HOME » NEWS » Tech » JIO VS AIRTEL VS VODAFONE 2021 BEST PREPAID RECHARGE PLANS UNDER RS 500 HG

Jio v/s Airtel v/s Vi: 500 ರೂ ಒಳಗಿನ ಬೆಸ್ಟ್​ ಅನಿಯಮಿತ ಪ್ರಿಪೇಯ್ಡ್​ ಪ್ಲಾನ್​​; ಯಾವುದು ಬೆಸ್ಟ್​?

Best Prepaid Plans: ಜಿಯೋ-ಏರ್​ಟೆಲ್​-ವಿ ಟೆಲಿಕಾಂ ಕಂಪೆನಿಗಳು ಒದಗಿಸುವ 500 ರೂ ಒಳಗಿನ ಬೆಸ್ಟ್​ ಪ್ರಿಪೇಯ್ಡ್​ ಪ್ಲಾನ್​ಗಳ ಬಗ್ಗೆ ಮಾಹಿತಿ ಇಲ್ಲಿದೆ

news18-kannada
Updated:February 6, 2021, 12:05 PM IST
Jio v/s Airtel v/s Vi: 500 ರೂ ಒಳಗಿನ ಬೆಸ್ಟ್​ ಅನಿಯಮಿತ ಪ್ರಿಪೇಯ್ಡ್​ ಪ್ಲಾನ್​​; ಯಾವುದು ಬೆಸ್ಟ್​?
Airtel v/s Jio v/s Vi v/s BSNL
  • Share this:
ಜಿಯೋ ಪ್ರಿಪೇಯ್ಡ್​ ಪ್ಲಾನ್​: ರಿಲಾಯನ್ಸ್​ ಜಿಯೋ 444 ರೂ.ವಿನ ಅನಿಯಮಿತ ಪ್ಲಾನ್​​ ಪರಿಚಯಿಸಿದೆ. ಇದರ ಮೂಲಕ ಪ್ರತಿದಿನ 2GB ಡೇಟಾ ನೀಡುತ್ತಿದೆ. ಜೊತೆಗೆ ಅನಿಯಮಿತ ಕರೆ ಮತ್ತು  ಜಿಯೋದಿಂದ ಬೇರೆ ನೆಟ್​ವರ್ಕ್​ ಕರೆಗಳ ಮೇಲೆ 2 ಸಾವಿರ ಎಫ್​ಯುಪಿ ನೀಡುತ್ತಿದೆ. ಇನ್ನು 100 ಎಸ್​ಎಮ್​ಎಸ್​ ಮತ್ತು ಜಿಯೋ ಆ್ಯಪ್​ ಚಂದಾದರಿಕೆ ನೀಡುತ್ತಿದೆ.

ಜಿಯೋ 401 ಪ್ರಿಪೇಯ್ಡ್​​ ಪ್ಲಾನ್​ ಮೂಲಕ ಪ್ರತಿದಿನ 3GB ಡೇಟಾ ಸಿಗಲಿದೆ. ಜೊತೆಗೆ ಎಲ್ಲಾ ನೆಟ್​​ವರ್ಕ್​ಗಳ ಮೇಲೆ ಅನಿಯಮ ಕರೆ ಸೌಲಭ್ಯ ನೀಡುತ್ತಿದೆ. ಅಷ್ಟು ಮಾತ್ರವಲ್ಲದೆ ಉಚಿತ 100 ಎಸ್​ಎಮ್​ಎಸ್​​, ಒಂದು ವರ್ಷದ ಡಿಸ್ನಿ+ ಹಾಟ್​ಸ್ಟಾರ್​ ವಿಐಪಿ ಚಂದಾದಾರಿಕೆ  ನೀಡುತ್ತಿದೆ. ಗ್ರಾಹಕರಿಗಾಗಿ ಅಡಿಷನಲ್​​ 6ಜಿಬಿ ಡೇಟಾ ಆಯ್ಕೆಯನ್ನು ನೀಡುತ್ತಿದೆ.

ಏರ್​ಟೆಲ್​​ ಪ್ರಿಪೇಯ್ಡ್​ ಪ್ಲಾನ್: ಏರ್​ಟೆಲ್​ 448 ರೂ.ವಿನ ಪ್ಲಾನ್​ ಮೂಲಕ ಅನಿಯಮಿತ ಕರೆ ಸೌಲಭ್ಯ ಮತ್ತು ಪ್ರತಿದಿನ 3GB ಎಫ್​ಯುಪಿ ಡೇಟಾ ಮತ್ತು 100 ಉಚಿತ ಎಸ್​​ಎಮ್​ಎಸ್​​ ನೀಡುತ್ತಿದೆ. ಈ ಪ್ಲಾನ್​ 28 ದಿನಗಳ ವ್ಯಾಲಿಡಿಟಿ ಹೊಂದಿದೆ.  ಜೊತೆಗೆ ಏರ್​ಟೆಲ್​ ಎಕ್ಸ್​ಟ್ರೀಮ್​ ಪ್ರಿಮಿಯಂ ಚಂದಾದಾರಿಕೆ ನೀಡುತ್ತಿದೆ.  ಜೊತೆಗೆ 1 ವರ್ಷದ ಶೋ ಅಕಾಡೆಮಿ, ವಿಂಕ್ ​ಮ್ಯೂಸಿಕ್​ ಆಯ್ಕೆ ನೀಡುತ್ತಿದೆ. ಅಷ್ಟು ಮಾತ್ರವಲ್ಲದೆ, ಹೆಲೋ ಟ್ಯೂನ್​, 150 ರೂ.ವಿನ ಫಾಸ್ಟ್​ಟ್ಯಾಗ್​ ಕ್ಯಾಶ್​ಬ್ಯಾಕ್​ ಒದಗಿಸುತ್ತಿದೆ.

ಇನ್ನು ಏರ್​ಟೆಲ್​ 349 ರೂ ಪ್ಲಾನ್​ ಅಳವಡಿಸಿಕೊಂಡ ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಜೊತೆಗೆ ಅನಿಯಮಿತ ಕರೆ ಸೌಲಭ್ಯ, 100 ಎಸ್​ಎಮ್​ಎಸ್​ ಮತ್ತು ಅಮೆಜಾನ್​ ಪ್ರೈಮ್​ ಉಚಿತ ಚಂದಾದಾರಿಕೆ ನೀಡುತ್ತಿದೆ. ಈ ಪ್ಲಾನ್​ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಏರ್​ಟೆಲ್​ ಎಕ್ಸ್​​ಟ್ರೀಮ್​ ಪ್ರೀಮಿಯಂ ಚಂದಾದಾರಿಕೆ ಸೇರಿದಂತೆ ವಿಂಕ್​​ ಮ್ಯೂಸಿಕ್​ ಮತ್ತು ಹೆಲೋ ಟ್ಯೂನ್​ ನೀಡುತ್ತಿದೆ. ಅದರ ಜೊತೆಗೆ 100 ರೂ ಫಾಸ್ಟ್​ಟ್ಯಾಗ್​ ಕ್ಯಾಶ್​​​ಬ್ಯಾಗ್​ ಒದಗಿಸುತ್ತಿದೆ.

ವಿ ಪ್ರಿಪೇಯ್ಡ್​ ಪ್ಲಾನ್​: ವಿ ಪರಿಚಯಿಸಿರುವ 449  ರೂ ಪ್ಲಾನ್​​ ಮೂಲಕ 4GB ಡೈಲಿ ಡೇಟಾ ನೀಡುತ್ತಿದೆ. ಜೊತೆಗೆ ಡಬಲ್​ ಡೇಟಾ ಆಯ್ಕೆಯನ್ನು ನೀಡಿದೆ. ಜೊತೆಗೆ ಅನಿಯಮಿತ ಕರೆ ಸೌಲಭ್ಯ ಮತ್ತು 100 ಎಸ್​ಎಮ್​ಎಸ್​ ನೀಡುತ್ತಿದೆ. ಅಷ್ಟು ಮಾತ್ರವಲ್ಲದೆ, ವಿ ಸಿನಿಮಾ ಮತ್ತು ಟಿವಿ ನೋಡುವ ಆಯ್ಕೆಯನ್ನು ನೀಡುತ್ತಿದೆ. 56 ದಿನಗಳ ವ್ಯಾಲಿಡಿಟಿಯನ್ನು ಈ ಪ್ಲಾನ್​ ಹೊಂದಿದೆ.

ವಿ 405 ರೂ. ಪ್ರಿಪೇಯ್ಡ್​​ ಪ್ಲಾನ್​​ ಮೂಲಕ ಒಟ್ಟಾರೆ 90GB ಡೇಟಾ ನೀಡುತ್ತಿದೆ. ಜೊತೆಗೆ ಅನಿಯಮಿತ ಕರೆ ಸೌಲಭ್ಯ ಮತ್ತು 100 ಎಸ್​ಎಮ್​ಎಸ್​ ನೀಡುತ್ತಿದೆ. ಅಷ್ಟು ಮಾತ್ರವಲ್ಲದೆ, ಒಂದು ವರ್ಷದ ಜೀ5 ಪ್ರೀಮಿಯಂ, ವಿ ಸಿನಿಮಾ ಚಂದಾದಾರಕೆ ಒದಗಿಸಿದೆ. ಈ ಪ್ಲಾನ್​ 28 ದಿನಗಳ ವ್ಯಾಲಿಡಿಟಿ ಹೊಂದಿದೆ.

ಬಿಎಸ್​​ಎನ್​ಎಲ್​​ ಪ್ರಿಪೇಯ್ಡ್​ ಪ್ಲಾನ್​: ಬಿಎಸ್​ಎನ್​ಎಲ್​ 500 ರೂ.ವಿನ ಅನಿಯಮಿತ ಪ್ರಿಯೇಯ್ಡ್​ ಪ್ಲಾನ್​​ ಮೂಲಕ ಪ್ರತಿದಿನ 3GB ಡೇಟಾ ಸಿಗಲಿದೆ. ಜೊತೆಗೆ ಪ್ರತಿದಿನ 250 ನಿಮಿಷಗಳ ಉಚಿತ ಕರೆ ಹಾಗೂ 100 ಎಸ್​ಎಮ್​ಎಸ್​ ನೀಡುತ್ತಿದೆ. ಅಷ್ಟು ಮಾತ್ರವಲ್ಲದೆ, 40 ದಿನಗಳ  ಬಿಎಸ್​​ಎನ್​ಎಲ್​​ ಟ್ಯೂನ್​ ಮತ್ತು ಎರೋಸ್​​ ನೌ ಚಂದಾದಾರಿಕೆ ನೀಡುತ್ತಿದೆ.
Published by: Harshith AS
First published: February 6, 2021, 12:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories