ಶಾಪಿಂಗ್ ಮಾಲ್ಗೂ ಲಗ್ಗೆಯಿಡುತ್ತಾ ಅಮೆಜಾನ್ ಅಲೆಕ್ಸಾ?
Updated:June 18, 2018, 4:52 PM IST
Updated: June 18, 2018, 4:52 PM IST
ನ್ಯೂಯಾರ್ಕ್: ಕೇವಲ ಧ್ವನಿಯ ಆಗ್ರಹದಲ್ಲೇ ಕೆಲಸ ನಿರ್ವಹಿಸುವ ಅಪ್ಲಿಕೇಶನ್ ಮತ್ತು ಸ್ಪೀಕರ್ಗಳು ಮುಂದಿನ ದಿನಗಳಲ್ಲಿ ಶಾಪಿಂಗ್ ಮಾಲ್ಗಳಲ್ಲಿ ಹೆಚ್ಚು ಸಾರ್ವಭೌಮತ್ವವನ್ನು ಹೊಂದಬಹುದು ಎಂದು ವರದಿಯೊಂದು ತಿಳಿಸಿದೆ.
ಕೃತಕ ಬುದ್ಧಿಮತ್ತೆಯ ಸಾಧನಗಳಾದ ಅಮೆಜಾನ್ನ ಅಲೆಕ್ಸಾ, ಗೂಗಲ್ನ ಗೂಗಲ್ ಹೋಮ್ನ್ನು ಈಗಾಗಲೇ ಹೆಚ್ಚು ಜನರು ಇಷ್ಟ ಪಡುತ್ತಿದ್ದಾರೆ. ಇದರ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಕುರಿತು ಸಮೀಕ್ಷೆಯೊಂದನ್ನು ಸಿದ್ಧ ಪಡಿಸಿರುವ OC&C ಸ್ಟ್ರಾಟಜಿ ಕನ್ಸಲ್ಟೆಂಟ್ ಸಂಸ್ಥೆ, ಧ್ವನಿ ಶಾಪಿಂಗ್ನಿಂದಾಗಿ 2022ರ ವೇಳೆ ಅಮೆರಿಕದಲ್ಲಿ ಸುಮಾರು 40 ಬಿಲಿಯನ್ ಡಾಲರ್ನಷ್ಟು ವ್ಯವಹಾರ ನಡೆಯಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸಮೀಕ್ಷೆ ಪ್ರಕಾರ ಶೇ.36ರಷ್ಟು ಅಮೆರಿಕದ ಮಂದಿ ಧ್ವನಿ ಮೂಲಕ ಶಾಪಿಂಗ್ ಮಾಡುವ ಪ್ರಕ್ರಿಯೆಗೆ ಜೈ ಎಂದಿದ್ದಾರೆ. ಈ ವಾಯ್ಸ್ ಕಮಾಂಡ್ ಶಾಪಿಂಗ್ನ್ನು ಮೆಚ್ಚಿದ್ದಾರೆ ಕೂಡಾ. ಹೀಗಾಗಿ ಈ ವಾಯ್ಸ್ ಕಮಾಂಡ್ ಶಾಪಿಂಗ್ ಮಾಲ್ಗಳಲ್ಲಿ ಮಾರಾಟ ಪ್ರಕ್ರಿಯೆಯನ್ನು ಹೆಚ್ಚಿಸಿದೆ ಎನ್ನಲಾಗಿದೆ.
ಅಮೆಜಾನ್ನ ಎಐ ವ್ಯವಸ್ಥೆ ಹೊಂದಿದ ಅಲೆಕ್ಸಾ ಮಾರುಕಟ್ಟೆ ಪ್ರವೇಶಿಸಿದ ದಿನವೇ ಟೆಕ್ ಇಂಡಸ್ಟ್ರಿಯಲ್ಲಿ ಧೂಳೆಬ್ಬಿಸಿತ್ತು, ಇದಾದ ಬೆನ್ನಲ್ಲೇ ಕಳೆದ ವರ್ಷ ಗೂಗಲ್ ಕೂಡಾ ಅಲೆಕ್ಸಾ ಮಾದರಿಯಲ್ಲೇ ಗೂಗಲ್ ಹೋಮ್ನ್ನು ಲಾಂಚ್ ಮಾಡಿತ್ತು. ಪ್ರಸಕ್ತ ಈ ಎರಡು ಸ್ಪೀಕರ್ಗಳು ಹೆಚ್ಚು ಟ್ರೆಂಡ್ ಎಬ್ಬಿಸಿವೆ.

Loading...