ನೂತನ ಜಿಯೋ ಫೋನ್ 2 ಬಿಡುಗಡೆ ​: ಇದರಲ್ಲಿದೆ ಸ್ಪೆಷಲ್ ಫೀಚರ್ಸ್​

news18
Updated:July 8, 2018, 6:46 PM IST
ನೂತನ ಜಿಯೋ ಫೋನ್ 2 ಬಿಡುಗಡೆ ​: ಇದರಲ್ಲಿದೆ ಸ್ಪೆಷಲ್ ಫೀಚರ್ಸ್​
news18
Updated: July 8, 2018, 6:46 PM IST
-ನ್ಯೂಸ್ 18 ಕನ್ನಡ

ರಿಲಾಯನ್ಸ್​ ತನ್ನ 41ನೇ ವಾರ್ಷಿಕ ಸಾಮಾನ್ಯ ಸಭೆ (AGM)ಯಲ್ಲಿ ಜಿಯೋ ಫೋನ್ ​2 ಅನ್ನು ಬಿಡುಗಡೆಗೊಳಿಸಿದೆ. ಕಳೆದ ವರ್ಷಬಿಡುಗಡೆಯಾದ ಜಿಯೋ ಫೋನಿನ ಮುಂದುವರಿದ ಮಾಡೆಲ್​ ಇದಾಗಿದ್ದು, ದುಬಾರಿ ವೆಚ್ಚದ ಸ್ಮಾರ್ಟ್​ಫೋನ್​ನಲ್ಲಿರುವ​ ಫೀಚರ್ಸ್ ಅನ್ನು ಈ ಫೋನಿನಲ್ಲಿ​ ನೀಡಿರುವುದು ವಿಶೇಷ.

ಕಳೆದ ವರ್ಷ ನಡೆದ ರಿಲಾಯನ್ಸ್​ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋ ಫೋನ್ ಅನ್ನು​ ರಿಲಾಯನ್ಸ್​ ಸಂಸ್ಥೆ  ಬಿಡುಗಡೆಗೊಳಿಸಿತ್ತು.  'ಭಾರತದ ಸ್ಮಾರ್ಟ್​ಫೋನ್'​ ಎಂದು ಪ್ರಸಿದ್ದಿ ಪಡೆದ ಜಿಯೋ ಫೋನ್ ಮೊಬೈಲ್​​ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿಗೆ ಕಾರಣವಾಗಿತ್ತು.

ಇದೀಗ ಮತ್ತೊಮ್ಮೆ ಕಡಿಮೆ ಬೆಲೆಯ ಸ್ಮಾರ್ಟ್​ ಫೋನ್​ ಬಿಡುಗಡೆಗೆ  ರಿಲಾಯನ್ಸ್ ಸಂಸ್ಥೆ ಮುಂದಾಗಿದೆ. ಆಗಸ್ಟ್​ 15 ರಿಂದ  ಮಾರುಕಟ್ಟೆಯಲ್ಲಿ ಲಭ್ಯವಾಗಲಿರುವ ಇದರ ಬೆಲೆ ಕೇವಲ 2,999 ರೂಪಾಯಿ.

ಜಿಯೋ2 ಫೋನಿನ ವಿಶೇಷತೆಗಳು :

* ಇದರಲ್ಲಿ 2.4QVGA ಡಿಸ್ಪ್ಲೇ ನೀಡಲಾಗಿದೆ. ಅಲ್ಲದೇ 2 ಮೆಗಾ ಪಿಕ್ಸೆಲ್​ನ ರೇರ್​ ಕ್ಯಾಮರಾ ಹಾಗೂ VGA ಫ್ರಂಟ್​ ಫೇಸಿಂಗ್​ ಕ್ಯಾಮರಾವನ್ನೂ ನೀಡಲಾಗಿದೆ.

* ಈ ಸ್ಮಾರ್ಟ್​ ಫೀಚರ್​ ಫೋನ್ 512MB RAM ಹಾಗೂ 4ಜಿಬಿ ROM ಮೆಮೊರಿ ಹೊಂದಿದೆ. ಅಲ್ಲದೇ ಈ ಸ್ಮಾರ್ಟ್​ಫೋನ್​ 128ಜಿಬಿ ವರೆಗಿನ ಎಕ್ಸ್​ಪಾಂಡೇಬಲ್​ ಸ್ಟೋರೇಜ್​ಗಾಗಿ ಮೈಕ್ರೊ SD ಕಾರ್ಡ್​ ಕೂಡಾ ಸಪೋರ್ಟ್​ ಮಾಡುತ್ತದೆ.
Loading...

*  ಈ ಫೋನ್​ ನಾಲ್ಕೂ ಬದಿಯೂ ಆಪರೇಟ್​ ಮಾಡಬಹುದಾದಂತಹ ನ್ಯಾವಿಗೇಷನ್​ ಪ್ಯಾಡ್​ನೊಂದಿಗೆ QWERTY ಕೀ-ಪ್ಯಾಡ್​ ಕೂಡಾ ಹೊಂದಿದೆ.

* ರಿಲಾಯನ್ಸ್​ ಜಿಯೋ 2, KaiOS ನಿಂದ ಕಾರ್ಯ ನಿರ್ವಹಿಸುತ್ತದೆ. ಈ ಹಿಂದೆ ಬಿಡುಗಡೆಗೊಂಡ ಜಿಯೋ ಫೋನ್​ನಲ್ಲಿ ಕಾರ್ಯ ನಿರ್ವಹಿಸುವ ಆಪರೇಟಿಂಗ್​ ಸಿಸ್ಟಮ್​ ಇದಾಗಿದೆ.

* ಈ ಹೊಸ​ ಜಿಯೋ ಫೋನ್​ನಲ್ಲಿ ನೀವು Whatsapp, Facebook ಹಾಗೂ Youtube ಅನ್ನು ಬಳಸಬಹುದು.

* 2000 mAh ಬ್ಯಾಟರಿ ಇದರಲಿದ್ದು, VoLTE, VoWiFi, FM, Wi-Fi, GPS, NFC, ಬ್ಯೂಟೂತ್ ಕನೆಕ್ಟಿವಿಟಿಯ ಆಯ್ಕೆಗಳು ಜಿಯೋ2 ಫೋನ್​ನಲ್ಲಿ ಪಡೆಯಬಹುದಾಗಿದೆ.

ಜಿಯೋ 2 ಫೋನ್ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಲಿದೆ ಎಂದು ಹೇಳಲಾಗುತ್ತಿದೆ. ​ ಮೈಕ್ರೋಮ್ಯಾಕ್ಸ್, ನೋಕಿಯಾ, ಸ್ಯಾಂಸಂಗ್ ಮತ್ತು ಬ್ಲಾಕ್​ಬೆರ್ರಿ ಕಂಪನಿಗಳ ಕಡಿಮೆ ಬೆಲೆಯ ಮೊಬೈಲ್​ಗಳಿಗೆ ನೇರ ಪೈಪೋಟಿ ನೀಡುವ ನಿರೀಕ್ಷೆಯಿದೆ.  ಅವುಗಳಲ್ಲಿ ಪ್ರಮುಖ ಮೊಬೈಲ್​ಗಳ ವಿವರ ಇಲ್ಲಿದೆ.

ಮೈಕ್ರೋಮ್ಯಾಕ್ಸ್ ಭಾರತ್ 1ಕಳೆದ ವರ್ಷ ಜಿಯೋ ಫೋನ್​ಗೆ ಪ್ರತಿಸ್ಫರ್ಧಿಯಾಗಿ ಬಿಡುಗಡೆಯಾಗಿದ್ದ ಮೈಕ್ರೋಮ್ಯಾಕ್ಸ್ ಭಾರತ್ 1​ಗೆ ಜೀಯೋ 2 ನೇರ ಸ್ಪರ್ಧಿ ಎನ್ನಲಾಗುತ್ತಿದೆ. ಮೈಕ್ರೋಮ್ಯಾಕ್ಸ್​ನ ಈ ಮೊಬೈಲ್ ಗೂಗಲ್ ಆಂಡ್ರಾಯ್ಡ್​ ಸಾಫ್ಟ್​ವೇರ್ ಹೊಂದಿದ್ದು, ಇದನ್ನು ಹೊರತುಪಡಿಸಿದರೆ ಜೀಯೋ 2 ಎಲ್ಲಾ ರೀತಿಯಲ್ಲೂ ಭಾರತ್ ​1ಕ್ಕಿಂತ ಮುಂದಿದೆ.

ನೋಕಿಯಾ 3310 (4 ಜಿ)ಜಿಯೋ2 ಮೊಬೈಲ್​ ಆಗಮನದಿಂದ HMD ಗ್ಲೋಬಲ್ ಸಂಸ್ಥೆ ಪರಿಚಯಿಸಿರುವ ನೋಕಿಯಾ 3310 ಮೊಬೈಲ್​ ಮಾರಾಟಕ್ಕೆ ಹೊಡೆತ ಬೀಳುವ ಸಾಧ್ಯತೆಯಿದೆ. 115.6x51.0x12.8 ಮಿ.ಮೀ ಅಳತೆ ಮತ್ತು 80 ಗ್ರಾಂ ತೂಕದ ಹೊಸ ನೋಕಿಯಾ 3310 ಹ್ಯಾಂಡ್​ಸೆಟ್​  4ಜಿ ಸಪೋರ್ಟೆಡ್ ಮೊಬೈಲ್​ ಆಗಿದ್ದು, ಬ್ಯಾಟರಿ ಸಾಮರ್ಥ್ಯ 1200 mAh ಅನ್ನು ಹೊಂದಿದೆ. ಜಿಯೋ 2ಗೆ ಹೋಲಿಸಿದರೆ ಇದು ಕಡಿಮೆಯಾಗಿದ್ದು, ಅಲ್ಲದೆ ವಾಟ್ಸಪ್, ಫೇಸ್​ಬುಕ್​ ಮತ್ತು ಯೂಟ್ಯೂಬ್ ಅನ್ನು ನೋಕಿಯಾ 3310 ಸಪೋರ್ಟ್​ ಮಾಡುವುದಿಲ್ಲ. ಹೀಗಾಗಿ ರಿಲಾಯನ್ಸ್ ಸಂಸ್ಥೆಯ ಈ ಹೊಸ ಮೊಬೈಲ್ ನೋಕಿಯಾ 3310 ತೀವ್ರ ಪೈಪೋಟಿ ನೀಡುವ ಸಾಧ್ಯತೆ ಹೆಚ್ಚಿದೆ.

ನೋಕಿಯಾ 8810 (4 ಜಿ)ನೋಕಿಯಾ 3310 (4 ಜಿ) ಸೆಟ್​ನ ಮುಂದುವರೆದ ಭಾಗವಾಗಿರುವ ನೋಕಿಯಾ 8810 (4 ಜಿ) ದರ ಜಿಯೋ 2 ಫೋನ್​ಗೆ ಹೋಲಿಸಿದರೆ ದುಪ್ಪಟವಾಗಿದೆ. ಆದರೆ ಈ ಮೊಬೈಲ್ ಸಹ ಯಾವುದೇ ರೀತಿಯ ಸೋಷಿಯಲ್ ಅಪ್ಲಿಕೇಶನ್​​ ಸಪೋರ್ಟ್​ ಮಾಡುವುದಿಲ್ಲ. ಆದರಿಂದ ಮುಂದಿನ ದಿನಗಳಲ್ಲಿ ಗ್ರಾಹಕರ ಆಯ್ಕೆಯು ಜಿಯೋ 2 ಆಗಿರಲಿದೆ ಎಂದು ಹೇಳಲಾಗುತ್ತಿದೆ.

ಸ್ಯಾಮ್ಸಂಗ್ ಮೆಟ್ರೋ ಎಕ್ಸ್ಎಲ್ಸ್ಯಾಮ್ಸಂಗ್ ಕಂಪನಿಯ ಈ ಫೋನ್​ ಜಿಯೋ 2ಗೆ  ಪ್ರಬಲ ಪೈಪೋಟಿ ನೀಡುವ ನಿರೀಕ್ಷೆ ಇದೆ.  LED ಫ್ಲ್ಯಾಶ್ ಮತ್ತು 2MP ಫ್ರಂಟ್​ ಕ್ಯಾಮೆರಾ ಹೊಂದಿರುವ ಸ್ಯಾಮ್ಸಂಗ್ ಮೆಟ್ರೋ ಎಕ್ಸ್ಎಲ್ ದರವು ಜಿಯೋ 2 ಕ್ಕಿಂತ ಹೆಚ್ಚಿದೆ.  ಆದರೆ ಇದರಲ್ಲಿರುವ ನೀಡಿರುವ  LED ಫ್ಲ್ಯಾಶ್ ಮತ್ತು ಕ್ಯಾಮೆರಾ ಕ್ವಾಲಿಟಿ ಜಿಯೋ 2 ನಲ್ಲಿ ಕಾಣ ಸಿಗುವುದಿಲ್ಲ. ಆದರೆ QWERTY ಕೀಪ್ಯಾಡ್ ಮತ್ತು ವಾಟ್ಸಪ್ ಆ್ಯಪ್ ಮೆಟ್ರೋ ಎಕ್ಸ್ಎಲ್​ನಲ್ಲಿ ಸಪೋರ್ಟ್​ ಆಗದಿರುವುದು ಜಿಯೋ 2 ಮಾರುಕಟ್ಟೆ ವಿಸ್ತರಣೆಗೆ ನೆರವಾಗಬಹುದು.

ಬ್ಲಾಕ್​ಬೆರ್ರಿ 9720QWERTY ಕೀ-ಪ್ಯಾಡ್​ನೊಂದಿಗೆ ಜಿಯೋ 2 ಗೆ ಪ್ರತಿಸ್ಪರ್ಧಿಯಾಗಬಲ್ಲ ಮೊಬೈಲ್ ಅಂದರೆ ಬ್ಲಾಕ್​ಬೆರ್ರಿ 9720. ಬ್ಲಾಕ್​ಬೆರ್ರಿ v7.1 ಆಪರೇಟಿಂಗ್ ಸಿಸ್ಟಮ್​ನಲ್ಲಿ ಕಾರ್ಯ ನಿರ್ವಹಿಸುವ ಈ ಫೋನ್ 5 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರುವುದು ವಿಶೇಷ. ಆದರೆ ಬ್ಲಾಕ್​ಬೆರ್ರಿ 9720ನಲ್ಲಿ ಫ್ರಂಟ್ ಕ್ಯಾಮೆರಾ ನೀಡಲಾಗಿಲ್ಲ. ಇದರ ದರ ಜಿಯೋ 2 ಗಿಂತಲೂ 2,000 ರೂ ಹೆಚ್ಚಾಗಿದ್ದು, ಇದು ಕೂಡ ಜಿಯೋ 2 ಮಾರುಕಟ್ಟೆ ವಿಸ್ತರಣೆ ನೆರವಾಗಬಹುದು ಎಂದು ಹೇಳಲಾಗುತ್ತಿದೆ.
First published:July 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ