ಫೇಸ್​​​ಬುಕ್ ಆರೋಗ್ಯಕ್ಕೂ ಹಾನಿಕಾರಕ: ಸಂಶೋಧನೆಯಿಂದ ತಿಳಿದುಬಂತು ಅಚ್ಚರಿ ಮಾಹಿತಿ

Harshith AS | news18
Updated:January 9, 2019, 1:31 PM IST
ಫೇಸ್​​​ಬುಕ್ ಆರೋಗ್ಯಕ್ಕೂ ಹಾನಿಕಾರಕ: ಸಂಶೋಧನೆಯಿಂದ ತಿಳಿದುಬಂತು ಅಚ್ಚರಿ ಮಾಹಿತಿ
Harshith AS | news18
Updated: January 9, 2019, 1:31 PM IST
ಸಾಮಾಜಿಕ ಜಾಲತಾಣಗಳ ಪೈಕಿ ನಂಬರ್ 1 ಸ್ಥಾನದಲ್ಲಿರುವ ಫೇಸ್​ಬುಕ್​​ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಅಂತೆಯೆ ಸದ್ಯ ಫೇಸ್​ಬುಕ್​​​ ಬಳಕೆಯಿಂದಾಗಿ ಅನೇಕರು ಮಾನಸಿಕ ಹಾಗೂ ದೈಹಿಕವಾಗಿ ಒತ್ತಡಕ್ಕೆ ಒಳಗಾಗುತ್ತಿದ್ದಾರೆಂಬ ಭಯಾನಕ ವಿಚಾರ ಸಂಶೋಧನೆಯಿಂದ ಹೊರಬಿದ್ದಿದೆ.

ಪೇಸ್​ಬುಕ್​​​ ಬಗ್ಗೆ ‘ಯುನಿವರ್ಸಿಟಿ ಆಫ್​ ಸರ್ರೆ’ ಅಡಿಯಲ್ಲಿ ಡಾ. ಬ್ರಿಡ್​ಗೆಟ್​​​​ ಡಿಬ್ ಹಾಗೂ​ ತಂಡದವರು “ಸೋಶಿಯಲ್​ ಮೀಡಿಯಾ ಯೂಸ್​  ಆ್ಯಂಡ್​ ಫರ್ಸೆಪ್ಷನ್ಸ್​ ಆಫ್​ ಫಿಜಿಕಲ್​ ಹೆಲ್ತ್​” ವಿಷಯದ ಕುರಿತು ಸಂಶೋಧನೆ ನಡೆಸಿದ್ಧಾರೆ. ಇದಕ್ಕಾಗೆ 165 ಜನರನ್ನು ಸಂಶೋಧನೆಗೆ ಒಳಪಡಿಸಿದ್ದು, ಮನುಷ್ಯನ ಆರೋಗ್ಯದ ಮೇಲೆ ಪೇಸ್​ಬುಕ್​​ ಯಾವರೀತಿ ಪರಿಣಾಮ ಬೀಳುತ್ತಿದೆ ಎಂಬುದನ್ನು ತಿಳಿಸಿದೆ.

ಇದರ ಪ್ರಕಾರ, ಒಬ್ಬ ಫೇಸ್​ಬುಕ್​​​ ಬಳಕೆದಾರ ತನ್ನ ಪೇಸ್​ಬುಕ್ ಖಾತೆಯನ್ನು ಮತ್ತೊಬ್ಬ ಫೇಸ್​ಬುಕ್ ಖಾತೆಗೆ ಹೋಲಿಕೆ ಮಾಡುತ್ತಾ ನಿದ್ರಾ ಸಮಸ್ಯೆ, ತೂಕದ ಏರುಪೇರು, ಸ್ನಾಯುವಿನ ಒತ್ತಡ ಸೇರಿದಂತೆ ದೈಹಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಪ್ರಮುಖವಾಗಿ ಯುವಕರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಸ್ಮಾರ್ಟ್​ಫೋನ್ ಬಳಕೆದಾರರಿಗೆ ಗುಡ್ ನ್ಯೂಸ್​: ಜಿಯೋ ಪರಿಚಯಿಸಿದೆ ಹೊಸ ಬ್ರೌಸರ್ ಆ್ಯಪ್​

ಇನ್ನು ಫೇಸ್​ಬುಕ್​​​ ಅಥವಾ ಇನ್​​ಸ್ಟಾಗ್ರಾಂ ನಲ್ಲಿ ಬಳಕೆದಾರರನ್ನು ಆಕರ್ಷಿಸಲು ಭಿನ್ನವಾದ ಫೋಟೋ, ವಿಡಿಯೋ ಅಪ್​ಡೇಟ್​​ ಆಗುತ್ತಿರುತ್ತವೆ. ಇದೂಕೂಡ ಯುವಕರ ಮೇಲೆ ಮಾನಸಿಕ ಮತ್ತು ದೈಹಿಕ ಖಿನ್ನತೆಗೆ ಸಿಲುಕುವಂತೆ ಮಾಡುತ್ತದೆ.

ಸಾಮಾನ್ಯವಾಗಿ ಬಳಕೆದಾರರು ಸ್ಕ್ರೋಲ್​ ಮಾಡುವ ಮೂಲಕ ಬೇರೆಯವರು ಯಾವ ಯಾವ ಪೋಸ್ಟ್​ಗಳನ್ನು ಹಂಚಿಕೊಂಡಿದ್ದಾರೆ, ಪೋಸ್ಟ್​ಗಳಿಗೆ ಲೈಕ್ಸ್​ ಎಷ್ಟಿವೆ ಎಂಬುದರಲ್ಲೆ ಮಗ್ನರಾಗಿರುತ್ತಾರೆ. ಇಂತಹ ಪ್ರಕ್ರಿಯೆ ಆರೋಗ್ಯದ ಮೇಲೆ ನೇರಪರಿಣಾಮ ಬೀರಲಿದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ:
Loading...

First published:January 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ