HOME » NEWS » Tech » JIOPHONE OFFER RELIANCE JIO OFFERING UP TO 504GB DATA WITH UNLIMITED FREE CALL FOR NEW JIOPHONE ANNUAL PLANS CHECK DETAILS HG

JioPhone Offer: ಜಿಯೋಫೋನ್ ಬಳಕೆದಾರರಿಗೆ ಸಿಹಿಸುದ್ದಿ; ಈ ವಾರ್ಷಿಕ ಪ್ಲಾನ್ ಅಳವಡಿಕೊಂಡರೆ 504 GB ಡೇಟಾ ಉಚಿತ!

JioPhone Annual Plans: ನೂತನ ಪ್ಲಾನ್​ ಮೂಲಕ 504GB ಡೇಟಾ ನೀಡುತ್ತಿದೆ. 336 ದಿನಗಳ ಕಾಲ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್​ನಲ್ಲಿ ಅನ್​ಲಿಮಿಟೆಡ್​ ನೆಟ್​ ಕಾಲಿಂಗ್​ ಮಾಡುವ ಆಯ್ಕೆಯನ್ನು ನೀಡಿದೆ.

news18-kannada
Updated:November 6, 2020, 3:19 PM IST
JioPhone Offer: ಜಿಯೋಫೋನ್ ಬಳಕೆದಾರರಿಗೆ ಸಿಹಿಸುದ್ದಿ; ಈ ವಾರ್ಷಿಕ ಪ್ಲಾನ್ ಅಳವಡಿಕೊಂಡರೆ 504 GB ಡೇಟಾ ಉಚಿತ!
JioPhone
  • Share this:
ಜಿಯೋಫೋನ್​ ಬಳಕೆದಾರರಿಗಾಗಿ ರಿಲಾಯನ್ಸ್​ ಜಿಯೋ ಹೊಸ ವಾರ್ಷಿಕ ಪ್ಲಾನ್​ ಪರಿಚಯಿಸಿದೆ. ನೂತನ ಪ್ಲಾನ್​ ಮೂಲಕ 504GB ಡೇಟಾ ನೀಡುತ್ತಿದೆ. 336 ದಿನಗಳ ಕಾಲ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್​ನಲ್ಲಿ ಅನ್​ಲಿಮಿಟೆಡ್​ ನೆಟ್​ ಕಾಲಿಂಗ್​ ಮಾಡುವ ಆಯ್ಕೆಯನ್ನು ನೀಡಿದೆ. ಅದರ ಜೊತೆಗೆ ಜೊತೆಗೆ ಜಿಯೋಫೋನ್​ ಹಲವಾರು ವಾರ್ಷಿಕ ಪ್ಲಾನ್​ ಪರಿಚಯಿಸಿದೆ. 1,001 ರೂನಿಂದ ಪ್ಲಾನ್​ ಆರಂಭಗೊಳ್ಳುತ್ತದೆ. ಹೆಚ್ಚಿನ ಮಾಹಿತಿ ಇಲ್ಲಿದೆ.

ಜಿಯೋಫೋನ್ ವಾರ್ಷಿಕ ಪ್ಲಾನ್​:

-ಜಿಯೋ ಪರಿಚಯಿಸಿರುವ 1,001 ರೂ. ಪ್ಲಾನ್ ಅಳವಡಿಸಿಕೊಂಡರೆ ಜಿಯೋದಿಂದ ಜಿಯೋ ನೆಟ್​ವರ್ಕ್​ಗೆ ಉಚಿತ ಅನಿಯಮಿತ ಕರೆಯನ್ನು ನೀಡುತ್ತಿದೆ. ಪ್ರತಿದಿನ 100 ಎಸ್​ಎಮ್​ಎಸ್​ ಸಿಗಲಿದೆ. ಅದರ ಜೊತೆಗೆ 4G ನೆಟ್​ವರ್ಕ್​ನಡಿಯಲ್ಲಿ 49GB ಡೇಟಾ ನೀಡುತ್ತಿದೆ. ವಾರ್ಷಿಕ ಡೇಟಾ ಇದಾಗಿದ್ದು, ಪ್ರತಿದಿನ 150ಎಂಬಿ ಬಳಸಬಹುದಾಗಿದೆ. ಬೇರೆ ನೆಟ್​ವರ್ಕ್​ ಕರೆ ಮೇಲೆ 12,000 ನಿಮಿಷಗಳ ಎಫ್​ಯುಪಿ ನೀಡುತ್ತಿದೆ.

-ಜಿಯೋಫೋನ್​ ಬಳಕೆದಾರಿಗಾಗಿ 1,301 ರೂವಿನ ಪ್ಲಾನ್​​ ಪರಿಚಯಿಸಿದೆ.  ಈ ಪ್ಲಾನ್​​ ಮೂಲಕ 4G ನೆಟ್​ವರ್ಕ್​​​ನಡಿಯಲ್ಲಿ 164GB ವಾರ್ಷಿಕ ಡೇಟಾ ನೀಡುತ್ತಿದೆ. ಪ್ರತಿದಿನ 500ಎಂಬಿ ಡೇಟಾ ಬಳಕೆಗೆ ಸಿಗಲಿದೆ. ಬೇರೆ ನೆಟ್​ವರ್ಕ್​ ಕರೆಗಳ ಮೇಲೆ 12,000 ನಿಮಿಷಗಳ ಎಫ್​ಯುಪಿ ನೀಡುತ್ತಿದೆ. ಜೊತೆಗೆ 100 ಎಸ್​ಎಮ್​ಎಸ್​ ಉಚಿತವಾಗಿದೆ.

-ರೂ. 1501 ಬೆಲೆಯ ವಾರ್ಷಿಕ ಪ್ರಿಪೇಯ್ಡ್​ ಪ್ಲಾನ್​ನಲ್ಲಿ 504GB  ಡೇಟಾ ನೀಡುತ್ತಿದೆ. 336 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್​ ಮೂಲಕ ಪ್ರತಿದಿನ 1.5GB ಡೇಟಾ ಬಳಕೆಗೆ ಸಿಗಲಿದೆ. ಇತರೆ ನೆಟ್​ವರ್ಕ್​ ಕರೆಗಳ ಮೇಲೆ 1200 ಎಫ್​ಯುಪಿ ಆಯ್ಕೆಯನ್ನು ನೀಡುತ್ತಿದೆ. ಜೊತೆಗೆ 100 ಎಸ್​ಎಮ್​ಎಸ್​ ಉಚಿತವಾಗಿದೆ.
Published by: Harshith AS
First published: November 6, 2020, 3:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories