ಈಗ ಏನಿದ್ದರೂ ಆನ್ಲೈನ್ ಗೇಮಿಂಗ್ ಕ್ರೇಜ್ (Online Game Crazy) ಎನ್ನುವುದು ಎಲ್ಲೆಡೆ ಕಂಡುಬರುತ್ತದೆ. ಅದರಲ್ಲೂ ವಿಶೇಷವಾಗಿ ಕೌಶಲ್ಯಾಧಾರಿತ ಆನ್ಲೈನ್ ಕ್ರೀಡೆಗಳು (Online Sports) ಸಾಕಷ್ಟು ಜನಪ್ರಿಯವಾಗುತ್ತಿವೆ. ಈ ರೀತಿಯ ಆಟಗಳು ಕೇವಲ ಮನರಂಜನೆಯಲ್ಲದೆ ಕೌಶಲ್ಯಗಳನ್ನು ವೃದ್ಧಿಸುವುದರಿಂದ ಸಾಕಷ್ಟು ಬೇಡಿಕೆ ಪಡೆದುಕೊಂಡಿವೆ. ಆನ್ಲೈನ್‌ನಲ್ಲಿ ಆಟ ಸೇರಿದಂತೆ ಕೌಶಲ್ಯಾಧಾರಿತ ಆಟಗಳ ಮೇಲೆ ಬೆಟ್ಟಿಂಗ್ ಮಾಡುವುದನ್ನು ನಿರ್ಬಂಧಿಸುವ ಮತ್ತು ಅವುಗಳನ್ನು ಅಪರಾಧ ಎಂದು ಪರಿಗಣಿಸುವ ಕರ್ನಾಟಕ ಪೊಲೀಸ್ ತಿದ್ದುಪಡಿ ಕಾಯಿದೆ, 2021ರ (Karnataka Police Amendment Act) ಸೆಕ್ಷನ್‌ಗಳನ್ನು (Section) ಕರ್ನಾಟಕ ಹೈಕೋರ್ಟ್ (Karnataka High court) ಸೋಮವಾರದಂದು 'ಅಸಂವಿಧಾನಿಕ' ಎಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ವಿಭಾಗೀಯ ಪೀಠ ನೀಡಿರುವ ಹೇಳಿಕೆಯಲ್ಲಿ , "ರಿಟ್ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ನಿರ್ಬಂಧಗಳು ಅಸಂವಿಧಾನಿಕ ಮತ್ತು ಇವುಗಳನ್ನು ರದ್ದುಗೊಳಿಸಬೇಕು" ಎಂದು ಹೇಳಿರುವುದಾಗಿ ತಿಳಿದುಬಂದಿದೆ.
ಆದರೆ, ನ್ಯಾಯಾಲಯವು ಈ ಕಾಯ್ದೆಯನ್ನು ಸಂಪೂರ್ಣವಾಗಿ ಅನೂರ್ಜಿತಗೊಳಿಸುವುದಿಲ್ಲ ಎಂದು ಹೇಳಿದ್ದು, ರಾಜ್ಯವು ಸಂವಿಧಾನಕ್ಕೆ ಅನುಗುಣವಾಗಿ ಹೊಸ ಕಾನೂನನ್ನು ಅಂಗೀಕರಿಸಿದರೆ ಅದು ಮಧ್ಯಪ್ರವೇಶಿಸುವುದಿಲ್ಲ ಎಂಬುದಾಗಿಯೂ ಹೇಳಿದೆ.
ಈ ಮುಂಚೆ, ಕಳೆದ ವರ್ಷ ಸೆಪ್ಟೆಂಬರ್ 21ರಂದು ಕರ್ನಾಟಕ ವಿಧಾನಸಭೆಯು ಕರ್ನಾಟಕ ಪೊಲೀಸ್ ಕಾಯಿದೆ, 1963 ಅನ್ನು ಮಾರ್ಪಡಿಸುವ ಮಸೂದೆಯನ್ನು ಜಾರಿಗೊಳಿಸಿ ಆನ್ಲೈನ್ ಜೂಜಾಟ ಸೇರಿದಂತೆ ಎಲ್ಲಾ ರೀತಿಯ ಜೂಜಾಟಗಳನ್ನು ಪರಿಗಣಿಸಲ್ಪಡುವ ಮತ್ತು ಜಾಮೀನು ರಹಿತ ಅಪರಾಧ ಎಂದು ಹೇಳಿತ್ತು. ಹೊಸ ಕಾನೂನು ಜಾರಿಗೆ ಬಂದ ನಂತರ, ಕೆಲವು ಆನ್‌ಲೈನ್ ಗೇಮಿಂಗ್ ಕಂಪನಿಗಳು ಕರ್ನಾಟಕದಲ್ಲಿ ತಮ್ಮ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಗ್ರಾಹಕರು ಬಳಸಿದಾಗ ಅದರಿಂದ ಎದುರಾಗಬಹುದಾದ ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳಲು ಜಿಯೋ-ಲಾಕ್ ಮಾಡಿದ್ದರು.
ಈ ಮಧ್ಯೆ ಹೊಸ ಕಾನೂನಿನ ಅಡಿಯಲ್ಲಿ, ಆನ್‌ಲೈನ್ ಫ್ಯಾಂಟಸಿ ಸ್ಪೋರ್ಟ್ಸ್ ಪ್ಲಾಟ್‌ಫಾರ್ಮ್ ಆಗಿರುವ ಡ್ರೀಮ್ 11ರ ರಚನೆಕಾರರು ಗೇಮಿಂಗ್ ಹೌಸ್ ಅನ್ನು ನಿರ್ವಹಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಅವರ ಮೇಲೆ ಆರೋಪವನ್ನು ಸಹ ಹೊರಿಸಲಾಗಿತ್ತು. ಆದರೆ, ಈಗ ಕರ್ನಟಕ ಹೈಕೋರ್ಟ್ ಈ ಬಗ್ಗೆ ನೀಡಿರುವ ಆದೇಶ ಆನ್ಲೈನ್ ಗೇಮಿಂಗ್ ಸಂಸ್ಥೆಗಳು ನಿಟ್ಟುಸಿರು ಬಿಡುವಂತೆ ಮಾಡಿದೆ.
ಇದನ್ನು ಓದಿ: Apple watch, ಸ್ಮಾರ್ಟ್ ವಾಚ್ ಬಳಸುವವರೇ ಕೇಳಿ! ಈ ವೈಶಿಷ್ಟ್ಯ ಆನ್ ಮಾಡಿ.. ಆರೋಗ್ಯ ಕಾಪಾಡಿಕೊಳ್ಳಿ
ಈ ಬಗ್ಗೆ PlayerzPot ಸಂಸ್ಥೆಯ ಸಹ-ಸಂಸ್ಥಾಪಕ ಆಗಿರುವ ಮಿತೇಶ್ ಗಂಗರ್ ಈ ರೀತಿ ಪ್ರತಿಕ್ರಯಿಸಿದ್ದಾರೆ, "ಇದು ಕರ್ನಾಟಕ ಉಚ್ಚ ನ್ಯಾಯಾಲಯದಿಂದ ದೊರೆತ ಒಂದು ಪ್ರಮುಖ ಪರಿಹಾರವಾಗಿದೆ ಮತ್ತು ಇದರಿಂದ ಎಲ್ಲಾ ಬ್ರ್ಯಾಂಡ್‌ಗಳಿಗೆ ಈಗ ಕರ್ನಾಟಕದಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲು ದಾರಿ ಮಾಡಿಕೊಟ್ಟಂತಾಗಿದೆ. ಕರ್ನಾಟಕ ರಾಜ್ಯವು ನಮಗೆ ಉತ್ತಮ ಪ್ರಮಾಣದ ಬಳಕೆದಾರರ ನೀಡುವುದಲ್ಲದೆ ನಮ್ಮ ಆದಾಯದ ಗಣನೀಯ ಭಾಗಕ್ಕೆ ಕೊಡುಗೆ ನೀಡುತ್ತದೆ. ಸದ್ಯ ಈ ನಿಷೇಧವನ್ನು ಈಗ ತೆರೆಗೊಳಿಸಲಾಗುವುದರಿಂದ ಬಹಳಷ್ಟು ನಮ್ಮ ಬಳಕೆದಾರರು ಕೌಶಲ್ಯ-ಆಧಾರಿತ ಗೇಮಿಂಗ್ ಆಟಗಳಿಗೆ ಮತ್ತೆ ಹಿಂತಿರುಗಲು ಅನುವು ಮಾಡಿಕೊಡುತ್ತದೆ.
ಇದನ್ನು ಓದಿ: FASTag ಖರೀದಿಸಿಲ್ವಾ? Paytm ಮೂಲಕ ಸುಲಭವಾಗಿ ಸಿಗುತ್ತೆ ನೋಡಿ
ಭಾರತದಲ್ಲಿ ಗೇಮಿಂಗ್ ಎಂಬುದು ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಮತ್ತು ಇಂತಹ ಸಕಾರಾತ್ಮಕ ಪರಿಣಾಮ ಬೀರುವ ನಿರ್ಧಾರಗಳಿಂದಾಗಿ ಉದ್ಯಮವು ವೇಗವರ್ಧಿತ ದರದಲ್ಲಿ ಬೆಳೆಯಲು ಸಹಾಯವಾಗುತ್ತದೆ. ಯಾವುದೇ ನಿಯಮಾವಳಿಗಳನ್ನು ರಚಿಸುವ ಸಂದರ್ಭದಲ್ಲಿ ಉದ್ದಿಮೆಗಳ ಪಾಲುದಾರರಿಗೆ ಮುಂದೆ ಭವಿಷ್ಯದಲ್ಲಿ ಈ ರೀತಿಯ ನಿಷೇಧಗಳನ್ನು ಎದುರಿಸಲಾರದಂತೆ ಅನುವು ಮಾಡಿಕೊಡಲು ಅವರಿಗೂ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಲು ಪ್ರಾಮಾಣಿಕ ಅವಕಾಶವನ್ನು ನೀಡಬೇಕೆನ್ನುವ ಅಂಶವನ್ನು ನಾವು ನಂಬುತ್ತೇವೆ. ಭಾರತದಲ್ಲಿ ಗೇಮಿಂಗ್‌ನ ಭವಿಷ್ಯವು ಉಜ್ವಲವಾಗಿದೆ ಮತ್ತು ಈ ತೀರ್ಪು ಉದ್ಯಮದ ನಿರೀಕ್ಷಿತ ಬೆಳವಣಿಗೆಯ ಪ್ರವೃತ್ತಿಗಳ ಪರವಾಗಿದೆ. ಕೊನೆಯದಾಗಿ, ನಾವು ಜವಾಬ್ದಾರಿಯುತ ಗೇಮಿಂಗ್ ಸಂಸ್ಥೆಯಾಗಿರುವುದರಿಂದ ಮುಂದೆ ನಮ್ಮ ದೃಢವಾದ ಹೆಜ್ಜೆ ಇಡುತ್ತ ಇದನ್ನು ಕಾಪಾಡಿಕೊಂಡು ಹೋಗಲು ಪ್ರಯತ್ನಿಸುತ್ತೇವೆ" ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ