JioPhone Next: ಕಡಿಮೆ ಬೆಲೆಗೆ ಗ್ರಾಹಕರ ಸೇರಲಿದೆ ಜಿಯೋ ನೆಕ್ಸ್ಟ್​​; ಮುಂದಿನ ತಿಂಗಳು ಬಿಡುಗಡೆ ಸಾಧ್ಯತೆ

JioPhone Next

JioPhone Next

ಜಿಯೋ ನೆಕ್ಸ್ಟ್​​​​ ಸ್ನಾಪ್​ಡ್ರಾಗನ್​ 215 ಚಿಪ್​ಸೆಟ್​​ನಲ್ಲಿ ಬೆಂಬಲ ಪಡೆದಿದ್ದು, ಆ್ಯಂಡ್ರಾಯ್ಡ್​ 11 ನಲ್ಲಿ ಕಾರ್ಯನಿರ್ವಹಿಸಲಿದೆ.  ಗ್ರಾಹಕರಿಗಾಗಿ 16GB/32GB ಸ್ಟೊರೇಜ್​ ಆಯ್ಕೆಯಲ್ಲಿ ಪರಿಚಯಿಸುವ ಸಾಧ್ಯತೆಯಿದೆ.

  • Share this:

ಜನಪ್ರಿಯ ರಿಲಯನ್ಸ್​ ಕಂಪನಿ ಜಿಯೋ ನೆಕ್ಸ್ಟ್​​​​ ಹೆಸರಿನ ಸ್ಮಾರ್ಟ್​ಫೋನನ್ನು ಸಿದ್ಧಪಡಿಸಿದ್ದು, ಮುಂದಿನ ತಿಂಗಳು ಪರಿಚಯಿಸಲು ಮುಂದಾಗಿದೆ. ಪ್ರತಿ ಬಾರಿ ಕಡಿಮೆ ಬೆಲೆಯ ಹಾಗೂ ಗ್ರಾಹಕರಿಗೆ ಕಡಿಮೆ ಬಜೆಟ್​ನ ಫೋನ್​ಗಳನ್ನು ಪರಿಚಯಿಸುತ್ತಿದ್ದ ರಿಲಯನ್ಸ್ ಸಂಸ್ಥೆ ಇದೀಗ ಕಡಿಮೆ ಬೆಲೆಗೆ ಜಿಯೋ ನೆಕ್ಸ್ಟ್​​​​ ಹೆರಿನಲ್ಲಿ ಸ್ಮಾರ್ಟ್​ಫೋನ್​ ಪರಿಚಯಿಸುವ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿದೆ.


ET ಟೆಲಿಕಾಂ ವರದಿ ಪ್ರಕಾರ ರಿಲಯನ್ಸ್​ ಜಿಯೋ ಮೊಬೈಲ್​ ಫೋನ್​ ಬಿಡಿಭಾಗಗಳ ತಯಾರಿಕಕಾ ಕಂಪನಿ UTL​​ Neolync 5 ಮಿಲಿಯನ್​​ ಯುನಿಟ್​ಗಾಗಿ ಆರ್ಡರ್​​​ ನೀಡಿದೆ ಎಂದು ತಿಳಿಸಿದೆ.


ಜಿಯೋ ನೆಕ್ಸ್ಟ್​​​​ ಫೋನ್​ ಬಗ್ಗೆ ಈಗಾಗಲೇ ಕುತೂಹಲತೆ ಹುಟ್ಟಿಕೊಂಡಿದ್ದು, ಸ್ಮಾರ್ಟ್​ಫೋನ್​ ಪ್ರಿಯರು ನೂತನ ಫೋನ್​ ಹೇಗಿರಲಿದೆ, ಯಾವೆಲ್ಲಾ ಫೀಚರ್ಸ್​ ಇದರಲ್ಲಿದೆ ಎಂದು ಕಾತುರರಾಗಿದ್ದಾರೆ. ಅಂದಹಾಗೆಯೇ ಗೂಗಲ್​ ಸಹಯೋಗದೊಂದಿಗೆ ಆ್ಯಂಡ್ರಾಯ್ಡ್​ 11ನಲ್ಲಿ ಕಾರ್ಯನಿರ್ವಹಿಸಲಿದೆ. ಮಾಹಿತಿಗಳ ಪ್ರಕಾರ ಸೆಪ್ಟೆಂಬರ್​ 10ರಂದು ಬಿಡುಗಡೆ ಆಗಲಿದ್ದು, ಉಚಿತ ಬುಕ್ಕಿಂಗ್​ ನೀಡುವ ಸಾಧ್ಯತೆಯಿದೆ.


Weight Loss Tips: ಚಿಂತೆ ಬೇಡ.. ತೂಕ ಇಳಿಸಿಕೊಳ್ಳಲು ಇಲ್ಲಿದೆ 26 ಟಿಪ್ಸ್!


ಜಿಯೋ ನೆಕ್ಸ್ಟ್​​​​ ಫೀಚರ್ಸ್​ ಬಗ್ಗೆ ಯಾವುದೇ ಸಂಕ್ಷಿಪ್ತ ಮಾಹಿತಿ ಬಹಿರಂಗಗೊಂಡಿಲ್ಲ. ಆದರೆ ಕೆಲವು ಮಾಹಿತಿಗಳು ಲೀಕ್​ ಆಗಿದ್ದು, ಅದರಲ್ಲಿ ನೂತನ ಸ್ಮಾರ್ಟ್​ಫೋನ್​ 5.5 ಇಂಚಿನ ಡಿಸ್​ಪ್ಲೇ, 2500mAH​ ಸಾಮರ್ಥ್ಯದ ಬ್ಯಾಟರಿ ಇರಲಿದೆ ಎಂದು ಹೇಳಲಾಗುತ್ತದೆ. ಕ್ಯಾಮೆರಾ ಪ್ರಿಯರಿಗಾಗಿ ಇದರಲ್ಲಿ 13 ಮೆಗಾಪಿಕ್ಸೆಲ್​  ಮತ್ತು 8 ಮೆಗಾಪಿಕ್ಸೆಲ್​​ ಎರಡು ಕ್ಯಾಮೆರಾ ನೀಡಲಾಗಿದೆ ಎನ್ನಲಾಗುತ್ತಿದೆ.


ಅಂದಹಾಗೆಯೇ ಜಿಯೋ ನೆಕ್ಸ್ಟ್​​​​ 2GB ಮತ್ತು 3GB RAM​​ ಆಯ್ಕೆಯಲ್ಲಿ ಸಿಗಲಿದೆ. ಜೊತೆಗೆ 16GB ಮತ್ತು 32GB ಇನ್​ಬಿಲ್ಟ್​​ ಸ್ಟೊರೇಜ್​ ಆಯ್ಕೆಯಲ್ಲಿರಲಿದೆ ಎಂದು ಹೇಳಲಾಗುತ್ತಿದೆ


Smartphones Radiation: ಈ ಸ್ಮಾರ್ಟ್​ಫೋನ್​ಗಳು ನಿಮ್ಮ ಬಳಿಯಿದ್ದರೆ ಎಚ್ಚರ, ಹೈ ರೇಡಿಯೇಷನ್​ನಿಂದ ಆಗಲಿದೆ ಭಾರೀ ಸಮಸ್ಯೆ!


ಜಿಯೋ ನೆಕ್ಸ್ಟ್​​​​ ಸ್ನಾಪ್​ಡ್ರಾಗನ್​ 215 ಚಿಪ್​ಸೆಟ್​​ನಲ್ಲಿ ಬೆಂಬಲ ಪಡೆದಿದ್ದು, ಆ್ಯಂಡ್ರಾಯ್ಡ್​ 11 ನಲ್ಲಿ ಕಾರ್ಯನಿರ್ವಹಿಸಲಿದೆ.  ಗ್ರಾಹಕರಿಗಾಗಿ 16GB/32GB ಸ್ಟೊರೇಜ್​ ಆಯ್ಕೆಯಲ್ಲಿ ಪರಿಚಯಿಸುವ ಸಾಧ್ಯತೆಯಿದೆ. ಇದರಲ್ಲಿ ಕ್ಯಾಮೆರಾ ಮಾಡ್ಯೂಲ್​​ ಮತ್ತು ಎಲ್​ಇಡಿ ಫ್ಲಾಷ್​​ ನೀಡಲಾಗಿದ್ದು, 3.5 MM ರೇಡಿಯೋ ಜಾಕ್​ ಅನ್ನು ಇದರಲ್ಲಿ  ಇರಲಿದೆ ಎನ್ನಲಾಗುತ್ತಿದೆ.

top videos


    ಜಿಯೋ ಕಡಿಮೆ ಬೆಲೆಯ ಫೋನ್​ಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿದೆ. ಇದೀಗ ಜಿಯೋ ನೆಕ್ಸ್ಟ್​​​​ ಹೆಸರಿನಲ್ಲಿ ಸ್ಮಾರ್ಟ್​ಫೋನ್​ ಅನ್ನು ಬಿಡುಗಡೆ ಮಾಡುತ್ತಿದ್ದು, ಇದರ ಬೆಲೆ 3,499 ರೂ ಇರಲಿದೆ ಎಂದು ಅಂದಾಜಿಸಲಾಗಿದೆ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು