ಭಾರತದಲ್ಲಿ ವಿಡಿಯೋ ಸ್ಟ್ರೀಮಿಂಗ್ ಅಪ್ಲಿಕೇಶನ್ಗಳು (Video Streaming Application) ಹಲವಾರು ಇದೆ. ಆದರೆ ಇವುಗಳಲ್ಲಿ ಉತ್ತಮ ಅನುಭವವನ್ನು ಗ್ರಾಹಕರಿಗೆ ನೀಡುವಂತಹ ಅಪ್ಲಿಕೇಶನ್ಗಳು ಕೆಲವೇ ಕೆಲವು. ಇದೀಗ ಈ ಸಾಲಿಗೆ ರಿಲಯನ್ಸ್ ನ (Reliance) ಜಿಯೋಸಿನೆಮಾ (Jio Cinema) ಅಪ್ಲಿಕೇಶನ್ ಕೂಡ ಸೇರಿದೆ. ಈ ಬಾರಿ ಫಿಫಾ ವಿಶ್ವಕಪ್ ಅನ್ನು ಜಿಯೋ ಸಿನೆಮಾ ಉಚಿತವಾಗಿ ಲೈವ್ ಸ್ಟ್ರೀಮಿಂಗ್ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದೆ. ದೇಶದಲ್ಲೇ ಗೂಗಲ್ ಪ್ಲೇ ಸ್ಟೋರ್ (Google Play Store) ಮತ್ತು ಆ್ಯಪಲ್ ಆ್ಯಪ್ ಸ್ಟೋರ್ (Apple App Store) ಮೂಲಕ ಅತೀ ಹೆಚ್ಚು ಡೌನ್ಲೋಡ್ ಮಾಡಿಕೊಂಡ ಸ್ಟ್ರೀಮಿಂಗ್ ಅಪ್ಲಿಕೇಶನ್ ಎಂಬ ಖ್ಯಾತಿ ಜಿಯೋ ಸಿನಿಮಾ ಪಡೆದುಕೊಂಡಿದೆ. ಈ ವರ್ಷದ ಫಿಫಾ ಫುಟ್ಬಾಲ್ ವಿಶ್ವಕಪ್ ಕತಾರ್ನಲ್ಲಿ ಆರಂಭವಾಯಿತು. ಇದನ್ನು ಜಿಯೋಸಿನೆಮಾದಲ್ಲಿ ವೀಕ್ಷಕರಿಗೆ ಹೈಪ್ ಮೋಡ್ನಲ್ಲಿ ಸ್ಟ್ರೀಮಿಂಗ್ ಮಾಡಿ ಇದೀಗ ಅಗ್ರಸ್ಥಾನದಲ್ಲಿದೆ.
ರಿಲಯನ್ಸ್ ತನ್ನ ಯೋಜನೆಗಳ ಮೂಲಕ ಜನರನ್ನು ಸೆಳೆಯುತ್ತಲೇ ಇರುತ್ತದೆ. ಈ ವರ್ಷದಲ್ಲಿ ಅತೀ ಹೆಚ್ಚು ಗ್ರಾಹಕರನ್ನು ಹೊಂದಿದ ಟೆಲಿಕಾಂ ಕಂಪನಿಯೆಂದು ಗುರುತಿಸಿಕೊಂಡಿದ್ದ ಜಿಯೋ, ಇದೀಗ ಫಿಫಾ ವಿಶ್ವಕಪ್ ಕತಾರ್ 2022 ರ ಹಿನ್ನಲೆಯಲ್ಲಿ ಆಂಡ್ರಾಯ್ಡ್ ಮತ್ತು ಐಓಎಸ್ ಆ್ಯಪ್ ಸ್ಟೋರ್ಗಳಲ್ಲಿ ಡೌನ್ಲೋಡ್ ಮಾಡಲಾದ ನಂ. 1 ಉಚಿತ ಅಪ್ಲಿಕೇಶನ್ ಎಂದು ಜಿಯೋಸಿನೆಮಾ ಆ್ಯಪ್ ಗುರುತಿಸಿಕೊಂಡಿದೆ.
ಉಚಿತ ಸ್ಟ್ರೀಮಿಂಗ್ ಸೇವೆ
ಜಿಯೋ, ವೊಡಫೋನ್ ಐಡಿಯಾ, ಏರ್ಟೆಲ್, ಬಿಎಸ್ಎನ್ಎಲ್ ಈ ಎಲ್ಲಾ ಟೆಲಿಕಾಂ ಕಂಪನಿಗಳು 2022ರ ಫಿಫಾ ವಿಶ್ವಕಪ್ ಪ್ರಾರಂಭವಾದ ನಂತರ ಹಲವಾರು ಉಚಿತ ಸ್ಟ್ರೀಮಿಂಗ್ ಆ್ಯಪ್ಗಳು ಬಂದಿವೆ. ಆದರೆ ಜಿಯೋ ಸಿನೆಮಾ ಮಾತ್ರ ತನ್ನ ಹೈಪ್ ಮೋಡ್ ಮೂಲಕ ಫುಟ್ಬಾಲ್ ಅನ್ನು ಲೈವ್ ಆಗಿ ಸ್ಟ್ರೀಮಿಂಗ್ ಮಾಡಿದ್ದರಿಂದ ಈ ರೀತಿಯ ಬೆಳವಣಿಗೆಯನ್ನು ಕಂಡಿದೆ.
ಇದನ್ನೂ ಓದಿ: ಫಿಫಾ ಫುಟ್ಬಾಲ್ ವರ್ಲ್ಡ್ಕಪ್ ಪ್ರಿಯರಿಗಾಗಿ ಜಿಯೋದಿಂದ ವಿಶೇಷ ಡೇಟಾ ಆಫರ್!
ಸಮೀಕ್ಷೆಯ ವರದಿಯಲ್ಲಿ ಏನಿದೆ?
ಆ್ಯಪ್ಗಳ ಬಗ್ಗೆ ಎನಾಲಿಟಿಕ್ಸ್ ಮಾಡುವಂತಹ ತಂತ್ರಜ್ಞಾನವಾದ ಆ್ಯಪ್ ಅನ್ನಿ ಪ್ರಕಾರ, ನವೆಂಬರ್ 2022ರಲ್ಲಿ ಎಂಟರ್ಟೈನ್ಮೆಂಟ್ ವಿಭಾಗದಲ್ಲಿ ಒಟ್ಟು ಅಪ್ಲಿಕೇಶನ್ಗಳಲ್ಲಿ ಶೇಕಡಾ 29% ರಷ್ಟು ಜಿಯೋಸಿನೆಮಾವನ್ನೇ ಡೌನ್ಲೋಡ್ ಮಾಡಿದ್ದಾರೆ ಎಂದು ಹೇಳಿದೆ.
ಇನ್ನು ಈ ವರ್ಷದಲ್ಲಿ ಅತೀ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಅಪ್ಲಿಕೇಶನ್ ಎಂದರೆ ಅದು ಜಿಯೋ ಸಿನೆಮಾ ಎಂದು ಹೇಳಿದೆ.
ಹೈಪ್ಮೋಡ್ ನೀಡುವ ಮೂಲಕ ದಾಖಲೆ
ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಅನ್ನು ದೂರದರ್ಶನಕ್ಕಿಂತ ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ವೀಕ್ಷಕರು ಹೆಚ್ಚು ವೀಕ್ಷಿಸಿದ್ದಾರೆ. ಅಂದರೆ ವೀಕ್ಷಕರು ಫಿಫಾ ವಿಶ್ವಕಪ್ 2022 ರ ಹೆಚ್ಚಿನ ಪಂದ್ಯಗಳನ್ನು ಟಿವಿ ಬದಲಿಗೆ ಮೊಬೈಲ್ನಲ್ಲೇ ವೀಕ್ಷಿಸಿದವರು ಹೆಚ್ಚು ಎಮದು ತಿಳಿದುಬಂದಿದೆ. ಇದು ಡಿಜಿಟಲ್ ಯುಗದಲ್ಲಾದಂತಹ ದೊಡ್ಡ ದಾಖಲೆ ಅಮತಾನೂ ಹೇಳಬಹುದು. ಇದರೊಂದಿಗೆ ಫಿಫಾ ವಿಶ್ವಕಪ್ ಕತಾರ್ 2022 ರ ವ್ಯಾಪ್ತಿಯು ಜಿಯೋಸಿನೆಮಾದಲ್ಲಿ 100 ಮಿಲಿಯನ್ ದಾಟುವ ನಿರೀಕ್ಷೆಯಿದೆ. ಜಿಯೋ ಸಿನಿಮಾ ನವೆಂಬರ್ 20 ರಿಂದ ಐಒಎಸ್ ಮತ್ತು ಆಂಡ್ರಾಯ್ಡ್ ಎರಡರಲ್ಲೂ ಮೂರು ವಾರಗಳವರೆಗೆ ಡೌನ್ಲೋಡ್ ಮಾಡಲಾದ ನಂಬರ್ 1 ಉಚಿತ ಅಪ್ಲಿಕೇಶನ್ ಎಂದು ದೇಶದೆಲ್ಲೆಡೆ ಗುರುತಿಸಿಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ