JioMart App: ಜಿಯೋಮಾರ್ಟ್​ ಆ್ಯಪ್ ಬಿಡುಗಡೆ; ಸ್ಮಾರ್ಟ್​ಫೋನ್​ ಮೂಲಕ ಉತ್ಪನ್ನಗಳ ಖರೀದಿ ಇನ್ನಷ್ಟು ಸುಲಭ

JioMart App: ಜಿಯೋಮಾರ್ಟ್​ ಮೂಲಕ ಗ್ರಾಹಕರು ದಿನನಿತ್ಯದ ದಿನಸಿ, ತರಕಾರಿ, ಹಣ್ಣು, ಗೃಹ ಬಳಕೆಯ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ. ಸ್ಮಾರ್ಟ್​ಫೋನ್​ ಮೂಲಕ ಜಿಯೋಮಾರ್ಟ್​ ಅಪ್ಲಿಕೇಶನ್​ ಬಳಸಿಕೊಂಡು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಬಹುದಾಗಿದೆ.

ಜಿಯೋಮಾರ್ಟ್​ ಆ್ಯಪ್

ಜಿಯೋಮಾರ್ಟ್​ ಆ್ಯಪ್

  • Share this:
    ಪ್ರತಿಷ್ಠಿತ ಟೆಲಿಕಾಂ ಸಂಸ್ಥೆಯಾದ ರಿಲಾಯನ್ಸ್​ ಜಿಯೋ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗುವ ದೃಷ್ಠಿಯಿಂದ ಜಿಯೋಮಾರ್ಟ್​ ಎಂಬ ಆನ್​ಲೈನ್​​​ ಮಳಿಗೆಯನ್ನು ಪ್ರಾರಂಭಿಸಿದೆ. ಇದೀಗ ಜಿಯೋಮಾರ್ಟ್​ ಆ್ಯಪ್​ ಸಿದ್ಧಪಡಿಸಿ  ಬಿಡುಗಡೆ ಮಾಡಿದೆ. ಆ್ಯಂಡ್ರಾಯ್ಡ್​ ಮತ್ತು ಐಒಎಸ್​ ಬಳಕೆದಾರರಿಗೆ ಈ ಆ್ಯಪ್​​ ಅನ್ನು ಪರಿಚಯಿಸಿದೆ. ಗೂಗಲ್​ ಪ್ಲೇ ಸ್ಟೋರ್​​​ನಲ್ಲಿ ಲಭ್ಯವಿದೆ.

    ಜಿಯೋಮಾರ್ಟ್​ ಮೂಲಕ ಗ್ರಾಹಕರು ದಿನನಿತ್ಯದ ದಿನಸಿ, ತರಕಾರಿ, ಹಣ್ಣು, ಗೃಹ ಬಳಕೆಯ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ. ಸ್ಮಾರ್ಟ್​ಫೋನ್​ ಮೂಲಕ ಜಿಯೋಮಾರ್ಟ್​ ಅಪ್ಲಿಕೇಶನ್​ ಬಳಸಿಕೊಂಡು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಬಹುದಾಗಿದೆ. ಈಗಾಗಲೇ ಜಿಯೋಮಾರ್ಟ್​ 200 ಸ್ಥಳಗಳಲ್ಲಿ ಡೆಲಿವರಿಯನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ನಗರಗಳಲ್ಲಿ ಉತ್ಪನ್ನಗಳನ್ನು ಡೆಲಿವರಿ ಮಾಡಲಿದೆ.

    ಗ್ರಾಹಕರಿಗಾಗಿ ಜಿಯೋಮಾರ್ಟ್​ ಪ್ರತಿ ಉತ್ಪನ್ನಗಳ ಮೇಲೆ ಶೇ.5 ರಷ್ಟು ಡಿಸ್ಕೌಂಟ್​ ನೀಡುತ್ತಿದೆ. ಜೊತೆಗೆ ಬೋನಸ್​ ಪಾಯಿಂಟ್​, ಡಿಸ್ಕೌಂಟ್​ ಆಫರ್​ ಕೂಡ ನೀಡುತ್ತಿದೆ.

    Viral Video: ಕೊರೋನಾ ಗೆದ್ದುಬಂದ ಅಕ್ಕ; ಭರ್ಜರಿ ಸ್ಟೆಪ್ ಹಾಕಿ ಮನೆಗೆ ಬರ ಮಾಡಿಕೊಂಡ ಸಹೋದರಿ

    ಜಿಯೋಮಾರ್ಟ್​ ಆ್ಯಪ್


    ಅಳಿಯನನ್ನೇ ಮದುವೆಯಾದ ಅತ್ತೆಯ ಜೀವನದಲ್ಲಿ ಈಗ ಹೊಸ ಟ್ವಿಸ್ಟ್​; ಏನದು?; ಈ ಸ್ಟೋರಿ ಓದಿ

    ರಿಲಾಯನ್ಸ್​ 2020 ವಾರ್ಷಿಕ ಸಮ್ಮೇಳನದಲ್ಲಿ ಹಲವು ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸಿದೆ. ಸ್ಮಾರ್ಟ್​ಗ್ಲಾಸ್​, ಜಿಯೋ ಫೋನ್ ಹೀಗೆ ಹಲವು ಉತ್ಪನ್ನಗಳನ್ನು ಪರಿಚಯಿಸಿದೆ. ಅಷ್ಟು ಮಾತ್ರವಲ್ಲದೆ, ಗೂಗಲ್​ ಫೇಸ್​ಬುಕ್​, ಇಂಟೆಲ್​​, ಕ್ವಾಲ್ಕಂ ದೈತ್ಯ ಕಂಪೆನಿಗಳ ಜೊತೆ ರಿಲಾಯನ್ಸ್​​ ಜಿಯೋ ಮಾರುಕಟ್ಟೆ ಒಪ್ಪಂದ ಮಾಡಿಕೊಂಡಿದೆ.
    Published by:Harshith AS
    First published: