ಒಂದು ಐಫೋನ್ ಮಾರಾಟದಿಂದ ಆ್ಯಪಲ್ ಸಂಸ್ಥೆಗೆ ಸಿಗುವ ಲಾಭ ಎಷ್ಟು ಗೊತ್ತಾ?


Updated:December 29, 2017, 5:03 PM IST
ಒಂದು ಐಫೋನ್ ಮಾರಾಟದಿಂದ ಆ್ಯಪಲ್ ಸಂಸ್ಥೆಗೆ ಸಿಗುವ ಲಾಭ ಎಷ್ಟು ಗೊತ್ತಾ?

Updated: December 29, 2017, 5:03 PM IST
ನವದೆಹಲಿ: ಬೇರೆ ಸ್ಮಾರ್ಟ್’ಫೋನ್’ಗಳಿಗೆ ಹೋಲಿಸಿದರೆ ಐಫೋನ್ ಸ್ವಲ್ಪ ವಿಭಿನ್ನ. ಅಂತೆಯೇ ಬೇರೆ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳಿಗೆ ಆ್ಯಪಲ್ ಸಂಸ್ಥೆ ಕೂಡ ವಿಭಿನ್ನವೇ. ಬೇರೆ ಕಂಪನಿಗಳು ಕಡಿಮೆ ಮಾರ್ಜಿನ್ ಲಾಭದಲ್ಲಿ ಮಾರುಕಟ್ಟೆಗೆ ಅಡಿ ಇಡುತ್ತವೆ. ಆದರೆ, ಆ್ಯಪಲ್ ಮಾತ್ರ ಲಾಭದ ವಿಚಾರದಲ್ಲಿ ರಾಜಿಯೇ ಮಾಡಿಕೊಳ್ಳೋದಿಲ್ಲ. ತನ್ನ ಪ್ರತಿಸ್ಪರ್ಧಿಗಳಿಗಿಂತ ಐದಾರು ಪಟ್ಟು ಹೆಚ್ಚು ಲಾಭದ ಮಾರ್ಜಿನ್ ಹೊಂದಿರುತ್ತದೆ. ವರದಿಯೊಂದರ ಪ್ರಕಾರ, ಇದೇ ಜುಲೈ-ಸೆಪ್ಟಂಬರ್ ತ್ರೈಮಾಸಿಕ ಅವಧಿಯಲ್ಲಿ ಆ್ಯಪಲ್ ಮಾರಾಟ ಮಾಡಿದ ಪ್ರತೀ ಒಂದು ಹ್ಯಾಂಡ್’ಸೆಟ್’ನ ಮೇಲೆ ಸರಾಸರಿ 151 ಡಾಲರ್ (ಸಮಾರು 10 ಸಾವಿರ ರೂ.) ಲಾಭದ ಮಾರ್ಜಿನ್ ಹೊಂದಿದೆಯಂತೆ. ಆ್ಯಪಲ್’ನ ಪ್ರಮುಖ ಪ್ರತಿಸ್ಪರ್ಧಿ ಸ್ಯಾಮ್ಸುಂಗ್ ಇದೇ ಅವಧಿಯಲ್ಲಿ ತನ್ನೊಂದು ಹ್ಯಾಂಡ್’ಸೆಟ್’ನಿಂದ ಗಳಿಸಿದ ಲಾಭ ಕೇವಲ 31 ಡಾಲರ್. ಹೀಗಂತ ಕೌಂಟರ್’ಪಾಯಿಂಟ್ ಎಂಬ ರೀಸರ್ಚ್ ಸಂಸ್ಥೆ ವರದಿ ಮಾಡಿದೆ. ಇನ್ನು, ಚೀನೀ ಸ್ಮಾರ್ಟ್’ಫೋನ್’ಗಳಾದ ಯುವಾವೇ, ಒಪ್ಪೋ, ವಿವೋ ಮೊದಲಾದವುಗಳ ಲಾಭದ ಮಾರ್ಜಿನ್ ಸ್ಯಾಮ್ಸುಂಗಿಗಿಂತಲೂ ಕಡಿಮೆಯೇ ಇದೆ. ಭಾರತದ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ಕೂತುಬಿಟ್ಟಿರುವ ಕ್ಸಿಯಾವೋಮಿ ಇನ್ನೂ ಕಡಿಮೆ ಮಾರ್ಜಿನ್ ಹೊಂದಿರುವುದು ವಿಶೇಷ.
First published:December 29, 2017
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ