JioPhone Next: ಕೇವಲ 500 ರೂ.ಗೆ ಸಿಗಲಿದೆ ಜಿಯೋಫೋನ್​ ನೆಕ್ಸ್ಟ್​​!

JioPhone Next: ರಿಲಯನ್ಸ್​ ಎರಡು ಜಿಯೋಫೋನ್​ ನೆಕ್ಸ್ಟ್​​ ಮಾಡೆಲ್​ ಅನ್ನು ಸಿದ್ಧಪಡಿಸಿದೆ. ಅದರಲ್ಲಿ ಒಂದು ಬೇಸಿಕ್​  ಜಿಯೋಫೋನ್​ ನೆಕ್ಸ್ಟ್ ((Basic JioPhone Next)​) ​​ಆಗಿದ್ದು, ಇದರ ಬೆಲೆ 5 ಸಾವಿರ ರೂ ಇರಲಿದೆ. ಮತ್ತೊಂದು ಅಡ್ವಾನ್ಸ್​ ಜಿಯೋಫೋನ್​ ನೆಕ್ಸ್ಟ್​ ((Advannce JioPhone Next))​ ಆಗಿದ್ದು, ಇದರ ಬೆಲೆ 7 ಸಾವಿರ ಇರಲಿದೆ ಎನ್ನಲಾಗುತ್ತಿದೆ.

JioPhone Next

JioPhone Next

  • Share this:
    ರಿಲಯನ್ಸ್​ ಜಿಯೋ ಉತ್ಪಾದಿಸಿದ ಜಿಯೋಫೋನ್​ ನೆಕ್ಸ್ಟ್ (JioPhone Next) ಇದೇ ತಿಂಗಳು ಮಾರುಕಟ್ಟೆಗೆ ಬರಲಿದೆ. ನೂತನ ಸ್ಮಾರ್ಟ್​ಫೋನ್​ ಅತಿ ಕಡಿಮೆ ದರದಲ್ಲಿ ಗ್ರಾಹಕರಿಗೆ ಸಿಗಲಿದೆ ಎನ್ನಲಾಗುತ್ತಿದೆ. ಮಾಹಿತಿಗಳ ಪ್ರಕಾರ ಸೆಪ್ಟೆಂಬರ್​ 10ರಂದು ಜಿಯೋಫೋನ್​ ನೆಕ್ಸ್ಟ್​ ಮಾರುಕಟ್ಟೆ ಪ್ರವೇಶಿಸಲಿದ್ದು, ಕೇವಲ 500 ರೂ.ಗೆ ಖರೀದಿಸುವ ಅವಕಾಶ ಕಲ್ಪಿಸಲಿದೆ ಎಂಬ ಮಾತು ಕೇಳಿಬಂದಿದೆ.

    ಇಕಾನಾಮಿಕ್ಸ್​ ಟೈಮ್ಸ್​ ವರದಿಯ ಪ್ರಕಾರ, ರಿಲಾಯನ್ಸ್​ ಜಿಯೋ (Reliance Jio) ಭಾರತದ ಕೆಲವು ಬ್ಯಾಂಕ್​ಗಳೊಂದಿಗೆ ಪಾಲುದಾರಿಕೆ ಹೊಂದಿದ್ದು, ಜಿಯೋ ನೆಕ್ಸ್ಟ್​​ ಫೋನನ್ನು ವಿವಿಧ ಪಾವತಿ ವಿಧಾನದ ಮೂಲಕ ಮಾರಾಟ ಮಾಡಲು ಮುಂದಾಗಿದೆ. ಅಂದಹಾಗೆಯೇ ರಿಲಯನ್ಸ್​​ ಜಿಯೋ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ (State bank of India), ಪಿರಾಮಲ್​ ಕ್ಯಾಪಿಟಲ್( Piramal Capital)​, ಐಡಿಎಫ್​ಸಿ ಫಸ್ಟ್ ​ ಅಶ್ಯೂರ್​ ( IDFC First Assure) ಮತ್ತು ಡಿಎಮ್​ಐ ಫೈನಾನ್ಸ್​ ನೊಂದಿಗೆ ( DMI Finance)) ಕೈ ಜೋಡಿಸಿದೆ. ಹಾಗಾಗಿ ಮುಂದಿನ 6 ತಿಂಗಳು 50 ಮಿಲಿಯನ್​ ಯುನಿಟ್​ಗಳಲ್ಲಿ ಮಾರಾಟ ಮಾಡುವ ಮೂಲಕ 10 ಸಾವಿರ ಕೋಟಿ ವ್ಯವಹಾರವನ್ನು ತಲುಪುವುದು ಕಂಪನಿ ಗುರಿಯಾಗಿದೆ. ಆದ್ದರಿಂದ ರಿಲಯನ್ಸ್​ಜಿಯೋ ಫೋನ್​​ ನೆಕ್ಸ್ಟ್​​​ ಕಡಿಮೆ ಬೆಲೆಗೆ ಖರೀದಿಗೆ ಸಿಗಲಿದೆ ಎನ್ನಲಾಗುತ್ತಿದೆ

    ಜಿಯೋಫೋನ್​ ನೆಕ್ಸ್ಟ್​​ ಸುಲಭ ಮಾರಾಟವನ್ನು ಚಿಂತಿಸಿದೆ ಎನ್ನಲಾಗುತ್ತಿದೆ. ಆ ಮೂಲಕ ಒಂದು ಬಾರಿ ಪಾವತಿ ಆಯ್ಕೆ ಜಾರಿಗೆ ತರಲುವ ಯೋಜನೆ ಹಾಕಿದೆ.

    ವರದಿಯ ಪ್ರಕಾರ, ರಿಲಯನ್ಸ್​ ಎರಡು ಜಿಯೋಫೋನ್​ ನೆಕ್ಸ್ಟ್​​ ಮಾಡೆಲ್​ ಅನ್ನು ಸಿದ್ಧಪಡಿಸಿದೆ. ಅದರಲ್ಲಿ ಒಂದು ಬೇಸಿಕ್​  ಜಿಯೋಫೋನ್​ ನೆಕ್ಸ್ಟ್ ((Basic JioPhone Next)​) ​​ಆಗಿದ್ದು, ಇದರ ಬೆಲೆ 5 ಸಾವಿರ ರೂ ಇರಲಿದೆ. ಮತ್ತೊಂದು ಅಡ್ವಾನ್ಸ್​ ಜಿಯೋಫೋನ್​ ನೆಕ್ಸ್ಟ್​ ((Advannce JioPhone Next))​ ಆಗಿದ್ದು, ಇದರ ಬೆಲೆ 7 ಸಾವಿರ ಇರಲಿದೆ ಎನ್ನಲಾಗುತ್ತಿದೆ.

    Airtel Prepaid Plans: ಕಡಿಮೆ ಬೆಲೆಯ ಈ ಪ್ಲಾನ್ ಅಳವಡಿಸಿಕೊಂಡರೆ 1 ವರ್ಷ ಉಚಿತವಾಗಿ ಸಿನಿಮಾ ನೋಡ್ಬೋದು!

    ಅಂದಹಾಗೆಯೇ ಜಿಯೋ ಫೋನನ್ನು ಖರೀದಿಸುವ ವೇಳೆ ಒಂದೇ ಬಾರಿಗೆ ಪೂರ್ತಿ ಹಣ ನೀಡುವ ಅಗತ್ಯವಿಲ್ಲ. ಜಿಯೋಫೋನ್​ ನೆಕ್ಸ್ಟ್​​ ಫೋನಿನ ಒಟ್ಟು ಮೊತ್ತದ ಶೇ.10ರಷ್ಟು ಹಣವನ್ನು ನೀಡಿ ಖರೀದಿಸಬಹುದಾಗಿದೆ. ಮತ್ತೊಂದು ವಿಚಾರವೆಂದರೆ, ಬೇಸಿಕ್​ ಜಿಯೋಫೋನ್​ ನೆಕ್ಸ್ಟ್(Basic JioPhone Next)​ ಅನ್ನು 500 ರೂ.ಗೆ ಮತ್ತು ಅಡ್ವಾನ್ಸ್​ ಜಿಯೋಫೋನ್​ ನೆಕ್ಸ್ಟ್​​ (Advance JioPhone Next) ಅನ್ನು 700 ರೂ. ಖರೀದಿಸಬಹುದಾಗಿದೆ. ಉಳಿದ ಹಣವನ್ನು ಕಂತುಗಳ ರೂಪದಲ್ಲಿ ನಂತರ ಪಾವತಿಸಬೇಕಿದೆ.

    Redmi 10 Prime | 6 ಸಾವಿರ mAh ಬ್ಯಾಟರಿ, ರಿವರ್ಸ್​ ಚಾರ್ಜಿಂಗ್​ ಬೆಂಬಲ; ರೆಡ್‌ಮಿ 10 ಪ್ರೈಮ್ ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ

    ಜಿಯೋ ಬ್ಯಾಂಕೇತರ ಹಣಕಾಸು ಕಂಪನಿಯೊಂದಿಗೆ ಸಹಭಾಗಿತ್ವ ಹೊಂದಿದೆ. ಗ್ರಾಹಕರಿಗೆ ಕ್ರೆಡಿಟ್​​ ಪಡೆಯುವ ಮೂಲಕ ಸ್ಮಾರ್ಟ್​ಫೋನ್​ ಖರೀದಿಸುವ ಆವಕಾಶ ನೀಡಲಿದೆ.

    ಈಗಾಗಲೇ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಜಿಯೋ ಫೋನ್​ ನೆಕ್ಸ್ಟ್​ ಪ್ರಾರಂಭಿಕ ಬೆಲೆ 5000 ರೂ ಎಂದು ಹೇಳಲಾಗುತ್ತಿದೆ. ಟ್ವಿಟ್ಟರ್​ ಬಳಕೆದಾರರೊಬ್ಬರು 3,499 ರೂ,ಗೆ ಸಿಗಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಆದರೆ ಜಿಯೋಫೋನ್​ ನೆಕ್ಸ್ಟ್​ ನಿಖರವಾದ ಬೆಲೆ ಸ್ಪಷ್ಟವಾಗಿಲ್ಲ.

    ರಿಲಯನ್ಸ್​ ಕಂಪನಿ ಜಿಯೋಫೋನ್​ ನೆಕ್ಸ್ಟ್​ ವಿಶ್ವ ಅಗ್ಗದ ಫೋನ್​ ಎಂದು  ಹೇಳಿತ್ತು. ಇವೆಲ್ಲವನ್ನು ಗಮನಿಸಿದಾಗ ನೂತನ ಫೋನ್​ ಕಡಿಮೆ ದರದಲ್ಲಿ ಗ್ರಾಹಕರ ಕೈ ಸೇರಲಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಗಣೇಶ ಹಬ್ಬದಂದು ನೂತನ ಫೋನ್​ ಬಿಡುಗಡೆಯಾಗಲಿದೆ.
    Published by:Harshith AS
    First published: