ಒಂದುಗೂಡಿವೆ ಜಿಯೋ ಮ್ಯೂಸಿಕ್ - ಸಾವನ್: ಕಲಾವಿದರಿಗಾಗಿ ದಕ್ಷಿಣ ಏಷ್ಯಾದಲ್ಲೇ ಅತಿದೊಡ್ಡ ವೇದಿಕೆ ಸೃಷ್ಟಿ

ಜಿಯೋ ಬಳಕೆದಾರರು ಈ ಏಕೀಕೃತ ಆ್ಯಪ್‌ಗೆ ಮುಕ್ತ ಪ್ರವೇಶ ಪಡೆಯಲಿದ್ದಾರೆ. ಹೆಚ್ಚುವರಿಯಾಗಿ, ಈ ಲೋಕಾರ್ಪಣೆಯ ಅಂಗವಾಗಿ, ಜಿಯೋ ಗ್ರಾಹಕರು ಈ ಸ್ಟ್ರೀಮಿಂಗ್ ಸೇವೆಯ ಪ್ರೀಮಿಯಂ ಆವೃತ್ತಿಯಾದ ಜಿಯೋಸಾವನ್ ಪ್ರೋ ಅನ್ನು 90 ದಿನಗಳವರೆಗೆ ಉಚಿತವಾಗಿ ಬಳಸಬಹುದು.

zahir | news18
Updated:December 4, 2018, 6:15 PM IST
ಒಂದುಗೂಡಿವೆ ಜಿಯೋ ಮ್ಯೂಸಿಕ್ - ಸಾವನ್: ಕಲಾವಿದರಿಗಾಗಿ ದಕ್ಷಿಣ ಏಷ್ಯಾದಲ್ಲೇ ಅತಿದೊಡ್ಡ ವೇದಿಕೆ ಸೃಷ್ಟಿ
jio
  • Advertorial
  • Last Updated: December 4, 2018, 6:15 PM IST
  • Share this:
ಮುಂಬೈ (ಡಿ.04): ಸಂಗೀತ, ಮೀಡಿಯಾ ಹಾಗೂ ಕಲಾವಿದರಿಗಾಗಿ ದಕ್ಷಿಣ ಏಷ್ಯಾದಲ್ಲೇ ಅತಿದೊಡ್ಡ ವೇದಿಕೆಯೊಂದು ರೂಪುಗೊಂಡಿದೆ. ಇತ್ತೀಚೆಗೆ ಸಾವನ್ ಮ್ಯೂಸಿಕ್ ಜೊತೆ ಒಪ್ಪಂದ ಮಾಡಿಕೊಂಡಿರುವ ರಿಲಯನ್ಸ್​ ಸಂಸ್ಥೆ 'ಜಿಯೋಸಾವನ್' ಅನ್ನು ಲೋಕಾರ್ಪಣೆಗೊಳಿಸಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗಸಂಸ್ಥೆ ಸಾವನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಜೊತೆಗೂಡಿ ಸಾವನ್ ಭಾರತದ ಅತ್ಯಂತ ಜನಪ್ರಿಯ ಮ್ಯೂಸಿಕ್ ಆಪ್ ಜಿಯೋ ಮ್ಯೂಸಿಕ್​ನ್ನು ಪ್ರತಿನಿಧಿಸಲಿದೆ. ಈ ಹೊಸ ಏಕೀಕೃತ ಜಿಯೋಸಾವನ್ ಆ್ಯಪ್​​ನ್ನು ಜಿಯೋ ಆ್ಯಪ್​ಸ್ಟೋರ್ ಸೇರಿದಂತೆ ಎಲ್ಲ ಸ್ಮಾರ್ಟ್​ಫೋನ್​​ ಆ್ಯಪ್​ಸ್ಟೋರ್‌ಗಳಲ್ಲಿ ಡೌನ್​ಲೋಡ್ ಮಾಡಿಕೊಳ್ಳಬಹುದು.

ಮಾರ್ಚ್ 2018ರಲ್ಲಿ, ಸಾವನ್ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿ ಸಾವನ್ ಮ್ಯೂಸಿಕ್ ಸಂಸ್ಥೆ ಸೇರ್ಪಡೆಗೊಂಡಿತ್ತು. ಈ ಸಂದರ್ಭದಲ್ಲಿ ಘೋಷಿಸಿದಂತೆ, ಈ ಏಕೀಕೃತ ಸಂಸ್ಥೆಯ ಮೌಲ್ಯ ಒಂದು ಬಿಲಿಯನ್ ಡಾಲರುಗಳಿಗಿಂತ ಹೆಚ್ಚು. ಇದು ದಕ್ಷಿಣ ಏಷ್ಯಾದಲ್ಲೇ ಅತ್ಯಂತ ಮೌಲ್ಯಯುತ ಮ್ಯೂಸಿಕ್ ಸ್ಟ್ರೀಮಿಂಗ್ ವೇದಿಕೆಯಾಗಿ, ವಿಶ್ವದಲ್ಲೇ ಅತ್ಯಂತ ಜನಪ್ರಿಯ ವೇದಿಕೆಗಳಲ್ಲಿ ಒಂದಾಗಿ ಇದೀಗ ಹೊರಹೊಮ್ಮಿದೆ.

ಸಾವನ್‌ನ ಸ್ಟ್ರೀಮಿಂಗ್ ಮೀಡಿಯಾ ಪರಿಣತಿ ಹಾಗೂ ಜಿಯೋ ಡಿಜಿಟಲ್ ಸೇವೆಗಳ ಇಕೋಸಿಸ್ಟಂ ಒಟ್ಟುಗೂಡಿ ಜಿಯೋಸಾವನ್ ರೂಪುಗೊಂಡಿದೆ. ೨೫೨ ಮಿಲಿಯನ್‌ಗೂ ಹೆಚ್ಚು ಚಂದಾದಾರರೊಡನೆ ಜಿಯೋ ಭಾರತದ ಅತಿದೊಡ್ಡ ಡಿಜಿಟಲ್ ಸೇವೆಗಳ ಜಾಲವಾಗಿದೆ. ಹೊಸ ಏಕೀಕೃತ ಆ್ಯಪ್ ಅತ್ಯಂತ ವಿಸ್ತಾರವಾದ ಮಾರುಕಟ್ಟೆ ಸಾಧ್ಯತೆಯನ್ನು ಹೊಂದಿದೆ. ಕೇವಲ ಭಾರತದಲ್ಲಿರುವ ಗ್ರಾಹಕರನ್ನಷ್ಟೇ ಅಲ್ಲದೆ ವಿದೇಶಗಳಲ್ಲಿರುವ ಭಾರತೀಯರನ್ನೂ ಜಿಯೋ ಮೂಲಕ ತಲುಪಬಲ್ಲದಾಗಿದೆ. ಈ ಆ್ಯಪ್​ ಮೂಲಕ ಸಂಗೀತ, ಇಂಟರಾಕ್ಟಿವ್ ಲಿರಿಕ್ಸ್ ಸೌಲಭ್ಯ, ಸ್ಥಳೀಯ ಭಾಷೆ ಮಾಹಿತಿ, ಕಾನ್ಸರ್ಟ್​ ಹಾಗೂ ಲೈವ್ ಕಾರ್ಯಕ್ರಮಗಳ ಜೊತೆಗೂಡುವಿಕೆ ಅವಕಾಶ ಸಿಗಲಿದೆ. ಅಲ್ಲದೆ ವಿಶಿಷ್ಟ ವೀಡಿಯೊ ಕಂಟೆಂಟ್​ ಕೂಡ ಮುಂದಿನ ಕೆಲ ತಿಂಗಳುಗಳಲ್ಲೇ ಈ ವೇದಿಕೆಯ ಸಹಾಯದಿಂದ ದೊರಕಲಿದೆ ಎಂದು ತಿಳಿಸಲಾಗಿದೆ.

ಜಿಯೋ ಬಳಕೆದಾರರು ಈ ಏಕೀಕೃತ ಆ್ಯಪ್‌ಗೆ ಮುಕ್ತ ಪ್ರವೇಶ ಪಡೆಯಲಿದ್ದಾರೆ. ಹೆಚ್ಚುವರಿಯಾಗಿ, ಈ ಲೋಕಾರ್ಪಣೆಯ ಅಂಗವಾಗಿ, ಜಿಯೋ ಗ್ರಾಹಕರು ಈ ಸ್ಟ್ರೀಮಿಂಗ್ ಸೇವೆಯ ಪ್ರೀಮಿಯಂ ಆವೃತ್ತಿಯಾದ ಜಿಯೋಸಾವನ್ ಪ್ರೋ ಅನ್ನು 90 ದಿನಗಳವರೆಗೆ ಉಚಿತವಾಗಿ ಬಳಸಬಹುದು.

'ತಂತ್ರಜ್ಞಾನದ ವಿನೂತನ ಆವಿಷ್ಕಾರಗಳನ್ನು, ಡಿಜಿಟಲ್ ಸೇವೆಗಳನ್ನು ಹೆಚ್ಚುಹೆಚ್ಚಾಗಿ ಬಳಸುತ್ತಿದ್ದಾರೆ. ಹೀಗೆ ಜಾಗತಿಕ ಮಟ್ಟದ ಡಿಜಿಟಲ್ ಮ್ಯೂಸಿಕ್ ಉದ್ದಿಮೆಯಾಗಿ ರೂಪುಗೊಂಡಿದೆ. ಈ ಸಂದರ್ಭದಲ್ಲಿ ಭಾರತದ ಮ್ಯೂಸಿಕ್ ಸ್ಟ್ರೀಮಿಂಗ್ ಕ್ಷೇತ್ರಕ್ಕೆ ಜಿಯೋಸಾವನ್ ಒಂದು ಮಹತ್ವದ ತಿರುವು ನೀಡಿದೆ. ಜಿಯೋನ ಆಧುನಿಕ ಡಿಜಿಟಲ್ ಸೇವೆಗಳ ಮೂಲಸೌಕರ್ಯ ಹಾಗೂ ವ್ಯಾಪಕ ಬಳಕೆದಾರ ಸಮುದಾಯವನ್ನು ಬಳಸಲಿರುವ ಜಿಯೋಸಾವನ್ ಭಾರತದ ಅತಿದೊಡ್ಡ ಸ್ಟ್ರೀಮಿಂಗ್ ವೇದಿಕೆಯಾಗಲಿದೆ' ಎಂದು ಜಿಯೋಸಾವನ್ ಲೋಕಾರ್ಪಣೆಯ ಸಂದರ್ಭದಲ್ಲಿ ರಿಲಯನ್ಸ್ ಜಿಯೋ ನಿರ್ದೇಶಕ ಆಕಾಶ್ ಅಂಬಾನಿ ಹೇಳಿದರು.

ಇದನ್ನೂ ಓದಿ: ರಿಯಲ್ ಹೀರೋ: 300 ಮಂದಿ ವಿಕಲಚೇತನರ ಕನಸಿಗೆ ಹೆಗಲು ಕೊಟ್ಟ 14 ರ ಬಾಲಕ..!
Loading...

ಭಾರತದ ಅತ್ಯಂತ ಶಕ್ತಿಶಾಲಿ ಡಿಜಿಟಲ್ ಸೇವೆಗಳ ಜಾಲದ ಸಂಪನ್ಮೂಲಗಳು ಹಾಗೂ ಸಂಪರ್ಕದ ಬೆಂಬಲ ಪಡೆದುಕೊಂಡು, ಸಾವನ್‌ನ ಒರಿಜಿನಲ್ ಪ್ರೋಗ್ರಾಮಿಂಗ್ ಹಾಗೂ ಕಲಾವಿದರ ಅಭಿವೃದ್ಧಿ ವೇದಿಕೆಯಾದ ಆರ್ಟಿಸ್ಟ್ ಒರಿಜಿನಲ್ಸ್ (ಏಓ) ಅನ್ನು ಜಿಯೋಸಾವನ್ ಮುಂದೆಯೂ ಬೆಳೆಸಲಿದೆ. ಒರಿಜಿನಲ್ ಆಡಿಯೋ ಮನರಂಜನೆಯ ಅಭಿವೃದ್ಧಿ, ಮಾರ್ಕೆಟಿಂಗ್ ಹಾಗೂ ವಿತರಣೆಗೆ ಹೊಸ ಭಾಷ್ಯ ಬರೆದಿರುವ ಸಾವನ್‌ನ ಒರಿಜಿನಲ್ ಪ್ರೋಗ್ರಾಮಿಂಗ್, '#ನೋಫಿಲ್ಟರ್‌ನೇಹಾ', 'ಥ್ಯಾಂಕ್ ಯೂ ಫಾರ್ ಶೇರಿಂಗ್', 'ಟೇಕ್ 2 ವಿತ್ ಅನುಪಮಾ ಆಂಡ್ ರಾಜೀವ್', 'ಟಾಕಿಂಗ್ ಮ್ಯೂಸಿಕ್' ಹಾಗೂ 'ಕಹಾನಿ ಎಕ್ಸ್‌ಪ್ರೆಸ್ ವಿತ್ ನೀಲೇಶ್ ಮಿಸ್ರಾ'ದಂತಹ ಭಾರತದ ಅತ್ಯಂತ ಜನಪ್ರಿಯ ಆಡಿಯೋ ಪಾಡ್‌ಕಾಸ್ಟ್‌ಗಳನ್ನು ನಿರ್ಮಿಸಿ ವಿತರಿಸುತ್ತಿದೆ.

First published:December 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...