ಜಿಯೋಫೋನ್​ 2 ಮಾರಾಟಕ್ಕೆ ಇನ್ನೆರಡು ದಿನ ಬಾಕಿ


Updated:August 14, 2018, 8:37 PM IST
ಜಿಯೋಫೋನ್​ 2 ಮಾರಾಟಕ್ಕೆ ಇನ್ನೆರಡು ದಿನ ಬಾಕಿ

Updated: August 14, 2018, 8:37 PM IST
ರಿಲಯನ್ಸ್ ಒಡೆತನದ ರಿಲಯನ್ಸ್​​ ಜಿಯೋ ಫೋನ್​ 2 ಆಗಸ್ಟ್​ 16ರಿಂದ ಮಾರಾಟ ಆರಂಭವಾಗಲಿದ್ದು, Jio.com.ನಲ್ಲಿ ಮಧ್ಯಾಹ್ನ 12 ಗಂಟೆಗೆ ಫ್ಲಾಶ್​ ಸೇಲ್​ನಲ್ಲಿ ಲಭ್ಯವಿರಲಿದೆ.

ಕೀಲಿ ಮಣೆ ಸಹಾಯದೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಲಿರುವ ಜಿಯೋಫೋನ್​ 2 ಸಮತಲ ಡಿಸ್​ಪ್ಲೇ ವ್ಯವಸ್ಥೆಯನ್ನು ಹೊಂದಿದೆ, ಈ ಹಿಂದೆ ಫೇಮಸ್​ ಆಗಿದ್ದ ಕ್ವಾರ್ಟಿ ಕೀಲಿ ಮಣೆಯ ವಿನ್ಯಾಸವನ್ನು ಸಹ ಈ ಮೊಬೈಲ್​ಗೆ ನೀಡಲಾಗಿದೆ. ಈ ಕುರಿತು ಕೆಲ ದಿನಗಳ ಹಿಂದೆ ನಡೆದಿದ್ದ ಎಜಿಎಂ 2018ರ ಕಾರ್ಯಕ್ರಮದಲ್ಲಿ ರಿಲಯನ್ಸ್​ ಹೇಳಿಕೊಂಡಿತ್ತು.

ಈ ಮೊಬೈಲ್​ಗೆ ಯೂಟ್ಯೂಬ್​, ಫೇಸ್​ಬುಕ್​, ಗೂಗಲ್​ ಮ್ಯಾಪ್​ ಸೇವೆಯನ್ನು ಸಹ ನೀಡುವುದಾಗಿ ಜಿಯೋ ಎಜಿಎಂ 2018 ಕಾರ್ಯಕ್ರಮದಲ್ಲಿ ಬಹಿರಂಗ ಪಡಿಸಲಾಗಿತ್ತು, ಅಲ್ಲದೇ ಶೀಘ್ರದಲ್ಲೇ ಈ ಮೊಬೈಲ್​ಗೆ ವಾಟ್ಸ್​ಆ್ಯಪ್​ ಸೇವೆ ಕೂಡಾ ನೀಡಲು ಅನುವು ಮಾಡುವುದಾ ಸಂಸ್ಥೆ ಹೇಳಿದೆ. ಅದೇನೆ ಇರಲಿ 4ಜಿ ನೆಟ್​ವರ್ಕ್​ನಲ್ಲಿ ಕಾರ್ಯ ನಿರ್ವಹಿಸುವ ಈ ಮೊಬೈಲ್​ ಸಾಮಾಜಿಕ ಜಾಲತಾಣದ ಬಳಕೆಗೆ ಸಂಪೂರ್ಣ ಅವಕಾಶ ಒದಗಿಸಿದರೆ ಬಜೆಟ್​ ಮೊಬೈಲ್​ಗಳಿಗೆ ದೊಡ್ಡ ಪ್ರಮಾಣದಲ್ಲೇ ಏಟು ಬೀಳುವುದರಲ್ಲಿ ಸಂಶಯವಿಲ್ಲ.

ಕೆಲ ದಿನಗಳ ಹಿಂದೆ ಜೊಯೋ ಮಾನ್ಸೂನ್​ ಹಂಗಾಮ, ಆಫರ್​ ಕೂಡಾ ಬಿಡುಗಡೆಯಾಗಿದೆ, ಈ ಆಫರ್​ನಲ್ಲಿ ನೀವು ಮೊಬೈಲ್​ನ್ನು ಖರೀದಿಸುವುದಾದರೆ ಹಳೇಯ ಮೊಬೈಲ್​ನ್ನು ಎಕ್ಸ್​ಚೇಂಜ್​ ಮಾಡಿಕೊಳ್ಳಬಹುದು. ಈ ಪ್ರಕ್ರಿಯೆಗೆ ಕೇವಲ 501 ರೂ. ತಗಲುತ್ತದೆ
First published:August 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...