Kids Smartwatches: ಮಕ್ಕಳು ಬಳಸಬಹುದಾದ ಟಾಪ್‌ 5 ಸ್ಮಾರ್ಟ್​​ವಾಚ್‍ಗಳ ಪಟ್ಟಿ ಇಲ್ಲಿದೆ..

Smartwatch: ಮಕ್ಕಳಿಗಾಗಿಯೇ ತಯಾರಾದ ಕೆಲವು ಅತ್ಯುತ್ತಮ ಸ್ಮಾರ್ಟ್ ವಾಚ್ ಮತ್ತು ಇತರ ಧರಿಸಬಹುದಾದ ವಸ್ತುಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

Kids Smartwatches

Kids Smartwatches

  • Share this:
ಸ್ಮಾರ್ಟ್ ವಾಚ್‍ಗಳು ಮತ್ತು ಅಂತದ್ದೇ ಧರಿಸಬಹುದಾದ ಸಾಧನಗಳು ಈ ದಿನಗಳಲ್ಲಿ ಅತ್ಯಂತ ಸಾಮಾನ್ಯವಾಗಿವೆ. ಅದರ ಬಳಕೆಯು , ಪ್ರಯೋಜನದಿಂದ ಹಿಡಿದು ಆರೋಗ್ಯ ಕೇಂದ್ರಿತ ಲಕ್ಷಣಗಳವರೆಗೆ ಇರುತ್ತದೆ. ಪ್ರತಿಯೊಬ್ಬರೂ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ವಾಚ್ ಮತ್ತು ಫಿಟ್‍ನೆಸ್ ಟ್ರ್ಯಾಕರ್‌ಗಳ ಬಳಕೆ ಅಳವಡಿಸಿಕೊಂಡಿದ್ದಾರೆ ಮತ್ತು ಕೆಲವು ಸಂದರ್ಭಗಳಲ್ಲಿ ಅವು ಸಾಕಷ್ಟು ಪ್ರಯೋಜನಕಾರಿಯಾಗಿ ಮಾತ್ರವಲ್ಲ, ಜೀವರಕ್ಷಕವಾಗಿಯೂ ಉಪಯೋಗಕ್ಕೆ ಬಂದಿವೆ. ಇದೇ ಕಾರಣಕ್ಕಾಗಿ ಸ್ಮಾರ್ಟ್ ವಾಚ್ ಮತ್ತು ಫಿಟ್‍ನೆಸ್ ಟ್ರ್ಯಾಕರ್‌ಗಳು ಯುವ ಜನಾಂಗಕ್ಕೂ ಅತ್ಯಂತ ಉಪಯೋಗಕಾರಿ ಆಗಬಲ್ಲವು ಎನ್ನಬಹುದು.

ಮಕ್ಕಳಿಗಾಗಿಯೇ ತಯಾರಾದ ಕೆಲವು ಅತ್ಯುತ್ತಮ ಸ್ಮಾರ್ಟ್ ವಾಚ್ ಮತ್ತು ಇತರ ಧರಿಸಬಹುದಾದ ವಸ್ತುಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

1. WatchOut Next-Gen Kids Watch: ಮಕ್ಕಳಿಗೆಂದೇ ವಿಶೇಷವಾಗಿ ತಯಾರಿಸಲಾಗಿರುವ ವಾಚ್‌ಔಟ್‌ ನೆಕ್ಸ್ಟ್‌ಜೆನ್ ಕಿಡ್ಸ್ ವಾಚ್‍ನ ಬೆಲೆ ಭಾರತದಲ್ಲಿ 10,999 ರೂ.ಗಳು. ಮತ್ತು ಅದನ್ನು WatchOutನ ವೆಬ್‍ಸೈಟ್‍ನಲ್ಲಿ ಖರೀದಿಸಬಹುದಾಗಿದೆ. ಸ್ಪ್ಲಾಶ್‍ಪ್ರೂಫ್ ವಿನ್ಯಾಸ ಹೊಂದಿರುವ ಈ ವಾಚ್‍ನಲ್ಲಿ ಒಂದು ಫ್ರಂಟ್ ಕ್ಯಾಮರಾ ಮತ್ತು 580 ಎಂಎಎಚ್ ಬ್ಯಾಟರಿ ಸೌಲಭ್ಯ ಇದೆ.

2. Fitbit Ace 2: ಈ ಫಿಟ್‍ನೆಸ್ ಟ್ರ್ಯಾಕರ್‌ ಬೆಲೆ 11,939 ರೂ.ಗಳು. ಫಿಟ್‍ಬಿಟ್ ಏಸ್ 2 ಫಿಟ್‍ನೆಸ್ ಟ್ರ್ಯಾಕರ್ 5 ದಿನಗಳವರೆಗಿನ ಬ್ಯಾಟರಿ ಅವಧಿ ಹೊಂದಿದ್ದು, ಸ್ವಿಮ್ ಫ್ರೂಫ್ ಆಗಿದೆ. ಹಾಗಾಗಿ, ಮಕ್ಕಳು ಯಾವುದೇ ಚಿಂತೆಯಿಲ್ಲದೆ ಫಿಟ್‍ಬಿಟ್ ಏಸ್ 2 ಅನ್ನು ಪೂಲ್ ಪಾರ್ಟಿಗಳಿಗೆ ಹಾಕಿಕೊಂಡು ಹೋಗಬಹುದು. ಸಿಲಿಕಾನ್ ಕವಚದೊಂದಿಗೆ ಬರುವ ಫಿಟ್‍ಬಿಟ್ ಏಸ್ 2 ಅನ್ನು ಅಮೆಜಾನ್ ಇಂಡಿಯಾ ವೆಬ್‍ಸೈಟ್‍ನಲ್ಲೂ ಖರೀದಿಸಬಹುದಾಗಿದೆ.

3. Pebble Cosmos: ಪೆಬೆಲ್ ಕಾಸ್ಮೋಸ್‍ನ ಬೆಲೆ 4,299 ರೂ. ಮತ್ತು ಇದನ್ನು ಅಮೆಜಾನ್ ವೆಬ್‍ಸೈಟ್‍ನಲ್ಲಿ ಖರೀದಿಸಬಹುದು. ಈ ಸ್ಮಾರ್ಟ್‍ವಾಚ್ ಎಸ್‍ಪಿಒ2 ಸೆನ್ಸಾರ್ ಮತ್ತು ಇತರ 24-ಗಂಟೆಗಳ ಆರೋಗ್ಯ ಟ್ರ್ಯಾಕಿಂಗ್ ಫೀಚರ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್‍ವಾಚ್‍ನಲ್ಲಿ 1,7 ಇಂಚ್ ಪರದೆ ಇದ್ದು, ನಡಿಗೆ, ಸೈಕ್ಲಿಂಗ್, ಓಟ, ಸ್ಕಿಪ್ಪಿಂಗ್, ಬ್ಯಾಡ್‍ಮಿಂಟನ್, ಬಾಸ್ಕೆಟ್‍ಬಾಲ್, ಫುಟ್‍ಬಾಲ್ ಮತ್ತಿತರ ಬಹಳಷ್ಟು ಸ್ಪೋರ್ಟ್ಸ್‌ ಮೋಡ್‍ಗಳಿಗೆ ಸಪೋರ್ಟ್ ಮಾಡುತ್ತದೆ.

4. Boat Storm : ಬೋಟ್‍ನ ಅಧಿಕೃತ ವೆಬ್‍ಸೈಟ್‍ನಲ್ಲಿ ಇದರ ಬೆಲೆ 2,999 ರೂ., ಬೋಟ್ ಸ್ಟಾರ್ಮ್ ಒಂದು 210 ಎಮ್‍ಎಎಚ್ ಬ್ಯಾಟರಿ ಹೊಂದಿದ್ದು, ಸಂಪರ್ಕಕ್ಕೆ 4.2 ಬ್ಲೂಟೂತ್ ಬೆಂಬಲಿತವಾಗಿದೆ. ಇದು 5ಎಟಿಎಂ ವಾಟರ್ ಪ್ರೂಫಿಂಗ್ ಹೊಂದಿದ್ದು, ಇದರ 210 ಎಮ್‍ಎಹೆಚ್ ಬ್ಯಾಟರಿ 10 ದಿನಗಳ ಅವಧಿಯವರೆಗೆ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಲಾಗುತ್ತದೆ.

Read Also⇒ WhatsApp: ಫೋಟೋವನ್ನ ಸ್ಟಿಕ್ಕರನ್ನಾಗಿ ಪರಿವರ್ತಿಸುವ ವೈಶಿಷ್ಟ್ಯ ಪರಿಚಯಿಸಲಿರುವ ವಾಟ್ಸ್ಆ್ಯಪ್!

5. GOQii Smart Vital Junior: GOQii ಸ್ಮಾರ್ಟ್ ವೈಟಲ್ ಜೂನಿಯರ್ ಸ್ಮಾರ್ಟ್ ವಾಚ್‍ನ ಬೆಲೆ 4,899 ರೂ. ಮತ್ತು ಅದು ಅಮೆಜಾನ್‍ನಲ್ಲಿ ಖರೀದಿಗೆ ಲಭ್ಯವಿದೆ. ಅದರಲ್ಲಿ ಎಸ್‍ಪಿಒ2 ಸೆನ್ಸಾರ್ , ದೇಹದ ಉಷ್ಣತೆ ಅಳೆಯುವ ಮಾನಿಟರ್ ಮತ್ತಿತರ ಫೀಚರ್‌ಗಳಿವೆ. ಈ ಸ್ಮಾರ್ಟ್ ವಾಚ್‍ ಐಪಿ68 ನೀರು ಮತ್ತು ಧೂಳಿನ ಕಣಗಳಿಂದ ರಕ್ಷಿಸುವ ವ್ಯವಸ್ಥೆ ಹೊಂದಿದ್ದು, ಇದರ ಬ್ಯಾಟರಿ 7 ದಿನಗಳವರೆಗೆ ಬಾಳಿಕೆ ಬರುತ್ತದೆ.
First published: