• Home
 • »
 • News
 • »
 • tech
 • »
 • FIFA World Cup 2022: ಜಿಯೋಸಿನೆಮಾದ ಅತ್ಯದ್ಭುತ ಕ್ರೀಡಾ ಕವರೇಜ್; ಟಿವಿ ವೀಕ್ಷಕರನ್ನು ಹಿಂದಿಕ್ಕಿದ ಡಿಜಿಟಲ್ ವೀಕ್ಷಕರು!

FIFA World Cup 2022: ಜಿಯೋಸಿನೆಮಾದ ಅತ್ಯದ್ಭುತ ಕ್ರೀಡಾ ಕವರೇಜ್; ಟಿವಿ ವೀಕ್ಷಕರನ್ನು ಹಿಂದಿಕ್ಕಿದ ಡಿಜಿಟಲ್ ವೀಕ್ಷಕರು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ವರ್ಷದ ಫಿಫಾ ವಿಶ್ವಕಪ್​ 2022 ರ ಲೈವ್​ ಅನ್ನು ಜಿಯೋಸಿನೆಮಾ ಅಪ್ಲಿಕೇಶನ್ ಮೂಲಕ ಉಚಿತವಾಗಿ ನೋಡಬಹುದಿತ್ತು.  ಇದೀಗ ವರದಿಯ ಪ್ರಕಾರ ಗೂಗಲ್ ಪ್ಲೇಸ್ಟೋರ್ ಮತ್ತು ಆ್ಯಪಲ್​ ಸ್ಟೋರ್​ನಿಂದ ಅತೀ ಹೆಚ್ಚು ಡೌನ್​​ಲೋಡ್​ ಮಾಡಿದ ಅಪ್ಲಿಕೇಶನ್ ಎಂದು ಗುರುತಿಸಿಕೊಂಡಿದೆ.

 • Share this:

  ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ 2022 ರ ಅಂತಿಮ ಹಣಾಹಣಿಯು ಕತಾರ್‌ನ ನೆಲದಲ್ಲೂ ಅಂತೆಯೇ ಭಾರತದ ಡಿಜಿಟಲ್ ಸ್ಕ್ರೀನ್‌ಗಳಲ್ಲಿಯೂ ಅತ್ಯುತ್ತಮ ಯಶಸ್ಸನ್ನು ಕಂಡುಕೊಂಡಿದೆ. ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ತಂಡವನ್ನು 4-2 ಗೋಲುಗಳಿಂದ ಸೋಲಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಈ ಬಾರಿಯ ಫಿಫಾ ಫುಟ್​ಬಾಲ್​ ವಿಶ್ವಕಪ್ 2022 ಬಹಳಷ್ಟು ಉತ್ತಮ ರೀತಿಯಲ್ಲಿ ಪ್ರದರ್ಶನ ಕಂಡು ಜನರ ಮೆಚ್ಚುಗೆಗೆ ಪಾರ್ತವಾಗಿದೆ. ಮತ್ತೊಂದು ಮುಖ್ಯವಾಗಿ ಈ ವರ್ಷ ಈವರೆಗೂ ಆಗದ ದಾಖಲೆಗಳೆಲ್ಲವೂ ಫಿಫಾ ವಿಶ್ವಕಪ್​ನಲ್ಲಿ ನಡೆದಿದೆ.


  ಈ ವರ್ಷದ ಫಿಫಾ ವಿಶ್ವಕಪ್​ 2022 ರ ಲೈವ್​ ಅನ್ನು ಜಿಯೋಸಿನೆಮಾ ಅಪ್ಲಿಕೇಶನ್ ಮೂಲಕ ಉಚಿತವಾಗಿ ನೋಡಬಹುದಿತ್ತು.  ಇದೀಗ ವರದಿಯ ಪ್ರಕಾರ ಗೂಗಲ್ ಪ್ಲೇಸ್ಟೋರ್ ಮತ್ತು ಆ್ಯಪಲ್​ ಸ್ಟೋರ್​ನಿಂದ ಅತೀ ಹೆಚ್ಚು ಡೌನ್​​ಲೋಡ್​ ಮಾಡಿದ ಅಪ್ಲಿಕೇಶನ್ ಎಂದು ಗುರುತಿಸಿಕೊಂಡಿದೆ.


  ಜಿಯೋಸಿನೆಮಾದ ಅತ್ಯದ್ಭುತ ಸಾಧನೆ


  ಪಂದ್ಯದಲ್ಲಿ ಅರ್ಜೆಂಟೀನಾ ಗೆಲುವು ಸಾಧಿಸಿದ್ದು ಮಾತ್ರವಲ್ಲದೆ ಜಿಯೋಸಿನೆಮಾ (JioCinema) ಆ್ಯಪ್ ಕೂಡ ಭಾರತದಲ್ಲಿ ತನ್ನ ಅತ್ಯದ್ಭುತ ಕ್ರೀಡಾ ಕವರೇಜ್ ಮೂಲಕ ಅಸಾಮಾನ್ಯ ದಾಖಲೆಯನ್ನೇ ಸಾಧಿಸಿದೆ.


  ಇದನ್ನೂ ಓದಿ: ಆ್ಯಪಲ್​ ಮ್ಯಾಕ್​ಬುಕ್​ ಮೇಲೆ ಬಂಪರ್ ಆಫರ್​! ಕೇವಲ 15 ಸಾವಿರ ರೂಪಾಯಿಗೆ ಖರೀದಿಸಿ


  ಇದುವರೆಗೆ ಹೆಚ್ಚು ವೀಕ್ಷಿಸಿದ ಫಿಫಾ ವಿಶ್ವಕಪ್


  ವಿಯಕಾಮ್ 18 (Viacom 18) ನ ಆ್ಯಪ್ ಜಿಯೋಸಿನೆಮಾದಲ್ಲಿ ಉಚಿತವಾಗಿ ಪ್ರಸಾರಮಾಡಲಾದ ಕತಾರ್ ವಿಶ್ವಕಪ್ ಭಾರತದಲ್ಲಿ ಇದುವರೆಗೆ ಹೆಚ್ಚು ವೀಕ್ಷಿಸಿದ ಫಿಫಾ ವಿಶ್ವಕಪ್ ಎಂಬ ಕೀರ್ತಿಗೆ ಭಾಜನವಾಗಿದೆ.


  ಹೆಚ್ಚಿನ ಕ್ರಿಕೆಟ್ ಪಂದ್ಯಾಟಗಳನ್ನು ಮೀರಿಸಿ ಭಾರತದಲ್ಲಿ ಟೂರ್ನಮೆಂಟ್‌ನ ವೀಕ್ಷಣಾ ವ್ಯಾಪ್ತಿಯು 110 ಮಿಲಿಯನ್ ಗಡಿಯನ್ನು ದಾಟಿದ್ದು ಹೊಸ ದಾಖಲೆಯನ್ನೇ ಸೃಷ್ಟಿಸಿ ಅದ್ಭುತ ಯಶಸ್ಸನ್ನು ಸಾಧಿಸಿದೆ.


  ಟಿವಿ ವೀಕ್ಷಕರನ್ನು ಹಿಂದಿಕ್ಕಿದ ಡಿಜಿಟಲ್ ವೀಕ್ಷಕರು


  ಜಿಯೋಸಿನೆಮಾದ ಅತ್ಯದ್ಭುತ ಕವರೇಜ್‌ನಿಂದ ಉತ್ತೇಜಿಸಲಾದ ಕ್ರೀಡಾಕೂಟದ ಪ್ರದರ್ಶನದಿಂದ ಇದೇ ಮೊತ್ತಮೊದಲ ಬಾರಿಗೆ ಡಿಜಿಟಲ್ ವೀಕ್ಷಕರು ಟಿವಿ ವೀಕ್ಷಕರನ್ನು ಹಿಂದಿಕ್ಕಿದ್ದಾರೆ. ಅದೂ ಅಲ್ಲದೆ ಐಓಎಸ್ ಹಾಗೂ ಆ್ಯಂಡ್ರಾಯ್ಡ್ ಎರಡೂ ವೇದಿಕೆಗಳಲ್ಲೂ ಮೂರು ವಾರಗಳವರೆಗೆ ಡೌನ್‌ಲೋಡ್ ಮಾಡಿದ ನಂ. 1 ಉಚಿತ ಆ್ಯಪ್‌ಆಗಿ ಜಿಯೋಸಿನೆಮಾ ಪ್ರಸಿದ್ಧಿ ಪಡೆದಿದೆ.


  ಬಹುಭಾಷೆಗಳಲ್ಲಿ ಕ್ರೀಡಾಕೂಟದ ನೇರ ಪ್ರದರ್ಶನ


  ಇಂಗ್ಲಿಷ್, ಹಿಂದಿ, ತಮಿಳು, ಮಲಯಾಳಂ ಮತ್ತು ಬೆಂಗಾಲಿ ಸೇರಿದಂತೆ ಬಹು ಭಾಷೆಗಳಲ್ಲಿ ಕ್ರೀಡಾಕೂಟವನ್ನು ನೇರಪ್ರದರ್ಶನ ನೀಡಿರುವುದೇ ಜಿಯೋಸಿನೆಮಾದ ಈ ದಾಖಲೆಗೆ ಸಹಕಾರ ನೀಡಿರುವ ಅಂಶವಾಗಿದೆ.


  ಹೈಪ್‌ಮೋಡ್ ವಿಶೇಷ ಸೇವೆಯ ವಿಶೇಷತೆ ಏನು?


  ವೀಕ್ಷಕರ ವೀಕ್ಷಣಾ ಅನುಭವವನ್ನು ಇನ್ನಷ್ಟು ಹೆಚ್ಚಿಸಲು, ಜಿಯೋಸಿನೆಮಾ ಸ್ಟ್ರೀಮಿಂಗ್ ಮಾಡುವಾಗ ಹೈಪ್ ಮೋಡ್‌ ಎಂದು ಕರೆಯಲಾದ ವಿಶೇಷ ಸೇವೆಯನ್ನೊದಗಿಸಿದೆ. ಇದರ ಮೂಲಕ ಪಂದ್ಯ ಮತ್ತು ಮುಖ್ಯಾಂಶಗಳನ್ನು ಬೇರೆ ಬೇರೆ ಆ್ಯಂಗಲ್‌ಗಳಿಂದ ವೀಕ್ಷಕರು ವೀಕ್ಷಿಸಬಹುದಾಗಿದೆ. ಇಷ್ಟಲ್ಲದೆ ವೀಕ್ಷಕರಿಗೆ ರಿಯಲ್-ಟೈಮ್ ವಿವರ ಹಾಗೂ ಅಂಕಿಅಂಶಗಳನ್ನು ಹೈಪ್ ಮೋಡ್ ಒದಗಿಸಿದೆ.


  ವೀಕ್ಷಕರನ್ನು ತಲ್ಲೀನಗೊಳಿಸಿದ ಅನುಭವ


  Viacom18 ಸ್ಪೋರ್ಟ್ಸ್ ಸಿಇಒ ಅನಿಲ್ ಜಯರಾಜ್ ಈ ಸಮಯದಲ್ಲಿ ತಮ್ಮ ಅಭಿಪ್ರಾಯಗಳನ್ನು ನೀಡಿದ್ದು, ಬಹುಭಾಷಾ ಪ್ಲ್ಯಾಟ್‌ಫಾರ್ಮ್‌ಗಳ ಮೂಲಕ ಜಿಯೋಸಿನೆಮಾವು ವೀಕ್ಷಕರಿಗೆ ತಲ್ಲೀನಗೊಳಿಸುವ ಹಾಗೂ ವೈಯಕ್ತೀಕರಿಸಿದ ವಿಶ್ವಕಪ್ ಅನುಭವವನ್ನು ನೀಡಿದ್ದು, ವೀಕ್ಷಕರಿಗೆ ವಿಶೇಷ ಕ್ರೀಡಾ ಅನುಭೂತಿಯನ್ನುಂಟು ಮಾಡಿದೆ ಎಂಬುದಕ್ಕೆ ಈ ಯಶಸ್ಸೇ ಸಾಕ್ಷಿ ಎಂದು ತಿಳಿಸಿದ್ದಾರೆ.


  ವೀಕ್ಷಕರು ಹೆಚ್ಚು ಇಷ್ಟಪಡುವ ಮಾಧ್ಯಮ ವೇದಿಕೆ


  ವೀಕ್ಷಕರು ವಿಶ್ವಕಪ್‌ನ ಆಹ್ಲಾದತೆಯನ್ನು ಅನುಭವಿಸಲೆಂದೇ ಡಿಜಿಟಲ್ ಹಾಗೂ ಲೀನಿಯರ್ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ (ಸ್ಪೋರ್ಟ್ಸ್ 18 ನಲ್ಲಿ) ವಿಶ್ವದ ಅತ್ಯಂತ ಪ್ರಮಾಣಿತ ಉತ್ಪನ್ನದೆಡೆಗೆ ಸುಲಭ ಪ್ರವೇಶವನ್ನು ಹೊಂದಬೇಕು ಎಂಬುದೇ ನಮ್ಮ ಇಚ್ಛೆಯಾಗಿತ್ತು.


  ಹಾಗಾಗಿ ಅನೇಕ ಪ್ರಯತ್ನಗಳನ್ನು ನಡೆಸಿದ್ದು ಇದು ಸಫಲತೆಯನ್ನುಂಟು ಮಾಡಿದೆ ಜೊತೆಗೆ ಅಭಿಮಾನಿಗಳ ಅನುಭವವಕ್ಕೆ ಇನ್ನಷ್ಟು ಜೀವಂತಿಕೆ ಒದಗಿಸುವುದು ಹಾಗೂ ಭಾರತದಲ್ಲಿ ವೀಕ್ಷಕರು ಹೆಚ್ಚು ಇಷ್ಟಪಡುವ ಮಾಧ್ಯಮ ವೇದಿಕೆಗಳಲ್ಲೊಂದನ್ನು ನಿರ್ಮಿಸುವ ನಮ್ಮ ಉದ್ದೇಶದ ಪ್ರಥಮ ಪ್ರಯತ್ನಕ್ಕೆ ಜಯ ಲಭಿಸಿದೆ ಎಂದು ತಿಳಿಸಿದ್ದಾರೆ.


  Viacom18 ಮೀಡಿಯಾ ಪ್ರೈ. ಲಿಮಿಟೆಡ್ ಕುರಿತು


  Viacom18 ಮೀಡಿಯಾ ಪ್ರೈ. ಲಿಮಿಟೆಡ್ ಇತ್ತೀಚೆಗೆ ಬೋಧಿ ಟ್ರೀ ಸಿಸ್ಟಮ್ಸ್‌ನಿಂದ ಕಾರ್ಯತಂತ್ರದ ಹೂಡಿಕೆಯನ್ನು ಘೋಷಿಸಿದೆ. ಮಾಜಿ 21st ಸೆಂಚುರಿ ಫಾಕ್ಸ್ ಸಂಸ್ಥೆಯ ಮಾಜಿ ಸಿಇಒ ಜೇಮ್ಸ್ ಮುರ್ಡೋಕ್ ಮತ್ತು ಭಾರತದ ಮಾಧ್ಯಮ ಡೊಯೆನ್ ಉದಯ್ ಶಂಕರ್ ಅವರು 2021 ರಲ್ಲಿ ಬೋಧಿ ಟ್ರೀ ಸಿಸ್ಟಮ್ಸ್ ಅನ್ನು ಸ್ಥಾಪಿಸಿದರು. ಈ ಮೂಲಕ ಭಾರತದಲ್ಲಿ ಅತಿದೊಡ್ಡ ಮಾಧ್ಯಮ ಮತ್ತು ಮನರಂಜನಾ ಕಂಪನಿ ಮತ್ತು ಸ್ಟ್ರೀಮಿಂಗ್ ಸೇವೆಯನ್ನು ನಿರ್ಮಿಸಲಾಗಿದೆ.

  Published by:Prajwal B
  First published: