ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲ್ಯಾಟ್ಫಾರ್ಮ್ (Message Platform) ಎಂದೆನ್ನಿಸಿರುವ ವಾಟ್ಸಪ್ (WhatsApp) ಮಿಲಿಯನ್ಗಟ್ಟಲೆ ಬಳಕೆದಾರರು ಬಳಸುವ ತಾಣವಾಗಿ ಮಾರ್ಪಟ್ಟಿದೆ. ಬರೀ ಮೆಸೇಜಿಂಗ್ ಮಾತ್ರವಲ್ಲದೆ ಕರೆ, ವಿಡಿಯೋ ಕರೆಗಳಿಗೂ (Call, Video Call) ಈ ತಾಣ ಸೂಕ್ತ ವೇದಿಕೆಯನ್ನು ಕಲ್ಪಿಸಿದೆ. ಅದಾಗ್ಯೂ ವಾಟ್ಸಪ್ ಕೆಲವೊಂದು ಭದ್ರತಾ ಲೋಪಗಳನ್ನು ಹೊಂದಿದೆ ಎಂಬ ದೂರಿನ ಮೇರಿಗೆ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ (End to End Encrypt) ಅನ್ನು ಪರಿಚಯಿಸಿತು. ಸ್ಕ್ಯಾಮರ್ಗಳು (Scammer) ಹಾಗೂ ಹ್ಯಾಕರ್ಗಳಿಂದ (Hacker) ಬಳಕೆದಾರರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಈ ಎನ್ಕ್ರಿಪ್ಶನ್ಗಳು ನೆರವಾಗುತ್ತವೆ ಎಂದು ವಾಟ್ಸಪ್ ಭರವಸೆ ಒದಗಿಸಿದೆ. ಅದಾಗ್ಯೂ ನಿಮ್ಮ ಗೌಪ್ಯತೆಯನ್ನು ಬೇಧಿಸಲು ಹ್ಯಾಕರ್ಗಳು ಇನ್ನು ಕೆಲವೊಂದು ವಿಧಾನಗಳನ್ನು ಪ್ರಯತ್ನಿಸುವ ಅವಕಾಶವಿರುತ್ತದೆ.
ಹಾಗಿದ್ದರೆ ನಿಮ್ಮ ಗೌಪ್ಯತೆಗೆ ಖಾಸಗೀತನಕ್ಕೆ ಹಾನಿಯುಂಟಾಗುತ್ತಿದೆ ಎಂಬುದನ್ನು ಅರಿತುಕೊಳ್ಳುವುದು ಹೇಗೆ ತಿಳಿದುಕೊಳ್ಳೋಣ.
ಯಾರಾದರೂ ನಿಮ್ಮ ಚಾಟ್ ಅನ್ನು ಓದುತ್ತಿದ್ದರೆ ಈ ಫೀಚರ್ ಬಳಸಿ
ಬೇರೆ ಯಾರೋ ನಿಮ್ಮ ವಾಟ್ಸಪ್ ಸಂವಾದಗಳನ್ನು ಓದುತ್ತಿದ್ದಾರೆ ಎಂದು ನಿಮಗನ್ನಿಸಿದರೆ ಕಂಪನಿ ಇದಕ್ಕಾಗಿ ಒದಗಿಸಿರುವ ಫೀಚರ್ ಅನ್ನು ಬಳಸಿ. ಚೆಕ್ಮಾರ್ಕ್ ವ್ಯವಸ್ಥೆಯನ್ನು ಬಳಸಿ ಇದನ್ನು ಕಂಡುಹಿಡಿಯಬಹುದು. ನೀವು ಕಳುಹಿಸುವ ಪ್ರತಿ ಸಂದೇಶವು ಬೇರೆ ಬೇರೆ ಅರ್ಥಗಳನ್ನು ಹೊಂದಿರುವ ಚೆಕ್ ಮಾರ್ಕ್ಗಳನ್ನು ನೋಡುತ್ತೀರಿ.
ಸಂದೇಶದ ಪಕ್ಕದಲ್ಲಿ ಒಂದು ಬೂದು ಬಣ್ಣದ ಚೆಕ್ಮಾರ್ಕ್ ಅನ್ನು ನೀವು ನೋಡಿದರೆ, ನಿಮ್ಮ ಸಂದೇಶವನ್ನು ಕಳುಹಿಸಲಾಗಿದೆ ಎಂದರ್ಥ, ಆದರೆ ಅದು ಡೆಲಿವರಿಯಾಗಿಲ್ಲ ಎಂದರ್ಥವಾಗಿದೆ. ಸ್ವೀಕರಿಸುವವರ ಇಂಟರ್ನೆಟ್ ಆಫ್ ಆಗಿದ್ದರೆ ಅಥವಾ ಯಾವುದೇ ಸಿಗ್ನಲ್ ಇಲ್ಲದಿದ್ದರೆ ಇದು ಸಂಭವಿಸಬಹುದು.
ಸಂದೇಶದ ಪಕ್ಕದಲ್ಲಿ ನೀವು ಎರಡು ಬೂದು ಚೆಕ್ಮಾರ್ಕ್ಗಳನ್ನು ನೋಡಿದರೆ, ನಿಮ್ಮ ಸಂದೇಶವನ್ನು ಸ್ವೀಕರಿಸುವವರಿಗೆ ಯಶಸ್ವಿಯಾಗಿ ತಲುಪಿಸಲಾಗಿದೆ ಎಂದರ್ಥ.
ಸಂದೇಶದ ಪಕ್ಕದಲ್ಲಿ ನೀವು ಎರಡು ನೀಲಿ ಚೆಕ್ಮಾರ್ಕ್ಗಳನ್ನು ನೋಡಿದರೆ, ಸ್ವೀಕರಿಸುವವರು ಅದನ್ನು ಓದಿದ್ದಾರೆ ಎಂದರ್ಥ. ಗುಂಪು ಚಾಟ್ನಲ್ಲಿದ್ದರೆ, ಎಲ್ಲಾ ಸದಸ್ಯರು ಸಂದೇಶವನ್ನು ಓದಿದಾಗ ಮಾತ್ರ ನೀವು ಎರಡು ನೀಲಿ ಚೆಕ್ಮಾರ್ಕ್ಗಳನ್ನು ನೋಡುತ್ತೀರಿ. ಅಲ್ಲಿಯವರೆಗೆ ಸಂದೇಶದ ಪಕ್ಕದಲ್ಲಿ ಬೂದು ಬಣ್ಣದ ಟಿಕ್ ಮಾರ್ಕ್ ಮಾತ್ರ ಇರುತ್ತದೆ.
ಮೆಸೇಜ್ ಮಾಹಿತಿಯನ್ನು ಪರಿಶೀಲಿಸಿ
ನಿಮ್ಮ ಮೆಸೇಜ್ ಅನ್ನು ಯಾರಾದರೂ ಓದುತ್ತಿದ್ದಾರೆಯೇ ಎಂಬುದನ್ನು ಗಮನಿಸಬಹುದು. ಮೆಸೇಜ್ ಆಯ್ಕೆಮಾಡಿ ಮೇಲ್ಭಾಗದ ಬಲಮೂಲೆಯಲ್ಲಿರುವ ಮೂರು ಐಕಾನ್ಗಳನ್ನು ಸ್ಪರ್ಶಿಸಿ ಮಾಹಿತಿ ಟ್ಯಾಪ್ ಮಾಡಿ. ಯಾವಾಗ ಮೆಸೇಜ್ ಅನ್ನು ಡೆಲಿವರಿ ಮಾಡಲಾಗಿದೆ ಹಾಗೂ ಓದಲಾಗಿದೆ ಎಂಬುದನ್ನು ಅರಿತುಕೊಳ್ಳಬಹುದು.
ವಾಟ್ಸಪ್ ಲಿಂಕ್
ವಾಟ್ಸಪ್ ಲಿಂಕ್ ಫೀಚರ್ ಹೆಚ್ಚುವರಿ ಡಿವೈಸ್ಗಳಿಗೆ ವಾಟ್ಸ್ಆ್ಯಪ್ ಬಳಕೆಯನ್ನು ಸಕ್ರಿಯಗೊಳಿಸುತ್ತದೆ. ಪ್ರೈಮರಿ ವಾಟ್ಸಪ್ ಚಾಟ್ಗಳನ್ನು ಓದಲು ಬಳಕೆದಾರರು ಇದನ್ನು ಬಳಸಬಹುದು. ಸ್ಕ್ಯಾಮರ್ಗಳು ತಮ್ಮ ಅನುಕೂಲಕ್ಕೆ ಈ ಫೀಚರ್ ಅನ್ನು ಬಳಸಿಕೊಳ್ಳಬಹುದು. ವಾಟ್ಸಪ್ ಲಿಂಕ್ ಫೀಚರ್ ಬಳಸಿಕೊಂಡು ಸ್ಕ್ಯಾಮರ್ಗಳು ಚಾಟ್ ಅನ್ನು ಓದುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: Twitter: ಸರ್ಚ್ ಆಪ್ಶನ್ ಸರಿಪಡಿಸಲು ಎಲಾನ್ ಮಸ್ಕ್ ನೇಮಿಸಿಕೊಂಡದ್ದು ಯಾರನ್ನು ಗೊತ್ತಾ?
ನಿಮ್ಮ ಚಾಟ್ ಅನ್ನು ಸ್ಕ್ಯಾಮರ್ಗಳು ಹೇಗೆ ಓದಬಹುದು
ನಿಮ್ಮ ಖಾಸಗಿ ಚಾಟ್ಗಳನ್ನು ಓದಲು ಸ್ಕ್ಯಾಮರ್ಗಳು ವಾಟ್ಸಪ್ ಲಿಂಕ್ ಫೀಚರ್ ಬಳಸಬಹುದು. ನೀವು ಕೂಡ ಇದನ್ನು ಪರಿಶೀಲಿಸಬಹುದು ಇದಕ್ಕಾಗಿ ಎಡಭಾಗದ ಮೂಲೆಯಲ್ಲಿರುವ ಮೂರು ಡಾಟ್ಗಳನ್ನು ಕ್ಲಿಕ್ ಮಾಡಬೇಕು.
ಲಿಂಕ್ ಆಗಿರುವ ಡಿವೈಸ್ಗಳನ್ನು ಪರಿಶೀಲಿಸಿ
ಲಿಂಕ್ ಆಗಿರುವ ಡಿವೈಸ್ಗಳ ಆಯ್ಕೆಯನ್ನು ನೀವು ಆರಿಸಬೇಕು. ನಿಮ್ಮ ವಾಟ್ಸಪ್ ಸಂಪರ್ಕಗೊಂಡಿರುವ ಸಾಧನದ ಮಾಹಿತಿ ನಿಮಗೆ ದೊರೆಯುತ್ತದೆ. ಗುರುತಿಸದೇ ಇರುವ ಬ್ರೌಸರ್ ಅಥವಾ ಡಿವೈಸ್ ನಿಮಗೆ ಕಂಡುಬಂದಲ್ಲಿ ನೀವು ಅದನ್ನು ತೆಗೆದುಹಾಕಬಹುದು.
ದೋಷಪೂರಿತ ಡಿವೈಸ್ಗಳನ್ನು ತೆಗೆದುಹಾಕಿ
ಹೀಗೆ ಮಾಡಲು, ನೀವು ಕಂಪ್ಯೂಟರ್ ಅಥವಾ ಬ್ರೌಸರ್ ಅನ್ನು ಆಯ್ಕೆಮಾಡಬೇಕು ತದನಂತರ ಡಿಲೀಟ್ ಆಪ್ಶನ್ ಅನ್ನು ಆರಿಸಬೇಕು. ನಿಮಗೆ ಇನ್ನಷ್ಟು ಸುರಕ್ಷತೆ ಬೇಕು ಎಂದಾದಲ್ಲಿ, ಬಿಲ್ಟ್-ಇನ್ ಆ್ಯಪ್ ಲಾಕ್ ಬಳಸಿ ವಾಟ್ಸಪ್ ಅನ್ನು ಲಾಕ್ ಮಾಡಬಹುದು. ಹೆಚ್ಚುವರಿಯಾಗಿ, ಟು-ಫ್ಯಾಕ್ಟರ್ ಸೆಕ್ಯುರಿಟಿ ಕೋಡ್ಗಳನ್ನು ನೀವು ಬಳಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ