Reliance GigaFiber: ರಿಲಾಯನ್ಸ್​ ಗಿಗಾ ಫೈಬರ್​ ಸೇವೆ; ಯಾವ ನಗರದಲ್ಲಿ ಮೊದಲು? ನೋಂದಣಿ ಹೇಗೆ? ಇಲ್ಲಿದೆ ಮಾಹಿತಿ

ಜಿಯೋ ಗಿಗಾಫೈಬರ್ ಸೇವೆಯನ್ನು ಪಡೆಯುವ ಗ್ರಾಹಕರಿಆಗಿ ವೆಲ್‌ಕಮ್​ ಆಫರ್ ನೀಡುತ್ತಿದೆ. ಮೊದಲ 90 ದಿನ ಯಾವುದೇ ಶುಲ್ಕವಿಲ್ಲದೆ ಜಿಯೋ ಸೇವೆಗಳನ್ನು ಆನಂದಿಸಬಹುದಾಗಿದೆ. ಗ್ರಾಹಕರಿಗಾಗಿ 4,500 ರೂ. ಅಥವಾ 2,500 ರೂ. ಎರಡು ಪ್ಯಾಕೇಜ್ನಲ್ಲಿ ಸೇವೆ ದೊರೆಕುತ್ತದೆ. 

news18-kannada
Updated:September 3, 2019, 5:57 PM IST
Reliance GigaFiber: ರಿಲಾಯನ್ಸ್​ ಗಿಗಾ ಫೈಬರ್​ ಸೇವೆ; ಯಾವ ನಗರದಲ್ಲಿ ಮೊದಲು? ನೋಂದಣಿ ಹೇಗೆ? ಇಲ್ಲಿದೆ ಮಾಹಿತಿ
ರಿಲಾಯನ್ಸ್ ಜಿಯೋ ಗಿಗಾ ಫೈಬರ್
  • Share this:
ದೇಶದೆಲ್ಲೆಡೆ ಸಂಚಲನ ಮೂಡಿಸಿದ ರಿಲಾಯನ್ಸ್​ ಜಿಯೋ ಗಿಗಾ ಫೈಬರ್ ಇಂಟರ್​ನೆಟ್​ ಸೇವೆ​ ಶೀಘ್ರದಲ್ಲೇ ಆರಂಭವಾಗಲಿದೆ. ಆರಂಭದಲ್ಲಿ ಈ ಸೇವೆ ಆಯ್ದ ನಗರಗಳಲ್ಲಿ ಮಾತ್ರ ದೊರೆಯಲಿದೆ.

ಜಿಯೋ ಗಿಗಾ ಫೈಬರ್​ ಸೇವೆಯು  ಹೈದರಾಬಾದ್, ಮುಂಬೈ, ಅಹಮದಾಬಾದ್, ಸೂರತ್, ಡೆಲ್ಲಿ, ಜೈಪುರ, ಕೋಲ್ಕತಾ, ವಡೋದರ ಮತ್ತು ವಿಶಾಖಪಟ್ಟಣಂ ಹಾಗೂ ಇತರ ನಗರಗಳಲ್ಲಿ ಶೀಘ್ರವೇ ದೊರೆಯಲಿದೆ.

ರಿಲಾಯನ್ಸ್​ ಗಿಗಾ ಫೈಬರ್​ ಸೇವೆಯ ಕುರಿತಾಗಿ ಅಧಿಕೃತ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗಿದೆ. ಇದರ ಜೊತೆಗೆ ಯಾವೆಲ್ಲ ನಗರಗಳಲ್ಲಿ ಗಿಗಾಫೈಬರ್​ ಸೇವೆ ದೊರಕಲಿದೆ ಎಂದು ತಿಳಿಸಿದೆ. ಜೊತೆಗೆ ಗಿಗಾಫೈಬರ್​ ಪ್ಲಾನ್​ ಮತ್ತು ಮುಂಬರುವ ಪ್ಲಾನ್​, ಪ್ಯಾಕೇಜ್​ ಕುರಿತು ಮಾಹಿತಿಯನ್ನು ವಿವರಿಸಲಾಗಿದೆ.

ಜಿಯೋ ಗಿಗಾಫೈಬರ್ ನೋಂದಣಿ ಹೇಗೆ?
ರಿಲಯನ್ಸ್ ಜಿಯೋ ಗಿಗಾಫೈಬರ್ ಬ್ರಾಡ್‌ಬ್ಯಾಂಡ್ ಸೇವೆಯನ್ನು ಬಯಸುವ ಗ್ರಾಹಕರು ಹತ್ತಿರದ ರಿಲಯನ್ಸ್ ಜಿಯೋ ಸ್ಟೋರ್ ಸಂಪರ್ಕಿಸಬಹುದು. ಅಲ್ಲದೆ, ಜಿಯೋ ಕೇರ್ ಸಂಪರ್ಕಿಸಬಹುದು. ಈ ಮೂಲಕ ಗ್ರಾಹಕರು ಹೊಸ ಸಂಪರ್ಕಕ್ಕೆ ಅರ್ಜಿ ಸಲ್ಲಿಸಬಹುದು.

ಜಿಯೋ ಗಿಗಾಫೈಬರ್ ಸೇವೆಯನ್ನು ಪಡೆಯುವ ಗ್ರಾಹಕರಿಆಗಿ ವೆಲ್‌ಕಮ್​ ಆಫರ್ ನೀಡುತ್ತಿದೆ. ಮೊದಲ 90 ದಿನ ಯಾವುದೇ ಶುಲ್ಕವಿಲ್ಲದೆ ಜಿಯೋ ಸೇವೆಗಳನ್ನು ಆನಂದಿಸಬಹುದಾಗಿದೆ. ಗ್ರಾಹಕರಿಗಾಗಿ 4,500 ರೂ. ಅಥವಾ 2,500 ರೂ. ಎರಡು ಪ್ಯಾಕೇಜ್ನಲ್ಲಿ ಸೇವೆ ದೊರೆಕುತ್ತದೆ.

ಗಿಗಾಫೈಬರ್​ ಸೇವೆಯು ಮೊದಲ ಹಂತದಲ್ಲಿ ಗುಜರಾತ್, ಡೆಲ್ಲಿ, ತೆಲಂಗಾಣ, ರಾಜಸ್ಥಾನ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಸಿಗಲಿದೆ. ಅಂತೆಯೇ ಎರಡನೇ ಹಂತದಲ್ಲಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಿಗೆ ಸಿಗಿದೆ. ಉಳಿದ ರಾಜ್ಯಗಳಲ್ಲಿ ನಂತರದ ಹಂತಗಳಲ್ಲಿ ಜಿಯೋ ಸೇವೆ ಲಭ್ಯವಾಲಿದೆ.
First published:September 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ