Karbonn; 700 ರೂ.ಗೆ ಸಿಗಲಿದೆ ಈ ಫೀಚರ್​ ಫೋನ್​

ಕಾರ್ಬನ್​ ಕಂಪೆನಿ ತನ್ನ ಗ್ರಾಹಕರಿಗಾಗಿ ನಾಲ್ಕು ಫೀಚರ್​ ಫೋನ್​ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ಸರಣಿಯ ಫೋನ್​ KX ಮಾದರಿಯಲ್ಲಿದೆ. ಇದರ ಬೆಲೆ ರೂ.700ನಿಂದ ತೊಡಗಿ 1000 ರೂ ವರೆಗೆ ಇರಲಿದೆ.

news18
Updated:August 7, 2019, 5:55 PM IST
Karbonn; 700 ರೂ.ಗೆ ಸಿಗಲಿದೆ ಈ ಫೀಚರ್​ ಫೋನ್​
ಕಾರ್ಬನ್​ KX3
  • News18
  • Last Updated: August 7, 2019, 5:55 PM IST
  • Share this:
ಸ್ಮಾರ್ಟ್​ ಯುಗದಲ್ಲಿರುವ ಗ್ರಾಹಕರಿಗಾಗಿ ಮಾರುಕಟ್ಟೆ ನಾನಾ ವಿಶೇಷತೆಯುಳ್ಳ ಸ್ಮಾರ್ಟ್​ಫೋನ್​ಗಳು ಲಭ್ಯವಿದೆ. ಆದರೆ ಕಾರ್ಬನ್​ ಕಂಪೆನಿ ಮಧ್ಯಮ ಶ್ರೇಣಿಯ ಜನರಿಗಾಗಿ ಕಡಿಮೆ ಬೆಲೆಯ ಹೊಸ ಫೀಚರ್​ ಫೋನ್​ ಅನ್ನು ಬಿಡುಗಡೆ ಮಾಡಿದೆ.

ಕಾರ್ಬನ್​ ಕಂಪೆನಿ ತನ್ನ ಗ್ರಾಹಕರಿಗಾಗಿ ನಾಲ್ಕು ಫೀಚರ್​ ಫೋನ್​ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ಸರಣಿಯ ಫೋನ್​ KX ಮಾದರಿಯಲ್ಲಿದೆ. ಇದರ ಬೆಲೆ ರೂ.700ನಿಂದ ತೊಡಗಿ 1000 ರೂ ವರೆಗೆ ಇರಲಿದೆ. ಆಗಸ್ಟ್​ ತಿಂಗಳಿನ ಕೊನೆಯಲ್ಲಿ ಈ ಫೋನ್​ಗಳು ಮಾರುಕಟ್ಟೆಯಲ್ಲಿ ದೊರೆಯಲಿದೆ.

ಬೇಸಿಕ್​ ಫೋನ್​ಗಳತ್ತ ಮೊರೆ ಹೋಗುವ ಗ್ರಾಹಕರಿಗೆ ಕಾರ್ಬನ್​ KX3, KX25, KX26 and KX27​ ಸರಣಿ ​ಫೋನ್​ ಕಡಿಮೆ ಬೆಲೆಗೆ ಸಿಗಲಿದೆ.

ಈ ಫೋನ್​ನಲ್ಲಿ ಬಳಕೆಗೆ ಯೋಗ್ಯವಾದ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಪವರ್​ ಸೇವಿಂಗ್​ ಮೂಡ್​ ಇರಲಿದೆ. ಜೊತೆಗೆ ರೆಕಾರ್ಡರ್​, ಪವರ್​ ಸೇವಿಂಗ್​ ಮೂಡ್​, ವಿಡಿಯೋ ಮ್ಯೂಸಿಕ್​ ಪ್ಲೇಯರ್​ ಜೊತೆಗೆ ಎಫ್​ಎಂ ರೇಡಿಯೋ ಆಳಿಸಬಹುದಾಗಿದೆ.

ಇನ್ನು KX26 ಫೋನ್​ 1.7 ಇಂಚಿನ ಡಿಸ್​ಪ್ಲೇ ಜೊತೆಗೆ 1,450 mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಅಂತೆಯೇ, ಡಿಜಿಟಲ್​ ಕ್ಯಾಮೆರಾ ಮತ್ತು ವಿಡಿಯೋ ಮ್ಯೂಸಿಕ್​ ಪ್ಲೇಯರ್​ ಇದರಲ್ಲಿದೆ.

ಕೆಎಕ್ಸ್​ ಫೋನ್​​ನಲ್ಲಿ 1,750mAh ಬ್ಯಾಟರಿ ನೀಡಲಾಗಿದೆ. ಜೊತೆಗೆ ಡಿಜಿಟಲ್​ ಕ್ಯಾಮೆರಾ ಮತ್ತು ಬ್ಲೂತ್​ ಅಳವಡಿಸಲಾಗಿದೆ.
First published:August 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...