JioPhone Next: ದೀಪಾವಳಿಗೂ ಮುನ್ನ ಬಿಡುಗಡೆಯಾಗಲಿದೆ ಜಿಯೋಫೋನ್ ನೆಕ್ಸ್ಟ್.. ಜಿಯೋ-ಗೂಗಲ್​​ ಕಾಂಬಿನೇಷನ್​ ಹೇಗಿದೆ?

ಗೂಗಲ್ ಅಸಿಸ್ಟೆಂಟ್, ಸ್ವಯಂಚಾಲಿತ ಓದುವಿಕೆ ಮತ್ತು ಯಾವುದೇ ಆನ್-ಸ್ಕ್ರೀನ್ ಪಠ್ಯಕ್ಕೆ ಭಾಷಾ ಅನುವಾದ, ಭಾರತ ಕೇಂದ್ರಿತ ಫಿಲ್ಟರ್ ಹೊಂದಿರುವ ಸ್ಮಾರ್ಟ್ ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

JioPhone Next

JioPhone Next

  • Share this:
    ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್‌ ದೀಪಾವಳಿಯ ವೇಳೆಗೆ ಲಾಂಚ್ ಆಗುತ್ತದೆ ಎಂದು ಜಿಯೋ ಮತ್ತು ಗೂಗಲ್ ಸೆಪ್ಟೆಂಬರ್ 10 ರಂದು ಮಾಹಿತಿ ನೀಡಿದೆ. ಕೈಗೆಟುಕುವ ಬೆಲೆಯ ಈ ಸ್ಮಾರ್ಟ್‌ ಫೋನ್‌ ಅನ್ನು ಮೊದಲಿಗೆ ಸೆಪ್ಟೆಂಬರ್ 10 ರಂದು ಗಣೇಶ ಚತುರ್ಥಿಯಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಇನ್ನು, ಜಿಯೋ ಮತ್ತು ಗೂಗಲ್ ಕಂಪನಿಗಳು ಈ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವ ನಿಟ್ಟಿನಲ್ಲಿ "ಗಣನೀಯ ಪ್ರಗತಿ" ಸಾಧಿಸಿವೆ ಎಂದು ಹೇಳಿದರು.

    ಜಿಯೋ-ಗೂಗಲ್​​ ಜಂಟಿ ಗ್ರಾಹಕರಿಗೆ ಹಬ್ಬ 

    "ಎರಡೂ ಕಂಪನಿಗಳು ಮತ್ತಷ್ಟು ಪರಿಷ್ಕರಣೆಗಾಗಿ ಸೀಮಿತ ಬಳಕೆದಾರರೊಂದಿಗೆ ಜಿಯೋಫೋನ್ ನೆಕ್ಸ್ಟ್ ಅನ್ನು ಪರೀಕ್ಷಿಸಲು ಆರಂಭಿಸಿವೆ ಮತ್ತು ದೀಪಾವಳಿ ಹಬ್ಬದ ಸಮಯದಲ್ಲಿ ಈ ಸ್ಮಾರ್ಟ್‌ಫೋನ್‌ ಅನ್ನು ಹೆಚ್ಚು ವ್ಯಾಪಕವಾಗಿ ಲಭ್ಯವಾಗುವಂತೆ ಮಾಡಲು ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಈ ಹೆಚ್ಚುವರಿ ಸಮಯವು ಪ್ರಸ್ತುತ ಉದ್ಯಮದಾದ್ಯಂತ, ಜಾಗತಿಕ ಸೆಮಿ ಕಂಡಕ್ಟರ್ ಕೊರತೆಯನ್ನು ತಗ್ಗಿಸಲು ಸಹಾಯ ಮಾಡುತ್ತದೆ'' ಎಮದು ಜಿಯೋ ಮತ್ತು ಗೂಗಲ್ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ.

    ಜಿಯೋಫೋನ್ ನೆಕ್ಸ್ಟ್​​​ನ ವಿಶೇಷತೆ

    ಜಿಯೋಫೋನ್ ನೆಕ್ಸ್ಟ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನ ಒಂದು ಆಪ್ಟಿಮೈಸ್ಡ್ ಆವೃತ್ತಿಯಿಂದ ಕಾರ್ಯ ನಿರ್ವಹಿಸುತ್ತದೆ. ಅಲ್ಲದೆ, ಗೂಗಲ್ ಅಸಿಸ್ಟೆಂಟ್, ಸ್ವಯಂಚಾಲಿತ ಓದುವಿಕೆ ಮತ್ತು ಯಾವುದೇ ಆನ್-ಸ್ಕ್ರೀನ್ ಪಠ್ಯಕ್ಕೆ ಭಾಷಾ ಅನುವಾದ, ಭಾರತ ಕೇಂದ್ರಿತ ಫಿಲ್ಟರ್ ಹೊಂದಿರುವ ಸ್ಮಾರ್ಟ್ ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ.
    ಇನ್ನು,  ಬಳಕೆದಾರರು ಇತ್ತೀಚಿನ ಕ್ರಿಕೆಟ್ ಸ್ಕೋರ್‌ ಮತ್ತು ಹವಾಮಾನ ನವೀಕರಣಗಳನ್ನು ಪರಿಶೀಲಿಸಲು ಸಹ ಸಾಧ್ಯವಾಗುತ್ತದೆ. ಜತೆಗೆ, ಜಿಯೋ ಸಾವನ್‌ನಲ್ಲಿ ಸಂಗೀತ ಪ್ಲೇ ಮಾಡಲು ಅಥವಾ ಮೈ ಜಿಯೋದಲ್ಲಿ ತಮ್ಮ ಸಿಮ್‌ನ ಬ್ಯಾಲೆನ್ಸ್‌ ಚೆಕ್‌ ಮಾಡಲು ಗೂಗಲ್ ಅಸಿಸ್ಟೆಂಟ್‌ಗೆ ಕೇಳಬಹುದಾಗಿದೆ.

    ಜಿಯೋಫೋನ್ ನೆಕ್ಸ್ಟ್ ಫೀಚರ್ಸ್​​

    ಇಷ್ಟೆಲ್ಲಾ, ಫೀಚರ್ಸ್‌ ಹೊಂದಿರುವ 4 ಜಿ ಸ್ಮಾರ್ಟ್‌ಫೋನ್‌ ಬೆಲೆ ಇನ್ನೂ ಬಹಿರಂಗಗೊಂಡಿಲ್ಲ. ಜಿಯೋಫೋನ್‌ ನೆಕ್ಸ್ಟ್‌ ಬಿಡುಗಡೆ ಆಗುವ ವೇಳೆಗೆ ಇದರ ಬೆಲೆಯು ನಿರ್ಧಾರವಾಗಲಿದೆ ಎಂದು ಹೇಳಲಾಗುತ್ತಿದೆ. ಜೂನ್ 24 ರಂದು ನಡೆದ ರಿಲಯನ್ಸ್ ಇಂಡಸ್ಟ್ರೀಸ್ AGMನಲ್ಲಿ ,  ಜಿಯೋಫೋನ್ ನೆಕ್ಸ್ಟ್ "ಜಾಗತಿಕವಾಗಿ ಅತ್ಯಂತ ಒಳ್ಳೆ ಸ್ಮಾರ್ಟ್‌ಫೋನ್‌" ಎಂದು ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಹೇಳಿದ್ದರು. ರಿಲಯನ್ಸ್ ಜಿಯೋ ಕಂಪನಿಯು ಜಿಯೋ 5 ಜಿ ಸೊಲ್ಯೂಷನ್ಸ್‌ಗಳನ್ನು ಮತ್ತು ಅದರ ಇತರ ಆಂತರಿಕ ಸೇವೆಗಳಾದ ಜಿಯೋಸಾವನ್‌,  ಜಿಯೋಮಾರ್ಟ್ ಮತ್ತು ಹೆಚ್ಚಿನವುಗಳಿಗೆ ಶಕ್ತಿ ತುಂಬಲು ಗೂಗಲ್ ಕ್ಲೌಡ್‌ ಅನ್ನು ಬಳಸುವುದಾಗಿಯೂ  AGMನಲ್ಲಿ ಘೋಷಿಸಿತ್ತು.

    ಇದನ್ನೂ ಓದಿ: Reliance Jio: ಅಗ್ಗದ ಇವೆರಡು ಪ್ರಿಪೇಯ್ಡ್​ ಪ್ಲಾನ್​ಗಳನ್ನ ನಿಲ್ಲಿಸಿದ ರಿಲಯನ್ಸ್ ಜಿಯೋ!

    ಅಲ್ಲದೆ, ಜಿಯೋಫೋನ್ ನೆಕ್ಸ್ಟ್ "ಸಂಪೂರ್ಣ ವೈಶಿಷ್ಟ್ಯಪೂರ್ಣ" ಸ್ಮಾರ್ಟ್‌ಫೋನ್‌ ಆಗಿದ್ದು, ಗೂಗಲ್ ಮತ್ತು ಜಿಯೋ ಎರಡರಿಂದಲೂ ಸಂಪೂರ್ಣ ಅಪ್ಲಿಕೇಶನ್ ಅನ್ನು ಬೆಂಬಲಿಸುತ್ತದೆ. "ಮತ್ತು ನೀವು ಜಿಯೋದಿಂದ ನಿರೀಕ್ಷಿಸಿದಂತೆ, ಜಿಯೋಫೋನ್ ನೆಕ್ಸ್ಟ್ ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿ ಅತ್ಯಂತ ಒಳ್ಳೆ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ ಎಂಬುದು ನನ್ನ ಭರವಸೆ" ಎಂದೂ ಹೇಳಿದರು. ಇತ್ತೀಚೆಗಷ್ಟೇ ರಿಲಯನ್ಸ್‌ ಇಂಡಸ್ಟ್ರೀಸ್‌, ರಿಲಯನ್ಸ್‌ ಜಿಯೋದ ಐದನೇ ವರ್ಷದ ವಾರ್ಷಿಕೋತ್ಸವವನ್ನು ಆಚರಣೆ ಮಾಡಿತ್ತು.

    ಕೆಲ ಜಿಯೋ ಸೇವೆಗಳು ಬಂದ್​​

    ಇನ್ನು ಟೆಲಿಕಾಂ ಕ್ಷೇತ್ರದಲ್ಲಿ ತನ್ನದೇ ಆತ ಸ್ಥಾನ ಪಡೆದಿರುವ ರಿಲಯನ್ಸ್ ಜಿಯೋ ಗ್ರಾಹಕರಿಗಾಗಿ ಅಧಿಕ ಪ್ರಯೋಜನವಿರುವ ಪ್ಲಾನ್​ಗಳನ್ನು ಪರಿಚಯಿಸುತ್ತಾ ಬಂದಿದೆ. ಆದರೀಗ ಅಗ್ಗದ ಬೆಲೆಯಲ್ಲಿ ಲಭ್ಯವಿರುವ ಎರಡು ಪ್ರಿಪೇಯ್ಡ್ ಜಿಯೋಫೋನ್ ಪ್ಲಾನ್ ಗಳನ್ನು ಸ್ಥಗಿತಗೊಳಿಸಿದೆ. ಟೆಲಿಕಾಂ ಆಪರೇಟರ್ ಜಿಯೋ 39 ರೂ. ಮತ್ತು 69 ರೂ.ವಿನ ಪ್ರಿಪೇಯ್ಡ್ ಜಿಯೋಫೋನ್​ ಪ್ಲಾನ್ ಗಳನ್ನು ತೆಗೆದು ಹಾಕಿರುವಂತೆ ತೋರುತ್ತಿದೆ. ಏಕೆಂದರೆ ಜಿಯೋ ಅಧಿಕೃತ ವೆಬ್ ಸೈಟ್ ಅಥವಾ ಮೈಜಿಯೋ ಆಪ್ ನಲ್ಲಿ ಈ ಯೋಜನೆಗಳು ಕಣ್ಮರೆಯಾಗಿವೆ.
    Published by:Kavya V
    First published: