ಕರ್ನಾಟಕದ (Karnataka) ಉಚ್ಛ ನ್ಯಾಯಾಲಯವು (High Court) ರುಸ್ತಂಜೀ ಗ್ರೂಪ್ನ ಶ್ರೀ ಬೊಮನ್ ಆರ್. ಇರಾನಿ ಮತ್ತು ಮಹೀಂದ್ರಾ ಮತ್ತು ಮಹೀಂದ್ರಾ ನಡುವಿನ ಜಂಟಿ ಸಂಯೋಜನೆಯಾಗಿರುವ ಕ್ಲಾಸಿಕ್ ಲೆಜೆಂಡ್ಸ್ಗೆ (Classic Legend) ಕೆಲವು ತೊಂದರೆಗಳನ್ನು ಉಂಟುಮಾಡುವಂತಹ ತೀರ್ಪನ್ನು ನೀಡಿದೆ. ಇತ್ತೀಚಿನ ತೀರ್ಪಿನಲ್ಲಿ, ಕರ್ನಾಟಕದ ಹೈಕೋರ್ಟ್ ಕ್ಲಾಸಿಕ್ ಲೆಜೆಂಡ್ಸ್ ಮತ್ತು ಬೊಮನ್ ಆರ್. ಇರಾನಿ 'ಯೆಜ್ಡಿ' (Yezidi) ಟ್ರೇಡ್ಮಾರ್ಕ್ (Trade Mark) ಮತ್ತು ಬ್ರ್ಯಾಂಡಿಂಗ್ (Branding) ಅನ್ನು ಬಳಸಿದ್ದಕ್ಕಾಗಿ ನಿರ್ಬಂಧ ಹೇರಿದೆ. ಈ ತೀರ್ಪಿನ ಅನ್ವಯ, ಶ್ರೀ ಇರಾನಿ ಮತ್ತು ಕ್ಲಾಸಿಕ್ ಲೆಜೆಂಡ್ಸ್ ಇಬ್ಬರೂ ಈಗ 'ಯೆಜ್ಡಿ' ಹೆಸರನ್ನು ಪದ ಅಥವಾ ಸಾಧನವಾಗಿ ಬಳಸುವಂತಿಲ್ಲ.
ನ್ಯಾಯಾಲಯದಲ್ಲಿರುವ ಟ್ರೇಡ್ಮಾರ್ಕ್ಗಳು
ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪಿನ ಪ್ರಕಾರ, ನ್ಯಾಯಮೂರ್ತಿ ಎಸ್.ಆರ್. ಕೃಷ್ಣ, 'ಯೆಜ್ಡಿ' ಟ್ರೇಡ್ಮಾರ್ಕ್ನ ಮೂಲ ಮಾಲೀಕ ಐಡಿಯಲ್ ಜಾವಾ (ಇಂಡಿಯಾ) ಲಿಮಿಟೆಡ್, ಇದು ಇನ್ನೂ ದಿವಾಳಿ ಹಂತದಲ್ಲಿದೆ.
1991 ರಿಂದ ಅಧಿಕೃತ ಲಿಕ್ವಿಡೇಟರ್ (OL) ಮೂಲಕ ದಿವಾಳಿ ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ಕಂಪನಿಯ ಟ್ರೇಡ್ಮಾರ್ಕ್ಗಳು ಇನ್ನೂ ನ್ಯಾಯಾಲಯದ 'ಕಸ್ಟೋಡಿಯಾ ಲೆಜಿಸ್' ನಲ್ಲಿವೆ ಎಂದು ನ್ಯಾಯಾಲಯ ಘೋಷಿಸಿದೆ.
ಟ್ರೇಡ್ಮಾರ್ಕ್ ವರ್ಗಾವಣೆಗೆ ಕೋರ್ಟ್ ಆದೇಶ
ಈ ತೀರ್ಪಿನಿಂದಾಗಿ, ಬೊಮನ್ ಆರ್. ಇರಾನಿ ಪರವಾಗಿ ಮುಂಬೈ, ದೆಹಲಿ ಮತ್ತು ಅಹಮದಾಬಾದ್ನ ರಿಜಿಸ್ಟ್ರಾರ್ ಆಫ್ ಟ್ರೇಡ್ಮಾರ್ಕ್ಗಳು ನೀಡಿದ ಎಲ್ಲಾ ನೋಂದಣಿ ಪ್ರಮಾಣಪತ್ರಗಳು ಮತ್ತು ಟ್ರೇಡ್ಮಾರ್ಕ್ಗಳನ್ನು ಅಮಾನ್ಯವೆಂದು ಘೋಷಿಸಲಾಗಿದೆ.
ಐಡಿಯಲ್ ಜಾವಾಗೆ ನೀಡಲಾದ ಎಲ್ಲಾ ನೋಂದಣಿಗಳು ಮತ್ತು ಟ್ರೇಡ್ಮಾರ್ಕ್ಗಳನ್ನು OL (ಅಧಿಕೃತ ಲಿಕ್ವಿಡೇಟರ್) ಮೂಲಕ ವರ್ಗಾಯಿಸಲು ಟ್ರೇಡ್ಮಾರ್ಕ್ ನೋಂದಣಿ ಪ್ರಾಧಿಕಾರಕ್ಕೆ ನ್ಯಾಯಾಲಯ ಆದೇಶಿಸಿದೆ.
ಕ್ಲಾಸಿಕ್ ಲೆಜೆಂಡ್ಸ್ ಅಧಿಕೃತ ಹೇಳಿಕೆ
ಈ ಕುರಿತು ಕ್ಲಾಸಿಕ್ ಲೆಜೆಂಡ್ಸ್ ಅಧಿಕೃತ ಹೇಳಿಕೆಯನ್ನು ನೀಡಿದೆ. ಆರ್ಡರ್ ಅನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಕಂಪನಿಯು ಈ ವಿಷಯದ ಬಗ್ಗೆ ಕಾನೂನು ಸಲಹೆಯನ್ನು ಪಡೆಯುತ್ತಿದೆ.
ಕಂಪನಿಯು ಶೀಘ್ರದಲ್ಲೇ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಿದೆ ಮತ್ತು ಅನುಕೂಲಕರ ಪರಿಹಾರವನ್ನು ಪಡೆಯುವ ಆಶಾವಾದ ಹೊಂದಿದೆ. ಮಧ್ಯಂತರದಲ್ಲಿ, ಮೇಲ್ಮನವಿ ನ್ಯಾಯಾಲಯದ ಆದೇಶಗಳಿಗೆ ಒಳಪಟ್ಟು ಮೋಟಾರ್ಸೈಕಲ್ಗಳ ತಯಾರಿಕೆ ಮತ್ತು ಮಾರಾಟ ಮುಂದುವರಿಯುತ್ತದೆ ಎಂದು ತಿಳಿಸಿದೆ.
ಕಂಪನಿಯ ಟ್ರೇಡ್ಮಾರ್ಕ್ ಅನ್ನು ಪಡೆದುಕೊಂಡಿರುವುದಕ್ಕೆ ದೂಷಿಸಿದ ನ್ಯಾಯಾಲಯ
ಟ್ರೇಡ್ಮಾರ್ಕ್ ನೋಂದಣಿಯನ್ನು ಅಪನಂಬಿಕೆಯಿಂದ ಪಡೆದಿದ್ದಕ್ಕಾಗಿ ಇರಾನಿಯವರನ್ನು ದೂಷಿಸಿರುವ ನ್ಯಾಯಾಲಯ ಐಡಿಯಲ್ ಜಾವಾಗೆ ಟ್ರೇಡ್ಮಾರ್ಕ್ನ ಬಳಕೆಯಿಂದ ಗಳಿಸಿದ ಎಲ್ಲಾ ಲಾಭಗಳನ್ನು ಪಾವತಿಸಲು ಮಿಸ್ಟರ್ ಇರಾನಿ ಮತ್ತು ಕ್ಲಾಸಿಕ್ ಲೆಜೆಂಡ್ಸ್ ಈಗ ಹೊಣೆಗಾರರಾಗಿದ್ದಾರೆ ಎಂಬುದಾಗಿ ಘೋಷಿಸಿದೆ.
ಕ್ಲಾಸಿಕ್ ಲೆಜೆಂಡ್ಸ್ ಮತ್ತು ಇರಾನಿ ದಂಡ ಪಾವತಿಯಾಗಿ ರೂ 10 ಲಕ್ಷಗಳನ್ನು ಪಾವತಿಸುವುದು ಮಾತ್ರವಲ್ಲದೆ ಯೆಜ್ಡಿ ಟ್ರೇಡ್ಮಾರ್ಕ್ ಬಳಸಿ ಮಾಡಿದ ಮಾರಾಟ ಹಾಗೂ ಗಳಿಕೆಯ ಎಲ್ಲಾ ವಿವರಗಳನ್ನು OL ಗೆ ಒದಗಿಸಬೇಕು ಎಂದು ತಿಳಿಸಿದೆ.
ಒಂದು ತಿಂಗಳ ತಡೆ
ತೀರ್ಪನ್ನು ಅಂಗೀಕರಿಸುವಾಗ, ಕರ್ನಾಟಕ ಹೈಕೋರ್ಟ್ ಕೂಡ ಈ ತೀರ್ಪನ್ನು ಮೇಲ್ಮನವಿ ವೇದಿಕೆಯ ಮುಂದೆ ಪ್ರಶ್ನಿಸಲು ನೊಂದ ಕಕ್ಷಿದಾರರಿಗೆ ಅನುವು ಮಾಡಿಕೊಡಲು ಈ ಆದೇಶವನ್ನು ಒಂದು ತಿಂಗಳ ಕಾಲ ತಡೆಹಿಡಿದಿದೆ.
ಇದನ್ನೂ ಓದಿ: Bike Offer: ಇಂಥ ಆಫರ್ ಹಿಂದೆಂದೂ ಬಂದಿಲ್ಲ, ಈ ಬೈಕ್ ಖರೀದಿಸಿದರೆ 1.24 ಲಕ್ಷ ರಿಯಾಯಿತಿ!
ತನ್ನ ತೀರ್ಪಿನಲ್ಲಿ, ಐಡಿಯಲ್ ಜಾವಾ ಇನ್ನೂ ಟ್ರೇಡ್ಮಾರ್ಕ್ನ ಮೇಲಿನ ಹಕ್ಕನ್ನು ಕಳೆದುಕೊಂಡಿಲ್ಲ, ಇರಾನಿ ಮುಕ್ತಾಯ ಹಂತದಲ್ಲಿ 'ಯೆಜ್ಡಿ' ನೋಂದಣಿಯನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಯೆಜ್ಡಿ ಹೆಸರನ್ನು ಸ್ವಾಧೀನಪಡಿಸಿಕೊಂಡಿರುವ ಬೊಮನ್ ಇರಾನಿ
ಬೊಮಾ ಆರ್. ಇರಾನಿ 2013-2015ರ ಅವಧಿಯಲ್ಲಿ 'ಯೆಜ್ಡಿ' ಟ್ರೇಡ್ಮಾರ್ಕ್ ಅನ್ನು ಬಳಸುವ ಹಕ್ಕುಗಳನ್ನು 'ಸ್ವಾಧೀನಪಡಿಸಿಕೊಂಡರು', ನಂತರ ಇರಾನಿ ಅವರ ನಿರ್ದೇಶಕರಲ್ಲಿ ಒಬ್ಬರಾಗಿ ಕ್ಲಾಸಿಕ್ ಲೆಜೆಂಡ್ಸ್ ಅನ್ನು ಸ್ಥಾಪಿಸಲಾಯಿತು.
ಈ ಹೊಸ ಕಂಪನಿಯ ಅಡಿಯಲ್ಲಿ, ಜಾವಾ ಮತ್ತು ಯೆಜ್ಡಿ ಬ್ರ್ಯಾಂಡ್ಗಳನ್ನು ನಿಯೋ-ರೆಟ್ರೋ ಮೋಟಾರ್ಸೈಕಲ್ ಬ್ರ್ಯಾಂಡ್ಗಳ ರೂಪದಲ್ಲಿ ಪುನರ್ ನಿರ್ಮಿಸಲಾಗಿದೆ.
ಐಡಿಯಲ್ ಜಾವಾ ಆರಂಭಿಸಿದ್ದ ಬೊಮನ್ ಆರ್. ಇರಾನಿ ಅವರ ತಂದೆ ರುಸ್ತಮ್ ಎಸ್. ಇರಾನಿ ‘ಯೆಜ್ಡಿ’ ಹೆಸರಿನ ಮಾಲೀಕತ್ವವನ್ನು ಹೊಂದಿದ್ದರು. ತಂದೆಯ ನಿಧನದ ನಂತರ ಬೊಮನ್ ಅವರು ಈ ಹೆಸರನ್ನು ಸ್ವಾಧೀನಪಡಿಸಿಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ