೆ ಬಂದಿದೆ. ಎಲ್ಇಡಿಗಳು ಮತ್ತು ಹೆಡ್ಲೈಟ್ಗಳನ್ನು ರಕ್ಷಿಸಲು ಗ್ರಿಲ್ ಅನ್ನು ಅಳವಡಿಸಲಾಗಿದೆ.
ಎಂಜಿನ್
ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, BSA ಸ್ಕ್ರ್ಯಾಂಬ್ಲರ್ ಪರಿಕಲ್ಪನೆಯು ಗೋಲ್ಡ್ಸ್ಟಾರ್ನಲ್ಲಿ ಕಂಡುಬರುವ 652cc ಲಿಕ್ವಿಡ್-ಕೂಲ್ಡ್ ಸಿಂಗಲ್-ಸಿಲಿಂಡರ್ ಮೋಟಾರ್ ಎಂಜಿನ್ ಅನ್ನು ಹೊಂದಿದೆ. ಈ ಮೋಟಾರ್ ಸುಮಾರು 46bhp ಮತ್ತು 55Nm ಟಾರ್ಕ್ ಅನ್ನು ನೀಡುತ್ತದೆ ಮತ್ತು ಐದು-ಸ್ಪೀಡ್ ಗೇರ್ಬಾಕ್ಸ್ ಟ್ರಾನ್ಸ್ಮಿಷನ್ ಅನ್ನು ಜೋಡಿಸಲಾಗಿದೆ.
ಸಸ್ಪೆನ್ಶನ್
ಬೈಕ್ನಲ್ಲಿ ಟೇಲ್ಲೈಟ್ಗಳು, ಹಿಂಭಾಗದ ಬ್ಲಿಂಕರ್ಗಳು ಮತ್ತು ಹಿಂಭಾಗದಲ್ಲಿ ಟೈರ್ ಹಗ್ಗರ್ ಇಲ್ಲ. ಇದು ಟ್ವಿನ್ ಬ್ಯಾರೆಲ್ ಎಕ್ಸಾಸ್ಟ್ ಟಿಪ್ಸ್ಗಳನ್ನು ಹೊಂದಿದ್ದು, ಇದು MV ಅಗಸ್ಟಾ ಬ್ರೂಟೇಲ್ 800 RR ನಂತೆ ಕಾಣುವಂತೆ ಮಾಡುತ್ತದೆ. ಟ್ವಿನ್ ಶಾಕ್ ಅಬ್ಸಾರ್ಬರ್ಗಳು ಹಿಂಭಾಗದ ಸಸ್ಪೆನ್ಶನ್ನ ಉಸ್ತುವಾರಿ ವಹಿಸುತ್ತವೆ.
ಬ್ರೇಕ್ಗಳು
ಇದು ಬ್ರೇಕಿಂಗ್ ಹಾರ್ಡ್ವೇರ್ ಗೋಲ್ಡ್ ಸ್ಟಾರ್ 650 ಬೈಕ್ನಂತೆಯೇ ಇರಬಹುದು ಎಂದು ಅಂದಾಜಿಸಲಾಗಿದೆ. ಬೈಕ್ ಮುಂಭಾಗ ಮತ್ತು ಹಿಂಭಾಗದ ಟೈರ್ಗಳಲ್ಲಿ ಡಿಸ್ಕ್ ಬ್ರೇಕ್ಗಳನ್ನು ಪಡೆಯುತ್ತದೆ.
ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಬ್ರೆಂಬೋ ಬ್ರೇಕ್ ಕ್ಯಾಲಿಪರ್ಸ್ ಮತ್ತು ಎಬಿಎಸ್ ಸಿಸ್ಟಮ್ನೊಂದಿಗೆ 255 ಎಂಎಂ ಡಿಸ್ಕ್ ಬ್ರೇಕ್ ಇದೆ.
BSA ಸ್ಕ್ರ್ಯಾಂಬ್ಲರ್ 650 ಆಫ್ಸೆಟ್ ಇನ್ಸ್ಟ್ರುಮೆಂಟ್ ಕನ್ಸೋಲ್, ಲೆವೆಲ್ ಸೀಟ್, ಹೈ ಫ್ರಂಟ್ ಬಂಪರ್, ಲಾಂಗ್ ಟ್ರಾವೆಲ್ ಸಸ್ಪೆನ್ಷನ್, ಸ್ಲ್ಯಾಮ್ ಪ್ಲೇಟ್ ಮತ್ತು ಸ್ಕಾರ್ಪಿಯನ್ ರ್ಯಾಲಿ STR ಟೈರ್ಗಳನ್ನು ಹೊಂದಿದೆ.
ಬಣ್ಣಗಳು
ಈ BSA ಸ್ಕ್ರ್ಯಾಂಬ್ಲರ್ 650 ಭಾರತದಲ್ಲಿ ಕೇವಲ ಕಪ್ಪು ಬಣ್ಣದಲ್ಲಿ ಮಾತ್ರ ಲಭ್ಯವಿದೆ.
ಇದನ್ನೂ ಓದಿ: Electric Bikes: ಈ ವರ್ಷ ಬಿಡುಗಡೆಯಾಗಲಿರುವ ಎಲೆಕ್ಟ್ರಿಕ್ ಬೈಕ್ಗಳ ಪಟ್ಟಿ ಇಲ್ಲಿದೆ ನೋಡಿ
ಬೆಲೆ ಮತ್ತು ಬಿಡುಗಡೆ ದಿನಾಂಕ
BSA ಸ್ಕ್ರ್ಯಾಂಬ್ಲರ್ 650 ಭಾರತದಲ್ಲಿ ಡಿಸೆಂಬರ್ 2023 ರಲ್ಲಿ 3,40,000 ರಿಂದ 3,60,000 ನಿರೀಕ್ಷಿತ ಬೆಲೆ ಶ್ರೇಣಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
BSA ಸ್ಕ್ರ್ಯಾಂಬ್ಲರ್ 650 ಅನ್ನು ಬುಕ್ ಮಾಡುವುದು ಹೇಗೆ?
- ಬೈಕ್ ಮತ್ತು ಡೀಲರ್ಶಿಪ್ಗಳನ್ನು ಆಯ್ಕೆಮಾಡಿ ಮತ್ತು ನಿಮ್ಮ ಆಯ್ಕೆಯ ಬಣ್ಣವನ್ನು ಆರಿಸಿ. ಭಾರತದಲ್ಲಿ ಕೇವಲ ಕಪ್ಪು ಬಣ್ಣದಲ್ಲಿ ಮಾತ್ರ ಲಭ್ಯವಿದೆ. ನಂತರ ನಿಮ್ಮ ಹತ್ತಿರದ ಡೀಲರ್ಶಿಪ್ ಅನ್ನು ಆಯ್ಕೆ ಮಾಡಲು ನಿಮ್ಮ ಸ್ಥಳವನ್ನು ನಮೂದಿಸಿ.
- ಹೆಸರು, ಫೋನ್ ನಂಬರ್, ಇಮೇಲ್ ಮತ್ತು ವಿಳಾಸದಂತಹ ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಿ.
- ಪಾವತಿ ಮಾಹಿತಿಯನ್ನು ಸೇರಿಸಿ. ನಿಮ್ಮ ಆಯ್ಕೆಯ ಪಾವತಿ ವಿಧಾನವನ್ನು ಆರಿಸಿ.
- ಕಂಪನಿಯು ಉಲ್ಲೇಖಿಸಿದಂತೆ ಮುಂಗಡ ಹಣ ನೀಡಿ ನಿಮ್ಮ ಬೈಕ್ ಅನ್ನು ಬುಕ್ ಮಾಡಿ.
ಹೊಸ ಸ್ಕ್ರ್ಯಾಂಬ್ಲರ್ ಹಳೆಯ ಗೋಲ್ಡ್ ಸ್ಟಾರ್ ಬೈಕ್ನಂತೆ ಹಲವೂ ವಿನ್ಯಾಸ ಹೊಂದಿದ್ದರೂ ಹೆಚ್ಚಿನ ತಂತ್ರಜ್ಞಾನ ಹೊಂದಿದೆ ಎನ್ನಲಾಗಿದೆ. ರಾಯಲ್ ಎನ್ಫೀಲ್ಡ್ 650 ಗೆ ಸಂಭಾವ್ಯ ಪ್ರತಿಸ್ಪರ್ಧಿಯಾಗಿ BSA ಸ್ಕ್ರ್ಯಾಂಬ್ಲರ್ 650 ಅನ್ನು ಪರಿಗಣಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ