ಲಾಕ್ಡೌನ್ ಅವಧಿಯಲ್ಲಿ ಒಟಿಟಿ ಫ್ಲಾಟ್ಫಾರ್ಮ್ಗಳ ಬಳಕೆ ಹೆಚ್ಚಾಗುತ್ತಿದೆ. ಜನಸಾಮಾನ್ಯರು ನೆಟ್ಫ್ಲಿಕ್ಸ್, ಅಮೆಜಾನ್ ಮೂಲಕ ಸಿನಿಮಾ ವೀಕ್ಷಿಸುತ್ತಿದ್ದಾರೆ. ಇದೀಗ ಕನ್ನಡಗರ ತಂಡವೊಂದು ಲಾಕ್ಡೌನ್ ಅವಧಿಯಲ್ಲಿ ಕನ್ನಡ ಸಿನಿಮಾವನ್ನು ವೀಕ್ಷಿಸಲು ‘ನಮ್ಮ ಫ್ಲಿಕ್ಸ್‘ ಹೆಸರಿನ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದೆ. ಈ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಸ್ಯಾಂಡಲ್ವುಡ್ ಸಿನಿಮಾಗಳನ್ನು ವೀಕ್ಷಿಸಬಹುದಾಗಿದೆ.
ವರನಟ ಡಾ.ರಾಜ್ ಕುಮಾರ್ (ಏ.24) ಹುಟ್ಟುಹಬ್ಬದ ವಿಶೇದ ದಿನದಂದು ರಿಯಲ್ ಸ್ಟಾರ್ ಉಪೇಂದ್ರ ಅವರು ‘ನಮ್ಮ ಫ್ಲಿಕ್ಸ್‘ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದಾರೆ. ಕನ್ನಡಿಗರಿಗೆಂದೇ ಕನ್ನಡ ಸಿನಿಮಾಗಳಿಗಷ್ಟೇ ಸೀಮಿತ ವಾಗಿರುವ ಈ ಆ್ಯಪ್ನಲ್ಲಿ ಸಿನಿಮಾ ಮಾತ್ರವಲ್ಲದೆ ವೆಬ್ ಸಿರೀಸ್ಗಳನ್ನು ವೀಕ್ಷಿಸಬಹುದಾಗಿದೆ.
1 ರೂಪಾಯಿಗೆ ಸಿನಿಮಾ!
'ನಮ್ಮ ಫ್ಲಿಕ್ಸ್' ಆ್ಯಪ್ ಅನ್ನು ಕನ್ನಡಿಗರೇ ಆದ ಅವಿಟಾನ್ ಎಂಟರ್ಟೈನ್ಮೆಂಟ್ ಕಾರ್ಪೋರೇಷನ್ ಅಡಿಯಲ್ಲಿ ಅಭಿವೃದ್ಧಿ ಪಡಿಸಿ ಬಿಡುಗಡೆ ಮಾಡಲಾಗಿದೆ. ವಿಶೇಷವೆಂದರೆ ದಿನಕ್ಕೆ ಕೇವಲ 1 ರೂಪಾಯಿ ಪಾವತಿಸುವ ಮೂಲಕ ಕನ್ನಡ ಸಿನಿಮಾವನ್ನು ವೀಕ್ಷಿಸಬಹುದಾಗಿದೆ. ನೆಟ್ಫ್ಲಿಕ್ಸ್, ಅಮೆಜಾನ್ ಮೂಲಕ ಕನ್ನಡ ಸಿನಿಮಾ ವೀಕ್ಷಿಸುತ್ತಿದ್ದ ವೀಕ್ಷಕರಿಗೆ ಈ ಆ್ಯಪ್ ಹೇಳಿ ಮಾಡಿಸಿದಂತಿದೆ.
ಸಿನಿಮಾ ಮಾತ್ರವಲ್ಲ..!
'ನಮ್ಮ ಫ್ಲಿಕ್ಸ್' ಆ್ಯಪ್ ಮೂಲಕ ವೆಬ್ ಸಿರೀಸ್, ಸಂಗೀತ, ಸ್ಟಾರ್ಗಳ ಮಾತುಕತೆ ಕೂಡ ವೀಕ್ಷಿಸಬಹುದಾಗಿದೆ. ಕಡಿಮೆ ಬೆಲೆಗೆ ಕನ್ನಡದ ಸಿನಿಮಾಗಳನ್ನು ನೋಡುವ ಹೊಸ ಪ್ರಯತ್ನವನ್ನು ಅವಿಟಾನ್ ಎಂಟರ್ಟೈನ್ ತಂಡ ಮಾಡಿದೆ. ಲಾಖ್ಡೌನ್ ಅವಧಿಯಲ್ಲಿಮನೆಯಲ್ಲಿ ಕುಳಿತು ಕನ್ನಡ ಸಿನಿಮಾ ವೀಕ್ಷಿಸಲು ಈ ಆ್ಯಪ್ ಸಹಾಯಕವಾಗಲಿದೆ. ದಿನಕ್ಕೆ ಒಂದು ರೂಪಾಯಿಯಂತೆ ಸಿನಿಮಾ ನೋಡ ಬಹುದಾಗಿದೆ. ಪ್ರತಿ ವಾರಕ್ಕೊಮ್ಮೆ ಹೊಸ ಸಿನಿಮಾಗಳು ಈ ಅಪ್ಲಿಕೇಷನ್ನಲ್ಲಿ ವೀಕ್ಷಣೆಗೆ ಸಿಗಲಿಗೆ.
ಆ್ಯಪ್ ಡೌನ್ಲೋಡ್ ಹೇಗೆ?
ಕನ್ನಡದ ಹೊಸ ಒಟಿಟಿ ಫ್ಲಾರ್ಟ್ ‘ನಮ್ಮಫ್ಲಿಕ್ಸ್‘ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಾಗಲಿದೆ. ಸದ್ಯಕ್ಕೆ ಎಲ್ಲಾ ಆ್ಯಂಡ್ರಾಯ್ಡ್ ಬಳಕೆದಾರರು ಈ ಆ್ಯಪ್ ಅನ್ನು ಬಳಸುವಂತೆ ಅಭಿವೃದ್ಧಿ ಪಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಅಮೆಜಾನ್, ಫೈರ್ ಟಿವಿ, ಜಿಯೋ ಮತ್ತು ಐಫೋನ್ಗಳಿಗೂ ಲಭ್ಯವಾಗಲಿದೆ.
Google Smart Debit Card: ಸದ್ಯದಲ್ಲೇ ಬರಲಿದೆ ಗೂಗಲ್ ಸ್ಮಾರ್ಟ್ ಡೆಬಿಟ್ ಕಾರ್ಡ್?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ