• Home
  • »
  • News
  • »
  • tech
  • »
  • Kannadathi: ರಜಾ ದಿನ ರಂಜನಿ ಮಾಡೋ ಕೆಲಸಗಳಿವು..! ಕನ್ನಡತಿ ಚೆಲುವೆಯ ರಜಾ ರೊಟೀನ್

Kannadathi: ರಜಾ ದಿನ ರಂಜನಿ ಮಾಡೋ ಕೆಲಸಗಳಿವು..! ಕನ್ನಡತಿ ಚೆಲುವೆಯ ರಜಾ ರೊಟೀನ್

ರಂಜನಿ ರಾಘವನ್

ರಂಜನಿ ರಾಘವನ್

  • Share this:

ಕನ್ನಡತಿ ಧಾರವಾಹಿ (Kannadathi Serials) ಈಗ ಕಿರುತೆರೆಯ ಅತ್ಯಂತ ಜನಪ್ರಿಯ ಧಾರವಾಹಿಗಳಲ್ಲಿ (Serial) ಒಂದು. ಭುವನೇಶ್ವರಿಯಾಗಿ ಮಿಂಚುತ್ತಿರುವ ರಂಜನಿ ರಾಘವನ್ (Ranjani Raghavan) ಪುಟ್ಟ ಗೌರಿ ಮದುವೆಯಂತೆಯೇ ಇಲ್ಲಿ ಶೋ ಮೂಲಕ ಸಖತ್ ಮಿಂಚುತ್ತಿದ್ದಾರೆ. ರಂಜನಿ ಅವರು ಕನ್ನಡತಿ ಮೂಲಕ ಚಿಕ್ಕವರು ದೊಡ್ಡವರೆನ್ನದೆ ಎಲ್ಲರಿಗೂ ಫೇವರೇಟ್ ಆಗಿದ್ದಾರೆ. ನಟಿ ಸೋಷಿಯಲ್ ಮೀಡಿಯಾದಲ್ಲಿಯೂ ಸಖತ್ ಆಕ್ಟಿವ್ ಆಗಿದ್ದು ಬಹಳಷ್ಟು ಲೈಫ್​ಸ್ಟೈಲ್ ಹ್ಯಾಕ್ಸ್, ಟಿಪ್ಸ್​ಗಳನ್ನು ತಮ್ಮ ಫಾಲೋವರ್ಸ್​ಗೆ (Followers) ಕೊಡುತ್ತಾರೆ. ಇದೀಗ ನಟಿ ತಮ್ಮ ರಜಾದಿನಗಳ ರೊಟೀನ್ ಹೇಗಿರುತ್ತೆ ಎನ್ನುವ ಶಾರ್ಟ್ ವಿಡಿಯೋ ಒಂದನ್ನು ತಮ್ಮ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ. ಸಖತ್ ಸ್ಟೈಲಿಷ್ ಆಗಿ ಕಾಣೋ ರಂಜನಿ ಮನೆಯಲ್ಲಿ ಫುಲ್ ಸಿಂಪಲ್, ಸಾದಾ ಸೀದಾ. ರಜೆ ಇತ್ತುಎಂದಾದರೆ ನಟಿ ಮನೆಯಲ್ಲಿ ಚಿಲ್ ಮಾಡುತ್ತಾರೆ. ರನ್ನಿಂಗ್, ಬ್ಯಾಕ್ಸಿಂಗ್, ಸೆಲ್ಫ್ ಕೇರ್ ಎನ್ನುತ್ತಾ ಮನೆಯೊಳಗೆ ಬ್ಯುಸಿಯಾಗಿಬಿಡುತ್ತಾರೆ.


ಬೇಗನೆ ಎದ್ದು ರನ್ನಿಂಗ್ (Running):


ನಟಿ ರಜಾ ದಿನಗಳಲ್ಲಿ ಬೇಗನೆ ಎದ್ದು ರನ್ನಿಂಗ್ ಮಾಡ್ತಾರೆ. ಇಂದಿನ ದಿನಗಳಲ್ಲಿ ಸಿನಿಮಾ ನಟಿಯರಂತೆಯೇ ಫಿಟ್ನೆಸ್ ಬಗ್ಗೆ ಕಿರುತೆರೆ ನಟಿಯರು ಹೆಚ್ಚಿನ ಕಾಳಜಿ ವಹಿಸುವುದುನ್ನು ನೋಡಬಹುದು. ರಂಜನಿ ಅವರೂ ರಜಾ ದಿನ ಎಂದು ಲೇಟಾಗೋ ತನಕ ಮಲಗೋದಿಲ್ಲ. ಬದಲಾಗಿ ಬೇಗನೆ ಎದ್ದು ಶಿಸ್ತಾಗಿ ರನ್ನಿಂಗ್ ಮಾಡ್ತಾರೆ.


ಕಾಫಿ ಟೈಂ:


ರನ್ನಿಂಗ್ ಮುಗಿಸಿಕೊಂಡು ಬಂದು ಒಂಚೂರು ಕಾಫಿ ಕುಡಿದು ನಂತರ ಆರಾಮ ಮಾಡುತ್ತಾರೆ. ಬೆಳಗಿನ ಆಹ್ಲಾದಕರ ವಾತಾವರಣವನ್ನು ಎಂಜಾಯ್ ಮಾಡುತ್ತಾರೆ.
ಶಾಪಿಂಗ್: ಏನೇನೋ ಅಗತ್ಯ ವಸ್ತುಗಳು ಬೇಕಾಗುತ್ತಲ್ಲಾ. ಅದಕ್ಕಾಗಿ ರಂಜನಿ ರಜೆ ಇದ್ದಾಗಲೇ ಶಾಪಿಂಗ್ ಮಾಡುತ್ತಾರೆ. ಮನೆಗೆ ಬೇಕಾದ ವಸ್ತುಗಳೋ ಇತರ ವಸ್ತುಗಳನ್ನು ಕೊಳ್ಳಲು ಶಾಪಿಂಗ್ ಮಾಡುತ್ತಾರೆ.


ಸೆಲ್ಫ್ ಕೇರ್ (Self care):


ರಜಾ ದಿನ ಅಂದ ಮೇಲೆ ಸೆಲ್ಫ್ ಕೇರ್ ಇಲ್ಲದಿದ್ದರೆ ಹೇಗೆ ಹೇಳಿ ? ಹಾಗಾಗಿ ನಟಿ ಒಂದು ದಿನದ ಸ್ವಲ್ಪ ಹೊತ್ತನ್ನು ತಮ್ಮ ಆರೈಕೆಗಾಗಿ ಬಳಸುತ್ತಾರೆ. ಮನೆಯಲ್ಲೇ ತಮ್ಮ ತ್ವಚೆ, ಮುಖದ ಆರೈಕೆಯನ್ನು ಮಾಡುತ್ತಾರೆ.


ವ್ಯಾಕ್ಸಿಂಗ್, ವೀನಸ್:


ನಟಿ ಮನೆಯಲ್ಲಿಯೇ ವ್ಯಾಕ್ಸಿಂಗ್ ಕೂಡಾ ಮಾಡುತ್ತಾರೆ. ಹೆಚ್ಚಿನವರು ವ್ಯಾಕ್ಸಿಂಗ್​ಗಾಗಿ ಬ್ಯೂಟಿ ಪಾರ್ಲರ್ ಅವಲಂಬಿಸಿದರೆ ನಟಿ ಮನೆಯಲ್ಲಿಯೇ ಇದ್ದು ವೀನಸ್ ಮೂಲಕ ವ್ಯಾಕ್ಸಿಂಗ್ ಮಾಡಿಕೊಳ್ಳುತ್ತಾರೆ.
ರೀಡಿಂಗ್ :


ಸ್ವಲ್ಪ ಬಿಡುವಾದ ಮೇಲೆ ಏನಾದರೂ ಓಪನ್ ಮಾಡಿಕೊಂಡು ಆರಾಮವಾಗಿ ಕುಳಿತು ಓದುತ್ತಾರೆ. ಇಷ್ಟದ ವಿಚಾರಗಳು, ಹೊಸ ವಿಷಯಗಳನ್ನು ಈ ರೀತಿ ಓದಿಕೊಂಡು ತಿಳಿದುಕೊಳ್ಳುತ್ತಾರೆ.


ಫ್ಯಾಮಿಲಿ ಟೈಂ:


ನಂತರ ಆರಾಮವಾಗಿ ಕಾಲುಚಾಚಿ ಅಪ್ಪ ಅಮ್ಮನ ಜೊತೆ ಕುಳಿತು ಫ್ಯಾಮಿಲಿ ಟೈಂ ಎಂಜಾಯ್ ಮಾಡುತ್ತಾರೆ. ಟಿವಿ ನೋಡುತ್ತಾ ಏನಾದರೂ ತಿನ್ನುತ್ತಾ ಹರಟೆ ಹೊಡೆಯುತ್ತಾ ಜಾಲಿಯಾಗಿರುತ್ತಾರೆ.


ಇದನ್ನೂ ಓದಿ: Ranjani Raghavan: ಮಹಾರಾಣಿಯಂತೆ ಪೋಷಾಕು ತೊಟ್ಟು ಕಂಗೊಳಿಸಿದ ಕನ್ನಡತಿ ಭುವಿ


ಏನಾದರೂ ಕೆಲಸ :


ತಮ್ಮದೇ ಆದ ಏನಾದರೂ ಕೆಲಸವನ್ನು ರಜಾ ದಿನದಲ್ಲೇ ಮಾಡುತ್ತಾರೆ ರಂಜನಿ. ಮೊದಲೇ ರಂಜನಿ ಕಥೆಗಳನ್ನು ಬರೆಯುತ್ತಾರೆ. ಬಹುಶಃ ಇದೇ ಸಮಯದಲ್ಲಿ ಅದನ್ನೂ ಮಾಡುತ್ತಾರೇನೋ.. ಲ್ಯಾಪ್ ಟಾಪ್ ತೆರೆದು ಅಗತ್ಯ ಕೆಲಸಗಳನ್ನು ಮಾಡಿ ಮುಗಿಸುತ್ತಾರೆ.


ನಿದ್ದೆ:


ಇಲ್ಲಿಗೆ ರಂಜನಿ ಅವರ ರಜಾ ದಿನ ಮುಗಿದೇಬಿಟ್ಟಿರುತ್ತದೆ. ಮತ್ತೇನು ? ಮಲಗೋ ಸಮಯ. ರಜೆಯಲ್ಲಿ ಕೆಲಸಗಳೆಲ್ಲವನ್ನೂ ಮುಗಿಸಿ ಆರಾಮವಾಗಿ ನಿದ್ದೆ ಮಾಡುತ್ತಾರೆ ರಂಜನಿ.


ಇದನ್ನೂ ಓದಿ: ಕನ್ನಡತಿ ಧಾರಾವಾಹಿ ನಾಯಕಿ ವರು ನಿಜ ಜೀವನದಲ್ಲಿ ತುಂಬಾನೇ ಬೋಲ್ಡ್​!; ಇಲ್ಲಿವೆ ನೋಡಿ ಫೋಟೋಗಳು

Published by:Divya D
First published: