ಶೇರ್​ಇಟ್​ಗೆ ಸೆಡ್ಡು ಹೊಡೆದಿರುವ ಗೂಗಲ್​ ಫೈಲ್​ ಗೋ ಬಗ್ಗೆ ನಿಮಗೆಷ್ಟು ಗೊತ್ತು?


Updated:July 3, 2018, 4:59 PM IST
ಶೇರ್​ಇಟ್​ಗೆ ಸೆಡ್ಡು ಹೊಡೆದಿರುವ ಗೂಗಲ್​ ಫೈಲ್​ ಗೋ ಬಗ್ಗೆ ನಿಮಗೆಷ್ಟು ಗೊತ್ತು?
PC: google

Updated: July 3, 2018, 4:59 PM IST
ನಿಮ್ಮ ಮೊಬೈಲ್​ನಲ್ಲಿರುವ ವಿಡಿಯೋ ಅಥವಾ ಇನ್ಯಾವುದೇ ಫೈಲ್​ಗಳನ್ನು ಮತ್ತೊಂದು ಮೊಬೈಲ್​ಗೆ ಶೇರ್​ ಮಾಡಬೇಕಾದರೆ ನೀವು ಮೊದಲು ಹುಡುಕುವುದು ಶೇರ್​ ಇಟ್​ ಎಂಬ ಆ್ಯಪ್​. ಆದರೆ ಗೂಗಲ್​ ನವರು ಬಿಡುಗಡೆ ಮಾಡಿರುವ ಫೈಲ್ ಗೊ ಎಂಬ ಆ್ಯಪ್​ನಲ್ಲಿ ಶೇರ್​ಇಟ್​ಗಿಂತಲೂ ಅಧಿಕ ವೇಗದಲ್ಲಿ ಫೈಲ್​ನ್ನು ಒಂದು ಮೊಬೈಲ್​ನಿಂದ ಮತ್ತೊಂದು ಮೊಬೈಲ್​ಗೆ ಶೇರ್​ ಮಾಡಬಹುದು.

ಹೆಚ್ಚಾಗಿ ಎಲ್ಲರೂ ಶೇರ್​ ಇಟ್​ ಆ್ಯಪ್​​ನ್ನೇ ಬಳಸುತ್ತಾರೆ, ಇದಕ್ಕೆ ಸೆಡ್ಡು ಹೊಡೆಯಲು ಗೂಗಲ್​ ಫೈಲ್​ ಗೋ ಆ್ಯಪ್​ ಹೊರ ತಂದಿತ್ತು. ಆದರೆ ಮೊದಮೊದಲು ಹೆಚ್ಚು ಫೇಮಸ್​ ಆಗದೇ ಇದ್ದರೂ ಇತ್ತೀಚೆಗೆ ಗೂಗಲ್​ ಹೊಸ ಅಪ್​ಡೇಟ್​ ಬಿಟ್ಟಿದ್ದು ಇದು ಶೇರ್​ಇಟ್​ಗೆ ಹೊಡೆತ ನೀಡಬಹುದು ಎನ್ನಲಾಗಿದೆ.

ಏನಿದು ಗೂಗಲ್​ ಫೈಲ್​ಗೊ ?
ಫೈಲ್ ಗೋ ನಿಮ್ಮ ಮೊಬೈಲ್ ನಲ್ಲಿರುವ ಫೈಲ್ ಗಳನ್ನು ವೇಗವಾಗಿ ಹುಡುಕಲು ಮತ್ತು ಆಫ್ಲೈನ್ ನಲ್ಲಿ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಲು ಸಹಾಯ ಮಾಡುತ್ತದೆ. ಈ ಆ್ಯಪ್​ನಲ್ಲಿ 125Mbps ವೇಗವಾಗಿ ನೀವು ಫೈಲ್​ಗಳನ್ನು ಶೇರ್ ಮಾಡಬಹುದು.

ಮತ್ತೊಂದು ಅಂಶವೆಂದರೆ ನಿಮ್ಮ ಮೊಬೈಲ್​ನಲ್ಲಿ ಈವರೆಗೆ ಉಪಯೋಗಿಸದ ಆ್ಯಪ್ಲಿಕೇಶನ್​ಗಳ ಬಗ್ಗೆ ತಿಳಿಸುತ್ತದೆ, ಅಲ್ಲದೇ ಈ ಆ್ಯಪ್ಲಿಕೇಶನ್​ಗಳನ್ನು ಅನ್ ಇನ್ಸ್ಟಾಲ್ ಮಾಡಲು ಸೂಚಿಸುತ್ತದೆ.

ಗೂಗಲ್​ ಅಪ್​ಡೇಟ್ಸ್​ನಲ್ಲಿ ಏನಿದೆ?
ಆ್ಯಂಡ್ರಾಯ್ಡ್​ ಲಾಲಿಪಪ್​ ಮೇಲ್ಪಟ್ಟ ಎಲ್ಲಾ ಆಪರೇಟಿಂಗ್​ ಸಿಸ್ಟಂಗಳಿಗೆ ಗೂಗಲ್​ ಹೊಸ ಅಪ್​ಡೇಟ್​ ಬಿಟ್ಟಿದೆ. ಇದರ ಮೂಲಕ ನೀವು ಈ ವರೆಗೆ ಶೇರ್​ ಮಾಡುತ್ತಿದ್ದ ಫೈಲ್​ಗಳನ್ನು 4 ಪಟ್ಟು ಅಧಿಕ ವೇಗದಲ್ಲಿ ಶೇರ್​ ಮಾಡಬಹುದು. ಅದೂ ಕೂಡಾ ಇಂಟರ್​ನೆಟ್​ ಇರದೆಯೇ ಬಳಸಿಕೊಳ್ಲಬಹುದು.
Loading...

ಹೇಗೆ ಕಾರ್ಯ ನಿರ್ವಹಿಸುತ್ತದೆ?
ಈ ಫೈಲ್​ ಗೋ ಆ್ಯಪ್​ ನಿಮ್ಮ ಮೊಬೈಲ್​ನಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ಬ್ಲೂಟೂತ್​, ಅಥವಾ ವೈಫೈ ಡಿವೈಸ್​ಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಗಿರುವ ಶೇರ್​ ಇಟ್​ ವೈಫೈ ಹಾಟ್​ಸ್ಪಾಟ್​ ಬಳಕೆ ಮಾಡಿಕೊಂಡು ಫೈಲ್​ಗಳನ್ನು ಸಾಗಾಟ ಮಾಡುತ್ತದೆ.
First published:July 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...