Joker Malware: ಎಚ್ಚರ!! ಹಣ ಕಳೆದುಕೊಳ್ಳುವ ಮುಂಚೆ ಈ 15 ಆ್ಯಪ್​​ಗಳನ್ನ ಕೂಡಲೇ ಡಿಲೀಟ್ ಮಾಡಿ

Joker Malware Is Back: ಜೋಕರ್ ಮಾಲ್‌ವೇರ್ ಕನಿಷ್ಠ 14 ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಿಗೆ ಸೋಂಕು ತಗುಲಿದೆ ಎಂದು ಶಿಶ್ಕೋವಾ ಕಂಡುಕೊಂಡರು. ಜೋಕರ್ ಮಾಲ್‌ವೇರ್ ಕಳೆದ ವರ್ಷ ಹಲವಾರು ಅಪ್ಲಿಕೇಶನ್‌ಗಳಿಗೆ ಸೋಂಕು ತಗುಲಿದ ನಂತರ ಸಾಕಷ್ಟು ಭಯವನ್ನು ಸೃಷ್ಟಿಸಿತು. ಬಳಕೆದಾರರನ್ನು ರಕ್ಷಿಸಲು Google ಮಧ್ಯಪ್ರವೇಶಿಸಿ ಆ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಬೇಕಾಯಿತು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ಗೂಗಲ್ ಪ್ಲೇ ಸ್ಟೋರ್‌ನಲ್ಲಿ (Google Play Store) ಪ್ರಬಲವಾದ ಜೋಕರ್ ಮಾಲ್‌ವೇರ್ (Joker Malware)‌ ಮತ್ತೆ ತನ್ನ ಹಳೆಯ ಚಾಳಿಯನ್ನು ಮತ್ತೆ ಪುನರಾರಂಭಿಸಿದೆ ಎಂದು   ಸೈಬರ್‌ ಸೆಕ್ಯುರಿಟಿ ಸಂಸ್ಥೆಯ ಕ್ಯಾಸ್ಪರ್‌ಸ್ಕಿಯ (CyberSecurity) ವಿಶ್ಲೇಷಕ ಟಟಯಾನಾ ಶಿಶ್ಕೋವಾ ಹೇಳಿದ್ದಾರೆ. ಟ್ವೀಟ್ (Tweet)​ ಮಾಡುವ ಮೂಲಕ ಜೋಕರ್ ಮಾಲ್‌ವೇರ್‌ ತೊಂದರೆ ನೀಡುತ್ತಿದ್ದು, ಆಂಡ್ರಾಯ್ಡ್ ಫೋನ್ (Android Smartphone) ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.

    Joker Malware Is Back: ಜೋಕರ್ ಮಾಲ್‌ವೇರ್ ಕನಿಷ್ಠ 14 ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಿಗೆ ಸೋಂಕು ತಗುಲಿದೆ ಎಂದು ಶಿಶ್ಕೋವಾ ಕಂಡುಕೊಂಡರು. ಜೋಕರ್ ಮಾಲ್‌ವೇರ್ ಕಳೆದ ವರ್ಷ ಹಲವಾರು ಅಪ್ಲಿಕೇಶನ್‌ಗಳಿಗೆ ಸೋಂಕು ತಗುಲಿದ ನಂತರ ಸಾಕಷ್ಟು ಭಯವನ್ನು ಸೃಷ್ಟಿಸಿತು. ಬಳಕೆದಾರರನ್ನು ರಕ್ಷಿಸಲು Google ಮಧ್ಯಪ್ರವೇಶಿಸಿ ಆ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಬೇಕಾಯಿತು. ಆದರೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮಾಲ್‌ವೇರ್ ಮತ್ತೆ ಬಂದಂತೆ ತೋರುತ್ತಿದೆ.

    ಜೋಕರ್ ಮಾಲ್‌ವೇರ್‌ಗೆ ತಗುಲಿದ ಅಪ್ಲಿಕೇಶನ್‌ಗಳು 50,000 ಕ್ಕೂ ಹೆಚ್ಚು ಸ್ಥಾಪನೆಗಳೊಂದಿಗೆ ಸಾಕಷ್ಟು ಜನಪ್ರಿಯವಾಗಿವೆ. ಆದರೆ ಕೆಲವು ಅಪ್ಲಿಕೇಶನ್‌ಗಳು ಜನಪ್ರಿಯವಾಗಿದ್ದು, ಅದರಲ್ಲೂ ಜೋಕರ್​ ಮಾಲ್​ವೇರ್​​ ಅಡಗಿದೆ ಎಂದು  ಶಿಶ್ಕೋವಾ ಪಟ್ಟಿ ರಚಿಸಿ ಬಿಡುಗಡೆ ಮಾಡಿದ್ದಾರೆ.

    ಜೋಕರ್ ಮಾಲ್ವೇರ್ ಎಂದರೇನು ಮತ್ತು ಅದು ಏನು ಮಾಡುತ್ತದೆ?

    ಜೋಕರ್ ಮಾಲ್‌ವೇರ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿನಲ್ಲಿರುವ ಜನಪ್ರಿಯ ಅಪ್ಲಿಕೇಶನ್‌ಗಳಿಗೆ ಸೋಂಕು ತಗುಲಿಸುತ್ತದೆ ಮತ್ತು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿದಾಗ ಬಳಕೆದಾರರ ಫೋನಿನಲ್ಲಿರುವ ಖಾಸಗಿ ಮಾಹಿತಿ ಮೇಲೆ ಕಣ್ಣಾಡಿಸುತ್ತದೆ. ಕೆಲವು ಕೋಡ್​ಗಳಿಂದ ಜೋಕರ್ ಮಾಲ್‌ವೇರ್ ಗೂಗಲ್ ಪ್ಲೇ ಸ್ಟೋರ್‌ ಪ್ರವೇಶಿಸುತ್ತದೆ. ನಂತರ ಪ್ಲೇ ಸ್ಟೋರ್‌ನ ಭದ್ರತೆ ಮತ್ತು ಪರಿಶೀಲನೆ ತಪಾಸಣೆಗಳನ್ನು ಬೈಪಾಸ್ ಮಾಡುತ್ತದೆ.

    ಜೀಕರ್​ ಮಾಲ್​ವೇರ್​​​ ಉಪಟಳ ಇದೇ ಮೊದಲೇನಲ್ಲ. ಇದಕ್ಕೂ ಹಿಂದೆ ಅನೇಕ ಬಾರಿ ಕಾಣಿಸಿಕೊಂಡಿದೆ. ಇದನ್ನು ಮೊದಲು 2017 ರಲ್ಲಿ ಕಂಡುಹಿಡಿಯಲಾಯಿತು ಮತ್ತು ವರ್ಷಗಳಿಂದ ಈ ಮಾಲ್‌ವೇರ್‌ನಿಂದ ಬಳಕೆದಾರರನ್ನು ಸುರಕ್ಷಿತವಾಗಿರಿಸಲು Google ತೀವ್ರವಾಗಿ ಹೋರಾಡುತ್ತಿದೆ.

    ಇದನ್ನು ಓದಿ: Airtel Prepaid Plans: ನವೆಂಬರ್​ 26ರಿಂದ ದುಬಾರಿಯಾಗಲಿದೆ ಏರ್​ಟೆಲ್​ ಪ್ರಿಪೇಯ್ಡ್​ ಪ್ಲಾನ್​ಗಳು!

    ಹಣ ಕಡಿಯುತ್ತದೆ ಈ ಮಾಲ್​ವೇರ್​

    ಜೋಕರ್ ಮಾಲ್‌ವೇರ್ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲ. ಆನ್‌ಲೈನ್ ಸೇವೆಗಳಿಗೆ ಚಂದಾದಾರರಾಗುವ ಬಳಕೆದಾರರ ಹಣವನ್ನು ರಹಸ್ಯವಾಗಿ ಕದಿಯುತ್ತದೆ. ಮಾತ್ರವಲ್ಲದೆ ಆನ್‌ಲೈನ್ ಜಾಹೀರಾತುಗಳನ್ನು ಸ್ವಯಂಚಾಲಿತವಾಗಿ ಕ್ಲಿಕ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಪಾವತಿಗಳನ್ನು ರಹಸ್ಯವಾಗಿ ಅನುಮೋದಿಸಲು SMS ನಿಂದ ಅಥವಾ OTP ಗಳಿಂದ ಬಳಕೆದಾರರನ್ನು ಸಂಪರ್ಕಿಸಬಹುದಾಧ ಸಾಮರ್ಥ್ಯ ಹೊಂದಿದೆ. ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಪರಿಶೀಲಿಸದೆ ಆನ್‌ಲೈನ್‌ನಲ್ಲಿ ಕೆಲವು ಸೇವೆಗಳಿಗೆ ಚಂದಾದಾರರಾಗಿರುವವರು. ಜೋಕರ್​ ಮಾಲ್​ವೃ್​ ಬಗ್ಗೆ ಎಚ್ಚೆತ್ತುಕೊಳ್ಳುವುದು ಉತ್ತಮ.

    ಇದನ್ನು ಓದಿ: Twitter: ಟಿಪ್ಸ್ ಕೇಳಿ ಅದರಿಂದ ಹಣ ಗಳಿಸುವ ಹೊಸಾ ಆಪ್ಶನ್ ಕೊಟ್ಟಿದೆ ಟ್ವಿಟರ್, ಫುಲ್ ಡೀಟೆಲ್ಸ್ ಇಲ್ಲಿದೆ

    ಜೋಕರ್ ಮಾಲ್‌ವೇರ್​ನಿಂದ ಸುರಕ್ಷಿತವಾಗಿರಲು ಸ್ಮಾರ್ಟ್​ಫೋನ್​​ನಲ್ಲಿರುವ 15 ಅಪ್ಲಿಕೇಶನ್‌ಗಳನ್ನು ಅಳಿಸಿ:

    1. Easy PDF Scanner

    2. Now QRCode Scan

    3. Super-Click VPN

    4. Volume Booster Louder Sound Equalizer

    5. Battery Charging Animation Bubble Effects

    6. Smart TV Remote

    7. Volume Boosting Hearing Aid

    8. Flashlight Flash Alert on Call

    9. Halloween Coloring

    10. Classic Emoji Keyboard

    11. Super Hero-Effect

    12. Dazzling Keyboard

    13. EmojiOne Keyboard

    14. Battery Charging Animation Wallpaper

    15. Blender Photo Editor-Easy Photo Background Editor
    Published by:Harshith AS
    First published: