ಹೆಸರು ಬದಲಿಸಿದ ಪತಂಜಲಿಯ 'ಕಿಂಬೋ' ಆ್ಯಪ್..?

news18
Updated:July 16, 2018, 10:42 PM IST
ಹೆಸರು ಬದಲಿಸಿದ ಪತಂಜಲಿಯ 'ಕಿಂಬೋ' ಆ್ಯಪ್..?
news18
Updated: July 16, 2018, 10:42 PM IST
-ನ್ಯೂಸ್ 18 ಕನ್ನಡ

ಯೋಗ ಗುರು ಬಾಬಾ ರಾಮ್​ದೇವ್ ಒಡೆತನದ ಪತಂಜಲಿ ಕಂಪನಿ ಮೇ ತಿಂಗಳಲ್ಲಿ 'ಕಿಂಬೋ' ಎನ್ನುವ ಮೆಸೇಜಿಂಗ್ ಆ್ಯಪ್​ ಒಂದನ್ನು ಪರಿಚಯಿಸಿತ್ತು. ಆದರೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಆ್ಯಪ್​ ಅನ್ನು ಪ್ಲೇ ಸ್ಟೋರ್​ನಿಂದ ತೆಗೆದು ಹಾಕಲಾಯಿತು. ಇದಕ್ಕೆ ಮುಖ್ಯ ಕಾರಣ ಈ ಆ್ಯಪ್​ ಅಮೆರಿಕ ಮೂಲದ ಫ್ರಿಮೊಂಟ್ ಕಂಪನಿಯ 'ಬೋಲೊ' ಆ್ಯಪ್​ನ ನಕಲು ಎಂದು ಮೂಲ ಕಂಪನಿ ವಾದಿಸಿತ್ತು.

ಇದೀಗ 'ಕಿಂಬೋ' ಅಪ್ಲಿಕೇಶನ್ 'Bolo' ಹೆಸರಿನ ಮೆಸೆಂಜರ್​ನಿಂದ ಅಧಿಕೃತವಾಗಿ ನವೀಕರಣಗೊಂಡಿದೆ. ಕಿಂಬೋ ಆ್ಯಪ್​ ಇದ್ದ ಜಾಗದಲ್ಲಿ ಬೋಲೋ ಅಪ್ಡೇಟ್​ ಮಾಡಲಾಗಿದೆ. ಆದರೆ ಕಿಂಬೋ ಆ್ಯಪ್​ನ ಲೇಟೆಸ್ಟ್​ ಎಡಿಷನ್ ಬೋಲೋ ಎಂಬ ಸುದ್ದಿಯನ್ನು ಪತಂಜಲಿಯ ವಕ್ತಾರ ತಿಜಾರವಾಲ ತಳ್ಳಿ ಹಾಕಿದ್ದಾರೆ. ಅಲ್ಲದೆ ಪತಂಜಲಿಯ ಹೊಸ ಆ್ಯಪ್​ನ್ನು ಶೀಘ್ರದಲ್ಲೇ ಆಚಾರ್ಯ ಬಾಲಕೃಷ್ಣ ಮತ್ತು ಬಾಬಾ ರಾಮ್​ದೇವ್ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಬೋಲೋ ಆ್ಯಪ್​ ತಯಾರಿಸಿದ ಅದಿತಿ ಕಮಲ್ ಕೂಡ ಭಾರತೀಯರಾಗಿದ್ದು, ಸದ್ಯ ಇದನ್ನು ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಮಾತ್ರ ಡೌನ್​ಲೋಡ್​ ಮಾಡಬಹುದಾಗಿದೆ. ಅಲ್ಲದೆ ಶೀಘ್ರದಲ್ಲೇ iOS ನಲ್ಲೂ ಲಭ್ಯವಾಗಲಿದ್ದು, ಇದನ್ನು ಭಾರತೀಯರಿಗಾಗಿ ವಿಶೇಷವಾಗಿ ತಯಾರಿಸಲಾಗಿದೆ ಎಂದು ಅದಿತಿ ತಿಳಿಸಿದ್ದಾರೆ.

Bolo ಆ್ಯಪ್​ನ ಫೀಚರ್ಸ್​ ಕೂಡ ವಾಟ್ಸಪ್​ ಅನ್ನು ಹೋಲುತ್ತಿದ್ದು, ಮುಂದಿನ ದಿನಗಳಲ್ಲಿ ಭಾರತದಲ್ಲಿ WhatsApp ಗೆ ಪ್ರಮುಖ ಪ್ರತಿಸ್ಪರ್ಧಿಯಾಗುವ ನಿರೀಕ್ಷೆಯಿದೆ. ಈ ಆ್ಯಪನ್ನು ಓಪನ್ ಮಾಡುತ್ತಿದ್ದಂತೆ Chats, Contacts ಮತ್ತು Activity ಎಂಬ ಮೂರು ಆಯ್ಕೆಗಳ ಐಕಾನ್​ಗಳನ್ನು ನೀಡಲಾಗಿದೆ.

ವಾಟ್ಸಪ್​ನಲ್ಲಿರುವಂತೆ ಈ ಆ್ಯಪ್​ನಲ್ಲೂ ಮೆಸೇಜ್, ಫೋಟೋ ಮತ್ತು ಆಡಿಯೋ ಕ್ಲಿಪ್​ಗಳನ್ನು  ಶೇರ್ ಮಾಡಬಹುದಾಗಿದ್ದು, ವಿಡಿಯೋ ಕರೆ  ಮಾಡುವ ಆಯ್ಕೆ ಇದರಲ್ಲಿದೆ. ಈ ಅಪ್ಲಿಕೇಶನ್ ಸಂಪೂರ್ಣ ಸುರಕ್ಷಿತ ಮತ್ತು ಇದರಲ್ಲಿ ಯಾವುದೇ ಜಾಹೀರಾತುಗಳನ್ನು ನೀಡುವುದಿಲ್ಲ ಎಂದು Bolo ಆ್ಯಪ್ ತಯಾರಕರು ತಿಳಿಸಿದ್ದಾರೆ.
First published:July 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...