ನೆರೆ ಸಂತ್ರಸ್ಥರ ಮೊಬೈಲ್​ಗೆ ಉಚಿತ ​ಸರ್ವಿಸ್​!


Updated:August 27, 2018, 2:17 PM IST
ನೆರೆ ಸಂತ್ರಸ್ಥರ ಮೊಬೈಲ್​ಗೆ ಉಚಿತ ​ಸರ್ವಿಸ್​!

Updated: August 27, 2018, 2:17 PM IST
ಕೇರಳ ನೆರೆ ಸಂತ್ರಸ್ಥರಿಗೆ ಸಾಕಷ್ಟು ಅಂತರಾಷ್ಟ್ರೀಯ ಸಂಸ್ಥೆಗಳು ಮುಂದಾಗಿದ್ದಾವೆ, ಪೇಟಿಎಂ, ಅಮೆಜಾನ್​, ಗೂಗಲ್​ ಹೀಗೆ ಸಾಕಷ್ಟು ಟೆಕ್​ ದೈತ್ಯ ಸಂಸ್ಥೆಗಳು ಸಹ ತಮ್ಮಿಂದಾಗುವ ಸಹಾಯ ಹಸ್ತ ಚಾಚಿವೆ.

ಇದೀಗ ವಿಶ್ವದಲ್ಲೇ ಅತ್ಯಂತ ಹೆಚ್ಚು ಮಾರಾಟವಾಗುವ ಮೊಬೈಲ್​ ಸಂಸ್ಥೆ ಹುವಾವೆ, ಕೇರಳ ನೆರೆ ಸಂತ್ರಸ್ಥರ ನೆರವಿಗೆ ದಾವಿಸಿದೆ. ನೆರೆ ಅವಘಡದಲ್ಲಿ ಹುವಾವೆ ಮತ್ತು ಹಾನರ್​ ಮೊಬೈಲ್​ ಸ್ಮಾರ್ಟ್​ಫೋನ್​ಗಳು ಕೆಟ್ಟು ಹೋಗಿದ್ದರೆ ಅವುಗಳನ್ನು ದುರಸ್ಥಿಯನ್ನು ಉಚಿತವಾಗಿ ಮಾಡಿಕೊಡುವುದಾಗಿ ಸಂಸ್ಥೆ ಹೇಳಿದೆ.

ಈ ತಿಂಗಳ ಅಂತ್ಯದದ ವರೆಗೂ ಕೇರಳದಲ್ಲಿರುವ ಹಾನರ್​ ಸಂಸ್ಥೆಯ ವಿಶೇಷ ಮಳಿಗೆಯಲ್ಲಿ ಉಚಿತ ಸರ್ವಿಸ್​ ಪಡೆಯಬಹುದು, ಇದರ ರಿಪೇರಿ ನಿರ್ವಹಣೆಗೆ ವಿಶೇಷ ತಾಂತ್ರಿಕ ತಂಡ ಕೂಡಾ ಕೇರಳಕ್ಕೆ ಆಗಮಿಸಿದೆ. ಈ ಆಫರ್​ ಕೇವಲ ನೀರಿನಿಂದ ಮೊಬೈಲ್​ ಹಾಳಾಗಿದ್ದರೆ ಅನ್ವಯವಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ