ಕೆಲ್ವಿನೇಟರ್, ಹೋಮ್ ಅಪ್ಲೈಯನ್ಸಸ್ ಕ್ಷೇತ್ರದಲ್ಲಿ ಖ್ಯಾತಿ ಪಡೆದಿರುವ ಸಂಸ್ಥೆ ಮತ್ತು ಈ ಬ್ರ್ಯಾಂಡ್ ನಂಬಿಕೆಗೆ, ಗುಣಮಟ್ಟಕ್ಕೆ, ದೀರ್ಘ ಬಾಳಿಕೆಗೆ ಹಾಗೂ ಕಾರ್ಯ ಕ್ಷಮತೆಗೆ ಇನ್ನೊಂದು ಹೆಸರು ಎಂದು ಹೇಳಬಹುದು. ಇದು ಒಂದು ವ್ಯಾಪಕ ಶ್ರೇಣಿಯ ಗ್ರಾಹಕ ಉಪಯೋಗಿ ಉತ್ಪನ್ನಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಇವುಗಳಲ್ಲಿ ಏರ್ ಕಂಡೀಶನರ್ಗಳು, ರೆಫ್ರಿಜಿರೇಟರ್ಗಳು, ವಾಶಿಂಗ್ ಮಷಿನ್ಗಳು ಮತ್ತು ಸಣ್ಣ ಪುಟ್ಟ ಗೃಹೋಪಯೋಗಿ ವಸ್ತುಗಳು ಸಹ ಇವೆ. ಪ್ರತಿಯೊಬ್ಬ ಗ್ರಾಹಕರ ಅಗತ್ಯಕ್ಕೆ ತಕ್ಕ ಹಾಗೆ ಈ ಉತ್ಪನ್ನಗಳು ರೆಗ್ಯೂಲರ್ನಿಂದ ಹಿಡಿದು ಪ್ರೀಮಿಯಂ ಶ್ರೇಣಿಯವರೆಗೆ ಲಭ್ಯವಿರುತ್ತವೆ.
ಈ ಬ್ರ್ಯಾಂಡ್ನ ಟ್ಯಾಗ್ಲೈನ್ ಸೂಚಿಸುವಂತೆ "ರೆಡಿ ಫಾರ್ ಎನಿಥಿಂಗ್"ಎಂಬ ಹಾಗೆಯೇ ಕೆಲ್ವಿನೇಟರ್ ಅಪ್ಲೈಯನ್ಸ್ಗಳನ್ನು ವಿಶ್ವಾಸಾರ್ಹತೆ ಮತ್ತು ಬಾಳಿಕೆಗೆ ಯಾವ ರೀತಿಯಲ್ಲೂ ಸಹ ಕುಂದು ಬರದಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಅಷ್ಟೇ ಅಲ್ಲದೆ ಭಾರತೀಯರ ಮನೆಗಳಲ್ಲಿ ಇದನ್ನು ಬಳಸುವ ಆಧುನಿಕತೆ ಹಾಗೂ ಆಧ್ಯತೆಗಳ ಆಧಾರದ ಮೇಲೆ ಇವುಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ.
ಕೆಲ್ವಿನೇಟರ್ ನಾವೀನ್ಯತೆ ವಿಚಾರದಲ್ಲಿ ಪ್ರಪಂಚ ಖ್ಯಾತಿಯನ್ನು ಪಡೆದಿರುವ ಸಂಸ್ಥೆಯಾಗಿದೆ. ಹೊಸ ಶ್ರೇಣಿಯ ಹೋಮ್ ಅಪ್ಲೈಯನ್ಸ್ಗಳು ಕೈಗೆಟುಕುವ ದರಗಳಲ್ಲಿ ಹೊಸ ಹೊಸ ಫೀಚರ್ಗಳನ್ನು ಗ್ರಾಹಕರಿಗೆ ಒದಗಿಸುವ ಕೆಲಸವನ್ನು ಮಾಡುತ್ತವೆ.
ಬನ್ನಿ ವಿಶೇಷವಾಗಿ ಗ್ರಾಹಕರಿಗೆ ಏನೇನು ದೊರೆಯುತ್ತವೆ ಎಂಬುದನ್ನು ನೋಡೋಣ:
· ಕೆಲ್ವಿನೇಟರ್ ಡೈರೆಕ್ಟ್ ಕೂಲ್- ಭಾರತದ ಮೊಟ್ಟ ಮೊದಲ ಸಿಂಗಲ್ ಡೋರ್ ಫ್ರಿಡ್ಜ್, ಫ್ರಂಟ್ ವಾಟರ್ ಡಿಸ್ಪೆನ್ಸರ್ ಜೊತೆಗೆ
· ಪ್ರಿಮಿಯಂ ಸೈಡ್-ಬೈ-ಸೈಡ್ ರೆಫ್ರಿಜಿರೇಟರ್ಗಳು ಗರಿಷ್ಠ ಮಟ್ಟದ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿವೆ
· ಎಸಿಗಳು 960 ಗಂಟೆಗಳ ನಾನ್-ಸ್ಟಾಪ್ ಕೂಲಿಂಗ್ ಅನ್ನು ನೀಡುತ್ತವೆ ಎಂದು ಪರೀಕ್ಷೆಯಿಂದ ದೃಢಪಟ್ಟಿದೆ
· "ಆ್ಯಡ್ ಗಾರ್ಮೆಂಟ್" ಎಂಬ ಫೀಚರ್ ಹೊಂದಿರುವ ಫ್ರಂಟ್ ಲೋಡ್ ವಾಶಿಂಗ್ ಮಷಿನ್ಗಳು - ಬಳಕೆದಾರರು ಒಗೆಯುವಿಕೆಯ ನಡುವೆಯೇ ಇನ್ನಷ್ಟು ಬಟ್ಟೆಗಳನ್ನು ಒಗೆಯಲು ಹಾಕಬಹುದಾದ ಸೌಲಭ್ಯವನ್ನು ನೀಡುತ್ತವೆ
· 5-ಸ್ಟಾರ್ ಸೆಮಿ ಆಟೋಮೆಟಿಕ್ ವಾಶಿಂಗ್ ಮಷಿನ್ಗಳು - ಇವು ಬಳಕೆದಾರರಿಗೆ ವಿದ್ಯುತ್ ಹಾಗೂ ನೀರಿನ ಬಳಕೆಯನ್ನು ಕಡಿಮೆ ಮಾಡುವಂತಹ ಅವಕಾಶವನ್ನು ಒದಗಿಸಿಕೊಡುತ್ತವೆ
ಕೆಲ್ವಿನೇಟರ್ ಅಪ್ಲೈಯನ್ಸ್ಗಳು ತನ್ನ ರೋಬಸ್ಟ್ ಪ್ಯಾನ್-ಇಂಡಿಯಾ ವಿತರಣೆ ನೆಟ್ವರ್ಕ್ ಮೂಲಕ ದೇಶದ ಎಲ್ಲೆಡೆ ಅಂದರೆ, ಹತ್ತಿರದ ಸ್ಟೋರ್ಗಳಿಂದ ಹಿಡಿದು, ದೊಡ್ಡ ಅಂಗಡಿಗಳು ಮತ್ತು ಆಧುನಿಕ ರಿಟೇಲ್ ಔಟ್ಲೆಟ್ಗಳವರೆಗೆ ಎಲ್ಲಾ ಕಡೆ ಲಭ್ಯವಿವೆ. ಗ್ರಾಹಕರು ತಮ್ಮ ಹತ್ತಿರದ ಎಲೆಕ್ಟ್ರಾನಿಕ್ ಸ್ಟೋರ್ ಅಥವಾ ಮುಂಚೂಣಿ ರಿಟೇಲರ್ಗಳ ವೆಬ್ಸೈಟ್ ಮೂಲಕ ಕೆಲ್ವಿನೇಟರ್ ಉತ್ಪನ್ನಗಳನ್ನು ಖರೀದಿಸಬಹುದು. ಈ ಹಬ್ಬದ ಸಂದರ್ಭದಲ್ಲಿ, ಗ್ರಾಹಕರು ಆಯ್ದ ಬ್ಯಾಂಕ್ಗಳಿಂದ ಕ್ಯಾಶ್ಬ್ಯಾಕ್ ಆಫರ್ಗಳನ್ನು ಸಹ ಪಡೆಯಬಹುದು ಮತ್ತು ಪ್ರತಿ ಖರೀದಿಗೆ ಒಂದು ಲಕ್ಕಿ ಡ್ರಾದಲ್ಲಿ ಪಾಲ್ಗೊಳ್ಳಬಹುದು.
ಇನ್ಸ್ಟಾಲೇಶನ್ ಮತ್ತು ಸರ್ವೀಸ್ ಬೆಂಬಲಕ್ಕಾಗಿ ಕೆಲ್ವಿನೇಟರ್ 150+ ಸ್ಥಳಗಳಲ್ಲಿ 187 ಸರ್ವೀಸ್ ಸೆಂಟರ್ಗಳನ್ನು ಹೊಂದಿದ್ದು, ಇವುಗಳು 365 ದಿನಗಳೂ ಸಹ ಗ್ರಾಹಕರ ಸೇವೆಗೆ ಸಿದ್ಧರಾಗಿರುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ