Jio Tv ಪಾಲಾಯ್ತು 'ಬೆಸ್ಟ್ ಮೊಬೈಲ್ ವಿಡಿಯೋ ಕಂಟೆಂಟ್' ಅವಾರ್ಡ್
Updated:March 1, 2018, 5:42 PM IST
Updated: March 1, 2018, 5:42 PM IST
ನ್ಯೂಸ್ 18 ಕನ್ನಡ
'ಗ್ಲೋಬಲ್ ಮೊಬೈಲ್ ಅವಾರ್ಡ್ 2018' ನಲ್ಲಿ ನೀಡಲಾಗುವ 'ಬೆಸ್ಟ್ ಮೊಬೈಲ್ ವಿಡಿಯೋ ಕಂಟೆಂಟ್' ರಿಲಾಯನ್ಸ್ ಜಿಯೋ ಇನ್ಫೋಕಾಮ್ನ Jio TV ಆ್ಯಪ್ ಪಾಲಾಗಿದೆ. ಈ ಅವಾರ್ಡ್ಗಾಗಿ Airtel TV, Hot Video ಹಾಗೂ Bioscope Live TV ನಾಮಿನೇಟ್ ಆಗಿದ್ದವು. ಆದರೆ ಈ ಅವಾರ್ಡ್ Jio TV ಪಾಲಾಗಿದೆ.
GSMA ನಡೆಸಿದ ಗ್ಲೋಬಲ್ ಅವಾರ್ಡ್, ಮೊಬೈಲ್ ಜಗತ್ತಿನಲ್ಲಿ ಆಸ್ಕರ್ ಪ್ರಶಸ್ತಿಗೆ ಸಮವಾಗಿದೆ. ಈ ಅವಾರ್ಡ್ ಶೋನಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಒತ್ತು ನೀಡುವ ಕಂಪೆನಿಗಳನ್ನು ಪುರಸ್ಕರಿಸುತ್ತಾರೆ. ಮೊಬೈಲ್ ಇಂಡಸ್ಟ್ರಿಯಲ್ಲಿ ಹೆಸರುವಾಸಿಯಾಗಿರುವ ಈ ಅವಾರ್ಡ್ ಡಿವೈಸ್, ಶಿಕ್ಷಣ ಹಾಗೂ ಆರೋಗ್ಯಕ್ಕಾಗಿ ತಂತ್ರಜ್ಞಾನ, ಅಪ್ಲಿಕೇಷನ್ನಲ್ಲಿ ಹೊಸತನ ಪರಿಚಯಿಸುವುದಕ್ಕಾಗಿ ನೀಡಲಾಗುತ್ತದೆ.
ಈ ಅವಾರ್ಡ್ ನೀಡಿದ ಬಳಿಕ ಪ್ರತಿಕ್ರಿಯಿಸಿದ ತೀರ್ಪುಗಾರರೊಬ್ಬರು 'ದೇಶದ ಸುಮಾರು ಅರ್ಧದಷ್ಟು ಜನರು ಟಿವಿ ಖರೀದಿಸಲು ಅಸಮರ್ಥರಾಗಿದ್ದಾರೆ. ಹೀಗಿರುವಾಗ ಜಿಯೋ TV ದೊಡ್ಡ ಸಂಖ್ಯೆಯಲ್ಲಿ ಜನರ ಬಳಿ ತಲುಪಿ ಅವರ ಅಗತ್ಯತೆಗಳಿಗೆ ತಕ್ಕಂತೆ ಕಂಟೆಂಟ್ ಒದಗಿಸುತ್ತಿದೆ' ಎಂದಿದ್ದಾರೆ.ಇನ್ನು ಇದೇ ವಿಚಾರವಾಗಿ ಮಾತನಾಡಿದ ಜ್ಯೋತೀಂದ್ರಾ ಥಕ್ಕರ್ 'ಜಿಯೋ ಟಿವಿಗೆ ಈ ಅವಾರ್ಡ್ ಸಿಕ್ಕಿತೆಂದು ನಮಗೆ ಬಹಳ ಖುಷಿ ಇದೆ. ಈ ಮೂಲಕ ನಾವು ಪ್ರಸಾರ ಮಾಡುತ್ತಿರುವ ಕಂಟೆಂಟ್ ಜನರಿಗೆ ಬಹಳ ಇಷ್ವಾಗಿದೆ ಎಂಬುವುದು ತಿಳಿಯುತ್ತದೆ. ಭಾರತೀಯರನ್ನು ಅಶಕ್ತರನ್ನಾಗಿಸುವುದೇ ನಮ್ಮ ಉದ್ದೆಶ' ಎಂದಿದ್ದಾರೆ.

Loading...